-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಂಬ್ರಾಯ್ಡರಿ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣರಂತೆ ಆಕರ್ಷಕವಾಗಿ (Star saree styling tips) ಕಾಣಿಸಲು ಯಾರಿಗೆ ಇಷ್ಟವಿಲ್ಲ, ಹೇಳಿ? ನೋಡೋಣಾ! ಸಾಮಾನ್ಯ ಎಂಬ್ರಾಯ್ಡರಿ ಸೀರೆಯಲ್ಲೂ ಆಕರ್ಷಕವಾಗಿ ಕಾಣಿಸಿಕೊಂಡಿರುವ ರಶ್ಮಿಕಾರಂತೆ ಕಾಣಲು ಬಯಸುವವರಿಗೆ ಸ್ಯಾರಿ ಸ್ಟೈಲಿಸ್ಟ್ ರೀನಾ 5 ಸಿಂಪಲ್ ಸ್ಟೈಲಿಂಗ್ ಟಿಪ್ಸ್ ನೀಡಿದ್ದಾರೆ.
ರಶ್ಮಿಕಾ ಎಂಬ್ರಾಯ್ಡರಿ ಸೀರೆಯ ವಿಶೇಷತೆ ಏನು?
ಅಂದಹಾಗೆ, ತೊರಾನಿ ಕ್ರಿಯೇಷನ್‌ನ ವೈಬ್ರೆಂಟ್ ಹಸಿರು ಅರ್ಗಾನ್ಜಾ ಎಂಬ್ರಾಯ್ಡರಿ ಸೀರೆಯನ್ನು ರಶ್ಮಿಕಾ ಉಟ್ಟಿದ್ದರು. ಈ ಸೀರೆಗೆ ಮ್ಯಾಚಿಂಗ್ ಸ್ವೀಟ್ ಹಾರ್ಟ್ ನೆಕ್‌ಲೈನ್‌ನ ಮ್ಯಾಚಿಂಗ್ ಡೋರಿ ಬ್ಲೌಸ್ ಧರಿಸಿದ್ದರು. ಬ್ಲೌಸ್‌ನ ಹಿಂಭಾಗದಲ್ಲಿ ವಿನ್ಯಾಸಗೊಳಿಸಲಾಗಿದ್ದ ಅದೇ ಕಲರ್‌ನ ಟಾಸೆಲ್ಸ್ ಇಡೀ ಬ್ಲೌಸ್‌ನ ಸೌಂದರ್ಯ ಹೆಚ್ಚಿಸಿತ್ತು. ಇನ್ನು, ಇಡೀ ಸೀರೆಯ ತುಂಬೆಲ್ಲಾ ಇದ್ದ ಫ್ಲೋರಲ್ ಗೋಲ್ಡನ್ ಎಂಬ್ರಾಯ್ಡರಿ ಸೀರೆಯ ಬ್ಯೂಟಿ ಇಮ್ಮಡಿಗೊಳಿಸಿತ್ತು. ಅಲ್ಲದೇ, ಸೀರೆಯೊಂದಿಗೆ ಮ್ಯಾಚ್ ಮಾಡಲಾಗಿದ್ದ, ಕಸ್ಟಮೈಸ್ಡ್ ಎಥ್ನಿಕ್ ಲುಕ್ ನೀಡುವ ಹೃದಯಾಕಾರದ RM ಎಂದು ಎಂಬ್ರಾಯ್ಡರಿಯಲ್ಲೆ ಬರೆದಿರುವ ಪೊಟ್ಲಿ ಪರ್ಫೆಕ್ಟ್ ಸೀರೆ ಸ್ಟೈಲಿಂಗ್‌ಗೆ ಸಾಥ್ ನೀಡಿತ್ತು.
ಹೀಗಿರಲಿ ಎಂಬ್ರಾಯ್ಡರಿ ಅರ್ಗಾನ್ಜಾ ಸೀರೆಯ ಆಯ್ಕೆ
ಎಂಬ್ರಾಯ್ಡರಿ ಡಿಸೈನ್ ಇರುವಂತಹ ಅರ್ಗಾನ್ಜಾ ಸೀರೆ ಆಯ್ಕೆ ಮಾಡಿ. ಆದಷ್ಟೂ ಕಂಟೆಂಪರರಿ ಡಿಸೈನ್‌ನ ಫ್ಲೋರಲ್ ಡಿಸೈನ್‌ನವನ್ನು ಸೆಲೆಕ್ಟ್ ಮಾಡಿ.
