Site icon Vistara News

Pearl Fashion: ಮುತ್ತಿನ ಹಾರಕ್ಕೆ ಸಿಕ್ತು ನ್ಯೂ ಲುಕ್‌!

Pearl Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುತ್ತಿನ ಹಾರಗಳು ಇದೀಗ ಫ್ಯಾಷನ್‌ (Pearl fashion) ಟಚ್‌ ಪಡೆದು ಹೊಸ ಲುಕ್‌ನಲ್ಲಿ ಎಂಟ್ರಿ ನೀಡಿವೆ.
ಹೌದು, ಸದಾ ಮಾನಿನಿಯರನ್ನು ಸಿಂಗರಿಸುತ್ತಿದ್ದ, ಬಗೆಬಗೆಯ ಮುತ್ತಿನ ಆಭರಣಗಳು ಹಳೆಯ ಕಾಲದ ಟ್ರೆಡಿಷನಲ್‌ ಲುಕ್‌ನಿಂದ ಮುಕ್ತಿ ಪಡೆದು, ಇದೀಗ ನಯಾ ಜಮಾನದ ಯುವತಿಯರಿಗೂ ಪ್ರಿಯವಾಗುವಂತಹ ಹೊಸ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಫ್ಯಾಷನ್‌ ಜ್ಯುವೆಲರಿಗಳ ಟಾಪ್‌ ಲಿಸ್ಟ್ ಗೆ ಸೇರಿಕೊಂಡಿವೆ.

ನ್ಯೂ ಲುಕ್‌ನಲ್ಲಿ ಮುತ್ತಿನ ಹಾರಗಳು

“ಮುತ್ತಿನ ಹಾರಗಳು ಬಹುತೇಕ ಮಾನಿನಿಯರ ಫೆವರೇಟ್‌ ಆಭರಣಗಳು. ಹಳೆ ಜನರೇಷನ್‌ ಮಹಿಳೆಯರ ಜ್ಯುವೆಲರಿ ಸಂಗ್ರಹಗಳಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿವೆ. ಟ್ರೆಡಿಷನಲ್‌ ಡಿಸೈನ್‌ನಲ್ಲಿ ಸಾಕಷ್ಟು ಪ್ರಚಲಿತದಲ್ಲಿದ್ದವು. ಬರಬರುತ್ತಾ ಈ ಮುತ್ತಿನ ಹಾರಗಳು ಜ್ಯುವೆಲ್‌ ಡಿಸೈನರ್‌ಗಳ ಕೈ ಸೇರಿ ನಾನಾ ಬಗೆಯ ವಿನ್ಯಾಸಕ್ಕೆ ಒಳಪಟ್ಟು, ಹೊಸ ರೂಪ ಪಡೆದವು. ಅಷ್ಟೇಕೆ! ಮುತ್ತಿನ ಹಾರಗಳು ಇಂತಹ ರೂಪ ಪಡೆಯಬಹುದೇ ಎನ್ನುವಷ್ಟರ ಮಟ್ಟಿಗೆ ಹೊಸ ಡಿಸೈನ್‌ಗಳಲ್ಲಿ ಇದೀಗ ಬಿಡುಗಡೆಗೊಳ್ಳಲಾರಂಭಿಸಿವೆ. ಒಂದಕ್ಕಿಂತ ಒಂದು ಹೊಸ ಹೊಸ ಡಿಸೈನ್‌ನಲ್ಲಿ ಎಂಟ್ರಿ ನೀಡಲಾರಂಭಿಸಿವೆ. ಪರಿಣಾಮ. ಈ ಜನರೇಷನ್‌ನ ಯುವತಿಯರು ಕೂಡ ಇವುಗಳತ್ತ ಆಕರ್ಷಿತರಾಗತೊಡಗಿದ್ದಾರೆ” ಎನ್ನುತ್ತಾರೆ ಆಭರಣ ವಿನ್ಯಾಸಕಾರರಾದ ರಚನಾ ಆಚಾರ್‌. ಅವರ ಪ್ರಕಾರ, ಮುತ್ತಿನ ಹಾರಗಳಿಗೆ ಅದರದ್ದೇ ಆದ ಹಿಸ್ಟರಿ ಇದೆ. ಕಾಲ ಬದಲಾದಂತೆ ತಮ್ಮ ರೂಪ ಬದಲಿಸಿಕೊಂಡಿವೆ ಅಷ್ಟೇ ಎನ್ನುತ್ತಾರೆ.

ಟ್ರೆಂಡ್‌ನಲ್ಲಿರುವ ಮುತ್ತಿನ ಹಾರಗಳು

ಬಿಗ್‌ ಪೆಂಡೆಂಟ್‌ನ ಮುತ್ತಿನ ಹಾರ, ಪ್ರಿಶಿಯಸ್‌ ಸ್ಟೋನ್ಸ್ ಮಿಕ್ಸ್ ಮ್ಯಾಚ್‌ ಹೊಂದಿದ ಮುತ್ತಿನ ಹಾರ, ಲಾಂಗ್‌ ಚೈನ್‌ ಹೊಂದಿದ ಮುತ್ತಿನ ಹಾರ, ನಾಗರ, ಗಂಡು-ಭೇರುಂಡ, ನವಿಲು ಹೀಗೆ ನಾನಾ ಡಿಸೈನ್‌ನ ಅಗಲವಾದ ಪೆಂಡೆಂಟ್‌ ಹೊಂದಿರುವ ಹಾರ, ಟೈನಿ ಮುತ್ತಿನ ಎಳೆಗಳನ್ನು ಹೊಂದಿರುವ ಹಾರ, ಬಿಗ್‌ ಪರ್ಲ್ನ ವಿಕ್ಟೋರಿಯಾ ಸೆಟ್‌, ಜಿರ್ಕೊನಿ ಡಿಸೈನ್‌ ಪೆಂಡೆಂಟ್‌ನ ಹಾರ ಸೇರಿದಂತೆ ನಾನಾ ಬಗೆಯ ಮುತ್ತಿನ ಹಾರಗಳು ಟ್ರೆಂಡ್‌ನಲ್ಲಿವೆ.

ಮುತ್ತಿನ ಹಾರದ ರಿಪ್ಲೀಕಾ

ಇದೀಗ ಫ್ಯಾಷನ್‌ ಜ್ಯುವೆಲರಿಗಳಲ್ಲಿ ಮುತ್ತಿನ ಹಾರದ ರಿಪ್ಲೀಕಾಗಳು ಬಂದಿವೆ. ಹೆಚ್ಚು ಬೆಲೆ ಇರದ ಫೇಕ್‌ ಮುತ್ತಿನಿಂದ ತಯಾರಿಸಲಾದ ಈ ಹಾರಗಳು ಕೂಡ ಟ್ರೆಂಡ್‌ನಲ್ಲಿವೆ. ಹೆಚ್ಚು ಬೆಲೆ ತೆತ್ತು ಕೊಳ್ಳಲಾಗದವರು ಇವನ್ನು ಧರಿಸಿ ಸಮಾಧಾನಪಟ್ಟುಕೊಳ್ಳಬಹುದು ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರಾಣಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: New Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಬೆರಳನ್ನು ಆಕ್ರಮಿಸಿದ ಫಂಕಿ ಉಂಗುರಗಳು!

Exit mobile version