Site icon Vistara News

Navaratri Beauty Trend | ನವರಾತ್ರಿ ಫೆಸ್ಟೀವ್‌ ಸೀಸನ್‌ಗೂ ಬಂತು ಬ್ಯೂಟಿ ಪ್ಯಾಕೇಜ್‌

Navaratri Beauty Trend

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿ ಅಥವಾ ದಸರಾ (Navaratri Beauty Trend) ಸಮೀಪಿಸುತ್ತಿದ್ದಂತೆ ಮಹಿಳೆಯರ ಸೌಂದರ್ಯಕ್ಕೆ ಸಾಥ್‌ ನೀಡುವ ನಾನಾ ಬಗೆಯ ಮೇಕೋವರ್‌ ಸೌಲಭ್ಯ ಹಾಗೂ ಫೆಸ್ಟೀವ್‌ ಬ್ಯೂಟಿ ಪ್ಯಾಕೇಜ್‌ಗಳು ಬ್ಯೂಟಿ ಲೋಕದಲ್ಲಿ ಬಿಡುಗಡೆಗೊಂಡಿವೆ. ಹಬ್ಬದ ಸಂಭ್ರಮ-ಸಡಗರದಲ್ಲಿ ಹೆಣ್ಣುಮಕ್ಕಳು ಮತ್ತಷ್ಟು ಚಂದಗಾಣಲು ಇವು ನಾನಾ ಬ್ಯೂಟಿ ಪ್ಯಾಕೇಜ್‌ ಆಫರ್‌ಗಳನ್ನು ಬಿಡುಗಡೆಗೊಳಿಸಿವೆ.

ಬ್ಯೂಟಿಗೂ ಕೊಂಬೋ ಆಫರ್‌
ಹಬ್ಬದ ಮೇಕಪ್‌ ಜತೆಗೆ ಹೇರ್‌ಸ್ಟೈಲ್‌, ಫೇಶಿಯಲ್‌ ಜತೆಗೆ ಹೇರ್ ಮಸಾಜ್‌, ಪೆಡಿಕ್ಯೂರ್‌-ಮೆನಿಕ್ಯೂರ್‌ ಜತೆಗೆ ಐಬ್ರೋ ಶೇಪ್‌, ಹೇರ್‌ ಕಟ್‌ ಜತೆಗೆ ಸೆಟ್ಟಿಂಗ್‌, ವ್ಯಾಕ್ಸಿಂಗ್‌ ಜೊತೆಗೆ ಬ್ಲೀಚಿಂಗ್‌ ಹೀಗೆ ನಾನಾ ಬಗೆಯ ಸೌಂದರ್ಯ ಹೆಚ್ಚಿಸುವ ಆಫರ್‌ಗಳು ಈಗಾಗಲೇ ಬ್ಯೂಟಿ ಲೋಕದಲ್ಲಿ ಸದ್ದು ಮಾಡುತ್ತಿವೆ.

ಇದನ್ನೂ ಓದಿ | HSR ಲೇಔಟ್‌ನಲ್ಲಿ ಬ್ಯೂಟಿ ಆ್ಯಂಡ್ ಬಿಯಾಂಡ್ ಶಾಪ್ ಉದ್ಘಾಟಿಸಿದ ದಕ್ಷಿಣ ಭಾರತದ ಖ್ಯಾತ ನಟಿ!

