Site icon Vistara News

Star Fashion | ಬ್ಲ್ಯಾಕ್‌ ಲೆದರ್‌ ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಗ್ಲಾಮರಸ್‌ ಲುಕ್‌

Star Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆಂಗಳೂರು: ಕಾಂತಾರ ಸಿನಿಮಾದಲ್ಲಿ ನ್ಯಾಚುರಲ್‌ ಬ್ಯೂಟಿಯಂತೆ (Star Fashion) ಕಾಣಿಸಿಕೊಂಡಿದ್ದ ನಟಿ ಸಪ್ತಮಿ ಗೌಡ ಇದೀಗ ವೆಸ್ಟರ್ನ್ ಲುಕ್‌ ನೀಡುವ ಬ್ಲ್ಯಾಕ್‌ ಲೆದರ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದು, ತಾವು ಗ್ಲಾಮರಸ್‌ ಲುಕ್‌ಗೂ ಸೈ ಎಂದು ರಿಸೆಂಟ್‌ ಫೋಟೊಶೂಟ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಬೀತುಪಡಿಸಿದ್ದಾರೆ. ಮಾಯಾರ್ಥ ಪ್ರೊಡಕ್ಷನ್‌ ಈ ಫೋಟೊಗಳನ್ನು ಕ್ಲಿಕ್ಕಿಸಿದ್ದು, ಸಪ್ತಮಿ ಗೌಡ ಕಂಪ್ಲೀಟ್‌ ಡಿಫರೆಂಟ್‌ ಇಮೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿಯೊಬ್ಬರು ಟ್ರೆಡಿಷನಲ್‌ ಲುಕ್‌ನಲ್ಲೆ ಹಿಟ್‌ ಆದ ನಂತರ ವೆಸ್ಟರ್ನ್ ಲುಕ್‌ನಲ್ಲೂ ಆಕರ್ಷಕವಾಗಿ ಕಾಣಿಸಿಕೊಂಡು ಜನಮನ್ನಣೆ ಗಳಿಸುವುದು ಕೊಂಚ ಸವಾಲಿನ ಕೆಲಸ. ಆದರೆ, ಸಪ್ತಮಿ ಗೌಡ ಮಾತ್ರ ಈ ಇಮೇಜ್‌ಗೂ ಬದಲಾಗಬಲ್ಲೆ ಎಂಬುದನ್ನು ಪೋಟೊಗಳ ಮೂಲಕ ತೋರ್ಪಡಿಸಿದ್ದಾರೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ ದಿಯಾ. ಅವರ ಪ್ರಕಾರ, ಸಪ್ತಮಿ ಗೌಡ ಕಾಂತಾರ ಸಿನಿಮಾ ಮೂಲಕ ಜಗತ್ತಿನ ಎಲ್ಲೆಡೆ ತಮ್ಮ ಮುಗ್ದ ನೈಜ ಲುಕ್‌ ಹಾಗೂ ಸಿಂಪಲ್‌ ಉಡುಗೆಯಿಂದಲೇ ಸಾಕಷ್ಟು ಅಭಿಮಾನಿಗಳ ಬಳಗವನ್ನೇ ಗಳಿಸಿದ್ದಾರೆ. ಅವರ ಸಿನಿಮಾದ ಲುಕ್‌ಗಳು ಈಗಾಗಲೇ ಸಾಕಷ್ಟು ಟ್ರೆಂಡ್‌ ಹುಟ್ಟು ಹಾಕಿದೆ. ಈ ಮಧ್ಯೆ ಅವರ ವೆಸ್ಟರ್ನ್ ಲುಕ್‌ನ ಫೋಟೊಶೂಟ್‌ ಫೋಟೊಗಳು ಸದ್ದು ಮಾಡಿವೆ.

