Site icon Vistara News

Off Shoulder Tops Fashion: ನೀವೂ ಆಫ್‌ ಶೋಲ್ಡರ್‌ ಟಾಪ್‌ ಧರಿಸಬಹುದು! ಆದರೆ ಈ ಎಚ್ಚರಿಕೆ ವಹಿಸಿ

Off Shoulder Tops Fashion

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಹೆಚ್ಚು ಸ್ಟೈಲಿಶ್ (stylish) ಲುಕ್ ನೀಡುವುದು ಮಾತ್ರವಲ್ಲ ಇದು ಟ್ರೆಂಡಿ (trendy) ಆಯ್ಕೆಯೂ ಹೌದು. ಆದರೆ ಹೆಚ್ಚಿನವರಿಗೆ ಇದನ್ನು ಧರಿಸುವುದು, ನಿರ್ವಹಣೆ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಇಷ್ಟವಿದ್ದರೂ ಇಂತಹ ದಿರಸು ಹಾಕಿಕೊಂಡು ಹೊರಗೆ ಹೋಗಲು ಬಹುತೇಕ ಮಂದಿ ಹಿಂಜರಿಯುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಶೋಲ್ಡರ್ ಇಲ್ಲದ ದಿರಸು ಧರಿಸಿದರೆ ಹೆಚ್ಚು ಕಂಫರ್ಟ್ ಫೀಲ್ ಆಗುವುದು ಮಾತ್ರವಲ್ಲ ಎಲ್ಲರ ನಡುವೆ ಸ್ಟೈಲಿಶ್ ಆಗಿಯೂ ಮಿಂಚಬಹುದು.

ಶೋಲ್ಡರ್ ಇಲ್ಲದ ದಿರಸುಗಳನ್ನು ಧರಿಸಲು ಈ ಆರು ಪ್ರಮುಖ ಸಲಹೆಗಳನ್ನು ಪಾಲಿಸಿ. ಆಗ ನೀವೂ ಸ್ಟೈಲಿಶ್ ಆಗಿ ಮಿಂಚಬಹುದು.

ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಿ

ಶೋಲ್ಡರ್ ಇಲ್ಲದ ದಿರಸು ಧರಿಸಿ ಹೆಚ್ಚು ಕಂಫರ್ಟ್ ಆಗಬೇಕಾದರೆ ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಬೇಕು. ಇದು ಆಫ್-ದ-ಶೋಲ್ಡರ್ ಟಾಪ್‌ಗಳಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ. ಮುಖ್ಯವಾಗಿ ಎದೆ ಭಾಗ ಅಗಲವಾಗಿದ್ದರೆ ಸರಿಯಾದ ಒಳ ಉಡುಪು ಆಯ್ದುಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಬ್ರ್ಯಾಂಡೆಡ್ ಒಳ ಉಡುಪುಗಳನ್ನು ಆಯ್ಕೆ ಮಾಡಿ. ಇದರಲ್ಲಿ ಒಳ ಉಡುಪಿನ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ನಯವಾದ ಮತ್ತು ಆಕರ್ಷಕವಾದ ಸ್ಟ್ರಾಪ್ ಗಳನ್ನು ಹೊಂದಿರುತ್ತದೆ. ಇಂತವುಗಳು ಹೆಚ್ಚು ಕಂಫರ್ಟ್ ಕೊಡುತ್ತದೆ ಮತ್ತು ದಿರಿಸಿನ ಮೇಲಿನ ಅನುಮಾನವನ್ನು ಮನಸ್ಸಿನಿಂದ ತೊಡೆದು ಹಾಕುತ್ತದೆ.


ಸ್ಟ್ರಕ್ಚರ್ಡ್ ಟಾಪ್ಸ್

ಶೋಲ್ಡರ್ ಇಲ್ಲದ ದಿರಸು ಧರಿಸುವಾಗ ಮೇಲ್ಭಾಗದಲ್ಲಿ ಹೆಚ್ಚುವರಿ ಬೆಂಬಲ ಮತ್ತು ಸಹಾಯಕ್ಕೆ ಬಿಲ್ಟ್-ಇನ್ ಬೋನಿಂಗ್, ಅಂಡರ್‌ವೈರ್ ಅಥವಾ ನೆಕ್‌ಲೈನ್ ಸುತ್ತಲೂ ದಪ್ಪವಾದ ರಬ್ಬರ್ ಬ್ಯಾಂಡ್‌ ಇರುವುದನ್ನು ಖಚಿತಪಡಿಸಿಕೊಳ್ಳಿ. ರಚನಾತ್ಮಕ ಮೇಲ್ಭಾಗಗಳು ಹೆಚ್ಚು ಸ್ಟೈಲಿಶ್ ಲುಕ್ ನೀಡುವುದು ಮಾತ್ರವಲ್ಲ ದೇಹದ ಗಾತ್ರಕ್ಕೆ ತಕ್ಕಂತೆ ಸರಿಯಾಗಿ ಹೊಂದಿಕೆಯಾಗುವಂತೆ ಮಾಡಿ ಕೊಂಚ ಸ್ಲಿಮ್ ಮತ್ತು ಫಿಟ್ ಆಗಿರುವಂತೆ ತೋರಿಸುತ್ತದೆ.

