-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಾರಕ್ಕೂ ಮೊದಲೇ ರಕ್ಷಾ ಬಂಧನದ (Rakshabandhan Shopping 2024) ಶಾಪಿಂಗ್ ಶುರುವಾಗಿದೆ. ಹೌದು, ರಕ್ಷಾ ಬಂಧನ ಹಬ್ಬಕ್ಕೆ ಇನ್ನೂ ಒಂದು ವಾರವಿದೆ. ಆಗಲೇ ರಾಖಿಯನ್ನು ಖರೀದಿಸುವವರ ಅಬ್ಬರ ಹೆಚ್ಚಾಗಿದೆ. ರಾಖಿ ಹಬ್ಬಕ್ಕೆ ಇನ್ನು ಸಾಕಷ್ಟು ದಿನಗಳು ಇರುವಾಗಲೇ ಮಾರುಕಟ್ಟೆಯಲ್ಲಿರುವ ಫ್ಯಾನ್ಸಿ ಶಾಪ್‌ಗಳು, ರಾಖಿಗಳ ಪ್ರದರ್ಶನ ಹಾಗೂ ಮಾರಾಟ ಆರಂಭಿಸಿವೆ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಬಗೆಯ ರಾಖಿಗಳು ಹಳೆಯ ಡಿಸೈನ್‌ನ ರಾಖಿಗಳೊಂದಿಗೆ ಸೇರಿಕೊಳ್ಳುತ್ತಿವೆ. ಆಯಾ ಸಾಲಿನ ಟ್ರೆಂಡ್ ಹಾಗೂ ಹುಡುಗರ ಮನೋಭಿಲಾಷೆಗೆ ಹೊಂದುವಂತೆ ಹೊಸ ಹೊಸ ಡಿಸೈನ್‌ನ ರಾಖಿಗಳು ಬಂದಿವೆ. ಕೇವಲ 5 ರೂ.ಗಳಿಂದ ಆರಂಭವಾಗಿ 5 ಸಾವಿರ ರೂ. ಗಳವರೆಗಿನ ರಾಖಿಗಳು ಬಂದಿವೆ. ಸಿಂಪಲ್ ಡಿಸೈನ್‌ನಿಂದ ಹಿಡಿದು ಬೆಳ್ಳಿ-ಬಂಗಾರದ ಲೇಪನವಿರುವಂತಹ ವಿಶೇಷ ರಾಖಿಗಳು ಎಕ್ಸ್‌ಕ್ಲ್ಯೂಸೀವ್ ಡಿಸೈನ್‌ಗಳಲ್ಲೂ ದೊರೆಯುತ್ತಿವೆ ಎನ್ನುತ್ತಾರೆ ಗಾಂಧೀ ಬಜಾರ್‌ನ ಶಾಪ್‌ವೊಂದರ ಮಾಲೀಕರು.
ರಾಖಿ ಮಾರಾಟಗಾರರು ಏನು ಹೇಳುತ್ತಾರೆ?
ಇನ್ನು, ಮಲ್ಲೇಶ್ವರದ ಶಾಪ್‌ವೊಂದರಲ್ಲಿ ಈ ಬಾರಿ ಫಂಕಿ ರಾಖಿಗಳು ಅತಿ ಹೆಚ್ಚಾಗಿ ಸೇಲ್ ಆಗುತ್ತಿವೆಯಂತೆ. ಟ್ರೆಡಿಷನಲ್ ರಾಖಿಗಳು ಅಷ್ಟಾಗಿ ಮಾರಾಟವಾಗುತ್ತಿಲ್ಲವಂತೆ. ಕಮರ್ಷಿಯಲ್ ಸ್ಟ್ರೀಟ್ ಪಕ್ಕದಲ್ಲಿರುವ ಶಾಪ್‌ವೊಂದರಲ್ಲಿ ಇದೀಗ ಬ್ರೇಸ್‌ಲೆಟ್ ಶೈಲಿಯ ರಾಖಿಗಳು ಹಂಗಾಮ ಎಬ್ಬಿಸಿವೆಯಂತೆ. ಕಾಲೇಜು ಹುಡುಗರು ಈ ರೀತಿಯ ರಾಖಿ ಇಷ್ಟಪಡಲಾರಂಭಿಸಿದ್ದು, ಇದನ್ನು ಕೊಳ್ಳುವವರು ಜಾಸ್ತಿಯಾಗಿದ್ದಾರಂತೆ. ಕಾರ್ಪೋರೇಟ್ ಕ್ಷೇತ್ರದಲ್ಲಿನ ಪುರುಷರಿಗಾಗಿಯೇ ಡಿಸೆಂಟ್ ಲುಕ್ ನೀಡುವ ಸಿಂಪಲ್ ರಾಖಿಗಳು ಬಂದಿವೆಯಂತೆ. ಇನ್ನು, ಬೆಳ್ಳಿ-ಬಂಗಾರ ಇಷ್ಟಪಡುವ ಹುಡುಗರಿಗೆಂದು ಜ್ಯುವೆಲರಿ ಶಾಪ್‌ಗಳಲ್ಲಿ ಆಕರ್ಷಕ ಸಿಲ್ವರ್-ಗೋಲ್ಡ್ ರಾಖಿಗಳು, ಬ್ರೇಸ್‌ಲೆಟ್ ಶೈಲಿಯವು ಎಂಟ್ರಿ ನೀಡಿವೆ ಎನ್ನುತ್ತಾರೆ ರಾಖಿ ಡಿಸೈನರ್ಸ್
ಹೋಮ್ ಡಿಲಿವರಿ ಮಾಡುವ ಆನ್ ಲೈನ್ ಶಾಪ್
ಆನ್‌ಲೈನ್ ಶಾಪ್‌ಗಳಲ್ಲಂತೂ ಊಹೆಗೂ ಮೀರಿದ ಟ್ರೆಂಡಿ ರಾಖಿಗಳು ಬಿಡುಗಡೆಗೊಂಡಿವೆ. ಚಿಣ್ಣರ ಕಾರ್ಟೂನ್ ರಾಖಿಯಿಂದಿಡಿದು, ಹ್ಯಾಂಡ್‌ಮೇಡ್ ಪೋಲ್ಕಿ, ರುದ್ರಾಕ್ಷಿ, ನೇಮ್ ಪ್ಲೇಟ್, ಫೋಟೋ ಫ್ರೇಮ್ ಇರುವಂತವು ಸೇರಿದಂತೆ ಹಿರಿಯರ ಆಧ್ಯಾತ್ಮಿಕ ಸಿಂಬಲ್ ಒಳಗೊಂಡ ರಾಖಿಗಳು ದೊರೆಯುತ್ತಿವೆ. ದೂರ ಊರಿನಲ್ಲಿರುವ ಅಣ್ಣ-ತಮ್ಮಂದಿರಿಗೆ ನೇರವಾಗಿ ಮನೆಗೆ ಡಿಲಿವೆರಿ ಮಾಡಬಹುದಾದ ಸೌಲಭ್ಯವನ್ನು ಸಾಕಷ್ಟು ಆನ್‌ಲೈನ್ ವೆಬ್‌ಸೈಟ್‌ಗಳು ಕಲ್ಪಿಸಿವೆ.
ಇದನ್ನೂ ಓದಿ: Varamahalaxmi Decoration: ವರಮಹಾಲಕ್ಷ್ಮಿಯ ಸಿಂಗಾರಕ್ಕೂ ಬಂತು ಮಿನಿ ವಸ್ತ್ರಾಭರಣಗಳು!
- ಚಿನ್ನ-ಬೆಳ್ಳಿಯ ರಾಖಿಗಳನ್ನು ಜ್ಯುವೆಲರಿ ಶಾಪ್ನಲ್ಲೆ ಕೊಳ್ಳಿ.
- ಬಣ್ಣ ಬಣ್ಣದ ರಾಖಿಗಳಿಗಿಂತ ಇಕೋ ಫ್ರೆಂಡ್ಲಿಯವನ್ನು ಆಯ್ಕೆ ಮಾಡಿ.
- ಕಾಲೇಜು ಹುಡುಗರಿಗೆ ಫಂಕಿ ಬ್ರೇಸ್‌ಲೆಟ್ ರಾಖಿ ಆಯ್ಕೆ ಉತ್ತಮ.
(ಲೇಖಕಿ ಫ್ಯಾಷನ್ ಪತ್ರಕರ್ತೆ)