-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸ್ ಇಂಡಿಯಾ ಯೂನಿವರ್ಸ್ (Miss India Universe Fashion) ೨೦೨೨ ದಿವಿತಾ ರೈ ಬಂಗಾರದ ಹಕ್ಕಿಯಾಗಿ ಹಾಡಿದ್ದಾರೆ, ಕುಣಿದಿದ್ದಾರೆ. ಅಂದಹಾಗೆ, ಅವರು ಈ ಲುಕ್‌ನಲ್ಲಿ ಕಾಣಿಸಿಕೊಂಡದ್ದು ಮತ್ತೇ ಎಲ್ಲೂ ಅಲ್ಲ! ಈ ಸಾಲಿನ ಮಿಸ್ ಯೂನಿವರ್ಸ್ ಅಂತಿಮ ಸ್ಪರ್ಧೆಯ ಮುನ್ನ ನಡೆಯುವ ನ್ಯಾಷನಲ್ ಕಾಸ್ಟ್ಯೂಮ್ ರೌಂಡ್‌ನಲ್ಲಿ. ಈ ರೌಂಡ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅವರು, ಆಕರ್ಷಕ ಬಂಗಾರ ವರ್ಣದ ಡಿಸೈನರ್‌ವೇರ್ ಹಾಗೂ ಮಿನುಗುವ ಆಕ್ಸೆಸರೀಸ್‌ನಲ್ಲಿ ಸ್ವರ್ಗದಿಂದ ಇಳಿದ ಅಪ್ಸರೆಯಂತೆ ಕಂಗೊಳಿಸಿದರು.
ಕಳೆದ ವರ್ಷ ಮಿಸ್ ಇಂಡಿಯಾ ಯೂನಿವರ್ಸ್ ಟೈಟಲ್ ಗೆದ್ದು, ಕಿರೀಟ ಮುಡಿಗೇರಿಸಿಕೊಂಡ ದಿವಿತಾ ರೈ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಮಿಸ್ ಯೂನಿವರ್ಸ್ ೨೦೨೩ ಸ್ಪರ್ಧೆಗೆ ಭಾರಿ ತಯಾರಿ ನಡೆಸಿದ್ದಾರೆ. ಫಿನಾಲೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಇನ್ನು ದಿವಿತಾ ಕನ್ನಡತಿ ಎಂಬುದನ್ನು ನಾವು ಮರೆಯುವ ಹಾಗಿಲ್ಲ!
ರಾಷ್ಟ್ರಕ್ಕೆ ನಮನ
ನ್ಯಾಷನಲ್ ಕಾಸ್ಟ್ಯೂಮ್ ರೌಂಡ್‌ನಲ್ಲಿ ದಿವಿತಾ ರೈ ಧರಿಸಿರುವ “ಸೋನೇ ಕಿ ಚಿಡಿಯಾ” ಹೆಸರಿನ ಈ ಕಾಸ್ಟ್ಯೂಮ್‌ನಲ್ಲಿ ರಾಷ್ಟ್ರಕ್ಕೆ ನಮನ ಸಲ್ಲಿಸಿ, ಎಲ್ಲರ ಗಮನ ಸೆಳೆದರು.
ಇದನ್ನೂ ಓದಿ | Star holiday Fashion | ಬಾಲಿ ಹಾಲಿಡೇ ಫ್ಯಾಷನ್‌ಗೆ ಸೈ ಎಂದ ನಟಿ ಹರ್ಷಿಕಾ ಪೊಣಚ್ಚ
ಅಭಿಷೇಕ್ ಶರ್ಮಾ ಡಿಸೈನರ್‌ವೇರ್
ಸೋನೆ ಕೀ ಚಿಡಿಯಾ ಕಾನ್ಸೆಪ್ಟ್ ನಮ್ಮ ರಾಷ್ಟ್ರದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಅತ್ಯಾಕರ್ಷಕವಾಗಿರುವ ಈ ಡಿಸೈನರ್‌ವೇರ್, ವಿಭಿನ್ನವಾಗಿದ್ದು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನುವ ಈ ಕಾಸ್ಟ್ಯೂಮ್ ಡಿಸೈನರ್ ಅಭಿಷೇಕ್ ಶರ್ಮಾ ಅತ್ಯಾಸಕ್ತಿಯಿಂದ ಈ ಡಿಸೈನರ್‌ವೇರನ್ನು ವಿನ್ಯಾಸಗೊಳಿಸಿದ್ದಾರಂತೆ.
ಬಂಗಾರ ವರ್ಣದ ಲೆಹೆಂಗಾ
ಬಂಗಾರ ವರ್ಣದ ಈ ಲೆಹೆಂಗಾ ಗೋಲ್ಡ್ ಮೆಟಾಲಿಕ್ ಎಂಬಾಲಿಶ್‌ಮೆಂಟ್ ಹೊಂದಿದ್ದು, ನಮ್ಮ ರಾಷ್ಟ್ರದ ಶ್ರೀಮಂತ ಕೈ ಕುಸುರಿ ವಿನ್ಯಾಸಗಳಿಗೆ ಸಾಕ್ಷಿಯಾಗಿದೆ. ಈ ಲೆಹೆಂಗಾವನ್ನು ಮಧ್ಯಪ್ರದೇಶದ ಚಂದೇರಿ ಜಿಲ್ಲೆಯಲ್ಲಿ ಸಿದ್ಧಪಡಿಸಲಾಗುವ ಕೈಮಗ್ಗದ ಟಿಶ್ಶ್ಯೂ ಫ್ಯಾಬ್ರಿಕ್‌ನಿಂದ ತಯಾರಿಸಲಾಗಿದೆ. ಇನ್ನು ಇಡೀ ಜಗತ್ತೇ ನಮ್ಮ ಬೆಂಬಲಕ್ಕಿರುವಂತೆ ಸೂಚಿಸುವಂತಹ ಹಕ್ಕಿಯ ರೆಕ್ಕೆಯಂತೆ ಪ್ರತಿಬಿಂಬಿಸುವ ವಿನ್ಯಾಸ ಇದಕ್ಕಿದೆ. ಇದರೊಂದಿಗೆ ನಮ್ಮ ರಾಷ್ಟ್ರದ ಅಭಿವೃದ್ಧಿಯ ಸಂಕೇತವನ್ನು ತೋರ್ಪಡಿಸಲಾಗಿದೆ ಎನ್ನುತ್ತಾರೆ ಡಿಸೈನರ್ಸ್ ಟೀಮ್‌ನವರು.
ದಿವಿತಾ ರೈ ಧರಿಸಿರುವ ಈ ಬಂಗಾರದ ಹಕ್ಕಿಯನ್ನು ಪ್ರತಿಬಿಂಬಿಸುವ ಡಿಸೈನರ್‌ವೇರ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ವೈರಲ್ ಆಗಿದ್ದು, ಫ್ಯಾಷನ್ ಪ್ರಿಯ ಅಭಿಮಾನಿಗಳನ್ನು ಸೆಳೆದಿದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Weekend Style | ಫ್ಯಾಷನ್‌ಗೆ ತಕ್ಕಂತೆ ಮೇಕಪ್ ಇರಲಿ ಎನ್ನುತ್ತಾರೆ ಅಹಲ್ಯಾ ರಾಜ್