Site icon Vistara News

Star Style | ಕೂಲ್‌ ಲುಕ್ಸ್‌ಗೆ ಪ್ರಾಮುಖ್ಯತೆ ನೀಡುವ ಇಶಾನ್‌

Star Style

ಶೀಲಾ ಸಿ. ಶೆಟ್ಟಿ ಬೆಂಗಳೂರು
ಇಶಾನ್‌ ಖಟ್ಟರ್‌ ಬಿಂದಾಸ್‌ ಬಾಲಿವುಡ್‌ ಯಂಗ್‌ ಹಾಗೂ ಎನರ್ಜಟಿಕ್‌ ನಟ. ಈ ಜನರೇಷನ್‌ ಹುಡುಗನಾಗಿರುವುದರಿಂದಲೋ ಏನೋ ಎಲ್ಲದರಲ್ಲೂ ಅವರು ಕೂಲ್‌ ಲುಕ್ಸ್‌ (Star Style) ಹುಡುಕುತ್ತಾರೆ. ಹೆವಿ ಔಟ್‌ಫಿಟ್ಸ್‌ ಎಂದರೆ ಸಾಕು, ದೂರ ಓಡುತ್ತಿದ್ದ ಅವರು ಈಗೀಗ ಫ್ಯಾಷನ್‌ ಶೋ ಅಥವಾ ಫ್ಯಾಷನ್‌ ವೀಕ್‌ಗಳಿಗಾಗಿ ಭಾರಿ ವಿನ್ಯಾಸದ ಎಥ್ನಿಕ್‌ ಉಡುಪುಗಳನ್ನು ಪ್ರಯೋಗಿಸತೊಡಗಿದ್ದಾರಂತೆ.

ಕಂಫರ್ಟಬಲ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌
ನನ್ನ ಫ್ಯಾಷನ್‌ ಸ್ಟೇಟ್‌ಮೆಂಟ್‌ ಕಂಪ್ಲೀಟ್‌ ಕೂಲ್‌ ಆಗಿರುತ್ತದೆ ಎನ್ನುವ ಇಶಾನ್‌ಗೆ ಔಟಿಂಗ್‌ ಹೋಗುವುದು ಪ್ರಿಯವಂತೆ. ಆಗ ಆರಾಮ ಏನಿಸುವಂತಹ ಔಟ್‌ಫಿಟ್‌ಗೆ ಮೊರೆ ಹೋಗುತ್ತಾರಂತೆ. ಅಂತಹ ಸಮಯದಲ್ಲಿ ಫ್ಯಾಷನ್‌ಗಿಂತ ಹೆಚ್ಚಾಗಿ ಕಂಫರ್ಟಬಲ್‌ ಫೀಲ್‌ ನೀಡುವ ಡ್ರೆಸ್‌ಕೋಡ್‌ ಚೂಸ್‌ ಮಾಡುವುದು ಅವರ ಮೊದಲ ಆದ್ಯತೆಯಂತೆ. ಸಿಂಪಲ್‌ ಟೀ ಶರ್ಟ್, ಶಾಟ್ರ್ಸ್, ಸನ್‌ಗ್ಲಾಸ್‌ ಹಾಗೂ ಒಂದು ಸ್ನೀಕರ್‌ ಇದ್ದರೇ ಸಾಕು ಎನ್ನುತ್ತಾರೆ ಇಶಾನ್‌.

ಇದನ್ನೂ ಓದಿ | Star Style | ಟ್ರೆಂಡ್‌ ಸೆಟ್ಟರ್‌ ಆಗಲು ಬಯಸುವ ತೇಜಸ್ವಿನಿ ಶರ್ಮಾ

ಅಣ್ಣನೇ ನನ್ನ ಫ್ಯಾಷನ್‌ ಗೈಡ್‌
ಕಷ್ಟಪಡದೆ ಗ್ಲಾಮರಸ್‌ ಆಗಿ ಕಾಣಬಹುದಾದ ಲುಕ್‌ ಬೆಸ್ಟ್‌ ಎನ್ನುವ ಇಶಾನ್‌ ನಟನಾಗುವ ಮುನ್ನ ಉಡುಪಿಗಾಗಿ ಯಾವತ್ತೂ ತಲೆಕೆಡಿಸಿಕೊಂಡಿರಲಿಲ್ಲವಂತೆ. ಇದೀಗ ನಟನಾದ ಮೇಲೆ ಅಣ್ಣ ಶಾಹಿದ್‌ ಕಪೂರ್‌ರ ಸಲಹೆಯಂತೆ ಫ್ಯಾಷನ್‌ ಹಾಗೂ ಸ್ಟೈಲ್‌ಸ್ಟೇಟ್‌ಮೆಂಟ್‌ಗಳನ್ನು ಮೇಂಟೇನ್‌ ಮಾಡುತ್ತಿದ್ದಾರಂತೆ. ವಿದೇಶಕ್ಕೆ ಹೋದಾಗಲೆಲ್ಲಾ ಅಣ್ಣನೇ ತನ್ನ ಅಭಿರುಚಿಗೆ ಹೊಂದುವ ಇಲ್ಲವೇ ಅವರಿಗೆ ಇಷ್ಟವಾಗುವಂತಹ ಸಾಕಷ್ಟು ಟ್ರೆಂಡಿ ಔಟ್‌ಫಿಟ್‌ ತಂದುಕೊಟ್ಟಿದ್ದಾರಂತೆ.

ಹೊಸ ಕಲರ್ಸ್‌ ಪ್ರಯೋಗ
ಇತ್ತೀಚೆಗೆ ಹೊಸ ಬಣ್ಣಗಳ ಔಟ್‌ಫಿಟ್‌ಗಳನ್ನು ಪ್ರಯೋಗಿಸತೊಡಗಿದ್ದೇನೆ. ಫ್ಯಾಷನ್‌ ವೀಕ್‌ಗಳಲ್ಲಿ ಭಾಗವಹಿಸುವುದು ಸಾಮಾನ್ಯವಾಗಿರುವುದರಿಂದ ಕೊಂಚ ಫ್ಯಾಷನ್‌ ಕಾನ್ಶಿಯಸ್‌ ಆಗಿದ್ದೇನೆ ಎನ್ನುವ ಇಶಾನ್‌, ಹ್ಯಾಂಡ್‌ಸಮ್‌ ಬಾಯ್‌ ಎಂದು ಬಾಲಿವುಡ್‌ಗರಿಂದ ಈಗಾಗಲೇ ಕ್ರೆಡಿಟ್‌ ಪಡೆದುಕೊಂಡಿರುವುದನ್ನು ಮರೆಯುವ ಹಾಗಿಲ್ಲ.

ಇಶಾನ್‌ ಅಭಿರುಚಿಯ ಸ್ಯಾಂಪಲ್ಸ್‌

ಇದನ್ನೂ ಓದಿ | Ramp News | ನೋಡುಗರ ಮನಗೆದ್ದ ಮಕ್ಕಳ ಆಕರ್ಷಕ ಫ್ಯಾಷನ್‌ ಶೋ

Exit mobile version