Site icon Vistara News

Holi 2024: ಹೋಳಿ ಸೆಲೆಬ್ರೇಟ್‌ ಮಾಡುವಾಗ ಮೇಕಪ್‌ಗೆ ನೋ ಹೇಳಿ!

Holi 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀವು ಹೋಳಿ ಸೆಲೆಬ್ರೇಟ್‌ (Holi 2024) ಮಾಡುತ್ತಿದ್ದೀರಾ! ಹಾಗಾದಲ್ಲಿ, ಮೇಕಪ್‌ಗೆ ನೋ ಹೇಳಿ ಬಿಡಿ! ಹೌದು. ಇದು ಆ ದಿನದ ನಿಮ್ಮ ಬೆಸ್ಟ್ ನಿರ್ಧಾರವಾಗಬಹುದು. ಮೇಕಪ್‌ ಆವಾಯ್ಡ್ ಮಾಡುವುದರಿಂದ ನಿಮ್ಮ ತ್ವಚೆ ಹಾಗೂ ಚರ್ಮವನ್ನು ಧಕ್ಕೆಯಾಗದಂತೆ ತಡೆಯಬಹುದು ಎನ್ನುತ್ತಾರೆ ಸೌಂದರ್ಯ ತಜ್ಞರು. ಅದೇನೋ ಸರಿ! ಸಂಭ್ರಮಿಸಬೇಕಾದ ಹೋಳಿ ಹಬ್ಬದಂದು ಅದರಲ್ಲೂ ಸೆಲೆಬ್ರೇಟ್‌ ಮಾಡಬೇಕಾದ ಸಮಯದಲ್ಲಿ ಮೇಕಪ್‌ ಯಾಕೆ ಆವಾಯ್ಡ್ ಮಾಡಬೇಕು? ಇದರಿಂದ ಏನು ಪ್ರಯೋಜನ? ಹಚ್ಚಿದಲ್ಲಿ ಯಾವ ಬಗೆಯ ಸೈಡ್‌ ಎಫೆಕ್ಟ್ ಆಗುತ್ತದೆ. ಹಾಗಾದಲ್ಲಿ ಮೇಕಪ್‌ ಹಚ್ಚದೇ ಹೋಳಿ ಆಡುವಾಗ ಸುಂದರವಾಗಿ ಆಕರ್ಷಕವಾಗಿ ಕಾಣಿಸುವುದು ಹೇಗೆ? ಈ ಕುರಿತಂತೆ ಸಿಂಪಲ್ಲಾಗಿ ಸೌಂದರ್ಯ ತಜ್ಞರು ಉತ್ತರಿಸಿದ್ದಾರೆ. ಇಲ್ಲಿದೆ ಸಂಕ್ಷೀಪ್ತ ವಿವರ.

ಮೇಕಪ್‌ ಆವಾಯ್ಡ್ ಮಾಡುವುದರಿಂದ ಆಗುವ ಪ್ರಯೋಜನಗಳಿವು

ಹೋಳಿ ಆಡುವಾಗ ಮೇಕಪ್‌ ಹಚ್ಚುವುದನ್ನು ತಡೆಯಿರಿ. ಯಾಕೆಂದರೇ, ನಾನಾ ಬಣ್ಣದ ಪೌಡರ್‌ಗಳನ್ನು ಮುಖಕ್ಕೆ ಹಚ್ಚಿದಾಗ ಅಥವಾ ಉಜ್ಜಿದಾಗ ತ್ವಚೆಯ ಮೇಲಿನ ಸೂಕ್ಷ್ಮ ರಂಧ್ರಗಳು ತಾತ್ಕಲಿಕವಾಗಿ ಮುಚ್ಚಿಹೋಗಬಹುದು. ಚರ್ಮವು ಸೂಕ್ಷ್ಮವಾಗಿದ್ದಲ್ಲಿ ರ್ಯಾಶಸ್ ಆಗಬಹುದು ಅಥವಾ ಮೊಡವೆಗಳು ಮೂಡಬಹುದು. ಅಲರ್ಜಿಯಾಗಬಹುದು.