ಸೀರೆ ಬ್ಲೌಸ್ ನೆಕ್‌ಲೈನ್‌ಗೆ ಆದ್ಯತೆ
ಇಡೀ ಸೀರೆಯ ಲುಕ್ ಬ್ಲೌಸ್‌ನ ಡಿಸೈನ್‌ನ ಮೇಲೆ ನಿರ್ಧರಿತವಾಗಿರುತ್ತದೆ. ಗ್ಲಾಮರಸ್ ಲುಕ್ ಬಯಸುವವರು ಕ್ವೀನ್ ನೆಕ್‌ಲೈನ್ ಅಥವಾ ಸ್ವೀಟ್ ಹಾರ್ಟ್ ನೆಕ್‌ಲೈನ್‌ನಂತಹ ವೈಡ್ ನೆಕ್ ಡಿಸೈನ್ ಮಾಡಿಸಬಹುದು. ಬ್ಯಾಕ್‌ಸೈಡ್ ಟಾಸೆಲ್ಸ್ ಡಿಸೈನ್ ಮಾಡಿಸಿದಾಗ ಆಕರ್ಷಕವಾಗಿ ಕಾಣಿಸಬಹುದು.
ಸಿಂಪಲ್ ಮೇಕಪ್‌ಗೆ ಸೈ ಎನ್ನಿ
ಎಂಬ್ರಾಯ್ಡರಿ ಸೀರೆ ಉಡುವಾಗ ಆದಷ್ಟೂ ಸಿಂಪಲ್ ಮೇಕಪ್‌ಗೆ ಆದ್ಯತೆ ನೀಡುವುದು ಉತ್ತಮ. ಲೈಟ್ ಮೇಕಪ್‌ನಲ್ಲಿ ಹಣೆಗೆ ಬಿಂದಿ ಇಡಬಹುದು. ಡಾರ್ಕ್ ಲಿಪ್‌ಸ್ಟಿಕ್ ಲೇಪಿಸಿ, ಹುಬ್ಬನ್ನು ತೀಡಿ. ಕಾಡಿಗೆ ಹಚ್ಚಿದಲ್ಲಿ ಆಕರ್ಷಕವಾಗಿ ಕಾಣಿಸಬಹುದು.
ಬನ್ ಹೇರ್‌ಸ್ಟೈಲ್
ಸೀರೆಯ ಬ್ಲೌಸ್ ಬ್ಯಾಕ್‌ಲೆಸ್ ಹಾಗೂ ಬ್ಯಾಕ್ ಡಿಸೈನ್ ಇದ್ದಾಗ ಫ್ರೀ ಹೇರ್ ಹಾಗೂ ಜಡೆ ಹಾಕುವುದನ್ನು ಆವಾಯ್ಡ್ ಮಾಡುವುದು ಬೆಸ್ಟ್. ಮೆಸ್ಸಿ ಬನ್ ಹೇರ್‌ಸ್ಟೈಲ್ ಈ ಸೀರೆಗೆ ಮಾಡಿದಲ್ಲಿ ಮ್ಯಾಚ್ ಆಗುವುದು.
ಇದನ್ನೂ ಓದಿ: Star Shirt Saree Fashion: ಏನಿದು ಶರ್ಟ್ ಸೀರೆ? ಹೊಸ ಟ್ರೆಂಡ್ ಬಗ್ಗೆ ನಟಿ ತಾರಾ ಏನಂತಾರೆ?
ಗೋಲ್ಡ್ ಜ್ಯುವೆಲರಿ ಮ್ಯಾಚಿಂಗ್
ಗೋಲ್ಡ್ ಎಂಬ್ರಾಯ್ಡರಿ ಸೀರೆಗೆ ಗೋಲ್ಡ್ ಶೇಡ್‌ನ ಜ್ಯುವೆಲರಿಗಳನ್ನು ಧರಿಸುವುದು ಸೂಕ್ತ. ಸಿಂಪಲ್ ಲುಕ್‌ಗಾದಲ್ಲಿ ನೆಕ್ಲೇಸ್, ಹ್ಯಾಂಗಿಂಗ್ಸ್ ಹಾಗೂ ಕಡ ಧರಿಸಬಹುದು. ಗ್ರ್ಯಾಂಡ್ ಬೇಕಿದ್ದಲ್ಲಿ ಹಾರ ಕೂಡ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)