-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡಿಸೆಂಟ್ ಲುಕ್ ನೀಡುತ್ತಿದ್ದ ಶರ್ಟ್ ಡ್ರೆಸ್‌ಗಳಿಗೆ (Shirt Dress Fashion) ಇದೀಗ ಗ್ಲಾಮರಸ್ ಲುಕ್ ದೊರಕಿದೆ. ವೀಕೆಂಡ್ ಸ್ಟ್ರೀಟ್ ಫ್ಯಾಷನ್‌ನ ಟಾಪ್ ಲಿಸ್ಟ್‌ನಲ್ಲಿರುವ ಈ ಶರ್ಟ್ ಡ್ರೆಸ್‌ಗಳು ಇಂದು ಟ್ರೆಂಡಿಯಾಗಿವೆ. ಟೀನೇಜ್ ಹುಡುಗಿಯರಿಂದಿಡಿದು, ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರನ್ನು ತಮ್ಮತ್ತ ಸೆಳೆಯತೊಡಗಿವೆ.
ಇಮೇಜ್ ಬದಲಿಸಿದ ಶರ್ಟ್ ಡ್ರೆಸ್
ಹುಡುಗಿಯರಿಗೆ ಟಾಮ್ ಬಾಯ್ ಇಮೇಜ್ ನೀಡುತ್ತಿದ್ದ ಈ ಶರ್ಟ್ ಡ್ರೆಸ್‌ಗಳು ಇಂದು ಬಿಂದಾಸ್ ಲುಕ್ ನೀಡುವ ಗ್ಲಾಮರಸ್ ಉಡುಪುಗಳಾಗಿ ಪರಿವರ್ತನೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ನಾನಾ ಬಗೆಯ ಶರ್ಟ್ ಡ್ರೆಸ್
ಫ್ರಾಕ್, ಮಿಡಿ, ಸ್ಟ್ರೇಚಬಲ್, ಬೆಲ್ಟ್ ಅಟ್ಯಾಚ್ಡ್, ಟೈಯಿಂಗ್ ಸೇರಿದಂತೆ ನಾನಾ ವಿನ್ಯಾಸದ ಶರ್ಟ್ ಡ್ರೆಸ್‌ಗಳು ಟ್ರೆಂಡ್‌ನಲ್ಲಿವೆ. ಶರ್ಟ್ ಡ್ರೆಸ್‌ಗಳಲ್ಲಿಅತಿ ಹೆಚ್ಚು ಜನಪ್ರಿಯತೆ ಗಳಿಸಿರುವುದು ಫ್ರಾಕ್ ಸ್ಟೈಲ್‌ನವು. ನೋಡಲು ಮನಮೋಹಕವಾಗಿ ಕಾಣುವ ಇವು ಬಬ್ಲಿ ಲುಕ್ ನೀಡುತ್ತವೆ. ಇನ್ನು ಇದನ್ನು ಹೊರತು ಪಡಿಸಿದಲ್ಲಿ, ಡೆನಿಮ್ ಶರ್ಟ್ ಡ್ರೆಸ್‌ಗಳು ಪಾಪುಲರ್ ಆಗಿವೆ. ಇವನ್ನು ಫ್ರಾಕ್‌ನಂತೆಯೂ ಧರಿಸಬಹುದು. ಜೀನ್ಸ್ ಪ್ಯಾಂಟ್‌ಗೂ ಧರಿಸಬಹುದು. ತೀರಾ ಟಿಪಿಕಲ್ ಟ್ರೆಡಿಷನಲ್ ಹುಡುಗಿಯರು ಇದನ್ನು ಕೇಪ್ರಿಸ್, ಜೆಗ್ಗಿಂಗ್ಸ್, ಟ್ರೆಗ್ಗಿಂಗ್ಸ್ ಇಲ್ಲವೇ ಪ್ಯಾಂಟ್ ಜತೆ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ರಾಘವ್. ಇನ್ನು ಶರ್ಟ್ ಸ್ಟೈಲ್ ಫ್ರಾಕ್‌ಗಳು ವೀಕೆಂಡ್ ಡ್ರೆಸ್‌ಕೋಡ್ ಲಿಸ್ಟ್‌ನಲ್ಲೂ ಇವೆ. ಕಾರ್ಪೋರೇಟ್ ಕ್ಷೇತ್ರದ ಯುವತಿಯರ ಫೇವರಿಟ್ ಲಿಸ್ಟ್‌ಗೂ ಇವು ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್.
ಶರ್ಟ್ ಡ್ರೆಸ್ ಹಿಸ್ಟರಿ ಗೊತ್ತಾ!
