-ಶೀಲಾ ಸಿ. ಶೆಟ್ಟಿ, ಫ್ಯಾಷನ್ ಪತ್ರಕರ್ತೆ
ರಕ್ಷಾ ಬಂಧನ ಅಂದರೆ ರಾಖಿ ಹಬ್ಬದ ಅಂಗವಾಗಿ ಊಹೆಗೂ ಮೀರಿದ ಬಗೆಬಗೆಯ ಫ್ಯಾಷೆನಬಲ್ ರಾಖಿಗಳು (Rakshabandhan) ಮಾರುಕಟ್ಟೆಗೆ ಕಾಲಿಟ್ಟಿವೆ. ಕಾಲೇಜು ಹುಡುಗರಿಗೆಂದೇ ಫಂಕಿ ರಾಖಿ, ಟೆಕ್ನಾಲಜಿ ಪ್ರಿಯರಿಗೆ ಟಾಕಿಂಗ್ ರಾಖಿ, ಫ್ಯಾಮಿಲಿ ಪ್ರಿಯರಿಗೆ ಫೋಟೋ ರಾಖಿ, ಆರ್ಟಿಸ್ಟಿಕ್ ಮನಸ್ಸಿನವರಿಗೆ ಕುಂದನ್, ಹ್ಯಾಂಡ್‌ಮೇಡ್ , ಪರ್ಲ್, ಮೊಟಿಫ್, ಮಿರರ್ ರಾಖಿ, ಕಲರ್‌ಫುಲ್ ಮನಸ್ಸಿನವರಿಗೆ ವರ್ಣಮಯ ಪೋಂ ಪೋಂ ರಾಖಿ ಸೇರಿದಂತೆ ನಾನಾ ಬಗೆಯ ವೈವಿಧ್ಯಮಯ ರಾಖಿಗಳು ಮಾರುಕಟ್ಟೆಗೆ ಕಾಲಿಟ್ಟಿವೆ.
“ಅಣ್ಣ-ತಮ್ಮಂದಿರೊಂದಿಗೆ ಅನ್ಯೋನ್ಯತೆ ಬಿಂಬಿಸುವ ಜತೆಗೆ ಸಂಬಂಧವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನ ಅಕ್ಕ-ತಂಗಿಯರ ಪ್ರೀತಿ, ವಾತ್ಸಲ್ಯದ ಪ್ರತೀಕ. ಇದಕ್ಕೆ ಪೂರಕ ಎಂಬಂತೆ, ನೂತನ ವಿನ್ಯಾಸದ ರಾಖಿಗಳು ಆನ್‌ಲೈನ್ ಮತ್ತು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ”ಎನ್ನುತ್ತಾರೆ ಮಾರಾಟಗಾರರು.
ಇದನ್ನೂ ಓದಿ | Celebrity Fashion | ಪುರುಷರಲ್ಲೂ ಇರಬೇಕು ಫ್ಯಾಷನ್ ಸೆನ್ಸ್
ಟ್ರೆಡಿಷನಲ್ ರಾಖಿ
ಫ್ಲೋರಲ್ ವಿನ್ಯಾಸ ಹೊಂದಿರುವ ಇವು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ದೊರೆಯುತ್ತವೆ. ಬಣ್ಣ ಬಣ್ಣದ ದಾರಗಳನ್ನು ಒಳಗೊಂಡಿರುತ್ತದೆ. ಟ್ರೆಡಿಷನಲ್ ಫಾರ್ಮಲ್ ಉಡುಪು ಧರಿಸುವವರಿಗೆ ಬೆಸ್ಟ್ . ಕೆಲವಲ್ಲಿ ಗಣೇಶ, ಲಕ್ಷ್ಮಿ, ಸರಸ್ವತಿ, ಬಾಬಾ ಹೀಗೆ ಮುಂತಾದ ದೇವರುಗಳ ಚಿತ್ರಗಳನ್ನು ಕಾಣಬಹುದು.
ಬಿಂದಾಸ್ ಹುಡುಗರಿಗೆ ಫಂಕಿ ರಾಖಿ
ಬಣ್ಣ ಬಣ್ಣದ ಕ್ರಿಸ್ಟಲ್ ಹಾಗೂ ಮಣಿಗಳಿರುವ ಈ ರಾಖಿ ಬಹಳಷ್ಟು ಕಾಲ ಧರಿಸಬಹುದು. ನೋಡಲು ಬ್ರೇಸ್‌ಲೇಟ್‌ನಂತೆ ಕಾಣುತ್ತದೆ. ಸ್ಟೈಲಿಶ್ ಆಗಿರುವವರಿಗೆ ಕಟ್ಟಬಹುದು.
ಮಕ್ಕಳಿಗೆ ಕಾರ್ಟೂನ್ ರಾಖಿ
ಚಿಕ್ಕ ಮಕ್ಕಳ ಸಂಭ್ರಮ ಹೆಚ್ಚಿಸುವ ಕಾರ್ಟೂನ್ ಪಾತ್ರಧಾರಿಗಳ ಕಲರ್‌ಫುಲ್ ರಾಖಿಗಳು ಮಕ್ಕಳು ಮಾತ್ರವಲ್ಲದೇ ದೊಡ್ಡವರನ್ನು ಸೆಳೆಯುತ್ತಿದೆ.
