–ಶೀಲಾ ಸಿ. ಶೆಟ್ಟಿ, ಬೆಂಗಳೂರು
ದಸರಾ ಆಚರಣೆಗೆ ಸಾಥ್ ನೀಡಲು ನವ ವರ್ಣದ (Navaratri Bangles Trend) ನಾನಾ ಬಗೆಯ ಟ್ರೆಂಡಿ ಬ್ಯಾಂಗಲ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ನೋಡಲು ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಲೆಕ್ಕವಿಲ್ಲದಷ್ಟು ಡಿಸೈನ್‌ಗಳಲ್ಲಿ ಹೆಣ್ಣುಮಕ್ಕಳ ಮನಗೆದ್ದಿವೆ.
ಬಿಳಿ, ಕೆಂಪು, ಹಳದಿ, ಹಸಿರು, ಕೇಸರಿ, ನೀಲಿ, ಬೂದಿ, ಗುಲಾಬಿ ., ಒಂದೇ ಎರಡೇ ನಾನಾ ವರ್ಣಗಳ ಬ್ಯಾಂಗಲ್ಸ್ ಸೆಟ್ ಮಾರುಕಟ್ಟೆಗೆ ಬಂದಿದ್ದು, ಧರಿಸುವ ಡ್ರೆಸ್‌ಕೋಡ್‌ಗೆ ತಕ್ಕಂತೆ ಮ್ಯಾಚ್ ಮಾಡುವಂತಹ ಬಣ್ಣ ಹಾಗೂ ಡಿಸೈನ್‌ಗಳಲ್ಲಿ ಲಗ್ಗೆ ಇಟ್ಟಿವೆ ಎನ್ನುತ್ತಾರೆ ಸ್ಟೈಲಿಸ್ಟ್ ನಿತ್ಯಾ ರಾಣಿ.
ಕಲರ್‌ಫುಲ್ ಲೈಟ್‌ವೇಟ್ ನವವರ್ಣದ ಬ್ಯಾಂಗಲ್ಸ್
ನೋಡಲು ಕಲರ್‌ಫುಲ್ ಆಗಿದ್ದರೂ, ಇವು ಲೈಟ್‌ವೇಟ್‌ನಲ್ಲಿ ದೊರೆಯುತ್ತಿವೆ. ಫೈಬರ್‌ನಿಂದ ಮಾಡಲ್ಪಟ್ಟಿರುವ ಇವು ಆಕರ್ಷಕ ಡಿಸೈನ್‌ಗಳಲ್ಲಿ ಲಭ್ಯ. ಶೈನಿಂಗ್ ಇರುವಂತಹ ಗೋಲ್ಡ್ ಬ್ಯಾಂಗಲ್‌ಗಳು ಕೂಡ ಈ ಶೈಲಿಯಲ್ಲಿ ದೊರೆಯುತ್ತಿವೆ.
ನವವರ್ಣದ ಸೆಟ್ ಬ್ಯಾಂಗಲ್ಸ್
ಸುಮಾರು ೧೨ ಬ್ಯಾಂಗಲ್‌ಗಳಿರುವ ಸೆಟ್‌ಗಳು ಇಂದು ನಾನಾ ವರ್ಣದಲ್ಲಿ ದೊರೆಯುತ್ತಿವೆ. ಇವು ಆಯಾ ಮ್ಯಾಚಿಂಗ್ ಸೀರೆ ಇಲ್ಲವೇ ಡ್ರೆಸ್‌ಗೆ ಸೂಟ್ ಆಗುವಂತೆ ಧರಿಸಬಹುದು. ನೋಡಲು ಆಕರ್ಷಕವಾಗಿ ಕಾಣುತ್ತವೆ. ಕೆಲವು ಸೆಟ್‌ಗಳಲ್ಲಿ ಸೈಡಿಗೆ ಗೋಲ್ಡನ್ ಬಣ್ಣ ಬ್ಯಾಂಗಲ್‌ಗಳು ಇರುತ್ತವೆ. ಎರಡೂ ಕೈಗಳಿಗೆ ಇವನ್ನು ಧರಿಸಿದಾಗ ಡಿಸೈನರ್‌ವೇರ್ ಲುಕ್ ಮತ್ತಷ್ಟು ಚೆನ್ನಾಗಿ ಕಾಣುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಡಿಸೈನರ್ ಬ್ಯಾಂಗಲ್‌ಗಳ ಟ್ರೆಂಡ್
ನವರಾತ್ರಿಗೆ ಸಾದಾ ಬಣ್ಣಗಳಿಗಿಂತ ಹೆಚ್ಚಾಗಿ ಡಿಸೈನರ್ ಬ್ಯಾಂಗಲ್‌ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ನೋಡಲು ಅತ್ಯಾಕರ್ಷಕ ಡಿಸೈನ್‌ನಲ್ಲಿ ಲಭ್ಯವಿರುವ ಇವು ಒಂದಕ್ಕಿಂತ ಒಂದು ವಿಭಿನ್ನ ವಿನ್ಯಾಸದಲ್ಲಿ ದೊರೆಯುತ್ತವೆ. ಲೆಕ್ಕವಿಲ್ಲದಷ್ಟು ಬಣ್ಣಗಳ ಕಾಂಬಿನೇಷನ್‌ಗಳಲ್ಲಿ ದೊರೆಯುತ್ತವೆ. ಯಾವ ವರ್ಣದ್ದೂ ಬೇಕಾದರೂ ಲಭ್ಯ ಎನ್ನುತ್ತಾರೆ ಮಾರಾಟಗಾರರು.
ಬ್ಯಾಂಗಲ್‌ಗಳನ್ನು ಹೀಗೆ ಮ್ಯಾಚ್ ಮಾಡಿ
- ನಿಮ್ಮ ಉಡುಪಿಗೆ ಬ್ಯಾಂಗಲ್ ಬಣ್ಣ ಹೊಂದುವಂತಿರಲಿ.
- ನವರಾತ್ರಿಯಲ್ಲಿ ಕಾಂಟ್ರಾಸ್ಟ್ ಬ್ಯಾಂಗಲ್ಸ್ ಹೊಂದದು.
- ಸೈಡಿಗೆ ಗೋಲ್ಡ್ ಲುಕ್ ನೀಡುವ ಬ್ಯಾಂಗಲ್ ಧರಿಸಬಹುದು.
- ಕಡಗಗಳನ್ನು ಸೆಟ್ ಬ್ಯಾಂಗಲ್ಸ್ ಮಧ್ಯೆ ಧರಿಸಬಹುದು.
ಇದನ್ನೂ ಓದಿ | Navaratri Fashion | ನವರಾತ್ರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ದುರ್ಗಾ ದೇವಿ ವಿನ್ಯಾಸ