ಮೃದು ಬಟ್ಟೆಗಳಿಗೆ ಆದ್ಯತೆ ನೀಡಿ

ಆಫ್-ದಿ-ಶೋಲ್ಡರ್ ಟಾಪ್‌ಗಳಿಗಾಗಿ ಹೆಚ್ಚು ದಪ್ಪವಾದ ಬಟ್ಟೆಗಳು ಸರಿಯಾದ ಆಯ್ಕೆಯಲ್ಲ. ತೆಳು ಮತ್ತು ಮೃದುವಾದ ಬಟ್ಟೆಗಳು ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹತ್ತಿ, ಲೆನಿನ್ ಬಟ್ಟೆಗಳಿಂದ ವಿನ್ಯಾಸಗೊಳಿಸಿರುವ ದಿರಿಸನ್ನು ಆಯ್ಕೆ ಮಾಡಿಕೊಳ್ಳಬಹುದು.


ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡಿ

ಶೋಲ್ಡರ್ ಇಲ್ಲಿದ ದಿರಸು ಧರಿಸುವಾಗ ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡುವುದು ಕೂಡ ಬಹು ಮುಖ್ಯವಾಗಿದೆ. ಇದು ಶೋಲ್ಡರ್ ಲೆಸ್ ಟಾಪ್‌ಗಳಿಗೆ ಸಪೋರ್ಟಿವ್ ಆಗಿದ್ದರೆ ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹೊಕ್ಕುಳ ಬಳಿ ಬರುವ ಜೀನ್ಸ್ ಅಥವಾ ಸ್ಕರ್ಟ್‌ ಗಳನ್ನು ಆಯ್ಕೆ ಮಾಡುವುದು ಮತ್ತು ಹೆಚ್ಚು ದಪ್ಪ, ಅಗಲವಾದ ಎಲಾಸ್ಟಿಕ್ ಇರುವ ಶೋಲ್ಡರ್ ಲೆಸ್ ಟಾಪ್ ಗಳಿಗೆ ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಎ-ಲೈನ್ ಸ್ಕರ್ಟ್‌ಗಳು ಮತ್ತು ವೈಡ್ ಲೆಗ್ ಪ್ಯಾಂಟ್‌ಗಳು ಹೆಚ್ಚು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

ಸರಿಯಾದ ವಿನ್ಯಾಸವನ್ನು ಆಯ್ಕೆ ಮಾಡಿ

ಶೋಲ್ಡರ್ ಲೆಸ್ ಟಾಪ್ ಗಳಲ್ಲಿ ಭುಜದ ಮೇಲ್ಭಾಗ ಸಮಾನವಾಗಿ ಇರುವುದಿಲ್ಲ. ಎದೆ ಭಾಗ ದೊಡ್ಡದಾಗಿರುವವರಿಗೆ ಕಂಠರೇಖೆಯ ದಿರಿಸುಗಳು ಹೆಚ್ಚು ಸುಂದರವಾಗಿ ಕಾಣುತ್ತದೆ. ಇದು ಎದೆಯ ಭಾಗದಲ್ಲಿ ಸುತ್ತುವರೆದಿರುವ ಲೇಯರ್‌ಗಳು, ರಫಲ್ಸ್ ಅಥವಾ ಇತರ ವಿಶೇಷ ವಿನ್ಯಾಸವನ್ನು ಒಳಗೊಂಡಿರುತ್ತದೆ.


ಸೂಕ್ತ ಆಭರಣ ಧರಿಸಿ

ಶೋಲ್ಡರ್ ಲೆಸ್ ಟಾಪ್‌ಗಳನ್ನು ಆಯ್ಕೆ ಮಾಡುವಾಗ ದಪ್ಪ ಕಿವಿಯೋಲೆಗಳು, ನೆಕ್ಲೇಸ್‌ಗಳು ಕೂಡ ಗಮನ ಸೆಳೆಯುವಂತಿರಬೇಕು. ನೆಕ್ಲೇಸ್ ಧರಿಸಲು ಇಷ್ಟವಿಲ್ಲದೇ ಇದ್ದರೆ ಸ್ಟ್ರೈಕಿಂಗ್ ಕಿವಿಯೋಲೆಗಳನ್ನು ಆಯ್ಕೆ ಮಾಡಿ. ಇದರೊಂದಿಗೆ ಆಕರ್ಷಕ ಬೆಲ್ಟ್‌ ಗಳು ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಇದು ಸೊಂಟದ ಭಾಗ ಬಿಗಿಗೊಳಿಸಲು ಅದ್ಭುತವಾದ ಪರಿಕರವಾಗಿದೆ.

Exit mobile version