-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್ ಥೀಮ್‌ನ ಫ್ಯಾಷೆನಬಲ್ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಅಂದಹಾಗೆ, ಇದ್ಯಾಕೆ ಹೀಗೆ? ಎಂದುಕೊಳ್ಳುತ್ತಿದ್ದೀರಾ! ಅವರು ತಮ್ಮ ಮುಂಬರುವ ಕ್ರಿಕೆಟ್ ಆಧಾರಿತ ಸಿನಿಮಾ ಮಿಸ್ಟರ್ & ಮಿಸೆಸ್ ಮಾಹಿ ಪ್ರಮೋಷನ್‌ಗಾಗಿ ವಿಶೇಷವಾಗಿ ಕ್ರಿಕೆಟ್ ಥೀಮ್ ಫ್ಯಾಷನ್‌ವೇರ್‌ಗಳನ್ನು ಧರಿಸತೊಡಗಿದ್ದಾರೆ. ಇದು ಅವರ ಕ್ರಿಕೆಟ್ ಪ್ರೇಮದ ಜೊತೆಗೆ ಫ್ಯಾಷನ್‌ಗೂ ಸಾಥ್ ನೀಡಿದೆ (Star Cricket Theme Fashion) ಎನ್ನುತ್ತಿದ್ದಾರೆ ಫ್ಯಾಷನಿಸ್ಟ್‌ಗಳು.
ಕಟೌಟ್ ರೆಡ್ ಡ್ರೆಸ್ ಬ್ಯಾಕ್ ವಿನ್ಯಾಸದಲ್ಲಿ ಕ್ರಿಕೆಟ್ ಬಾಲ್ ಡಿಸೈನ್
ಜಾಹ್ನವಿಯ ವೆಸ್ಟರ್ನ್ ಶೈಲಿಯ ಕಟೌಟ್ ರೆಡ್ ಡ್ರೆಸ್‌ನ ಬ್ಯಾಕ್ ಡಿಸೈನ್ ಮಲ್ಟಿ ಕ್ರಿಕೆಟ್ ಬಾಲ್‌ಗಳನ್ನು ಜೋಡಿಸಿದಂತಹ ಸ್ಟ್ರಾಪ್‌ನಂತಹ ಡಿಸೈನ್ ಫ್ಯಾಷನ್ ಪ್ರೇಮಿಗಳನ್ನು ನಿಬ್ಬೆರಗಾಗಿಸಿತು.
ಸೀರೆಯಲ್ಲಿ ತ್ರಿಡಿ ಕ್ರಿಕೆಟ್ ಬಾಲ್ ಬಾರ್ಡರ್ ಚಿತ್ತಾರ
ಇನ್ನು, ಇವೆಂಟ್‌ನಲ್ಲಿ ಜಾಹ್ನವಿ ಧರಿಸಿದ್ದ ಎರಡು ಸೀರೆಗಳು ಕೂಡ ಕ್ರಿಕೆಟ್ ಕಾನ್ಸೆಪ್ಟ್ ಡಿಸೈನ್ ಹೊಂದಿದ್ದವು. ವಾರಾಣಾಸಿಯಲ್ಲಿ ಉಟ್ಟ ಸೀರೆ ಟ್ರೆಡಿಷನಲ್ ಆಗಿದ್ದರೂ, ಅದರ ಪಲ್ಲು ಕಂಪ್ಲೀಟ್ ಕ್ರಿಕೆಟ್ ಕ್ರೀಡಾಂಗಣದ ವರ್ಲಿ ಶೈಲಿಯ ಚಿತ್ತಾರವನ್ನು ಒಳಗೊಂಡಿತ್ತು. ಜಾಹ್ನವಿ ಧರಿಸಿದ್ದ, ಇನ್ನೊಂದು, ಜಾರ್ಜೆಟ್ ರೆಡ್ & ವೈಟ್ ಸ್ಟ್ರೈಪ್ಸ್ ಸೀರೆಯ ಬಾರ್ಡರ್, ಕ್ರಿಕೆಟ್ ಬಾಲ್‌ನ ತ್ರಿಡಿ ಚಿತ್ತಾರದಿಂದ ಸಿಂಗಾರಗೊಂಡಿತ್ತು. ಬಾಲ್‌ನ ಫ್ಯಾಬ್ರಿಕ್‌ನಂತೆ ಕಾಣಿಸುವ ಮೆಟೀರಿಯಲ್‌ನಿಂದ ಡಿಸೈನ್ ಮಾಡಲಾಗಿತ್ತು.
