Site icon Vistara News

Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

Monsoon Rain Boots Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿಡ್ಸ್ ರೈನ್‌ ಬೂಟ್ಸ್ ಇದೀಗ (Monsoon rain boots fashion) ಟ್ರೆಂಡಿಯಾಗಿವೆ. ಹೌದು, ಮಾನ್ಸೂನ್‌ ಆಗಮಿಸುತ್ತಿದ್ದಂತೆಯೇ ಮಕ್ಕಳ ಫುಟ್‌ವೇರ್‌ ಫ್ಯಾಷನ್‌ನಲ್ಲಿ ರೈನ್‌ ಬೂಟ್ಸ್‌ಗಳು ಸದ್ದು ಮಾಡತೊಡಗಿವೆ. ಬಿಂದಾಸ್‌ ಆಗಿ ಮಳೆಯಲ್ಲಿ ಚಿಣ್ಣರು ತೊಯ್ದು ಆಟವಾಡಲು, ಔಟಿಂಗ್‌ನಲ್ಲಿ ಓಡಾಡಲು ಸಾಥ್‌ ನೀಡುತ್ತಿವೆ.

ರೈನ್‌ ಬೂಟ್ಸ್ ಫ್ಯಾಷನ್‌

ಮಾನ್ಸೂನ್‌ನಲ್ಲಿ ಸ್ಟೈಲಿಶ್‌ ಆಗಿರುವ ಮಕ್ಕಳ ಫುಟ್‌ವೇರ್‌ಗಳನ್ನು ಹಾಕುವುದೇ ಪೋಷಕರಿಗೆ ಬೇಸರದ ಸಂಗತಿ. ಯಾಕೆಂದರೆ, ಮಳೆಗೆ ತೊಯ್ದ ಚಿಣ್ಣರ ರೆಗ್ಯುಲರ್‌ ಫುಟ್‌ವೇರ್‌ಗಳು ಎಷ್ಟೇ ಒಣಗಿಸಿದರೂ ಬಲುಬೇಗ ಒದ್ದೆಯಾಗುತ್ತವೆ. ಅಲ್ಲದೇ, ಇವುಗಳ ಕಲರ್‌ ಕೂಡ ಮಾಸುತ್ತವೆ. ಇನ್ನು ಡಿಸೈನ್‌ ಇರುವಂತವು ಬಲು ಬೇಗ ಕಿತ್ತು ಹೋಗುತ್ತವೆ. ಅಲ್ಲದೇ, ಹಳತರಂತೆ ಕಾಣಿಸಲಾರಂಭಿಸುತ್ತವೆ. ಹಾಗಾಗಿ ಈ ಸೀಸನ್‌ನಲ್ಲಿ ಮಳೆ ಬರುತ್ತಿದ್ದಲ್ಲಿ, ಆ ಸಂದರ್ಭಕ್ಕೆ ಹೊಂದುವಂತಹ ಫುಟ್‌ವೇರ್‌ ಅದರಲ್ಲೂ ಬೂಟ್ಸ್ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಮಕ್ಕಳ ಸ್ಟೈಲಿಸ್ಟ್ಸ್. ಇದಕ್ಕೆ ಪೂರಕ ಎಂಬಂತೆ, ಮಾನ್ಸೂನ್‌ನಲ್ಲಿ ಚಾಲ್ತಿಯಲ್ಲಿರುವ ಮೂರು ಬಗೆಯ ಕಿಡ್ಸ್ ರೈನ್‌ ಬೂಟ್‌ಗಳ ಮಾಹಿತಿ ಇಲ್ಲಿದೆ.

