ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಅಮೂಲ್ಯರ ಹಸಿರು ಮೈಸೂರು ಸಿಲ್ಕ್ ಸೀರೆ (Star Saree Fashion) ಮಾನಿನಿಯರನ್ನು ಸೆಳೆದಿದೆ. ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಇವರ ಸಾಂಪ್ರದಾಯಿಕ ಸ್ಟೈಲಿಂಗ್ ಕೂಡ 100 ಪರ್ಸೆಟ್ ಪರ್ಫೆಕ್ಟ್ ಆಗಿದೆ ಎಂದಿರುವ ಫ್ಯಾಷನ್ ವಿಮರ್ಶಕರು, ಇವರ ಸೀರೆ ಲುಕ್‌ಗೆ ಫುಲ್ ಮಾರ್ಕ್ ನೀಡಿದ್ದಾರೆ.
“ನಟಿ ಅಮೂಲ್ಯ ಹಸಿರು ಮೈಸೂರು ಸಿಲ್ಕ್ ಸೀರೆಯಲ್ಲಿ ಸಖತ್ ಆಗಿ ಕಾಣಿಸುತ್ತಿದ್ದಾರೆ. ಕನ್ನಡದ ಮನೆ ಹುಡುಗಿಯಂತೆ ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಿದ್ದಾರೆ. ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಅಂದವಾಗಿ ಕಾಣಿಸುವ ಅಮೂಲ್ಯ ಆಗಾಗ್ಗೆ ಟ್ರೆಡಿಷನಲ್ ಔಟ್‌ಫಿಟ್‌ಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಹಬ್ಬ ಹರಿದಿನಗಳ ಸಮಯದಲ್ಲಿ ರೇಷ್ಮೆಯ ಲಂಗ-ದಾವಣಿ ಹಾಗೂ ಲೆಹೆಂಗಾ ಮತ್ತು ಸಿಲ್ಕ್ ಸೀರೆಗಳಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇವು ಇವರ ಈ ಲುಕ್ ಸಾಂಪ್ರದಾಯಿಕ ಲುಕ್‌ಗೆ ಹೇಳಿ ಮಾಡಿಸಿದಂತಿದೆ. ಇದು ಇವರಿಗಿರುವ ಸೀರೆಯ ಸ್ಟೈಲಿಂಗ್ ಆಸಕ್ತಿ ತೋರ್ಪಡಿಸುತ್ತದೆ” ಎಂದು ಅಮೂಲ್ಯ ಸ್ಟೈಲಿಂಗ್ ಬಗ್ಗೆ ಪ್ರಶಂಸಿಸಿದ್ದಾರೆ ಫ್ಯಾಷನ್ ವಿಮರ್ಶಕರು. ಅವರ ಪ್ರಕಾರ, ಸೀರೆ ಪ್ರಿಯರು ಇವರ ಸೀರೆ ಸ್ಟೈಲಿಂಗ್ ನೋಡಿ ಕಲಿಯಬಹುದು” ಎನ್ನುತ್ತಾರೆ.
