Site icon Vistara News

Navaratri Colour Trend | ನವರಾತ್ರಿ 2ನೇ ದಿನಕ್ಕೆ ಟ್ರೆಂಡಿಯಾಗಿರಲಿ ಕೆಂಪು ವರ್ಣದ ಎಥ್ನಿಕ್‌ವೇರ್‌

Navaratri Colour Trend

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ ೨ನೇ ದಿನ (Navaratri Colour Trend) ಕೆಂಪು ವರ್ಣದ ಉಡುಪು ಅಥವಾ ಸೀರೆ ಧರಿಸುವವರು ಹೇಗೆಲ್ಲ ಟ್ರೆಂಡಿಯಾಗಿ ಕಾಣಿಸಿಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಟ್ರೈ ಮಾಡಿ ನೋಡಿ.

ಕೆಂಪು ಸೀರೆ ಧರಿಸುವವರಾದಲ್ಲಿ
ಕೆಂಪು ವರ್ಣದಲ್ಲಿನಾನಾ ಶೇಡ್‌ಗಳವು ದೊರೆಯುತ್ತವೆ. ಉದಾಹರಣೆಗೆ ರೆಡ್‌ಬ್ಲಡ್‌, ತಿಳಿಗೆಂಪು, ಡಾರ್ಕ್ ಕೆಂಪು, ಮರೂನ್‌, ವೈನ್‌ ರೆಡ್‌, ಬ್ರಿಕ್‌ ರೆಡ್‌ ಹೀಗೆ ಇತ್ತೀಚೆಗೆ ಸಾಕಷ್ಟು ವರ್ಣಗಳು ಟ್ರೆಂಡ್‌ನಲ್ಲಿವೆ.

ಫೆಸ್ಟೀವ್‌ ಸೀಸನ್‌ನಲ್ಲಿ ಈ ಶೇಡ್‌ನ ಸಿಲ್ಕ್‌, ಸೆಮಿ ಸಿಲ್ಕ್‌ ಹಾಗೂ ಬನಾರಸ್‌ ಸೀರೆಗಳು ಸಖತ್‌ ಟ್ರೆಂಡಿಯಾಗಿವೆ. ರೇಷ್ಮೆ ಸೀರೆಯಾದಲ್ಲಿ ಹೆಚ್ಚು ಪ್ರಿಂಟ್‌ನ ಆಯ್ಕೆ ಬೇಡ. ಆದಷ್ಟೂ ರೆಡ್‌ ಕಲರ್‌ ಎದ್ದು ಕಾಣುವಂತದ್ದನ್ನು ಸೆಲೆಕ್ಟ್‌ ಮಾಡಿ. ಬಾರ್ಡರ್‌ ಇದ್ದಲ್ಲಿ ಕೆಂಪು ವರ್ಣದ ಸೀರೆಗಳು ಹೆಚ್ಚು ಹೈಲೈಟ್‌ ಆಗುತ್ತವೆ. ಇನ್ನು ರೇಷ್ಮೆಯ ಸೀರೆಗಳಾದಲ್ಲಿ ಬಂಗಾರದ ಇಲ್ಲವೇ ಇಮಿಟೇಷನ್‌ ಜ್ಯುವೆಲರಿಗಳು ಮ್ಯಾಚ್‌ ಆಗುತ್ತವೆ.