ಫ್ಯಾನ್ಸಿ ಕಲರ್‌ ಗಮ್‌ ಬೂಟ್ಸ್

ಮೊದಲೆಲ್ಲಾ ಗದ್ದೆ-ತೋಟದಲ್ಲಿ ಬಳಸಲಾಗುತ್ತಿದ್ದ, ಗಮ್‌ ಬೂಟ್‌ಗಳು ಇದೀಗ ಮಕ್ಕಳ ಫುಟ್‌ವೇರ್‌ ಲೋಕದಲ್ಲಿ ಹೊಸ ರೂಪ ಪಡೆದು ಬಿಡುಗಡೆಗೊಂಡಿವೆ. ಮಕ್ಕಳ ಇಷ್ಟಕ್ಕೆ ಅನುಸಾರವಾಗಿ ಅವರಿಗೆ ಪ್ರಿಯವಾಗುವಂತಹ ಎದ್ದು ಕಾಣುವಂತಹ ಫ್ಯಾನ್ಸಿ ಕಲರ್‌ಗಳಲ್ಲಿ ದೊರೆಯುತ್ತಿವೆ. ಬ್ಲ್ಯಾಕ್‌ ಬಣ್ಣ ಹೊರತುಪಡಿಸಿ, ಲೆಕ್ಕವಿಲ್ಲದಷ್ಟು ಬಗೆಯ ಶೇಡ್‌ನವು ಟ್ರೆಂಡ್‌ನಲ್ಲಿವೆ.

ಕಲರ್‌ಫುಲ್‌ ರಬ್ಬರ್‌ ರೈನ್‌ ಬೂಟ್ಸ್

ನಾನಾ ಬಗೆಯ ವಿನ್ಯಾಸ ಹಾಗೂ ಡಿಜಿಟಲ್‌ ಪ್ರಿಂಟ್‌ ಇರುವಂತಹ ರಬ್ಬರ್‌ ರೈನ್‌ ಬೂಟ್ಸ್ ಮಕ್ಕಳ ಫುಟ್‌ವೇರ್‌ ಲೋಕದಲ್ಲಿ ಲಗ್ಗೆ ಇಟ್ಟಿವೆ. ಹುಡುಗಿಯರಿಗೆ ಪಿಂಕ್‌, ರೆಡ್‌, ಯೆಲ್ಲೋ ಶೇಡ್‌ಗಳಲ್ಲಿ ಕಾಟೂರ್ನ್‌ ಚಿತ್ತಾರಗಳಲ್ಲಿ ಬಂದಿದ್ದರೇ, ಹುಡುಗರಿಗೆ ಇಷ್ಟವಾಗುವಂತಹ ಬ್ಲ್ಯೂ, ಬ್ಲ್ಯಾಕ್‌, ಗ್ರೇ ಹಾಗೂ ಮಿಕ್ಸ್ ಡಿಸೈನ್‌ಗಳಲ್ಲಿ ಕಲರ್‌ಗಳಲ್ಲಿ ಎಂಟ್ರಿ ನೀಡಿವೆ.

ಲೈಟ್‌ವೈಟ್‌ ವಾಟರ್‌ ಪ್ರೂಫ್‌ ಬೂಟ್ಸ್

ಇನ್ನು, ಪುಟ್ಟ ಕಂದಮ್ಮಗಳಿಗೆ ಪಾದಗಳಿಗೆ ಸಾಫ್ಟ್ ಎಂದೆನಿಸುವಂತಹ ಸಾಫ್ಟ್ ಫ್ಯಾಬ್ರಿಕ್‌ನ ಲೈಟ್‌ವೈಟ್‌ ಇರುವಂತಹ ವಾಟರ್‌ಪ್ರೂಫ್‌ ಬೂಟ್ಸ್‌ಗಳು ಶಾಪ್‌ಗಳಲ್ಲಿ ಲಭ್ಯ. ಕೆಲವು ಸ್ಟೈಲಿಶ್‌ ಲುಕ್‌ನಲ್ಲಿದ್ದರೇ, ಇನ್ನು ಕೆಲವು ಕಾರ್ಟೂನ್‌ ಕ್ಯಾರೆಕ್ಟರ್‌ ಅಥವಾ ಸ್ಟೋರಿ ಟೆಲ್ಲಿಂಗ್‌ ಚಿತ್ರಗಳನ್ನು ಒಳಗೊಂಡಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Balloon Denim Frock Fashion: ಹುಡುಗಿಯರ ಮಾನ್ಸೂನ್‌ ಫ್ಯಾಷನ್‌ಗೆ ಕಾಲಿಟ್ಟ ಬಲೂನ್‌ ಡೆನಿಮ್‌ ಡ್ರೆಸ್

Exit mobile version