ಸಿಂಪಲ್ ಹಸಿರು ಮೈಸೂರು ಸಿಲ್ಕ್ ಸೀರೆ
ಅಮೂಲ್ಯ ಉಟ್ಟಿರುವ ಸಿಂಪಲ್ ಚಿಕ್ಕ ಬಾರ್ಡರ್‌ನ ಪಚ್ಚೆ ಹಸಿರು ಸಿಲ್ಕ್ ಸೀರೆ ಹಳೆಯ ಡಿಸೈನ್‌ದ್ದಾದರೂ ಆಕರ್ಷಕವಾಗಿದೆ. ಇದಕ್ಕೆ ಪ್ರಮುಖ ಕಾರಣ, ಅವರು ಮಾಡಿರುವ ಸ್ಟೈಲಿಂಗ್! ಇನ್ನು, ಸೀರೆಗೆ ಧರಿಸಿರುವ ಡಿಸೈನರ್ ಬ್ಲೌಸ್ ಹ್ಯಾಂಡ್ ಎಂಬ್ರಾಯ್ಡರಿ ಹೊಂದಿದೆ. ನೆಕ್‌ಲೈನ್ ಹಾಗೂ ಸ್ಲೀವ್ ಬಾರ್ಡರ್ ಬ್ಲೌಸ್‌ನ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಲೀವ್ ಮೇಲಿನ ಗಂಡು-ಭೇರುಂಡ ಚಿತ್ತಾರ ಇಡೀ ಸೀರೆಯ ರಂಗನ್ನು ಹೆಚ್ಚಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕಾಸಿನ ಸರ – ಗಂಡು ಭೇರುಂಡ ಜ್ಯುವೆಲರಿ
ಇನ್ನು, ಈ ಮೈಸೂರು ಸಿಲ್ಕ್ ಸೀರೆಗೆ ಅಮೂಲ್ಯ ಧರಿಸಿರುವ ಅಗಲವಾದ ಕಾಸಿನ ಸರ ಹಾಗೂ ಗಂಡು-ಭೇರುಂಡ ಚಿತ್ತಾರದ ಅಗಲವಾದ ಕಿವಿಯೊಲೆ ಸಾಂಪ್ರದಾಯಿಕ ಲುಕ್‌ಗೆ ಮ್ಯಾಚ್ ಮಾಡಿದೆ.
ಅಮೂಲ್ಯ ಸಿಂಪಲ್ ಮೇಕಪ್
ಗಾಢವೆನಿಸದ ಮೇಕಪ್, ತೆಳುವಾದ ಲಿಪ್‌ಸ್ಟಿಕ್ ಹಾಗೂ ಮ್ಯಾಚಿಂಗ್ ಹಸಿರು ಬಿಂದಿ, ಕಂಗಳ ಕಾಡಿಗೆ, ಬ್ಲ್ಯಾಕ್ ಐ ಲ್ಯಾಶಸ್ ಹಾಗೂ ಮಸ್ಕರಾ ಎಲ್ಲವೂ ಅಮೂಲ್ಯ ಅವರನ್ನು ಮತ್ತಷ್ಟು ಸುಂದರವಾಗಿಸಿದೆ. ಇನ್ನು, ಕೂದಲ ವಿನ್ಯಾಸಕ್ಕೆ ಬಂದಲ್ಲಿ, ಹೇರ್‌ಬನ್ ವಿನ್ಯಾಸಕ್ಕೆ ಮಧ್ಯ ತೆಗೆದ ಬೈತಲೆ ಕ್ರಾಪ್, ಅದಕ್ಕೆ ಸುತ್ತಿದ ಮಲ್ಲಿಗೆ ಹೂ ಅಂದ ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ನಟಿ ಅಮೂಲ್ಯ ಲುಕ್‌ಗಾಗಿ ಹೀಗೆ ಮಾಡಿ
- ಸಿಂಪಲ್ ಟ್ರೆಡಿಷನಲ್ ಮೇಕಪ್ಗೆ ಸೈ ಎನ್ನಿ.
- ಸಿಲ್ಕ್ ಸೀರೆ ಉಟ್ಟಾಗ ಆದಷ್ಟೂ ಗೋಲ್ಡ್ ಜ್ಯುವೆಲರಿ ಧರಿಸಿ.
- ಜಡೆ ಅಥವಾ ಹೇರ್‌ಬನ್ ಕೂದಲ ವಿನ್ಯಾಸ ಮಾಡಿ.
- ಸಾಂಪ್ರದಾಯಿಕ ಲುಕ್‌ಗಾಗಿ ರೇಷ್ಮೆ ಸೀರೆ ಉಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Ear Cuff Fashion: ಕಿವಿಯ ಅಲಂಕಾರಕ್ಕೆ ಬಂತು ಬಿಗ್ ಇಯರ್ ಕಫ್!