Site icon Vistara News

Star Fashion | ನಟಿ ಅಲಯಾಗೆ ನಯಾ ಲುಕ್ ನೀಡಿದ ಕಟೌಟ್ ಮಿನಿ ಫ್ರಾಕ್

Cutout mini frock gave actress Alaya a modern look

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವಿಂಟರ್ ಸೀಸನ್‌ನಲ್ಲೂ ಬಾಲಿವುಡ್ ನಟಿ ಅಲಯಾ ಫ್ರೆಶ್ (Star Fashion) ಲುಕ್ ನೀಡುವ ಕಟೌಟ್ ಮಿನಿ ಫ್ಲೋರಲ್ ಫ್ರಾಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಿನಿಮಾಗಳ ಪ್ರಮೋಷನ್‌ನಲ್ಲಿ ಈಗಾಗಲೇ ಬ್ಯುಸಿಯಾಗಿರುವ ಅಲಯಾ, ಈಗಾಗಲೇ ಅಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್ ಸಿನಿಮಾ ಪ್ರಮೋಷನ್‌ಗಾಗಿ ಮೊರೊಕ್ಕೊ ಫಿಲ್ಮ್ ಫೆಸ್ಟಿವಲ್‌ನಲ್ಲಿ ಡಿಸೈನರ್ ಮೊನಿಷಾ ಜೈಸಿಂಗ್ ಅವರು ಸಿದ್ಧಪಡಿಸಿದ ಅತ್ಯಾಕರ್ಷಕ ಗ್ಲಿಟ್ಟರಿ ಶೋಲ್ಡರ್ಲೆಸ್ ನೆಟ್ಟೆಡ್ ಗೋಲ್ಡನ್ ಗೌನ್ ಧರಿಸಿ ಪಾಲ್ಗೊಂಡು ಫ್ಯಾಷನ್ ಪ್ರಿಯರ ಮನಗೆದ್ದಿದ್ದರು.

ಇದು ಸುದ್ದಿಯಾಗಿತ್ತು ಕೂಡ. ಇದೀಗ ಮತ್ತೊಂದು ಸಿನಿಮಾ ಫ್ರೆಡ್ಡಿ ಪ್ರಮೋಷನ್ ಸಮಯ ಹತ್ತಿರವಾಗಿದೆ. ಸೋ, ಮತ್ತೊಮ್ಮೆ ಅವರು ತಮ್ಮ ಅತ್ಯಾಕರ್ಷಕ ಡಿಸೈನ್‌ವೇರ್‌ಗಳನ್ನು ಧರಿಸಿದ ಫೋಟೊಶೂಟ್ ಮೂಲಕ ನೆಟ್ಟಿಗರನ್ನು ಸೆಳೆಯಲಾರಂಭಿಸಿದ್ದಾರೆ. ಹೀಗೆ ಪ್ರತಿಬಾರಿಯೂ ಭಿನ್ನ-ವಿಭಿನ್ನ ಡಿಸೈನ್‌ವೇರ್‌ಗಳಿಂದ ಫ್ಯಾಷನ್ ದಿವಾರಂತೆ ಕಾಣಿಸಲಾರಂಭಿಸಿದ್ದಾರೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್ ರಾಘವ್.

ಇದನ್ನೂ ಓದಿ | Star Fashion | ಪ್ಯಾಂಟ್‌ ಸೂಟ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಗ್ಲಾಮರಸ್‌ ಲುಕ್‌, ಹೀಗಿದೆ ನೋಡಿ ಬೋಲ್ಡ್‌ ಲುಕ್‌

ಅಲಯಾ ಗ್ಲಾಮರಸ್ ಲುಕ್
ಈಗಾಗಲೇ ಜವಾನಿ ಜಾನೆಮನ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದ ಅಲಯಾ, ಸಾಕಷ್ಟು ವರ್ಷಗಳ ನಂತರ ಕಮ್‌ಬ್ಯಾಕ್‌ ಆಗುತ್ತಿದ್ದು, ಇದಕ್ಕಾಗಿ ಅವರು ತಮ್ಮ ಔಟ್‌ಲುಕ್‌ ಬಗ್ಗೆ ಸಾಕಷ್ಟು ತಯಾರಿಯನ್ನೇ ನಡೆಸಿದ್ದರು. ಪ್ರತಿ ಇವೆಂಟ್‌ಗೂ ಗ್ಲಾಮರಸ್ ಲುಕ್ ನೀಡುವ ಡಿಸೈನ್‌ವೇರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಲಾರಂಭಿಸಿದ್ದಾರೆ. ಇದೀಗ ಚಳಿಗಾಲಕ್ಕೆ ತದ್ವಿರುದ್ಧ ಔಟ್‌ಫಿಟ್‌ ಎಂಬಂತೆ, ಅರಬೆಲ್ಲಾ ಲೆಬೆನ್‌ನ ಕಟೌಟ್‌ ಫ್ಲೋರಲ್ ಪ್ರಿಂಟ್ಸ್ ಫ್ರಾಕ್ ಮೊರೆ ಹೋಗಿದ್ದಾರೆ. ಸೌರವ್ ರಾಯ್ಹೇರ್ಸ್ಟೈಲ್ ಮಾಡಿದ್ದು, ತಾಂಗವ್ರಿ ಹಾಗೂ ಹೃತಿಕಾ ಅವರು ಸ್ಟೈಲಿಂಗ್ ಮಾಡಿದ್ದಾರೆ.

ಫ್ಯಾಷನ್ ಪ್ರಿಯೆ ಅಲಯಾ
ನಟಿ ಹಾಗೂ ಮಾಡೆಲ್ ಅಲಯಾ, ಮೊದಲಿನಿಂದಲೂ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್‌ಗಳನ್ನು ಕರಾರುವಕ್ಕಾಗಿ ಫಾಲೋ ಮಾಡುವ ಸ್ಟಾರ್. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಫ್ಯಾಷನ್, ಫಿಟ್‌ನೆಸ್‌ ಹಾಗೂ ಬ್ಯೂಟಿ ಕುರಿತಂತೆ ಒಂದಲ್ಲ ಒಂದು ಪೋಸ್ಟನ್ನು ಹಾಕುತ್ತಿದ್ದರು. ಇವೆಲ್ಲಾ ಅವರ ಉತ್ತಮ ಫ್ಯಾಷನ್ ಸೆನ್ಸ್ ಅನ್ನು ತೋರ್ಪಡಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಶಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ | k–pop Stars Fashion | ಕೆ-ಪಾಪ್‌ ಸ್ಟಾರ್ಸ್ ಕ್ರೇಝಿ ಫ್ಯಾಷನ್‌ಗೆ ಯಂಗ್‌ಸ್ಟರ್ಸ್ ಫಿದಾ

Exit mobile version