Site icon Vistara News

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Paris Olympics 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾಪಟುಗಳ (Paris Olympics 2024) ಡ್ರೆಸ್‌ಕೋಡ್‌ ಡಿಸೈನ್‌ ಮಾಡಿದ ಬಾಲಿವುಡ್‌ ಡಿಸೈನರ್‌ ತರುಣ್‌ ತಹಿಲಿಯಾನಿಗೆ ಪ್ರಶಂಸೆಯ ಜೊತೆಜೊತೆಗೆ ತೀವ್ರ ಟೀಕೆಯ ಸುರಿಮಳೆಯೂ ಆಗಿದೆ. ಹೌದು, ಕೆಲವರು ಕ್ರೀಡಾಪಟುಗಳ ತಿರಂಗಾ ಕಾನ್ಸೆಪ್ಟ್ ಹೊಂದಿದ ಡ್ರೆಸ್‌ಕೋಡ್‌ ಆಕರ್ಷಕವಾಗಿದೆ. ರಾಷ್ಟ್ರದ ಸಂಸ್ಕೃತಿ ಬಿಂಬಿಸಿದೆ ಎಂದರೇ, ಇನ್ನು ಕೆಲವರು, ಕಳಪೆ ಡಿಸೈನ್‌ ಹೊಂದಿದೆ ಎಂದೆಲ್ಲಾ ತೀವ್ರವಾಗಿ ಟೀಕಿಸಿದ್ದಾರೆ.

paris olympics 20Paris Olympics 2024

ಡಿಸೈನರ್‌ ತರುಣ್‌ ತಹಿಲಿಯಾನಿ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡ ಅಥ್ಲಿಟ್ಸ್

ಅಂದಹಾಗೆ, ಪ್ಯಾರಿಸ್‌ ಒಲಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ, ಅಥ್ಲೀಟ್ಸ್ ಡ್ರೆಸ್‌ ಕೋಡ್‌ಗಳನ್ನು ಬಾಲಿವುಡ್‌ನ ಖ್ಯಾತ ಡಿಸೈನರ್‌ ತರುಣ್‌ ತಹಿಲಿಯಾನಿ ಡಿಸೈನ್‌ ಮಾಡಿದ್ದು, ಈಗಾಗಲೇ ಈ ಉಡುಪಿನಲ್ಲಿ ಕಾಣಿಸಿಕೊಂಡ ಅಥ್ಲಿಟ್‌ ಫೋಟೋಗಳು ಕೂಡ ಜಗಜ್ಹಾಹಿರಾಗಿವೆ. ಕ್ರೀಡಾಪಟುಗಳು ಕೂಡ ಈ ತಿರಂಗಾ ಕಾನ್ಸೆಪ್ಟ್‌ನ ಔಟ್‌ಫಿಟ್ಸ್ ಧರಿಸಿ ಖುಷಿಖುಷಿಯಾಗಿ ಪೋಸ್‌ ಕೂಡ ನೀಡಿ, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ, ಇವನ್ನು ನೋಡಿದ ಕೆಲವರು ಮಾತ್ರ, ಈ ಡ್ರೆಸ್‌ಕೋಡ್‌ ಕಾನ್ಸೆಪ್ಟ್ ಚೆನ್ನಾಗಿದೆ ಎಂದಿದ್ದಾರೆ, ಮತ್ತೆ ಕೆಲವರು ಕಳಪೆ ಡಿಸೈನ್‌ ಎಂದೆಲ್ಲಾ ಖಾರವಾಗಿ ಕಾಮೆಟ್‌ ಮಾಡಿದ್ದಾರೆ.

ತೀವ್ರವಾಗಿ ಟೀಕೆ ಮಾಡಿದ ಮಹಿಳೆ

ಅದರಲ್ಲೂ ಮಹಿಳೆಯೊಬ್ಬರು, ಹಲೋ ತರುಣ್‌ ತಹಿಲಿಯಾನಿಯವರೇ., ನೀವು ಡಿಸೈನ್‌ ಮಾಡಿರುವ ಸೀರೆ ಮುಂಬಯಿಯ ಸ್ಟ್ರೀಟ್‌ಗಳಲ್ಲಿ, ಕಡಿಮೆ ಬೆಲೆಯ 200 ರೂ.ಗಳ ಸೀರೆಗಳಂತಿವೆ. ಪಾಲಿಸ್ಟರ್‌ ಹಾಗೂ ಇಕ್ಕಟ್‌ ಡಿಸೈನ್‌ಗಳು ತೀರಾ ಸಾಮಾನ್ಯವಾಗಿದೆ. ಇಂತಹ ಡಿಸೈನ್‌ಗಳನ್ನೇನಾದರೂ ನೀವು ಇಂಟರ್ನ್‌ಗಳಿಂದ ಮಾಡಿಸಿದ್ದೀರಾ ಹೇಗೆ? ನಮ್ಮ ರಾಷ್ಟ್ರದ ಸಂಸ್ಕೃತಿ ಬಿಂಬಿಸಲು ಇವು ಸೂಕ್ತವಾಗಿಲ್ಲ! ಎಂಬುದಾಗಿ ಟ್ವೀಟ್‌ ( X ) ಮಾಡುವ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಮಂದಿ ಶೇರ್‌ ಮಾಡುವ ಮೂಲಕ ಹಾಗೂ ಇನ್ನೊಂದಿಷ್ಟು ತೆಗಳುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಡಿಸೈನರ್‌ ತರುಣ್‌ ತಹಿಲಿಯಾನಿ ಅವರು ಮಾತ್ರ, ಈ ಡಿಸೈನ್ಸ್ ನಮ್ಮ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಪೂರಕವಾಗುವಂತೆ ವಿನ್ಯಾಸ ಮಾಡಲಾಗಿದೆ ಎಂದು ಮಾಧ್ಯಮವೊಂದಕ್ಕೆ ಕೂಲಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ರೀಡಾಪಟುಗಳ ಸೀರೆ & ಕುರ್ತಾ ಡಿಸೈನ್ಸ್

ಮಹಿಳಾ ಅಥ್ಲಿಟ್‌ಗಳಿಗೆ ಇಕ್ಕಟ್‌ ಪ್ರಿಂಟ್ಸ್‌ನಿಂದ ಸ್ಪೂರ್ತಿಗೊಂಡ ತಿರಂಗಾ ಶೇಡ್‌ನಲ್ಲಿ ಬಾರ್ಡರ್‌ ವಿನ್ಯಾಸಗೊಳಿಸಲಾಗಿತ್ತು. ನ್ಯಾಚುರಲ್‌ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿದ ಶ್ವೇತ ವರ್ಣದ ಕುರ್ತಾಗೆ ಹೊಂದುವಂತಹ ಬಂಡಿ ಜಾಕೆಟ್‌ನಲ್ಲಿ ಮೆನ್ಸ್ ಟೀಮ್‌ ಕಾಣಿಸಿಕೊಂಡಿತ್ತು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version