-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಪಾರ್ಟಿವೇರ್ಸ್‌ಗೂ (Monsoon Fashion) ಲೇಯರ್ಡ್ ಲುಕ್ ಸಿಕ್ಕಿದೆ. ಹೌದು. ಬೇಸಿಗೆಯಲ್ಲಿ ಬಿಂದಾಸ್ ಆಗಿದ್ದ ಪಾರ್ಟಿವೇರ್ಸ್, ಈ ಸೀಸನ್‌ನ ಮಳೆ-ಗಾಳಿಗೆ ತಕ್ಕಂತೆ ಬದಲಾಗಿದೆ. ದಪ್ಪನೆಯ ಬೆಚ್ಚಗಿನ ಫ್ಯಾಬ್ರಿಕ್‌ನ ಲೇಯರ್ಡ್ ಲುಕ್‌ನಲ್ಲಿ ನಾನಾ ವಿನ್ಯಾಸದ ಔಟ್‌ಫಿಟ್‌ಗಳು ಬಂದಿವೆ. ಶೀರ್, ಶಿಮ್ಮರ್ ಪಾರ್ಟಿವೇರ್‌ನಿಂದಿಡಿದು ಒಂದರ ಮೇಲೊಂದಂರಂತೆ ಧರಿಸಬಹುದಾದ ವೈವಿಧ್ಯಮಯ ಔಟ್‌ಫಿಟ್ ಕಾನ್ಸೆಪ್ಟ್ ಇದೀಗ ಟ್ರೆಂಡಿಯಾಗಿದೆ.
ಶಿಮ್ಮರ್ ಲೇಯರ್ಡ್ ಪಾರ್ಟಿವೇರ್ಸ್‌ಗೆ ಬೇಡಿಕೆ
ಸಿಕ್ವೀನ್ಸ್, ಚಮಕಿ, ಶೈನಿಂಗ್ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿದಂತಹ ಶಿಮ್ಮರ್ ಲೇಯರ್ಡ್ ಲುಕ್ ಗೌನ್, ಡಬ್ಬಲ್ ನೆಟ್ಟೆಡ್ ಗೌನ್, ಫ್ರಿಲ್, ಫ್ಲೇರ್ ಹಾಫ್ ಗೌನ್, ಶಿಯರ್ಲಿಂಗ್ ನೆಕ್‌ಲೈನ್, ಸ್ಲೀವ್ ಲೈನ್ ಹೊಂದಿರುವಂತಹ ನೀ ಲೆಂಥ್ ಬಾಡಿಕಾನ್ ಫ್ರಾಕ್, ಜಾಕೆಟ್ ಜತೆಯಾಗಿರುವ ಶೀತ್ ಸ್ಟೈಲ್ ಫ್ರಾಕ್, ಡಬ್ಬಲ್ ಲೇಯರ್ಡ್ ಲುಕ್ ಇರುವ ಜಾಕೆಟ್ ಹಾಗೂ ಶರ್ಟ್ ಲುಕ್ ಡ್ರೆಸ್, ಫುಲ್ ಸ್ಲೀವ್ ಶಿಮ್ಮರ್ ಡ್ರೆಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಔಟ್‌ಡೋರ್ ಪಾರ್ಟಿಗಳಿಗೆ ಸೂಟ್ ಆಗುವಂತಹ ಶಿಮ್ಮರ್ ಕೋಟ್ಸ್ ಹಾಗೂ ಜಾಕೆಟ್ ಒಳಗೊಂಡಂತಹ ಡಬ್ಬಲ್ ತ್ರಿಬಲ್ ಲೇಯರ್‌ನವಕ್ಕೆ ಯುವತಿಯರು ಮನ ಸೋತಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾ ರಕ್ಷಾ. ಅವರ ಪ್ರಕಾರ, ಈ ಶಿಮ್ಮರ್ ಫ್ಯಾಬ್ರಿಕ್ ಈ ಮಾನ್ಸೂನ್ ನೈಟ್ ಪಾರ್ಟಿಗಳ ರಂಗೇರಿಸುತ್ತಿರುವುದು ಟ್ರೆಂಡಿಯಾಗಲು ಪ್ರಮುಖ ಕಾರಣ ಎನ್ನುತ್ತಾರೆ.
ಇದನ್ನೂ ಓದಿ: Monsoon Fashion: ಮಾನ್ಸೂನ್‌ನಲ್ಲಿ ಟ್ರೆಂಡಿಯಾಗಿರುವ ಡೆನಿಮ್ ಪ್ಯಾಂಟ್ ಸೂಟ್ ಲೇಯರ್ಡ್ ಲುಕ್ ಟ್ರೈ ಮಾಡಿ ನೋಡಿ !
ಶೈನಿಂಗ್ ಸೆಮಿ ಫಾರ್ಮಲ್ಸ್ ಡ್ರೆಸ್‌ಕೋಡ್
ಇನ್ನು, ಕಾರ್ಪೊರೇಟ್ ಹಾಗೂ ಕಚೇರಿಯ ಪಾರ್ಟಿವೇರ್ ಕೆಟಗರಿಯಲ್ಲಿ ಸೆಮಿ ಫಾರ್ಮಲ್ಸ್ ಉಡುಪುಗಳು ಕೂಡ ಕೊಂಚ ಮಿಂಚಲಾರಂಭಿಸಿವೆ. ಇವುಗಳಲ್ಲಿ ಪ್ಲೋರಲ್ ಹಾಗೂ ಟ್ರಾಪಿಕಲ್ ಪ್ರಿಂಟ್ಸ್‌ನ ಪ್ಯಾಂಟ್‌ಸೂಟ್ ಹಾಗೂ ಸ್ಕರ್ಟ್ ಸೂಟ್‌ಗಳು ಇನ್ನು ಚಾಲ್ತಿಯಲ್ಲಿವೆ. ಓವರ್ ಸೈಝ್ ಕೋಟ್, ಜಾಕೆಟ್‌ಗಳು ಈ ಸ್ಥಾನವನ್ನು ನಿಧಾನಗತಿಯಲ್ಲಿ ಮಿಕ್ಸ್ ಮ್ಯಾಚ್ ಪಾರ್ಟಿವೇರ್ ಕೆಟಗರಿಯಲ್ಲಿ ಆವರಿಸಿಕೊಳ್ಳುತ್ತಿವೆ.
ಪಾರ್ಟಿವೇರ್ಸ್ ಆಯ್ಕೆಗೆ 5 ಅಂಶಗಳು
- ಪಾರ್ಟಿ ಥೀಮ್ಗೆ ತಕ್ಕಂತೆ ಡ್ರೆಸ್‌ಕೋಡ್ ಆಯ್ಕೆ ಮಾಡಿ.
- ನೈಟ್ ಪಾರ್ಟಿಗಾದಲ್ಲಿ ಶಿಮ್ಮರ್ ಫ್ಯಾಬ್ರಿಕ್ನದ್ದು ಚೂಸ್ ಮಾಡಿ.
- ವಾಟರ್ ಪ್ರೂಫ್ ಮೇಕಪ್ ಮಾಡಿದರೂ ಕೊಂಚ ಗ್ಲಾಸಿ ಲುಕ್ ನೀಡಿ.
- ಡೇ ಪಾರ್ಟಿಗಾದಲ್ಲಿ ಶಿಮ್ಮರಿಂಗ್ ಔಟ್‌ಫಿಟ್ ಬೇಡ.
- ಜ್ಯುವೆಲರಿ ಇಡೀ ಲುಕ್ ಬದಲಿಸುವುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)