-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿಯವರು ವಾವ್ಹ್ …ಎನ್ನುವಷ್ಟರ ಮಟ್ಟಿಗೆ ಅತ್ಯಾಕರ್ಷಕವಾದ ಸಮ್ಮರ್ ಸೀಸನ್ ಕಲೆಕ್ಷನ್‌ನ ಅರ್ಗಾನ್ಝಾ ಫ್ಲೋರಲ್ ಸೀರೆಯಲ್ಲಿ ಕಾಣಿಸಿಕೊಂಡು ಸೀರೆ ಪ್ರೇಮಿಗಳ ಮನ ಗೆದ್ದಿದ್ದಾರೆ. ಬರ್ತ್‌ಡೇ ಪಾರ್ಟಿಗೆ ಧರಿಸಿದ್ದ ಅವರ ಈ ರೆಡಿ ಟು ವೇರ್ ಫ್ಲೋರಲ್ ಸೀರೆ ಇದೀಗ ಫ್ಯಾಷನ್ ಪ್ರಿಯರಿಂದ ಅಪಾರ ಮೆಚ್ಚುಗೆ ಗಳಿಸಿದೆ.
ಸೆಲೆಬ್ರಿಟಿ ಡಿಸೈನರ್ ನೈನಾ ವಿನ್ಯಾಸದ ಸೀರೆ
ಅಂದಹಾಗೆ, ಸಮ್ಮರ್ ಕಲೆಕ್ಷನ್‌ಗೆ ಹೊಂದುವಂತಹ ಈ ಪ್ರಿಂಟೆಡ್ ಫ್ಲೋರಲ್ ಡಿಸೈನ್ ಇರುವಂತಹ ಅರ್ಗಾನ್ಜಾ ಸೀರೆಯನ್ನು ಸೆಲೆಬ್ರೆಟಿ ಡಿಸೈನರ್ ನೈನಾ ಅರೋರಾ ಸಿದ್ಧಪಡಿಸಿದ್ದಾರೆ. ಅವರೇ ಹೇಳುವಂತೆ, ಇದು ರೆಡಿ ಟು ವೇರ್ ಸೀರೆಯಾಗಿದೆ. ಫುಲ್ ಸ್ಲೀವ್ ಇದ್ದರೂ, ಸ್ಟೇಟ್‌ಮೆಂಟ್ ಬ್ಲೌಸ್ ಡಿಸೈನ್ ಇದನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿದೆ ಎನ್ನುತ್ತಾರೆ.
ರಾಗಿಣಿಯವರ ಪರ್ಸನಾಲಿಟಿಗೆ ತಕ್ಕಂತೆ ಈ ಸೀರೆ ಹೊಂದಿಕೊಂಡಿದ್ದು, ಅವರನ್ನು ಈ ಸೀರೆ ಅತ್ಯಾಕರ್ಷಕವಾಗಿ ಬಿಂಬಿಸಿದೆ ಎನ್ನುತ್ತಾರೆ ಅವರು. ಈ ಸೀಸನ್‌ನಲ್ಲಿ ಫ್ಲೋರಲ್ ಡಿಸೈನ್‌ಗಳು ಹೆಚ್ಚು ಟ್ರೆಂಡ್‌ನಲ್ಲಿವೆ. ತಾರೆಯರು ಕೂಡ ಅಂತಹ ವಿನ್ಯಾಸವನ್ನೇ ಬಯಸುತ್ತಾರೆ ಎನ್ನುತ್ತಾರೆ.
ರಾಗಿಣಿ ದ್ವಿವೇದಿ ಸೀರೆ ಲವ್
ಇನ್ನು ರಾಗಿಣಿಯವರ ಎತ್ತರ ಹಾಗೂ ಅವರ ಬಾಡಿ ಮಾಸ್ ಇಂಡೆಕ್ಸ್ ಕೂಡ ಸೀರೆಯಲ್ಲಿ ಅಟ್ರಾಕ್ಟಿವ್ ಆಗಿ ಕಾಣುವಂತೆ ಮಾಡಿದೆ. ಈ ಕುರಿತಂತೆ ಅವರೇ ಹೇಳಿಕೊಂಡಿದ್ದಾರೆ. ನೈನಾ ಸ್ಟೈಲಿಂಗ್‌ನಲ್ಲಿ ಮೂಡಿ ಬಂದಿರುವ ದೇವ್ನಾ ಸ್ಟಿಚ್ಚಿಂಗ್ ಸ್ಟುಡಿಯೋ ಡಿಸೈನ್‌ನ ಈ ಫ್ಲೋರಲ್ ಸೀರೆ ಬಹಳ ಇಷ್ಟವಾಗಿದೆ. ನನಗೆ ಬ್ಯೂಟಿಫುಲ್ ಲುಕ್ ನೀಡಿದೆ. ಸೀರೆ ಪ್ರಿಯರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ.
( ಲೇಖಕಿ : ಫ್ಯಾಷನ್ ಪತ್ರಕರ್ತೆ)