Site icon Vistara News

Rose Earrings Fashion: ವ್ಯಾಲೆಂಟೈನ್ಸ್ ವೀಕ್‌ನ ರೋಸ್‌ ಡೇ ಸಿಂಗಾರಕ್ಕೆ ಬಂತು ಗುಲಾಬಿಯ ಕಿವಿಯೋಲೆ!

Rose Earrings Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್‌ ಫ್ಯಾಷನ್‌ನಲ್ಲಿ ಇದೀಗ ರೋಸ್‌ ಇಯರಿಂಗ್ಸ್ (Rose Earrings Fashion) ಟ್ರೆಂಡಿಯಾಗಿವೆ. ಅದರಲ್ಲೂ ಈ ವೀಕ್‌ನ ಮೊದಲ ದಿನವೇ ರೋಸ್‌ ಡೇ. ಈ ದಿನಕ್ಕೆ ಹೊಂದುವಂತೆ ಹಾಗೂ ಪ್ರೇಮಿಗೆ ಉಡುಗೊರೆಯಾಗಿ ನೀಡಬಲ್ಲಂತಹ ನಾನಾ ಬಗೆಯ ಗುಲಾಬಿಯ ಕಿವಿಯೋಲೆಗಳು ಎಂಟ್ರಿ ನೀಡಿವೆ.
“ಈ ಮೊದಲೆಲ್ಲ ರೋಸ್‌ ಡೇಯಂದು ಗುಲಾಬಿಯನ್ನು ನೀಡುವುದು ಕಾಮನ್‌ ಆಗಿತ್ತು. ಆದರೆ, ದಿನಕಳೆದಂತೆ ಇದು ಕೊಂಚ ಬದಲಾಗಿದೆ. ನೈಜ ಗುಲಾಬಿ ಒಣಗಿ ಹೋಗುವುದು. ಅದರ ಬದಲು ತನ್ನ ಸಂಗಾತಿ ಹುಡುಗಿಗೆ ಶಾಶ್ವತವಾಗಿ ಉಳಿಯುವಂತಹ ಗುಲಾಬಿಯ ಕಿವಿಯೋಲೆಗಳನ್ನು ನೀಡಿದರೆ ಕೊನೆಯ ತನಕ ಉಳಿಯುವುದು. ಈ ಕಾನ್ಸೆಪ್ಟನ್ನು ಜಾರಿಗೆ ತಂದ ಕೆಲವರಿಗೆ ಪೂರಕ ಎಂಬಂತೆ, ನಾನಾ ಬಗೆಯ ರೋಸ್‌ ಇಯರಿಂಗ್ಸ್ ಫ್ಯಾಷನ್‌ ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿವೆ. ಈ ವಿಶೇಷ ದಿನಕ್ಕೆಂದು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಕಲರ್‌ನಲ್ಲಿ ಕಾಲಿಟ್ಟಿವೆ” ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್ ರಾಘವ್‌.

ಫ್ಯಾಷನ್‌ ಜ್ಯುವೆಲರಿಗಳಿವು

ರೆಡ್‌ ಶೇಡ್‌ನವು ಎಂದಿಗೂ ಹೆಚ್ಚು ಚಾಲ್ತಿಯಲ್ಲಿವೆ. ಇವು ಎವರ್ಗ್ರೀನ್‌ ಕಲರ್‌ ಎಂದರೂ ಅತಿಶಯೋಕ್ತಿಯಾಗದು! ಇನ್ನು, ಹಳದಿ, ಹಸಿರು, ನೀಲಿ ಹೀಗೆ ನಾನಾ ಶೇಡ್‌ನವು ರೋಸ್‌ ಇಯರಿಂಗ್‌ನಲ್ಲಿ ಬಂದಿವೆ. ಅದರಲ್ಲೂ ಸ್ಟಡ್ಸ್ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಒಂದಕ್ಕಿಂತ ಹೆಚ್ಚು ಗುಲಾಬಿ ಹೂವುಗಳನ್ನು ಜೋಡಿಸಿದಂತಿರುವ ಮಲ್ಟಿಪಲ್‌ ರೋಸ್‌ ಹ್ಯಾಂಗಿಂಗ್ಸ್ ಅತಿ ಹೆಚ್ಚು ಟ್ರೆಂಡಿಯಾಗಿವೆ.

ಬಂಗಾರದ ರೋಸ್‌ ಇಯರಿಂಗ್ಸ್

ಇದೀಗ ಬಂಗಾರದ ರೋಸ್‌ ಡಿಸೈನ್‌ನ ಇಯರಿಂಗ್ಸ್ ಕೂಡ ಬಂದಿವೆ. ನೋಡಲು ಪುಟ್ಟ ಡಿಸೈನ್‌ನ ಸ್ಟಡ್ಸ್ ಹೆಚ್ಚು ಮಾರಾಟವಾಗುತ್ತಿವೆ. ಗೋಲ್ಡ್‌ ಕವರಿಂಗ್‌ ಮಾಡಿದ ಗುಲಾಬಿಯ ಕಿವಿಯೋಲೆಗಳು ಲೈಟ್‌ವೈಟ್‌ನಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಜ್ಯುವೆಲರಿ ಶಾಪ್‌ವೊಂದರ ಮ್ಯಾನೇಜರ್‌.

ಆಕರ್ಷಕ ರೋಸ್‌ ಇಯರಿಂಗ್ಸ್

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Valentines Day: ಮಾಲ್‌ಗಳಲ್ಲಿ ಆರಂಭವಾಯ್ತು ವ್ಯಾಲೆಂಟೈನ್ಸ್ ಡೇ ಶಾಪಿಂಗ್‌!

Exit mobile version