-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಮೆನ್ಸ್ ಫ್ಯಾಷನ್‌ಗೆ (Monsoon Jacket Fashion) ಸೈ ಎಂದಿರುವ ನಟ ದರ್ಶ್ ಚಂದ್ರಪ್ಪರವರಿಗೆ ಜಾಕೆಟ್‌ಗಳೆಂದರೇ ಬಲು ಪ್ರಿಯವಂತೆ. ಸೀಸನ್‌ಗೆ ತಕ್ಕಂತೆ ನಾನಾ ಬಗೆಯ ಜಾಕೆಟ್‌ಗಳನ್ನು ಧರಿಸುವ ದರ್ಶ್, ಮಳೆಗಾಲದ ಫ್ಯಾಷನ್‌ಗೆ ತಕ್ಕಂತೆ ಬದಲಾಗುತ್ತಾರಂತೆ. ಅಲ್ಲದೇ, ಯುವಕರು ಕೂಡ ಸೀಸನ್‌ಗೆ ತಕ್ಕಂತೆ ಔಟ್‌ಫಿಟ್ ಧರಿಸಬೇಕು ಎನ್ನುತ್ತಾರೆ.
ದರ್ಶ್ ಚಂದ್ರಪ್ಪ ಮಾನ್ಸೂನ್ ಲವ್
ಮೂಲತಃ ಮಾಡೆಲ್ ಆಗಿರುವ ದರ್ಶ್, ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಶೆಡ್ಯೂಲ್‌ಗಳ ನಡುವೆಯೂ ಜಾಹೀರಾತುಗಳಲ್ಲೂ ಮಾಡೆಲ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಮೊದಲಿನಿಂದಲೂ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿರುವ ದರ್ಶ್, ಸೀಸನ್‌ಗೆ ತಕ್ಕಂತೆ ತಮ್ಮ ಸ್ಟೈಲಿಂಗ್ ಕೂಡ ಸ್ಟೈಲಿಶ್ ಆಗಿ ಬದಲಿಸುತ್ತಿರುತ್ತಾರೆ. ಸದಾ ಒಂದೇ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಹುಡುಗರಿಗೆ ಈ ಮಾನ್ಸೂನ್ ಸೀಸನ್ ನಾನಾ ಬಗೆಯ ಲೇಯರ್ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಸದಾವಕಾಶ ನೀಡುತ್ತದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎನ್ನುತ್ತಾರೆ ದರ್ಶ್. ಮಾನ್ಸೂನ್‌ನಲ್ಲಿ ಹುಡುಗರು ಜಾಕೆಟ್ ಧರಿಸುವುದು ಕಾಮನ್. ಕೆಲವರಂತೂ ಈ ಸೀಸನ್‌ನಲ್ಲಿ ಹೊಸತನ್ನು ಖರೀದಿ ಮಾಡುತ್ತಾರೆ ಕೂಡ. ಇನ್ನು , ಕೆಲವರು ತಮ್ಮ ವಾರ್ಡ್ರೋಬ್‌ನಲ್ಲಿರುವ ಹಳೆಯ ಜಾಕೆಟ್‌ಗಳನ್ನು ಮರುಬಳಕೆ ಮಾಡುತ್ತಾರೆ. ಸೋ, ಜಾಕೆಟ್ ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ದರ್ಶ್ ಸಿಂಪಲ್ ಟಿಪ್ಸ್ ನೀಡಿದ್ದಾರೆ.
ವ್ಯಕ್ತಿತ್ವಕ್ಕೆ ತಕ್ಕಂತಿರಲಿ ಜಾಕೆಟ್ ಸ್ಟೈಲಿಂಗ್
ಆಯಾ ವ್ಯಕ್ತಿಯ ವ್ಯಕ್ತಿತ್ವಕ್ಕೆ ತಕ್ಕಂತೆ ಜಾಕೆಟ್ ಧರಿಸುವುದು ಉತ್ತಮ. ಎಲ್ಲದಕ್ಕಿಂತ ಹೆಚ್ಚಾಗಿ ಅವರವರ ಪ್ರೊಫೆಷನ್‌ಗೆ ಹೊಂದುವಂತಿರಬೇಕು.
ಯುವಕರ ಜಾಕೆಟ್ ಚಾಯ್ಸ್
ಇನ್ನು, ಕಾಲೇಜು ಹುಡುಗರಾದಲ್ಲಿ ಇದೀಗ ಟ್ರೆಂಡ್‌ನಲ್ಲಿರುವಂತಹ ಬಾಂಬರ್ ಜಾಕೆಟ್, ಸಾಲಿಡ್ ಒಪನ್ ಜಾಕೆಟ್, ಜರ್ಸಿ ಜಾಕೆಟ್ ಸೇರಿದಂತೆ ನಾನಾ ಹೈ ಸ್ಟ್ರೀಟ್ ಫ್ಯಾಷನ್‌ನಲ್ಲಿರುವಂತವನ್ನು ಆಯ್ಕೆ ಮಾಡಿಕೊಂಡು ಧರಿಸಬಹುದು.
ಮಳೆಗಾಲಕ್ಕೆ ಯಾವುದು ಬೆಸ್ಟ್
ಮಳೆಗಾಲದಲ್ಲಿ ಒದ್ದೆಯಾದರೇ ಮುದ್ದೆಯಾಗುವ ಲೆದರ್ ಜಾಕೆಟ್ ಬೇಡ. ಯಾವುದೇ ವಾಟರ್‌ಪ್ರೂಫ್ ಜಾಕೆಟ್ಸ್ ಚೂಸ್ ಮಾಡಿ. ಬೈಕರ್ಸ್ ಜಾಕೆಟ್‌ಗಳಲ್ಲೂ ನಾನಾ ಡಿಸೈನ್ಸ್ ದೊರೆಯುತ್ತವೆ. ಇವನ್ನು ಧರಿಸಿದಾಗ ಆಕರ್ಷಕವಾಗಿ ಕಾಣಿಸುತ್ತವೆ.
ಇದನ್ನೂ ಓದಿ: Star Saree Styling Tips: ಎಂಬ್ರಾಯ್ಡರಿ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣರಂತೆ ಕಾಣಿಸಬೇಕೇ? ಈ 5 ಟಿಪ್ಸ್ ಫಾಲೋ ಮಾಡಿ
ಜಾಕೆಟ್ ಸ್ಟೈಲಿಶ್ ಲುಕ್ಸ್
ಜಾಕೆಟ್‌ನಲ್ಲಿಯೂ ಸ್ಟೈಲಿಶ್ ಆಗಿ ಕಾಣಿಸಬೇಕಿದ್ದಲ್ಲಿ, ಶೂ ಧರಿಸಿ, ಜೀನ್ಸ್ ಅಥವಾ ಕಾರ್ಗೋ ಪ್ಯಾಂಟ್ ಧರಿಸಿ. ಹುಡುಗರ ಆಕ್ಸೆಸರೀಸ್ ಮಿನಿಮಲ್ ಆಗಿರಲಿ. ಹೇರ್‌ಸ್ಟೈಲ್ ಟ್ರೆಂಡಿಯಾಗಿರಲಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )