ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜಾಕೆಟ್ ಹಾಗೂ ಕೋಟ್ (Jacket and coat style) ಸ್ಟೈಲ್‌ನ ಮೆನ್ಸ್ ಎಥ್ನಿಕ್‌ವೇರ್ಸ್ (Monsoon Ethnicwear) ಈ ಮಾನ್ಸೂನ್ ಸೀಸನ್‌ನಲ್ಲಿ (Monsoon season trend) ಟ್ರೆಂಡಿಯಾಗಿವೆ. ಹೌದು, ಮಾನ್ಸೂನ್ ಸೀಸನ್‌ಗೆ ತಕ್ಕಂತೆ ವಿನ್ಯಾಸಗೊಂಡಿರುವ ಈ ಮೆನ್ಸ್ ಎಥ್ನಿಕ್‌ವೇರ್ಸ್ ನೋಡಲು ಮಾತ್ರವಲ್ಲ, ಲೇಯರ್ ಲುಕ್ ನೀಡುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.
ಮಳೆಗಾಲಕ್ಕೆ ಲಗ್ಗೆ ಇಟ್ಟ ಲೇಯರ್ಡ್ ಎಥ್ನಿಕ್‌ವೇರ್ಸ್
“ತುಂತುರು ಮಳೆಯಲ್ಲಿ ನಡೆಯುವ ಸಮಾರಂಭ ಹಾಗೂ ಕಾರ್ಯಕ್ರಮಗಳಿಗೆ ಹೊಂದುವಂತೆ ದೇಹವನ್ನು ಬೆಚ್ಚಗಿಡುವ ನಾನಾ ಶೈಲಿಯ ಜಾಕೆಟ್/ಕೋಟ್ ಸ್ಟೈಲ್‌ನ ಎಥ್ನಿಕ್‌ವೇರ್ಸ್ಗಳು, ಪುರುಷರನ್ನು ಅಲಂಕರಿಸುತ್ತಿದ್ದು, ನೋಡಲು ರಾಯಲ್ ಲುಕ್ ನೀಡುವುದರೊಂದಿಗೆ ಸೀಸನ್‌ಗೆ ತಕ್ಕಂತೆ ವಿನ್ಯಾಸಗೊಂಡಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ. ಅವರ ಪ್ರಕಾರ, ಈ ಸೀಸನ್‌ನಲ್ಲಿ ಜಾಕೆಟ್ ಹಾಗೂ ಕೋಟ್ ಸ್ಟೈಲ್‌ನಂತಹ ಲೇಯರ್ ಲುಕ್ ನೀಡುವ ನಾನಾ ಬಗೆಯ ಎಥ್ನಿಕ್‌ವೇರ್‌ಗಳು ಮಿಕ್ಸ್ ಮ್ಯಾಚ್ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಜಾಕೆಟ್/ಕೋಟ್ ಸ್ಟೈಲ್ ಎಥ್ನಿಕ್‌ವೇರ್ಸ್
ಸಾಮಾನ್ಯವಾಗಿ ಹುಡುಗರಿಗೆ ಶೆರ್ವಾನಿಯನ್ನು ಧರಿಸುವುದೇ ಹೆವಿ ಎಂದೆನಿಸುವಾಗ, ಇದಕ್ಕೆ ಕೋಟ್ ಅಥವಾ ಜಾಕೆಟ್ ಶೈಲಿಯ ಓವರ್‌ಕೋಟ್‌ಗಳು ಬೇಡ ಎಂದೆನಿಸುತ್ತವೆ. ಆದರೆ, ಯುವಕರಿಗೆ ಇಷ್ಟವಾಗುವಂತೆ, ಈ ಸೀಸನ್‌ನಲ್ಲಿ ತೆಳುವಾದ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿದ ಶೆರ್ವಾನಿಯೊಂದಿಗೆ ಚೈನಾ ಕಾಲರ್ ಇರುವಂತಹ ಜಾಕೆಟ್ ಶೈಲಿಯ ಕೋಟ್‌ಗಳು ಜೊತೆಯಾಗಿವೆ. ಇದು ನೋಡಲು ರಾಯಲ್ ಲುಕ್ ಸಹ ನೀಡುತ್ತವೆ.
ಇನ್ನು, ಕುರ್ತಾ ಮೇಲೆ ಕೋಟ್ ಶೈಲಿಯ ಓವರ್‌ಕೋಟ್ ಧರಿಸುವುದು ಫ್ಯಾಷನ್ ಆಗಿದೆ. ಒಳಗಿನ ಸಾದಾ ಕುರ್ತಾ ಸೆಟ್‌ನೊಂದಿಗೆ ಅದರ ಮೇಲೆ ವೇಸ್‌ಕೋಟ್ ಶೈಲಿಯ ಲಾಂಗ್ ಕೋಟ್‌ನಂತವು ಸಾಥ್ ನೀಡುತ್ತಿವೆ.
ನೋಡಲು ಬಂದ್ಗಾಲದಂತೆ ಕಂಡರೂ, ಒಳಗೊಂದು ಹೊರಗೊಂದು ಎಂಬಂತೆ, ಲೇಯರ್ ಲುಕ್ ನೀಡುವ ಎಂಬ್ರಾಯ್ಡರಿ ಜಾಕೆಟ್, ಪ್ಯಾಚ್ ವರ್ಕ್ ಕೋಟ್, ಗ್ರ್ಯಾಂಡ್ ಡಬ್ಬಲ್ ಲೇಯರ್ ಬಂಡಿ ಸೆಟ್ ಹೀಗೆ ಲೆಕ್ಕವಿಲ್ಲದಷ್ಟು ಮಿಕ್ಸ್ ಮ್ಯಾಚ್ ವಿನ್ಯಾಸದ ಮೆನ್ಸ್ ಎಥ್ನಿಕ್‌ವೇರ್ಸ್ಗಳು ಈ ಸೀಸನ್‌ನಲ್ಲಿ ಕಾಲಿಟ್ಟಿವೆ.
ನಮ್ಮಲ್ಲಿ ಫೆಸ್ಟಿವ್ ಸೀಸನ್ ಮುಂದಿನ ತಿಂಗಳು ಇದ್ದರೂ ಈಗಾಗಲೇ ಈ ಎಥ್ನಿಕ್‌ವೇರ್ಸ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಸೆಲೆಬ್ರೆಟಿಗಳು ಇವನ್ನು ಈಗಾಗಲೇ ಧರಿಸಿ ಟ್ರೆಂಡಿಯಾಗಿರಿಸಿರುವುದು ಚಾಲ್ತಿಗೆ ಬರಲು ಕಾರಣವಾಗಿದೆ ಎನ್ನುತ್ತಾರೆ ಮೆನ್ಸ್ ಡಿಸೈನರ್ ಕೃಷ್ಣ ರಾಜ್.
ಕೋಟ್/ಜಾಕೆಟ್ ಸ್ಟೈಲ್ ಎಥ್ನಿಕ್‌ವೇರ್ಸ್ ಆಯ್ಕೆಗೆ 3 ಟಿಪ್ಸ್
· ಲೈಟ್‌ವೈಟ್ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಿ.
· ಲೈಟ್ ಹಾಗೂ ಪಾಸ್ಟೆಲ್ ಕಲರ್ಸ್ ಟ್ರೆಂಡಿಯಾಗಿದೆ.
· ಸಿಕ್ವಿನ್ಸ್ನಂತಹ ಓವರ್‌ಕೋಟ್‌ಗಳು ಚಾಲ್ತಿಯಲ್ಲಿವೆ.