-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾಯಾ ಬೇ ಬೀಚ್ ಸುತ್ತಮುತ್ತ ನಟಿ ಹಾಗೂ ಮಾಡೆಲ್ ಶುಭಾರಕ್ಷಾ ಬೀಚ್ ಫ್ಯಾಷನ್‌ನಲ್ಲಿ (Star beach Fashion) ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ನೇಹಿತೆಯರೊಂದಿಗೆ ಹಾಲಿಡೇಯಲ್ಲಿರುವ ಥೈಲ್ಯಾಂಡ್‌ನ ಸುತ್ತಮುತ್ತಲಿರುವ ನಾನಾ ಬೀಚ್‌ಗಳಲ್ಲಿ ತಿರುಗಾಡುತ್ತಿದ್ದಾರೆ. ಒಂದೊಂದು ದ್ವೀಪದಲ್ಲೂ ಒಂದೊಂದು ಬಗೆಯ ಗ್ಲಾಮರಸ್ ಬಿಕಿನಿ ಔಟ್‌ಫಿಟ್‌ಗಳಲ್ಲಿ ಪೋಸ್ ನೀಡಿದ್ದಾರೆ.
ಆಕರ್ಷಣಿಯ ಟೂರಿಸ್ಟ್ ತಾಣಗಳಾದ ಪುಕೆಟ್ ಹಾಗೂ ಮಾಯಾ ಬೇ ಬೀಚ್‌ನಲ್ಲಿ ನಟಿ ಹಾಗೂ ಮಾಡೆಲ್ ಶುಭಾ ರಕ್ಷಾ ಕಲರ್‌ಫುಲ್ ಬೀಚ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಪೀಡ್ ಬೋಟ್‌ನಲ್ಲಿ ಹಾಟ್ ಲುಕ್
“ಫುಕೆಟ್‌ನ ಸುತ್ತಮುತ್ತಲಲ್ಲಿ ಸಾಕಷ್ಟು ದ್ವೀಪಗಳಿದ್ದು, ಒಂದೊಂದು ದ್ವೀಪಗಳಿಗೂ ಸುಮಾರು ಗಂಟೆಗಳ ಅಂತರವಿದೆ. ಈ ದ್ವೀಪಗಳ ಮಧ್ಯೆ ಇರುವ ಮಂಕಿಲ್ಯಾಂಡ್‌ನಲ್ಲಿ ಒಂದರ್ಧ ಗಂಟೆ ಪಾರದರ್ಶಕ ನೀರಿನಲ್ಲಿ ಈಜುವ ಅವಕಾಶವಿತ್ತು. ಇಲ್ಲಿ ಈಜಾಡುವವರು ಸ್ವಿಮ್‌ಸೂಟ್ ಅಥವಾ ಬಿಕಿನಿ ಧರಿಸುವುದು ಅತ್ಯವಶ್ಯವಾಗಿತ್ತು. ಸೋ, ನಾನು ನೀರಿನೊಳಗೆ ಇಳಿದಿದ್ದರಿಂದ ಬಿಕಿನಿಯಲ್ಲಿ ಕಾಣಿಸಿಕೊಳ್ಳಬೇಕಾಯ್ತು. ಇದೇ ಸಮಯದಲ್ಲಿ ಸಾಕಷ್ಟು ಗ್ಲಾಮರಸ್ ಔಟ್‌ಫಿಟ್‌ಗಳ ಫೋಟೊಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು“ ಎನ್ನುತ್ತಾರೆ ನಟಿ ಶುಭಾರಕ್ಷಾ.
ಇದನ್ನೂ ಓದಿ | Weekend style | ಸೂಪರ್ ಮಾಡೆಲ್ ಐಶಾನ್ಯಾ ಶಾನ್ ಫ್ಯಾಷನ್ ಪ್ರೇಮ
ಬ್ಯಾಂಕಾಕ್‌ನಲ್ಲಿ ಶಾಪಿಂಗ್
ಬ್ಯಾಂಕಾಕ್‌ನಲ್ಲಿ ಲೆಕ್ಕವಿಲ್ಲದಷ್ಟು ಶಾಪಿಂಗ್ ಸ್ಟ್ರೀಟ್‌ಗಳೇ ಇವೆ. ಫಂಕಿ ಲುಕ್, ಗ್ಲಾಮರಸ್ ಔಟ್‌ಫಿಟ್ಸ್ ಇಲ್ಲಿ ಕೊಳ್ಳಬಹುದು ಎನ್ನುವ ನಟಿ ಶುಭಾ ರಕ್ಷಾ ಶಾಪಿಂಗ್ ಮಾಡುವುದರಲ್ಲೂ ಸೆಲೆಕ್ಟಿವ್ ಅಂತೆ.
ಬೀಚ್ ಫ್ಯಾಷನ್‌ಗೆ ಶುಭಾ ರಕ್ಷಾ ಟಿಪ್ಸ್
ಬೀಚ್ ಫ್ಯಾಷನ್ ಪಾಲಿಸುವವರು ಗಮನದಲ್ಲಿಡಿ ಎನ್ನುವ ನಟಿ ಶುಭಾ ರಕ್ಷಾ ತಮ್ಮ ಫಾಲೋವರ್ಸ್‌ಗೆ ಒಂದಿಷ್ಟು ಸಿಂಪಲ್ ಬೀಚ್ ಫ್ಯಾಷನ್ ಐಡಿಯಾ ಕೂಡ ನೀಡಿದ್ದಾರೆ. ಬೀಚ್‌ಗಳಲ್ಲಿ ತಾಪಮಾನ ಹೆಚ್ಚಿಸುವುದರಿಂದ ಮೈ ತುಂಬಾ ಕವರ್ ಮಾಡುವ ಔಟ್‌ಫಿಟ್ ಧರಿಸಕೂಡದು. ನೀರಿನಲ್ಲಿ ಇಳಿಯಲಾಗದು. ಬೀಚ್‌ಗೆ ಹೊಂದುವಂತಹ ಕಂಫರ್ಟಬಲ್ ಉಡುಪು ಧರಿಸಬೇಕು. ಉದಾಹರಣೆಗೆ, ಶಾಟ್ರ್ಸ್, ಮಿನಿ ಫ್ರಾಕ್ಸ್, ಸಿಂಗಲ್ ಪೀಸ್ ಸ್ವಿಮ್ ಸೂಟ್ ಹೀಗೆ ಬೇಕಾದಷ್ಟು ಬಗೆಯವು ಲಭ್ಯ. ಇನ್ನು ಗ್ಲಾಮರಸ್ ಉಡುಪುದಲ್ಲಿ ಇದೀಗ ಸಾಕಷ್ಟು ಬಗೆಯವು ದೊರೆಯುತ್ತವೆ. ಎಲ್ಲಾ ವಯಸ್ಸಿನವರು ಧರಿಸಬಹುದಾದ ಬೀಚ್‌ವೇರ್‌ಗಳು ಲಭ್ಯ ಎನ್ನುತ್ತಾರೆ. ಇನ್ನು ಬೀಚ್‌ನಲ್ಲಿ ಸನ್‌ಟ್ಯಾನ್ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಆದಷ್ಟೂ ಸನ್‌ಸ್ಕ್ರೀನ್ ಲೇಪಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ಶುಭಾ ರಕ್ಷಾ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Hairstyle | ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಡ್ರೆಡ್‌ಲಾಕ್ ನ್ಯೂ ಹೇರ್‌ಸ್ಟೈಲ್