ದೀಪಾವಳಿವರೆಗೂ ಮುಂದುವರಿದ ಸೇವೆ
ಸದ್ಯಕ್ಕೆ ವೆಡ್ಡಿಂಗ್‌ ಪ್ಯಾಕೇಜ್‌ಗಳು ಕಡಿಮೆಯಾಗಿದ್ದು, ಹಬ್ಬದ ಸೀಸನ್‌ ಕಳೆಗಟ್ಟಿದೆ. ಹಾಗಾಗಿ ಮುಂಬರುವ ದೀಪಾವಳಿಯವರೆಗೂ ಫೆಸ್ಟೀವ್‌ ಸೀಸನ್‌ ಇರುವುದರಿಂದ ನಾನಾ ಬ್ರಾಂಡ್‌ಗಳು ಬಗೆ ಬಗೆಯ ಫೆಸ್ಟೀವ್‌ ಬ್ಯೂಟಿ ಪ್ಯಾಕೇಜ್‌ಗಳನ್ನು ತಂತಮ್ಮ ಬ್ಯೂಟಿ ಪಾರ್ಲರ್‌ಗಳಲ್ಲಿ ನೀಡುತ್ತಿವೆ. ಇನ್ನು ನವರಾತ್ರಿಯಲ್ಲಿ ಒಂಬತ್ತು ದಿನಗಳವರೆಗೂ ಪ್ರತಿದಿನ ಒಂದಲ್ಲ ಒಂದು ಹಬ್ಬವನ್ನು ಪ್ರತಿಯೊಬ್ಬರು ಆಚರಿಸುತ್ತಾರೆ. ಹಾಗಾಗಿ ಇಂತಹ ಆಫರ್‌ಗಳನ್ನು ಬಿಡುಗಡೆಗೊಳಿಸಿದ್ದೇವೆ ಎನ್ನುತ್ತಾರೆ ಬ್ಯೂಟಿ ಸಲೂನ್‌ನ ಮೇಕಪ್‌ ಆರ್ಟಿಸ್ಟ್.

ಹಬ್ಬಗಳಿಗೆ ಹೋಮ್‌ ಸರ್ವೀಸ್‌
ಹಬ್ಬದ ಗಡಿಬಿಡಿಯಲ್ಲಿ ಬ್ಯೂಟಿ ಪಾರ್ಲರ್‌ಗೆ ಬರಲಿಕ್ಕಾಗದವರು ಹೋಮ್‌ ಸರ್ವೀಸ್‌ ಪಡೆಯುವಂತಹ ಸೇವೆಯನ್ನು ಈಗಾಗಲೇ ಪ್ರಕಟಿಸಿವೆ. ಇದಕ್ಕೆಂದೇ ನಾನಾ ಫ್ರಾಂಚೈಸಿ ಪಡೆದ ಬ್ಯೂಟಿ ಪಾರ್ಲರ್‌ಗಳು ಪ್ರೊಫೆಷನಲ್‌ ಬ್ಯೂಟಿ ಎಕ್ಸ್‌ಪರ್ಟ್‌ಗಳನ್ನು ನೇಮಿಸಿಕೊಂಡಿವೆ.

ಮೇಕಪ್‌ಗೆ ಬೇಡಿಕೆ ಹೆಚ್ಚು
ಹಬ್ಬದ ಸೀಸನ್‌ನಲ್ಲಿ ಮೇಕಪ್‌ ಹಾಗೂ ಸೀರೆ ಡ್ರೇಪಿಂಗ್‌ಗೆ ಬೇಡಿಕೆ ಹೆಚ್ಚು. ಬಹುತೇಕ ಹೆಣ್ಣುಮಕ್ಕಳು ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣ ಬಯಸುವುದರಿಂದ ಫೆಸ್ಟೀವ್‌ ಮೇಕಪ್‌ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಮೇಕಪ್‌ ತಜ್ಞೆ ಶೈಲಜಾ ಹಾಗೂ ದಿವಿಜಾ.

ಬ್ಯೂಟಿ ಪ್ಯಾಕೇಜ್‌ ಪ್ರಯೋಜನ ಪಡೆಯುವ ಮುನ್ನ

ಇದನ್ನೂ ಓದಿ | London Fashion Week: ಕ್ವೀನ್‌ ಎಲಿಜಬೆತ್‌ಗೆ ಗೌರವಾರ್ಪಣೆ ಅರ್ಪಿಸಿ ಆರಂಭವಾದ ಲಂಡನ್‌ ಫ್ಯಾಷನ್‌ ವೀಕ್‌

Exit mobile version