-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಸಿರು ಡಿಸೈನರ್ ಶರ್ಟ್ ಸೀರೆಯಲ್ಲಿ (Star Shirt Saree Fashion) ಹಿರಿಯ ನಟಿ ತಾರಾ ಅವರು ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಇದೀಗ ಪ್ರಸಾರವಾಗುತ್ತಿರುವ ಕನ್ನಡದ ರಿಯಾಲಿಟಿ ಶೋವೊಂದರಲ್ಲಿ ಸದಾ ಒಂದಲ್ಲ ಒಂದು ಔಟ್‌ಫಿಟ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿರುವ ನಟಿ ತಾರಾ, ಇದೀಗ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಅವರ ಡಿಸೈನರ್ ಹಸಿರು ಶಿಫಾನ್ ಎಂಬ್ರಾಯ್ಡರಿ ಶರ್ಟ್ ಸೀರೆಯಲ್ಲಿ ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಇವರ ಈ ಸೀರೆಯ ಲುಕ್ ಫ್ಯಾಷನ್ ಪ್ರಿಯರಿಗೆ ಇಷ್ಟವಾಗಿದೆ. ಅಲ್ಲದೇ, ಮಾನ್ಸೂನ್‌ಗೆ ಹೇಳಿಮಾಡಿಸಿದಂತಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಏನಿದು ಶರ್ಟ್ ಸೀರೆ
ಶರ್ಟ್ ಸೀರೆಗಳು ಅತಿ ಹೆಚ್ಚಾಗಿ ಸಮ್ಮರ್ ಸೀಸನ್ ಹೊರತುಪಡಿಸಿ ಮಳೆಗಾಲ ಅಥವಾ ಚಳಿಗಾಲದಲ್ಲಿ ಟ್ರೆಂಡ್‌ಗೆ ಎಂಟ್ರಿ ನೀಡುತ್ತವೆ. ಇವು ಸೀರೆಗೆ ಲೇಯರ್ ಲುಕ್ ನೀಡುತ್ತವೆ. ಕೆಲವು ವರ್ಷಗಳ ಹಿಂದೆ ಜಾಕ್ವೆಲೀನ್ ಉಟ್ಟಿದ್ದ ಜಾಕೆಟ್ ಸೀರೆ ಯಾವ ಮಟ್ಟಿಗೆ ಫೇಮಸ್ ಆಗಿತ್ತು ಎಂದರೇ, ಇಂದಿಗೂ ಆ ಸೀರೆಗಳು ಹೊಸ ಹೊಸ ರೂಪದಲ್ಲಿ ಇಣುಕುತ್ತಲೇ ಇವೆ. ಇದೀಗ ಈ ಲಿಸ್ಟ್‌ಗೆ ಈ ಶರ್ಟ್ ಸೀರೆಗಳು ಸೇರಿವೆ. ನೋಡಲು ಶರ್ಟ್‌ನಂತಹ ಬ್ಲೌಸ್‌ಗಳು, ಈ ಸೀರೆಗೆ ಕಂಪ್ಲೀಟ್ ಇಂಡೋ-ವೆಸ್ಟರ್ನ್ ಲುಕ್ ಕಲ್ಪಿಸುತ್ತವೆ. ಇನ್ನು, ಈ ಕಾಲರ್ ಶರ್ಟ್ ಬ್ಲೌಸ್‌ಗೆ ಮಾಡಿದ ಎಂಬ್ರಾಯ್ಡರಿ ಸಿಂಗಾರ ಎಥ್ನಿಕ್ ಟಚ್ ನೀಡಿದೆ. ಆಯಾ ಸೀರೆಯ ಫ್ಯಾಬ್ರಿಕ್ ಹಾಗೂ ಡಿಸೈನ್‌ಗೆ ತಕ್ಕಂತೆ ಶರ್ಟ್ ಸೀರೆಗಳ ಔಟ್‌ಲುಕ್ ಬದಲಾಗುತ್ತವೆ. ಡಿಸೈನ್ ಮಾತ್ರ ಹೀಗೆಯೇ ಇರುತ್ತದೆ ಎನ್ನುತ್ತಾರೆ ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಲಕ್ಷ್ಮಿ ಕೃಷ್ಣ.
ಡಿಸೈನರ್ ಲಕ್ಷ್ಮಿ ಕೃಷ್ಣ ಡಿಸೈನರ್ ಸೀರೆಯಿದು
ಬಾಲಿವುಡ್‌ನ ಸನ್ನಿ ಲಿಯೋನ್‌ರಿಂದ ಹಿಡಿದು ಸ್ಯಾಂಡಲ್‌ವುಡ್ ನಟ-ನಟಿಯರಿಗೂ ಡಿಸೈನ್ ಮಾಡಿರುವ ಡಿಸೈನರ್ ಲಕ್ಷ್ಮಿ ಕೃಷ್ಣ ಅವರು ಈ ಶರ್ಟ್ ಸೀರೆ ಡಿಸೈನ್ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ಯೂರ್ ಶಿಫಾನ್‌ನ ಈ ಡೈಯ್ಡ್ ಸೀರೆಗೆ ಶರ್ಟ್ ಬ್ಲೌಸ್ ಮ್ಯಾಚ್ ಮಾಡಿ, ಆಕರ್ಷಕ ಲುಕ್ ನೀಡಿದ್ದಾರೆ.
ಹಿರಿಯ ನಟಿ ತಾರಾ ಸೀರೆ ಲವ್
ಸೀರೆಗಳೆಂದರೆ ನನಗೆ ಮೊದಲಿನಿಂದಲೂ ಇಷ್ಟ ಎನ್ನುವ ತಾರಾ ಅವರಿಗೂ ಈ ಹೊಸ ಶೈಲಿಯ ಈ ಶರ್ಟ್ ಸೀರೆ ಸಖತ್ ಇಷ್ಟವಾಗಿದೆ. ಲಕ್ಷ್ಮಿ ಕೃಷ್ಣ ಅವರ ಈ ಸ್ಟೈಲಿಶ್ ಸೀರೆಯು ನನ್ನನ್ನು ಮತ್ತಷ್ಟು ಅಂದವಾಗಿಸಿದೆ ಎಂದು ನಟಿ ತಾರಾ ಅನುರಾಧ ಪ್ರತಿಕ್ರಿಯಿಸಿದ್ದಾರೆ.
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: ICW 2024: ರ‍್ಯಾಂಪ್ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರ?!