ಕ್ರಿಕೆಟ್ ಕ್ರಾಪ್ಡ್ ಜೆರ್ಸಿ ಟಾಪ್
ಜಾಹ್ನವಿ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ, ಕ್ರಿಕೆಟಿಗರ ಜೆರ್ಸಿಯಂತೆ ಕಾಣುವ ಕ್ರಾಪ್ ಟಾಪ್‌ನಲ್ಲಿ ಕಾಣಿಸಿಕೊಂಡರು. ಎಲ್ಲದಕ್ಕಿಂತ ಹೆಚ್ಚಾಗಿ, ಅದರ ಮೇಲೆ ಬರ್ತ್ ಡೇ ನಂಬರ್ ಮೂಡಿಸಿದ್ದು, ಅವರ ಖುಷಿಗೆ ಕಾರಣವಾಗಿತ್ತು.
ಜೆನ್ ಜಿ ಸೆಳೆದ ಕ್ರಾಪ್ಡ್ ಟೀ ಶರ್ಟ್–ಸ್ಕರ್ಟ್
ಕಾಲೇಜ್‌ವೊಂದರ ಇವೆಂಟ್‌ನಲ್ಲಿ ವೈಟ್ ಹಾಗೂ ಬ್ಲ್ಯೂ ಮತ್ತು ರೆಡ್ ಸ್ಟ್ರೈಪ್ಸ್ ಇರುವ ಕಾಲರ್ ಕ್ರಾಪ್ಡ್ ಟೀ ಶರ್ಟ್ ಜೊತೆಗೆ ವೈಟ್ ಸ್ಕರ್ಟ್ ಮಿಕ್ಸ್ ಮಾಡಿರುವ ಕ್ರಿಕೆಟ್ ಥೀಮ್ ಡ್ರೆಸ್ ಅಲ್ಲಿನ ಯಂಗ್‌ಸ್ಟರ್ಸ್‌ಗಳನ್ನು ಸೆಳೆಯಿತು.
ಬಾಡಿಕಾನ್ ಡ್ರೆಸ್ ಮೇಲೆ ಬ್ಯಾಟಿಂಗ್ ಸಿಕ್ವೀನ್ಸ್
ಜಾಹ್ನವಿಯ ಹೈ ಫ್ಯಾಷನ್ ಸ್ಟೈಲಿಂಗ್‌ನ ಶಿಮ್ಮರ್‌ನ ಬಾಡಿಕಾನ್ ಡ್ರೆಸ್ ಮೇಲೆ ಇದ್ದ ಬ್ಯಾಟಿಂಗ್ ಸಿಕ್ವೀನ್ಸ್ ಪ್ರಿಂಟ್ಸ್ ಚಿತ್ತಾರ ಹೈ ಫ್ಯಾಷನ್ ಲುಕ್‌ಗೆ ಸಾಥ್ ನೀಡಿತ್ತು.
ಇದನ್ನೂ ಓದಿ: Wedding Fashion: ವೆಡ್ಡಿಂಗ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!
ಜಾಹ್ನವಿ ಕ್ರಿಕೆಟ್ ಥೀಮ್ ಆಕ್ಸೆಸರೀಸ್
ಕ್ರಿಕೆಟ್ ಬಾಲ್ ಆಕಾರದ ಕ್ಲಚ್, ಹ್ಯಾಂಡ್ ಪರ್ಸ್ ಸೇರಿದಂತೆ ನಾನಾ ಆಕ್ಸೆಸರೀಸ್ ಅವರನ್ನು ಮತ್ತಷ್ಟು ಕ್ರಿಕೆಟ್ ಪ್ರೇಮಿಯನ್ನಾಗಿಸಿತ್ತು. ಹೀಗೆ ಜಾಹ್ನವಿಯ ನಾನಾ ಬಗೆಯ ಕ್ರಿಕೆಟ್ ಥೀಮ್ ಔಟ್‌ಫಿಟ್ ಹಾಗೂ ಆಕ್ಸೆಸರೀಸ್‌ಗಳು, ಕ್ರಿಕೆಟ್ ಪ್ರೇಮಿಗಳನ್ನು ಮಾತ್ರವಲ್ಲ, ಫ್ಯಾಷನ್ ಪ್ರಿಯರನ್ನು ಸೆಳೆದವು ಎಂದು ವಿಶ್ಲೇಷಿಸಿದ್ದಾರೆ ಫ್ಯಾಷನ್ ವಿಮರ್ಶಕರು.