Site icon Vistara News

Star Fashion | ಫ್ರಿಂಝ್‌ ಮಿರರ್‌ ಡಿಸೈನರ್‌ವೇರ್‌ನಲ್ಲಿ ಮಿಂಚಿದ ನಟಿ ಕಾಜಲ್‌ ಅಗರ್‌ವಾಲ್‌

Star Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಂಕಿ ಲುಕ್‌ ನೀಡುವ ಎಥ್ನಿಕ್‌ ಮಿರರ್‌ ವರ್ಕ್‌ ಹಾಗೂ ಫ್ರಿಂಝ್‌ ಡಿಸೈನ್‌ ಇರುವ (Star Fashion) ಹೆವಿ ಡಿಸೈನರ್‌ವೇರ್‌ನಲ್ಲಿ ನಟಿ ಕಾಜಲ್‌ ಅಗರ್‌ವಾಲ್‌ ಕಾಣಿಸಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಅವರ ಸ್ಟೈಲ್‌ ಸ್ಟೇಟ್‌ಮೆಂಟ್‌ ಬದಲಾಗಿದೆ. ಇದು ಅವರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈ ಡಿಸೈನರ್‌ವೇರ್‌ನ ವಿವರವನ್ನು ಫೋಟೋದೊಂದಿಗೆ ಹಾಕದಿರುವ ಕಾರಣ ಇದು ಅವರ ಸಿನಿಮಾದ ಕಾಸ್ಟ್ಯೂಮ್‌ ಇರಬಹುದು ಎಂದು ಸ್ಟೈಲಿಸ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.

ಏನಿದು ಹೆವಿ ಮಿರರ್‌ ಫ್ರಿಂಝ್‌ ಡಿಸೈನರ್‌ವೇರ್‌?
ಬ್ಲ್ಯೂ ಹಾಗೂ ಕ್ರೀಮ್‌ ವರ್ಣ ಮಿಕ್ಸ್‌ ಮ್ಯಾಚ್‌ ಇರುವ ವೀ ನೆಕ್‌ ಹೊಂದಿದ ಮಿರರ್‌ ಕಟ್‌ ವರ್ಕ್‌ನ ಫ್ರಿಂಝ್‌ ಡಿಸೈನರ್‌ವೇರ್‌ನಲ್ಲಿ ಸಾಲಾಗಿ ಕವಡೆಗಳನ್ನು ಬಳಸಲಾಗಿದೆ. ಇಡೀ ಡಿಸೈನರ್‌ವೇರನ ಎಥ್ನಿಕ್‌ ಲುಕ್‌ ಫಂಕಿ ಲುಕ್‌ ಆಗಿ ಬದಲಾಗಿದೆ. ಇದರೊಂದಿಗೆ ಅವರು ಧರಿಸಿರುವ ಮಲ್ಟಿಪಲ್‌ ಟಾಸೆಲ್ಸ್‌ ವಿನ್ಯಾಸದ ಬ್ಲ್ಯಾಕ್‌ ಮೆಟಲ್‌ ಪಿಂಕ್‌ ಇಯರಿಂಗ್ಸ್‌ ಕೂಡ ಬೇಕಂತಲೇ ಮ್ಯಾಚ್‌ ಮಾಡಲಾಗಿದೆ. ಇದು ಇಡೀ ಲುಕ್‌ ಎದ್ದು ಕಾಣುವಂತೆ ಮಾಡಿದೆ. ಇನ್ನು ಇದಕ್ಕೆ ಹೊಂದುವಂತಹ ಬ್ಲ್ಯೂ ಐ ಮೇಕಪ್‌ ಸಿಂಪಲ್‌ ಆಗಿದ್ದರೂ ಕಾಜಲ್‌ರ ಹೊಸ ಅವತಾರಕ್ಕೆ ಸಾಥ್‌ ನೀಡಿದೆ.

ಬದಲಾಯ್ತು ಸಿಂಪಲ್‌ ಲುಕ್‌
ಅಂದಹಾಗೆ, ಕಾಜಲ್‌ ಅಗರ್‌ವಾಲ್‌ ತೀರಾ ಪ್ರಯೋಗಾತ್ಮಕ ಡಿಸೈನರ್‌ವೇರ್‌ಗಳನ್ನು ಧರಿಸುವವರಲ್ಲ! ಬದಲಿಗೆ ಸಿಂಪಲ್‌ ಹಾಗೂ ಎಲಿಗೆಂಟ್‌ ಲುಕ್‌ನಲ್ಲೆ ಸದಾ ಕಾಣಿಸಿಕೊಳ್ಳುತ್ತಾರೆ. ಮದುವೆಯಾದ ನಂತರ ನಟಿಸಿದ ಚಿತ್ರಗಳು ಕಡಿಮೆಯಾದರೂ ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ತಮ್ಮ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಆಗಾಗ ಅಪ್‌ಲೋಡ್‌ ಮಾಡುವ ಮೂಲಕ ಸಕ್ರಿಯವಾಗಿದ್ದಾರೆ. ಮಗುವಾದ ನಂತರ ಅವರ ಫ್ಯಾಷನ್‌ ಸ್ಟೇಟ್‌ಮೆಂಟ್‌ ಮತ್ತಷ್ಟು ಮೊದಲಿಗಿಂತ ಸಿಂಪಲ್‌ ಆಗಿವೆ. ಆದರೆ, ಇದೀಗ ಇದ್ದಕ್ಕಿದ್ದ ಹಾಗೆ ತಮ್ಮ ಫ್ಯಾಷನ್‌ನಲ್ಲಿ ಬದಲಾವಣೆ ತಂದಿದ್ದು, ಹೊಸ ಫಂಕಿ ಲುಕ್‌ ಟ್ರೈ ಮಾಡಿದ್ದಾರೆ. ಇದನ್ನು ನೋಡಿದ ಸಾಕಷ್ಟು ನೆಟ್ಟಿಗರು ಕಾಜಲ್‌ ಅಗರ್‌ವಾಲರ್‌ರ ಮತ್ತಷ್ಟು ಹೊಸ ಲುಕ್‌ಗಳಿಗಾಗಿ ಕಾಯುವುದಾಗಿ ಹೇಳಿದ್ದಾರೆ.

ಕಾಜಲ್‌ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌
ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಕಾಜಲ್‌ ಅತಿ ಹೆಚ್ಚಾಗಿ ಎಲಿಗೆಂಟ್‌ ಲುಕ್‌ ಆಯ್ಕೆ ಮಾಡುತ್ತಾರಂತೆ. ಇನ್ನು ಇವರು ಆಕ್ಸೆಸರೀಸ್‌ ಪ್ರಿಯೆ ಕೂಡ. ಅದರಲ್ಲೂ ಆಕರ್ಷಕ ಇಯರಿಂಗ್ಸ್‌ ಅಂದ್ರೆ ಸಖತ್‌ ಇಷ್ಟವಂತೆ. ಇನ್ನು ಇವರು ಟ್ರಾವೆಲ್‌ ಫ್ಯಾಷನ್‌ ಟ್ರೆಂಡ್‌ ಸೆಟ್ಟರ್‌ ಕೂಡ. ಟ್ರಾವೆಲಿಂಗ್‌ನಲ್ಲೂ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Shah Rukh Khan Fashion | ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ರೀಲ್‌ ಫ್ಯಾಷನ್‌ Vs ರಿಯಲ್‌ ಫ್ಯಾಷನ್‌!

Exit mobile version