ಇದನ್ನೂ ಓದಿ | Star Fashion | ಕೈರೋ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರಶಂಸೆ ಗಿಟ್ಟಿಸಿದ ನಟಿ ಸ್ವರ ಭಾಸ್ಕರ್‌ ಗಾಡ್ ಮದರ್‌ ಲುಕ್‌

ಸ್ಟೈಲಿಶ್‌ ಬ್ಲ್ಯಾಕ್‌ ಲೆದರ್ ಔಟ್‌ಫಿಟ್‌
ನಟಿ ಸಪ್ತಮಿ ಗೌಡ ಅವರು ಧರಿಸಿರುವ ಬ್ಲ್ಯಾಕ್‌ ಶೇಡ್‌ನ ಲೆದರ್‌ ವ್ರಾಪ್‌ ಡ್ರೆಸ್‌ ಅವರಿಗೆ ಗ್ಲಾಮರಸ್‌ ಲುಕ್‌ ನೀಡಿದೆ. ಇದರೊಂದಿಗೆ ಧರಿಸಿರುವ ಮಿನಿಮಲ್‌ ಆಕ್ಸೆಸರೀಸ್‌ ಕೂಲ್‌ ಲುಕ್‌ ನೀಡಿದೆ. ಇದು ಸಪ್ತಮಿ ಗೌಡ ಕೇವಲ ಟ್ರೆಡಿಷನಲ್‌ ಲುಕ್‌ನಲ್ಲಿ ಮಾತ್ರವಲ್ಲ, ವೆಸ್ಟರ್ನ್ ಔಟ್‌ಫಿಟ್‌ನಲ್ಲೂ ಆಕರ್ಷಕವಾಗಿ ಕಾಣಿಸುತ್ತಾರೆ ಎಂಬುದನ್ನು ತೋರ್ಪಡಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ ಜಿಯಾ. ಅವರು ಹೇಳುವಂತೆ, ಇಂದಿನ ಜನರೇಷನ್‌ ನಟಿಯರು ಕೇವಲ ಒಂದೇ ಬಗೆಯ ಇಮೇಜಿಗೆ ಒಳಗಾಗದೇ ಪ್ರಯೋಗಾತ್ಮಕ ಔಟ್‌ಫಿಟ್‌ಗಳನ್ನು ಧರಿಸುವುದರ ಮೂಲಕ ತಾವು ಎಲ್ಲಾ ಬಗೆಯ ಪಾತ್ರಗಳಿಗೂ ಫಿಟ್‌ ಆಗುತ್ತೇವೆ ಎಂಬುದನ್ನು ಪೋಟೋಶೂಟ್‌ ಮೂಲಕ ತೋರ್ಪಡಿಸುತ್ತಾರೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಅವರು.

ಮೂಗುತಿ ಸುಂದರಿ ಸಪ್ತಮಿ ಗೌಡ
ಕಾಂತಾರ ಸಿನಿಮಾಗಾಗಿ ಮೂಗಿನ ಎರಡೂ ಕಡೆ ಮೂಗುತಿ ಧರಿಸಿದ್ದ ಸಪ್ತಮಿ ಗೌಡ ಮೂಗುತಿ ಟ್ರೆಂಡ್‌ ಮರು ಹುಟ್ಟುಹಾಕಿದ ನಟಿ ಎನ್ನಬಹುದು. ಈ ಜೋಡಿ ಮೂಗುತಿಗಳ ಜತೆ ಜತೆಗೆ ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮತ್ತಷ್ಟು ಆಕರ್ಷಕವಾಗಿ ಕಾಣಿಸುತ್ತಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ ರಾಕಿ.

ಆದರೆ, ಈ ಫೋಟೊ ನೋಡಿದ ಸಾಕಷ್ಟು ಅಭಿಮಾನಿಗಳು ಮಾತ್ರ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಡಿಷನಲ್‌ ಉಡುಗೆಗಳಲ್ಲೆ ನೀವು ನೋಡಲು ಚೆಂದ, ಇದನ್ನೇ ಮುಂದುವರಿಸಿ ಎಂದು ಸಪ್ತಮಿ ಗೌಡ ಅವರಿಗೆ ಸಂದೇಶಗಳ ಸುರಿಮಳೆಯನ್ನೇ ಸುರಿದಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Bollywood Winter Fashion | ವೈವಿಧ್ಯಮಯ ವಿಂಟರ್‌ ಫ್ಯಾಷನ್‌ಗೆ ಸೈ ಎಂದ ಬಾಲಿವುಡ್‌ ತಾರೆಯರು

Exit mobile version