-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ಸೀಸನ್‌ಗೆ ಸಾಕಷ್ಟು ತಾರೆಯರ ಫ್ಯಾಷನ್ ಬದಲಾಗಿದೆ. ಪರಿಣಾಮ, ಆಯಾ ಹವಾಮಾನಕ್ಕೆ ತಕ್ಕಂತೆ ಅವರು ಧರಿಸುವ ಉಡುಪುಗಳು ಬದಲಾಗುತ್ತಿವೆ. ಇದೀಗ ಈ ಸಾಲಿಗೆ ಸ್ಯಾಂಡಲ್‌ವುಡ್ ಹಾಗೂ ಬಹುಭಾಷಾ ತಾರೆ ರಾಯ್ ಲಕ್ಷ್ಮಿ ಅವರು ಸೇರಿದ್ದಾರೆ. ಸಮ್ಮರ್ ಔಟ್‌ಫಿಟ್ಸ್‌ಗೆ ಸೈ ಎಂದಿದ್ದಾರೆ.
ಸಮ್ಮರ್‌ಗೆ ಟೊರ್ನ್ ಜೀನ್ಸ್
ನನ್ನದು ಮಿನಿಮಲ್ ಫ್ಯಾಷನ್ ಈ ಸೀಸನ್ ಮಂತ್ರ ಎನ್ನುವ ಅವರ ಚಾಯ್ಸ್ ಬಿಂದಾಸ್ ಕೆಟಗರಿಗೆ ಸೇರಿದೆ. ಒಮ್ಮೊಮ್ಮೆ ಡಿಸೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಅವರು ಕೆಲವೊಮ್ಮೆ ಹಾಟ್ ಆಗಿಯೂ ಕಾಣಿಸಿಕೊಂಡು, ಅಭಿಮಾನಿಗಳನ್ನು ಆಗಾಗ್ಗೆ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಅವರು ಟ್ರಾವೆಲ್ ಸಮಯದಲ್ಲಿ ಧರಿಸಿದ್ದ ಟೊರ್ನ್ ಜೀನ್ಸ್, ಅವರ ಸೋಷಿಯಲ್ ಮೀಡಿಯಾ ಅಕೌಂಟನ್ನು ಕಾಮೆಂಟ್‌ಗಳಿಂದ ತುಂಬಿಸಿತ್ತಂತೆ. ಇದಕ್ಕೆ ಪೂರಕ ಎಂಬಂತೆ, ರಾಯ್ ಲಕ್ಷ್ಮಿ, ನನ್ನದು ಮಾತ್ರ ಬಿಂದಾಸ್ ಫ್ಯಾಷನ್ ಎಂದು ಮುಂಬಯಿಯಲ್ಲಿ ಆನ್‌ಲೈನ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಬ್ಲ್ಯೂ ಟ್ರೆಂಡಿ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ರಾಯ್ ಲಕ್ಷ್ಮಿ
ಅಂದಹಾಗೆ, ರಾಯ್ ಲಕ್ಷ್ಮಿ ಮೂಲತಃ ಸ್ಯಾಂಡಲ್‌ವುಡ್ ತಾರೆ. ಕನ್ನಡ , ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವುದು ಮಾತ್ರವಲ್ಲದೇ ಇದೀಗ ಅವರ ಬಾಲಿವುಡ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮುಂಬಯಿಯಲ್ಲಿ ಬಿಝಿಯಾಗಿದ್ದಾರೆ. ನಿನ್ನೆಯಷ್ಟೇ ನಟಿ ಕಾಜಲ್‌ರೊಂದಿಗೆ ಸಿನಿಮಾ ಕುರಿತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರಾಯ್ ಲಕ್ಷ್ಮಿಯವರು ಈ ಸೀಸನ್‌ನ ಟ್ರೆಂಡಿ ಬ್ಲ್ಯೂ ಗ್ಲಾಮರಸ್ ಉಡುಪಿನಲ್ಲಿದ್ದರು. ಸಮ್ಮರ್ ಫ್ಯಾಷನ್‌ಗೆ ಸೂಟ್ ಆಗುವಂತಹ ಶೇಡ್ ಹಾಗೂ ವಿನ್ಯಾಸದ ಔಟ್‌ಫಿಟ್‌ನಲ್ಲಿ ಎಲ್ಲರ ಗಮನಸೆಳೆದರು.
ಇದನ್ನೂ ಓದಿ: Summer Fashion: ಬೇಸಿಗೆ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಹುಡುಗಿಯರ ಫಂಕಿ ಪ್ರಿಂಟೆಡ್ ಕ್ರಾಪ್ ಶರ್ಟ್ಸ್
ಪ್ಲೋರಲ್ ಪ್ರಿಂಟ್ಸ್ ಪ್ರಿಯೆ
ರಾಯ್ ಲಕ್ಷ್ಮಿ ಫ್ಲೋರಲ್ ಪ್ರಿಂಟ್ಸ್ ಪ್ರಿಯೆ ಎನ್ನಬಹುದು. ಯಾಕೆಂದರೆ, ಅವರು ಹಾಲಿಡೇ ಔಟ್‌ಫಿಟ್‌ಗಳಲ್ಲಿ ಈ ವಿನ್ಯಾಸದ ಔಟ್‌ಫಿಟ್‌ಗಳಲ್ಲೇ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಾರೆ. ಇನ್ನು ಬೀಚ್‌ವೇರ್‌ಗಳಲ್ಲೂ ಅಷ್ಟೇ! ಈ ಪ್ರಿಂಟ್ಸ್ ಉಡುಗೆಯಲ್ಲೆ ಹಲವಾರು ಬಾರಿ ಕಾಣಿಸಿಕೊಂಡಿರುವುದನ್ನು ಗಮನಿಸಬಹುದು.
ಸ್ಟೈಲಿಸ್ಟ್‌ಗಳ ಪ್ರಕಾರ, ರಾಯ್ ಲಕ್ಷ್ಮಿ ಸಖತ್ ಫ್ಯಾಷೆನಬಲ್ ತಾರೆ. ಸೀಸನ್‌ಗೆ ತಕ್ಕಂತೆ ಸ್ಟೈಲಿಶ್ ಆಗಿದ್ದಾರೆ. ಅವರ ಪರ್ಸನಾಲಿಟಿಯೂ ಕೂಡ ಹಾಗೆಯೇ ಇದೆ. ಯಾವುದೇ ಇಮೇಜ್ ಬದಲಿಸುವ ಉಡುಪು ಕೂಡ ಮ್ಯಾಚ್ ಆಗಬಲ್ಲದು. ಹಾಗಿದೆ ಅವರ ಬಾಡಿ ಮಾಸ್ ಇಂಡೆಕ್ಸ್ ಎನ್ನುತ್ತಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)