ಕಳೆದ 1950 ರಲ್ಲಿ ಫ್ಯಾಷನ್‌ವೇರ್ ಆಗಿ ಬದಲಾದ ಈ ಡ್ರೆಸ್ 2 ನೇ ವರ್ಲ್ಡ್ ವಾರ್ ಸಮಯದಲ್ಲಿ ಕಾಚರ್ ಡಿಸೈನ್‌ನಲ್ಲಿ ಸೇರಿದ ಈ ಉಡುಪನ್ನು ಹೆಚ್ಚಾಗಿ ಕ್ರಿಶ್ಚಿಯನ್ ಸಮುದಾಯದವರು ಧರಿಸುತ್ತಿದ್ದರು. ಆ್ಯನೆ ಎಂಬ ಡಿಸೈನರ್‌ನ ಪಾತ್ರ ಈ ಶರ್ಟ್ ಡ್ರೆಸ್‌ಗಳನ್ನು ವಿನ್ಯಾಸಗೊಳಿಸುವಲ್ಲಿಕೇಳಿ ಬರುತ್ತದೆ. ಶರ್ಟ್ ಡ್ರೆಸ್ ಹೆಸರೇ ಹೇಳುವಂತೆ, ಶರ್ಟ್‌ನಂತೆ ವಿನ್ಯಾಸವೊಳಗೊಂಡಿರುವ ಇವು ಕ್ಯಾಶುವಲ್‌ವೇರ್‌ಗೆ ಸೇರುತ್ತವೆ. ಮೂಲತಃ ಲಂಡನ್ ಸ್ಟ್ರೀಟ್ ಸ್ಟೈಲ್‌ನಿಂದ ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ. ಹುಡುಗರ ಶರ್ಟ್‌ನ ಮೂಲ ರೂಪವನ್ನು ಉಳಿಸಿಕೊಂಡು ಲೇಡಿಸ್‌ಗೆ ಹೊಂದುವಂತೆ ಬದಲಾಗಿವೆ. ಕಾಲರ್ ಕೂಡ ಹಾಗೆಯೇ ಇದೆ. ಇನ್ನು ಫ್ರಂಟ್ ಬಟನ್ ಹಾಗೂ ಸ್ಲೀವ್ ಕಫ್ ಆಯಾ ಡಿಸೈನರ್‌ವೇರ್‌ಗೆ ಸೂಟ್ ಆಗುವಂತೆ ಮಾರ್ಪಾಟು ಹೊಂದಿವೆ. ಕೆಲವು ಶರ್ಟ್ ಡ್ರೆಸ್‌ಗಳಲ್ಲಿಸ್ಲೀವ್ ಉದ್ದ ಇಲ್ಲವೇ ಚಿಕ್ಕದಾಗಿರುತ್ತವೆ. ಈ ಡ್ರೆಸ್‌ನ ಪ್ಲಸ್ ಪಾಯಿಂಟ್ ಎಂದರೇ ಪ್ಲಸ್ ಸೈಝ್‌ನವರು ಕೂಡ ಧರಿಸಬಹುದಾಗಿದೆ. ಲೂಸಾಗಿರುತ್ತವೆ. ಅವರವರ ಬಾಡಿ ಸ್ಟ್ರಕ್ಚರ್‌ಗೆ ತಕ್ಕಂತೆ ಬೆಲ್ಟ್ ಇಲ್ಲವೇ ಯಾವುದೇ ವೇಸ್ಟ್ ಆಕ್ಸೆಸರೀಸ್ ಧರಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾ ಜಯಂತ್. ಇವನ್ನು ಶರ್ಟ್ ವೆಸ್ಟ್ ಡ್ರೆಸ್‌ಗಳೆಂದು ಕೂಡ ಕರೆಯಲಾಗುತ್ತದೆ.
ಇದನ್ನೂ ಓದಿ: Fashion Super Womens: ಇವರೆಲ್ಲ ಫ್ಯಾಷನ್ ಲೋಕದಲ್ಲಿನ ಸೂಪರ್ ವಿಮೆನ್ಸ್!
ಶರ್ಟ್ ಡ್ರೆಸ್ ರೂಲ್ಸ್
- ಎಲ್ಲರಿಗೂ ಸೂಟ್ ಆಗುವುದು.
- ಉದ್ದಗಿರುವವರಿಗೆ ಆಕರ್ಷವಾಗಿ ಕಾಣುತ್ತದೆ.
- ವೆಸ್ಟರ್ನ್ ಸ್ಟೈಲ್ ಸ್ಟೇಟ್ಮೆಂಟ್ ನೀಡುವುದು ಗ್ಯಾರಂಟಿ.
- ಟ್ರೆಡಿಷನಲ್ ಡ್ರೆಸ್ ಕಾನ್ಸೆಪ್ಟ್ ಮಿಕ್ಸ್ ಮಾಡಬೇಡಿ.
- ಯಾವ ಸೀಸನ್ಗೆ ಬೇಕಾದರೂ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)