ಇಕೋ ಫ್ರೆಂಡ್ಲಿ ಹೋಳಿ ಸೆಲೆಬ್ರೇಷನ್‌ಗೆ ಆದ್ಯತೆ

ನೀರಿನ ಅಭಾವವಿರುವುದರಿಂದ ನೀರಿನ ಹೋಳಿಯಾಟ ಈ ಬಾರಿ ಕಡಿಮೆಯಾದರೂ ಡ್ರೈ ಹೋಳಿಯಾಟ ಎಲ್ಲೆಡೆ ಜಾರಿಯಾಗುತ್ತಿದೆ. ಈ ಬಣ್ಣ ಬಣ್ಣದ ಪುಡಿಗಳನ್ನು ಮುಖಕ್ಕೆ ಎರಚುವುದರಿಂದ ನೇರವಾಗಿ ತ್ವಚೆಗೆ ಧಕ್ಕೆಯಾಗಬಹುದು. ಜಿಡ್ಡಿನಂಶ ಇರುವಂತವರಿಗೆ ಬಲು ಬೇಗ ಮೊಡವೆ ಮೂಡಬಹುದು ಹಾಗಾಗಿ ಆವಾಯ್ಡ್ ಮಾಡಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ ನೀನಾ. ಅವರ ಪ್ರಕಾರ, ಫ್ಲವರ್‌ ಹೋಳಿ ಆಡುವುದರಿಂದ ಚರ್ಮಕ್ಕೆ ಹಾನಿಯುಂಟಾಗುವುದಿಲ್ಲ. ಆದಷ್ಟೂ ಇಕೋ ಫ್ರೆಂಡ್ಲಿ ಹೋಳಿಯಾಟವನ್ನು ಆಡಿ ಎನ್ನುತ್ತಾರೆ.

ಮೇಕಪ್‌ ಮಾಡದೇ ಸುಂದರವಾಗಿ ಕಾಣುವುದು ಹೇಗೆ?

ಮೇಕಪ್‌ ಮಾಡದೇಯೂ ಸುಂದರವಾಗಿ ಕಾಣಬಹುದು ಎನ್ನುತ್ತಾರೆ ಬ್ಯೂಟಿ ತಜ್ಞರು. ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ! ಪ್ರತಿದಿನ ನೀವು ಬಳಸುವ ಸನ್‌ ಸ್ಕ್ರೀನ್‌ ಹಾಗೂ ಮಾಯಿಶ್ಚರೈಸರ್‌ ಹಚ್ಚಿ. ಕಣ್ಣಿಗೆ ಕಾಡಿಗೆ ಹಚ್ಚಿ. ಕ್ರೀಮ್‌ ಫಿನಿಶಿಂಗ್‌ ನೀಡುವ ಮ್ಯಾಟ್‌ ಲಿಪ್‌ಸ್ಟಿಕ್‌ ಲೇಪಿಸಿ. ಬೇಕಿದ್ದಲ್ಲಿ ಪೌಡರ್‌ ಹಚ್ಚಿ. ಫೌಂಡೇಷನ್‌, ಕನ್ಸಿಲರ್‌, ಬ್ಲಷ್‌ ಆವಾಯ್ಡ್ ಮಾಡಿ. ಸಿಂಪಲ್‌ ವಿಧಾನದಿಂದಲೇ ಸುಂದರವಾಗಿ ಕಾಣಿಸಲಿ ಟ್ರೈ ಮಾಡಿ. ಸನ್‌ ಗ್ಲಾಸ್‌ ಧರಿಸಿ. ಆಕರ್ಷಕ ಔಟ್‌ಫಿಟ್‌ ಹಾಗೂ ಆಕ್ಸೆಸರೀಸ್‌ ಧರಿಸಿ. ನೀವು ಚೆನ್ನಾಗಿ ಕಾಣಿಸುವಿರಿ ಎನ್ನುತ್ತಾರೆ ಸೌಂದರ್ಯ ತಜ್ಞರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Holi Fashion 2024: ಹೋಳಿ ಸಂಭ್ರಮಕ್ಕೆ ಜೊತೆಯಾದ ರಂಗುರಂಗಿನ ದುಪಟ್ಟಾ & ಸ್ಟೋಲ್ಸ್

Exit mobile version