ಮಿನಿ ಗ್ರೀಟಿಂಗ್ ರಾಖಿ
ಇದನ್ನು ಟಾಕಿಂಗ್ ರಾಖಿ ಎನ್ನಲಾಗುತ್ತದೆ. ಸ್ವೀಟ್ ಬ್ರೋ, ಲವ್ಲಿ ಬ್ರದರ್, ಮೈ ಬೆಸ್ಟ್ ಬ್ರದರ್ ಹೀಗೆ ಸಹೋದರನ ಮೇಲಿನ ಪ್ರೀತಿ ವ್ಯಕ್ತ ಪಡಿಸುವ, ಪದಗಳಲ್ಲೇ ಮಾತನಾಡುವ ಟಾಕಿಂಗ್ ರಾಖಿಗಳು ಯುವಜನರನ್ನು ಹೆಚ್ಚು ಆಕರ್ಷಿಸುತ್ತಿವೆ.
ಕಸ್ಟಮೈಸ್ಡ್ ಫೋಟೋ ರಾಖಿ
ಆನ್‌ಲೈನ್‌ನಲ್ಲಿ ದೊರೆಯುತ್ತಿರುವ ಇವು ಕಸ್ಟಮೈಸ್ಡ್ ರಾಖಿಯಾಗಿದ್ದು, ಸಹೋದರನ ಜತೆ ಇರುವ ಫೋಟೋವನ್ನು ಮೊದಲೇ ನೀಡಿ, ರಾಖಿ ಡಿಸೈನ್ ಮಾಡಿಸಿಕೊಳ್ಳಬಹುದು.
ಬೆಳ್ಳಿ-ಬಂಗಾರದ ರಾಖಿಗೂ ಡಿಮ್ಯಾಂಡ್
ರಾಯಲ್ ಇಮೇಜ್ ನೀಡುವ ಬ್ರೇಸ್‌ಲೇಟ್ ಮಾದರಿಯ ಚಿನ್ನ ಮತ್ತು ಬೆಳ್ಳಿ ರಾಖಿಗೂ ಕೂಡ ಬೇಡಿಕೆ ಹೆಚ್ಚಿದೆ. ಕ್ರಿಸ್ಟಲ್ ಸ್ಟೋನ್ಸ್, ಪರ್ಲ್ ಬಳಸಿ ವಿನ್ಯಾಸಗೊಳಿಸ ಓಂ, ಸ್ವಸ್ತಿಕ್, ಲಕ್ಷ್ಮಿ ಚಕ್ರ, ಗಣೇಶ, ಸಾಯಿಬಾಬಾ, ಕೃಷ್ಣ ದೇವರಿರುವ ಚಿನ್ನ ಮತ್ತು ಬೆಳ್ಳಿಯ ರಾಖಿಗಳಿಗೆ ಹೆಚ್ಚು ಬೇಡಿಕೆಯಿದೆ ಎನ್ನುತ್ತಾರೆ ಚಿನ್ನದ ಅಂಗಡಿ ವ್ಯಾಪಾರಿ ಜ್ಞಾನೇಶ್.
ರಾಖಿ ಪ್ರಿಯರಿಗೆ ಸಲಹೆ
- ಸಹೋದರರ ಪರ್ಸನಾಲಿಟಿಗೆ ತಕ್ಕಂತಿರಲಿ.
- ಸೋದರನ ವಯಸ್ಸು ಮತ್ತು ಸ್ಟೈಲ್ ಅನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿ.
- ಸೋದರರಿಗೆ ಯಾವ ರೀತಿಯ ರಾಖಿ ಇಷ್ಟವೆಂದು ತಿಳಿದುಕೊಳ್ಳಿ.
- ರಾಖಿ ಶಾಪಿಂಗ್ಗೆ ಸಮಯವಿಲ್ಲದವರು ಆನ್‌ಲೈನ್ ಶಾಪಿಂಗ್ ಮೊರೆ ಹೋಗಬಹುದು.
- ಸಹೋದರರ ಪರ್ಸನಾಲಿಟಿಗೆ ತಕ್ಕಂತಿರಲಿ.
- ಸೋದರನ ವಯಸ್ಸು ಮತ್ತು ಸ್ಟೈಲ್ ಅನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿ.
- ಸೋದರರಿಗೆ ಯಾವ ರೀತಿಯ ರಾಖಿ ಇಷ್ಟವೆಂದು ತಿಳಿದುಕೊಳ್ಳಿ.
- ರಾಖಿ ಶಾಪಿಂಗ್ಗೆ ಸಮಯವಿಲ್ಲದವರು ಆನ್‌ಲೈನ್ ಶಾಪಿಂಗ್ ಮೊರೆ ಹೋಗಬಹುದು.
ಇದನ್ನೂ ಓದಿ | Holiday Outfit: ಸಂಡೇ ಔಟಿಂಗ್ ಫ್ಯಾಷನ್‌ಗೆ ಸೈ ಎನ್ನಿ!