Site icon Vistara News

Star Saree Fashion | ನಟಿ ಶಿಲ್ಪಾ ಶೆಟ್ಟಿಯ ಟ್ರೆಂಚ್‌ ಕೋಟ್‌ ಸೀರೆಗೆ ಮಹಿಳೆಯರು ಫಿದಾ

Star Saree Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾಲಿವುಡ್‌ ತಾರೆ ಶಿಲ್ಪಾ ಶೆಟ್ಟಿ ಧರಿಸಿದ ಇಂಡೋ-ವೆಸ್ಟರ್ನ್ ಫ್ಯೂಷನ್‌ಗೆ (Star Saree Fashion) ಸಾಥ್‌ ನೀಡುವ ಟ್ರೆಂಚ್‌ ಕೋಟ್‌ ಸೀರೆ ಇದೀಗ ಸೀರೆ ಪ್ರಿಯ ಮಹಿಳೆಯರನ್ನು ಸೆಳೆದಿದೆ. ವಿಂಟರ್‌ ಲುಕ್‌ಗೆ ಪರ್ಫೆಕ್ಟ್‌ ಸೂಟ್‌ ಆಗುವಂತಹ ಶೈಲಿಯಲ್ಲಿರುವ ಈ ಸೀರೆಯ ಲೇಯರ್‌ ಲುಕ್‌ಗೆ ಫ್ಯಾಷನ್‌ ಪ್ರಿಯರು ಮಾತ್ರವಲ್ಲ, ಸೀರೆ ಉಡುವ ಹೆಣ್ಣುಮಕ್ಕಳು ಕೂಡ ಫಿದಾ ಆಗಿದ್ದಾರೆ.

ಮಾನೋಕ್ರೋಮ್‌ ಫ್ಯೂಷನ್‌ ಸೀರೆ
ಶಿಲ್ಪಾ ಶೆಟ್ಟಿ ಧರಿಸಿರುವ ಸೀರೆ ರಾಣಿ ಪಿಂಕ್‌ನ ಪ್ರಿಂಟ್‌ನದ್ದಾಗಿದ್ದು, ಅದರ ಮೇಲೆ ಧರಿಸಿರುವ ಟ್ರೆಂಚ್‌ ಕೋಟ್‌ ವೆಲ್ವೆಟ್‌ನದ್ದಾಗಿದೆ. ಕೋಟ್‌ ವೆಸ್ಟರ್ನ್ ಶೈಲಿಯ ಸ್ಟಿಚ್ಚಿಂಗ್‌ ಹೊಂದಿದ್ದರೂ ಕಂಪ್ಲೀಟ್‌ ದೇಸಿ ಲುಕ್‌ ನೀಡುವ ಗೋಲ್ಡನ್‌ ಬಾರ್ಡರ್‌ ಕಾಲರ್‌ ಅನ್ನು ಆಕರ್ಷಕವಾಗಿಸಿದೆ. ಇಡೀ ಲೇಯರ್‌ ಲುಕ್‌ ಒಂದೇ ವರ್ಣದ್ದಾಗಿರುವುದರಿಂದ ಡಿಫರೆಂಟ್‌ ಲುಕ್‌ ಕಲ್ಪಿಸಿದೆ ಎನ್ನುತ್ತಾರೆ ಬಾಲಿವುಡ್‌ನ ಸೆಲೆಬ್ರಿಟಿ ಸ್ಟೈಲಿಸ್ಟ್‌ ಜಾನ್‌.

