Site icon Vistara News

Star Fashion: ನಟಿ ಮೋಕ್ಷಿತಾ ಪೈ ಕ್ಯಾಶುವಲ್‌ ಲುಕ್‌ ನಿಮ್ಮದಾಗಿಸಿಕೊಳ್ಳಬೇಕೇ? ಹೀಗೆ ಮಿಕ್ಸ್‌ ಮ್ಯಾಚ್‌ ಮಾಡಿ!

Mokshitha Pai

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ಮೋಕ್ಷಿತಾ ಪೈ ಧರಿಸಿರುವ ಟ್ರೆಂಡಿ ಹೈ ರೈಸ್‌ ಕ್ರಾಪ್‌ ಪ್ಯಾಂಟ್‌ ಫ್ಯಾಷನ್‌ ಮಾನ್ಸೂನ್‌ (Star Fashion) ಸೀಸನ್‌ನ ಟಾಪ್‌ ಲಿಸ್ಟ್‌ಗೆ ಸೇರಿದೆ. ಅದರಲ್ಲೂ ಕಾಲೇಜು ಹುಡುಗಿಯರ ಮಿಕ್ಸ್‌ ಮ್ಯಾಚ್‌ ಫ್ಯಾಷನ್‌ನಲ್ಲಿ ಸ್ಥಾನ ಪಡೆದಿದೆ. ಇನ್ನು, ಸದಾ ಒಂದಲ್ಲ ಒಂದು ಔಟ್‌ಫಿಟ್‌ನಲ್ಲಿ ಫ್ಯಾಷೆನಬಲ್‌ ಆಗಿ ಕಾಣಿಸಿಕೊಳ್ಳುವ ಪಾರು ಸೀರಿಯಲ್‌ನ ಕಿರುತೆರೆ ನಟಿ ಮೋಕ್ಷಿತಾ ಪೈ, ಅತಿ ಹೆಚ್ಚಾಗಿ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಈ ಸೀಸನ್‌ಗೆ ಮ್ಯಾಚ್‌ ಆಗುವಂತಹ ಟ್ರೆಂಡಿ ಹೈ ರೈಸ್‌ ಗಿಂಗ್ನಂ ಕ್ರಾಪ್‌ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಅವರ ಈ ಸ್ಟೈಲಿಂಗ್‌ ಕುರಿತು ಮಾತನಾಡಿರುವ ಸ್ಟೈಲಿಸ್ಟ್‌ಗಳು ನಟಿಯ ಈ ಕೂಲ್‌ ಸಿಂಪಲ್‌ ಫ್ಯಾಷನ್‌ಗೆ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ಜತೆಗೆ ಈ ಟ್ರೆಂಡ್‌ ಫಾಲೋ ಮಾಡುವವರಿಗೂ ಸಿಂಪಲ್‌ ಟಿಪ್ಸ್‌ ನೀಡಿದ್ದಾರೆ.

ಏನಿದು ಹೈ ರೈಸ್‌ ಗಿಂಗ್ನಂ ಕ್ರಾಪ್‌ ಪ್ಯಾಂಟ್‌

ಹೊಟ್ಟೆಯ ಮೇಲ್ಭಾಗಕ್ಕೆ ಕೂರುವ ಈ ಪ್ಯಾಂಟನ್ನು ಹೈ ರೈಸ್‌ ಪ್ಯಾಂಟ್‌ ಎನ್ನಲಾಗುತ್ತದೆ. ಇನ್ನು ಮಾನ್ಸೂನ್‌ನಲ್ಲಿ ಪ್ಯಾಂಟ್‌ಗಳು ಪಾದ ಮುಟ್ಟುವುದಿಲ್ಲ. ಇದಕ್ಕೆ ಪೂರಕ ಎಂಬಂತೆ ಗಿಡ್ಡನಾದ ಪ್ಯಾಂಟ್‌ಗಳು ಬಿಡುಗಡೆಯಾಗುತ್ತವೆ. ಈ ಸಾಲಿನಲ್ಲಿ ಹೈ ರೈಸ್‌ ಪ್ಯಾಂಟ್‌ ಕೂಡ ಈ ಬಾರಿ ಬಂದಿದೆ. ಸಾದಾ ಬದಲು ಚೆಕ್ಸ್‌ ಶೈಲಿಯವು ಬಂದಿವೆ. ಇದನ್ನು ಗಿಂಗ್ನಂ ಎಂದು ಹೇಳಲಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Star Fashion: ಸ್ಯಾಂಡಲ್‌ವುಡ್‌ ನಟಿ ಮೇಘಾ ಶ್ರೀಗೆ ಪ್ಲೇ ಸೂಟ್‌ ಮೇಲಾಯ್ತು ಲವ್‌!

ಹೈ ರೈಸ್‌ ಕ್ರಾಪ್‌ ಪ್ಯಾಂಟ್‌ ಮಿಕ್ಸ್‌ ಮ್ಯಾಚ್‌ ಸ್ಟೈಲಿಂಗ್‌ ಹೀಗೆ

ಮಾನ್ಸೂನ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಈ ಪ್ಯಾಂಟ್‌ಗಳನ್ನು ಹೇಗೆ ಬೇಕಾದರೂ ಮಿಕ್ಸ್‌ ಮ್ಯಾಚ್‌ ಮಾಡಬಹುದು ಆದರೆ, ಶೇಡ್ಸ್‌ ಮ್ಯಾಚ್‌ ಮಾಡಬೇಕಷ್ಟೇ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಲೈಟ್‌ ಕ್ರೀಮ್‌, ವೈಟ್‌ ಶೇಡ್‌ಗಳನ್ನು ಬ್ಲಾಕ್‌, ರೆಡ್‌, ಮರೂನ್‌, ಗ್ರೀನ್ ಹೀಗೆ ಯಾವುದೇ ಸಾದಾ ಕಲರ್‌ನ ಕ್ರಾಪ್‌ ಟಾಪ್‌ ಅಥವಾ ಶಾರ್ಟ್‌ಗಳೊಂದಿಗೆ ಧರಿಸಬಹುದು. ಇನ್ನು ಡಾರ್ಕ್ ಶೇಡ್‌ನ ಪ್ಯಾಂಟ್‌ಗಳಿಗೆ ಲೈಟ್‌ ಶೇಡ್‌ ಟಾಪ್‌ ಕಾಂಟ್ರಾಸ್ಟಿಂಗ್‌ ಮ್ಯಾಚ್‌ ಮಾಡಬಹುದು ಎನ್ನುತ್ತಾರೆ ಅವರು.

ಇನ್ನು, ಮೋಕ್ಷಿತಾ ಪೈ ಅವರು ಧರಿಸಿರುವ ಪ್ಯಾಂಟ್‌ ಕೂಡ ಬ್ಲಾಕ್‌ ಕ್ರಾಪ್‌ ಟಾಪ್‌ನೊಂದಿಗೆ ಪರ್ಫೆಕ್ಟ್‌ ಕ್ಯಾಶುವಲ್‌ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version