ಇದನ್ನೂ ಓದಿ | Holiday Fashion | ಬಂತು ದಸರಾ ಹಾಲಿಡೇ ಫ್ಯಾಷನ್‌

ಭಾಗ್ಯ ಶ್ರೀ, ಬಾಲಿವುಡ್‌ ನಟಿ

ಇಂಡೋ-ವೆಸ್ಟರ್ನ್ ಸ್ಟೈಲ್‌ಗಾದಲ್ಲಿ
ಇಂಡೋ-ವೆಸ್ಟರ್ನ್ ಶೈಲಿಯ ಸೀರೆಗಳನ್ನು ಧರಿಸುವವರು ಇಂದು ವೃತ್ತಿಪರ ಕ್ಷೇತ್ರದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಡಿಫರೆಂಟ್‌ ಲುಕ್‌ ನೀಡುವ ಕ್ರಾಪ್‌ ಟಾಪ್‌, ಬೆಲ್‌ ಸ್ಲೀವ್‌ ಹಾಗೂ ಬಲೂನ್‌ ಸ್ಲೀವ್‌ ಟಾಪ್‌ಗಳನ್ನು ಬಳಸಿ ಸೀರೆ ಉಡುವವರು ಹೆಚ್ಚಾಗಿದ್ದಾರೆ. ಅಂತಹವರು ಆದಷ್ಟೂ ಕಾಂಟ್ರಾಸ್ಟ್‌ ವರ್ಣದ ಬ್ಲೌಸ್‌ ಬಳಸುವ ಬದಲು ಈ ಹಬ್ಬಕ್ಕೆ ಮಾನೋಕ್ರೋಮ್‌ ಶೇಡ್‌ಗಳಿಗೆ ಆದ್ಯತೆ ನೀಡಿ, ಧರಿಸಿ. ಯಾಕೆಂದರೆ, ಇದು ನೋಡಲು ಇಂಡೋ-ವೆಸ್ಟರ್ನ್ ಸೀರೆಯಾದರೂ ಹಬ್ಬದ ವರ್ಣದ ಲುಕ್‌ ನೀಡುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಜಾಕ್ವೆಲೀನ್‌ ಫರ್ನಾಂಡೀಸ್‌ ನಟಿ

ಅನಾರ್ಕಲಿ -ಕಮೀಜ್ ಪ್ರಿಯರು ಹೀಗೆ ಮಾಡಿ
ಸೀರೆ ಬೇಡ, ಸೆಲ್ವಾರ್‌-ಕಮೀಜ್, ಅನಾರ್ಕಲಿ ಅಥವಾ ಇನ್ನೀತರೆ ಎಥ್ನಿಕ್‌ವೇರ್‌ ಪ್ರಿಯರಾದಲ್ಲಿ ಆದಷ್ಟೂ ಮಾನೋಕ್ರೋಮ್‌ ಶೇಡ್‌ನ ಉಡುಪುಗಳನ್ನು ಆಯ್ಕೆ ಮಾಡಿ. ಅನಾರ್ಕಲಿಯಲ್ಲೂ ಸಾಕಷ್ಟು ಬಗೆಯವು ಫೆಸ್ಟೀವ್‌ ಸೀಸನ್‌ಗೆ ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿವೆ. ಇನ್ನು ಇವಕ್ಕೆ ಮ್ಯಾಚಿಂಗ್‌ ಜ್ಯುವೆಲರಿಗಳನ್ನು ಧರಿಸಬಹುದು. ಆಗ ಕಂಪ್ಲೀಟ್‌ ಕೆಂಪು ವರ್ಣದ ಲುಕ್‌ ನಿಮ್ಮದಾಗುತ್ತದೆ.

ರೆಡ್‌ ವರ್ಣಕ್ಕೆ ಸೂಟ್‌ ಆಗುವ ಹೇರ್‌ಸ್ಟೈಲ್‌
ಇನ್ನು ಕೆಂಪು ಶೇಡ್‌ನ ವೇರ್‌ಗೆ ಆದಷ್ಟೂ ಹೇರ್‌ಸ್ಟೈಲ್‌ ಟ್ರೆಡಿಷನಲ್‌ ಲುಕ್‌ ನೀಡಬೇಕು. ಫಂಕಿ ಲುಕ್‌ ಬೇಡ.

ನಿಯಾ ಶರ್ಮಾ, ನಟಿ

ಮೇಕಪ್‌ ಹೀಗಿರಲಿ
ಮೇಕಪ್‌ ಲೈಟಾಗಿರಲಿ. ಕಾಜಲ್‌, ಐಲೈನರ್‌, ಮಸ್ಕಟಾ ಬಳಸಿ. ರೆಡ್‌ ಲಿಪ್‌ಸ್ಟಿಕ್‌ ತಿಳಿಯಾಗಿ ಲೇಪಿಸಿ. ಹಣೆಗೆ ಅಗಲವಾದ ರೆಡ್‌ ಬಂಗಾಲಿ ಬಿಂದಿ ಇರಿಸಿ. ಇದು ನೋಡಲು ಆಕರ್ಷಕವಾಗಿ ಕಾಣುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Weekend Style | ಸೀಸನ್‌ಗೆ ತಕ್ಕಂತೆ ಬದಲಾಗುವ ನಿಶಾ ಫ್ಯಾಷನ್‌

Exit mobile version