ಇದನ್ನೂ ಓದಿ | Kids Fashion | ಥೀಮ್‌ಗೆ ತಕ್ಕಂತೆ ಬದಲಾಗುವ ಇಂದಿನ ಮಕ್ಕಳ ಫ್ಯಾಷನ್‌

ಏನಿದು ಟ್ರೆಂಚ್‌ ಕೋಟ್‌ ಸೀರೆ ಫ್ಯಾಷನ್‌
ಸೀರೆಯ ಮೇಲೆ ಪಾಶ್ಚಿಮಾತ್ಯ ಕಾನ್ಸೆಪ್ಟ್‌ನ ಟ್ರೆಂಚ್‌ ಕೋಟ್‌ ಧರಿಸುವುದಕ್ಕೆ ಟ್ರೆಂಚ್‌ ಕೋಟ್‌ ಸೀರೆ ಫ್ಯಾಷನ್‌ ಎಂದು ಕರೆಯಲಾಗುತ್ತದೆ. ಅಂದ ಹಾಗೆ, ವಿದೇಶದಲ್ಲಿ ಚಳಿಗಾಲದಲ್ಲಿ ಈ ಕೋಟ್‌ ಧರಿಸುವುದು ಸರ್ವೆ ಸಾಮಾನ್ಯ. ಇನ್ನು ನಮ್ಮಲ್ಲಿ ಮಹಿಳೆಯರು ಸೀರೆ ಧರಿಸುವುದು ಕಾಮನ್‌. ಇವೆರಡರ ಸಮ್ಮಿಲನವೇ ಈ ಟ್ರೆಂಚ್‌ ಕೋಟ್‌ ಸೀರೆ ಫ್ಯಾಷನ್‌. ಟ್ರಾವೆಲ್‌ ಮಾಡುವಾಗ ಧರಿಸುತ್ತಿದ್ದಈ ಸ್ಟೈಲ್‌ ಸ್ಟೇಟ್‌ಮೆಂಟ್‌ ಇದೀಗ ವಿಂಟರ್‌ ಸೀರೆ ಫ್ಯಾಷನ್‌ ಲಿಸ್ಟ್‌ಗೆ ಸೇರಿದೆ.

ಸೆಲೆಬ್ರಿಟಿಗಳ ಪ್ರಯೋಗಾತ್ಮಕ ವಿಂಟರ್‌ ಸೀರೆ ಫ್ಯಾಷನ್‌
ಅಂದಹಾಗೆ, ಟ್ರೆಂಚ್‌ ಕೋಟ್‌ ಸೀರೆ ಧರಿಸಿ ಸುದ್ದಿಯಾದ ಸೆಲೆಬ್ರಿಟಿಗಳಲ್ಲಿ ಶಿಲ್ಪಾ ಶೆಟ್ಟಿ ಮೊದಲಿಗರೇನಲ್ಲ! ಈ ಹಿಂದೆಯೂ ಸಾಕಷ್ಟು ಸೆಲೆಬ್ರಿಟಿಗಳು ಈ ಸೀರೆಯ ಲೇಯರ್‌ ಲುಕ್‌ ಟ್ರೈ ಮಾಡಿದ್ದರು. ಬಹಳಷ್ಟು ವರ್ಷಗಳ ಹಿಂದೆಯೇ ಜಾಕ್ವೇಲಿನ್‌, ಮಾಧುರಿ ದೀಕ್ಷೀತ್‌, ಕರೀಷ್ಮಾ ಸೇರಿದಂತೆ ನಾನಾ ಬಾಲಿವುಡ್‌ ನ ಸೀರೆ ಪ್ರಿಯ ತಾರೆಯರು ಧರಿಸಿ ಸುದ್ದಿಯಾಗಿದ್ದರು. ಇದೀಗ ಶಿಲ್ಪಾ ಶೆಟ್ಟಿಯ ಸರದಿ. ಡಿಫರೆಂಟ್‌ ಸ್ಟೈಲ್‌ನಲ್ಲಿ ಧರಿಸಿ ಸುದ್ದಿಯಾಗಿದ್ದಾರೆ.

ಇಂಗ್ಲೀಷ್‌-ವಿಂಗ್ಲೀಷ್‌ ಸಿನಿಮಾದಲ್ಲಿ ಟ್ರೆಂಚ್‌ಕೋಟ್‌ ಜತೆ ಸೀರೆ
ದಿವಂಗತ ನಟಿ ಶ್ರೀದೇವಿ ಇಂಗ್ಲೀಷ್‌-ವಿಂಗ್ಲೀಷ್‌ ಸಿನಿಮಾದಲ್ಲಿ ಸೀರೆ ಮೇಲೆ ಟ್ರೆಂಚ್‌ ಕೋಟ್‌ ಧರಿಸಿ ಟ್ರೆಂಡ್‌ ಸೆಟ್‌ ಮಾಡಿದ್ದರು. ಇತ್ತ ಸೀರೆಯನ್ನು ತೊರೆಯದ ನಾರಿಯರು ಹೇಗೆ ಟ್ರೆಂಚ್‌ಕೋಟ್‌ ಧರಿಸಿ ಇಂಡೋ-ವೆಸ್ಟರ್ನ್ ಕಾನ್ಸೆಪ್ಟ್‌ಗೆ ಮೊರೆ ಹೋಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದರು ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್‌ ರಾಶಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Kids winter Fashion | ಮಕ್ಕಳನ್ನು ಕ್ಯೂಟ್‌ ಆಗಿ ಬಿಂಬಿಸುವ ವಿಂಟರ್‌ ಫ್ಯಾಷನ್‌

Exit mobile version