-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಸ್ಯಾರೀಸ್ ಆಫ್ ಇಂಡಿಯಾ ಫ್ಯಾಷನ್ ಶೋ ಜಿ೨೦ (Ramp news) ಸಮ್ಮಿಟ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಭಾರತೀಯ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಾನಾ ಬಗೆಯ ಸೀರೆಗಳನ್ನು ಹಾಗೂ ಸಾಂಪ್ರದಾಯಿಕ ಶೈಲಿಯ ಉಡುಪುಗಳನ್ನು ಧರಿಸಿದ ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡಿದರು. ಇತರೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯೆ ನಡೆದ ಈ ಫ್ಯಾಷನ್ ಶೋ ನೆರೆದಿದ್ದ ವಿದೇಶಿ ಪ್ರತಿನಿಧಿಗಳನ್ನು ಹಾಗೂ ಗಣ್ಯರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ದಕ್ಷಿಣ ಭಾರತದ ಸೀರೆಗಳ ಅನಾವರಣ
ಭಾರತದ, ಅದರಲ್ಲೂ ಸೌತ್ ಇಂಡಿಯಾದಲ್ಲಿ ಉಡುವಂತಹ ಸಾಂಪ್ರದಾಯಿಕ ಸೀರೆಗಳು, ರೇಷ್ಮೆ ಸೀರೆಗಳು, ಹಬ್ಬ-ಹರಿದಿನ ಸೇರಿದಂತೆ ಸಮಾರಂಭದಲ್ಲಿ ಧರಿಸುವ ಗ್ರ್ಯಾಂಡ್ ಸೀರೆಗಳಿಂದ ಹಿಡಿದು ಸಾಮಾನ್ಯ ಸೀರೆಗಳನ್ನು ಧರಿಸಿದ ಮಾಡೆಲ್‌ಗಳು ಸಂಸ್ಕೃತಿ ಬಿಂಬಿಸುವಂತಹ ಔಟ್‌ಲುಕ್‌ನಲ್ಲಿ ಹೆಜ್ಜೆ ಹಾಕಿದರು. ಪುರುಷ ಮಾಡೆಲ್‌ಗಳು ಅಷ್ಟೇ, ದಕ್ಷಿಣ ಭಾರತದಲ್ಲಿ ಧರಿಸುವ ಸಾಂಪ್ರಾದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ನೋಡುಗರ ಮನ ಸೆಳೆದರು. ಸಂಪ್ರದಾಯ ಹಾಗೂ ಸೀರೆ ಹೇಗೆ ಒಂದಕ್ಕೊಂದು ಬೆಸೆದುಕೊಂಡಿದೆ ಎಂಬುದಕ್ಕೆ ಈ ಸ್ಯಾರೀಸ್ ಆಫ್ ಇಂಡಿಯಾ ಫ್ಯಾಷನ್ ಶೋ ಸಾಕ್ಷಿಯಾಯಿತು.
ಇದನ್ನೂ ಓದಿ: Urfi Javed: ಉರ್ಫಿ ಹೊಸ ಮ್ಯಾಗಜಿನ್ ಫೋಟೊಶೂಟ್ ವೈರಲ್: ಖ್ಯಾತ ಫ್ಯಾಷನ್ ಡಿಸೈನರ್ ಅನಿತಾ ಶ್ರಾಫ್ ಹೇಳಿದ್ದೇನು?
ನೆಲದ ಸಂಸ್ಕೃತಿ ಬಿಂಬಿಸಿದ ಸ್ಯಾರೀಸ್ ಆಫ್ ಇಂಡಿಯಾ ಶೋ
“ಸೀರೆಗಳು ನಮ್ಮ ಸಂಸ್ಕೃತಿಯ ರಾಯಭಾರಿಗಳಿದ್ದಂತೆ. ನಾನಾ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಸ್ಯಾರೀಸ್ ಆಫ್ ಇಂಡಿಯಾ ಫ್ಯಾಷನ್ ಶೋ ನಮ್ಮ ದೇಸಿ ಸೀರೆಗಳು ಹಾಗೂ ಉಡುಗೆ-ತೊಡುಗೆಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿವೆ. ಅದರಲ್ಲೂ ದಕ್ಷಿಣ ಭಾರತದ ಸಂಸ್ಕೃತಿ ಸೀರೆಯೊಂದಿಗೆ ಬೆಸೆದುಕೊಂಡಿದೆ ಎಂಬುದನ್ನು ತೋರ್ಪಡಿಸಿವೆ” ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅಭಿಪ್ರಾಯಪಟ್ಟರು.
ಇದನ್ನೂ ಓದಿ: Milan Fashion week: ಪ್ರತಿಷ್ಠಿತ ಮಿಲಾನ್ ಫ್ಯಾಷನ್ ವೀಕ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ
ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜಕೀಯ ಮುಖಂಡರು ಹಾಗೂ ವಿದೇಶಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)