Site icon Vistara News

Mouni roy karvachauth mehandi | ಕರ್ವಾ ಚೌತ್‌ನಲ್ಲಿ ಟ್ರೆಂಡ್‌ ಹುಟ್ಟುಹಾಕಿದ ಮೌನಿ ರಾಯ್‌ ಶಿವ-ಪಾರ್ವತಿ ಮೆಹಂದಿ ಚಿತ್ತಾರ

Mouni roy karvachauth mehandi

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯಾದ ನಂತರ ಮೊದಲ ಕರ್ವಾ ಚೌತ್‌ (Mouni roy karvachauth mehandi) ಆಚರಿಸುತ್ತಿರುವ ನಟಿ ಮೌನಿ ರಾಯ್‌ ಕೈಗಳಿಗೆ ಆರ್ಟಿಸ್ಟಿಕ್‌ ಮೆಹಂದಿ ಹಾಕಿಸಿಕೊಳ್ಳುವ ಮೂಲಕ ಟ್ರೆಡಿಷನಲ್‌ ಟಚ್‌ ನೀಡಿದ್ದಾರೆ. ಈಗಾಗಲೇ ಈ ಆರ್ಟಿಸ್ಟಿಕ್‌ ಮೆಹಂದಿ ಫೋಟೊಗಳು ಬ್ಯೂಟಿ ಲೋಕದಲ್ಲಿ ವೈರಲ್‌ ಆಗಿದ್ದು, ಟ್ರೆಂಡ್‌ ಹುಟ್ಟುಹಾಕಿವೆ.

ಉತ್ತರ ಭಾರತದಲ್ಲಿ ಮಹಿಳೆಯರು ಪತಿಯ ಯೋಗಕ್ಷೇಮಕ್ಕಾಗಿ ಆಚರಿಸುವ ಕರ್ವಾ ಚೌತ್‌ ಹಬ್ಬದ ಆಚರಣೆಯನ್ನು ಇತ್ತೀಚೆಗೆ ಮದುವೆಯಾದ ನಟಿ ಮೌನಿರಾಯ್‌ ಕೂಡ ಆಚರಿಸುತ್ತಿದ್ದಾರೆ. ಅದಕ್ಕೆಂದು ಅಂಗೈಗಳಿಗೆ ಹಾಕಿಸಿದ ಶಿವ-ಪಾರ್ವತಿ ಹಾಗೂ ಆಚರಣೆಯ ಕುರಿತ ಮೆಹಂದಿಯ ಚಿತ್ತಾರ ಅಭಿಮಾನಿಗಳನ್ನು ಆಕರ್ಷಿಸಿದೆ. ಕೆಲವೇ ಸಮಯದಲ್ಲಿ ಬ್ಯೂಟಿ ಲೋಕದಲ್ಲಿ ಬೆಸ್ಟ್‌ ಮೆಹಂದಿ ಚಿತ್ತಾರಗಳ ಲಿಸ್ಟ್‌ ಸೇರಿದ್ದು, ಪಾಪ್ಯುಲರ್‌ ಆಗಿದೆ.

ಕರ್ವಾಚೌತ್‌ಗಾಗಿ ಆರ್ಟಿಸ್ಟಿಕ್‌ ಮೆಹಂದಿ
ನಾನು ಮದುವೆಯಲ್ಲೂ ಕೂಡ ಮೆಹಂದಿ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಸುಂದರ ಹಾಗೂ ಆಕರ್ಷಕ ಮೆಹಂದಿಯನ್ನು ಹಾಕಿಸಿಕೊಳ್ಳುವ ಆಸೆ ಮೊದಲಿನಿಂದಲೂ ಇತ್ತು. ಇದೀಗ ಅದು ನೆರವೇರಿದೆ. ಅದರಲ್ಲೂ ಎಲ್ಲರಿಗಿಂತ ಡಿಫರೆಂಟ್‌ ಆಗಿ ಕಾಣುವ ಹಾಗೂ ವಿಭಿನ್ನ ಡಿಸೈನ್‌ ಇರುವ ಮೆಹಂದಿ ವಿನ್ಯಾಸ ಮಾಡಿಸಿಕೊಳ್ಳಬೇಕೆಂಬ ಮನೋಭಿಲಾಷೆಯ ಕನಸು ಈಡೇರಿದೆ ಎಂದು ಮೌನಿ ಹೇಳಿಕೊಂಡಿದ್ದಾರೆ.

ಅಂಗೈ ಮೇಲೆ ಶಿವ- ಪಾರ್ವತಿಯ ಚಿತ್ತಾರ
ಮೌನಿಯ ಅಂಗೈ ಮೇಲೆ ಶಿವ-ಪಾರ್ವತಿಯ ಮನಮೋಹಕ ಚಿತ್ತಾರ ಆಕರ್ಷಕವಾಗಿ ಮೂಡಿದ್ದು, ಇದೀಗ ಬಾಲಿವುಡ್‌ ಸ್ಟಾರ್‌ಗಳ ಬ್ಯೂಟಿ ಟ್ರೆಂಡ್‌ಗೆ ಸೇರಿದೆ. ಮೌನಿಯ ಮತ್ತೊಂದು ಕೈಗಳ ಮೇಲೆ ಮೂಡಿರುವ ಚಂದ್ರನನ್ನು ಜಾಲರಿಯಲ್ಲಿ ನೋಡುತ್ತಿರುವ ಮಹಿಳೆಯ ಚಿತ್ತಾರ ಕೂಡ ಸುಂದರವಾಗಿ ಮೂಡಿ ಬಂದಿದೆ. ಮೆಹಂದಿ ಕಲಾವಿದರ ಕೈಚಳಕ ಎದ್ದು ಕಾಣುತ್ತಿದೆ. ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಇವರ ಈ ಮೆಹಂದಿ ಸ್ಟೇಟಸ್‌ಗೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿದ್ದು, ಅದರಲ್ಲೂ ಮಹಿಳೆಯರು ಈ ರೀತಿಯ ವಿನ್ಯಾಸಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ ಮೆಹಂದಿ ವಿನ್ಯಾಸಕಿ ರಮ್ಯಾ ಶರ್ಮಾ.

ಮೌನಿಯ ಗ್ರ್ಯಾಂಡ್‌ ಲುಕ್‌
ಮೊಣಕೈಗಳವರೆಗೂ ಸುಂದರ ಮೆಹಂದಿ ಚಿತ್ತಾರವನ್ನು ಮೂಡಿಸಿಕೊಂಡಿರುವ ಮೌನಿ ರಾಯ್‌ ಕೈಗಳ ಫೋಟೋಗಳು ಇದೀಗ ಕರ್ವಾ ಚೌತ್‌ನ ಟ್ರೆಂಡಿ ಬ್ಯೂಟಿ ಕಾನ್ಸೆಪ್ಟ್‌ನ ಥೀಮ್‌ ಆಧಾರಿತ ಮೆಹಂದಿ ವಿನ್ಯಾಸದ ಲಿಸ್ಟ್‌ಗೆ ಸೇರಿದೆ.

ಇದನ್ನೂ ಓದಿ | Karva Chauth | ಕರ್ವಾ ಚೌಥ್‌ಗೆ ಮುಸ್ಲಿಮರು ಹಿಂದೂ ವಿವಾಹಿತ ಮಹಿಳೆಗೆ ಮೆಹಂದಿ ಹಾಕುವಂತಿಲ್ಲ: ವಿಎಚ್‌ಪಿ

Exit mobile version