ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಶುಭಾ ರಕ್ಷಾ ಉಟ್ಟ ಜಾರ್ಜೆಟ್ ಫ್ರಿಲ್ ರೆಡ್ ಫ್ಲೋರಲ್ ಸೀರೆ ಇದೀಗ ಸೀರೆ ಪ್ರಿಯರನ್ನು ಆಕರ್ಷಿಸಿದೆ. ಈ ಬಿರು ಬೇಸಿಗೆಯಲ್ಲೂ (Star Summer Saree Fashion) ಕಂಫರ್ಟಬಲ್ ಲುಕ್ ಹಾಗೂ ಫೀಲ್ ಎರಡನ್ನೂ ನೀಡಿರುವ ಈ ಸೀರೆಗೆ ಖುದ್ದು ನಟಿ ಶುಭಾ ಅವರೇ ಫಿದಾ ಆಗಿದ್ದಾರೆ. ಅಷ್ಟೇಕೆ! ಅತ್ಯಾಕರ್ಷಕವಾಗಿ ಕಾಣಿಸುತ್ತಿದ್ದಾರೆ. ಟ್ರೆಂಡಿಯಾಗಿರುವ ದೆವ್ನಾ ಸ್ಟಿಚ್ಚಿಂಗ್ ಸ್ಟುಡಿಯೋ ಲೆಬೆಲ್‌ನ ಸೆಲೆಬ್ರೆಟಿ ಡಿಸೈನರ್ ನೈನಾ ಕುಮಾರ್ ಡಿಸೈನ್ ಮಾಡಿರುವ ಈ ಸೀರೆ ಸದ್ಯ ಸೀಸನ್‌ನ ಹಾಟ್ ಪಿಕ್‌ಗಳಲ್ಲಿ ಒಂದಾಗಿದೆ. ಈ ಸಮ್ಮರ್ ಸೀಸನ್‌ಗೆ ಮ್ಯಾಚ್ ಆಗುವಂತಹ ಫ್ಯಾಬ್ರಿಕ್ ಜಾರ್ಜೆಟ್‌ನಲ್ಲಿ ಫ್ಲೋರಲ್ ಪ್ರಿಂಟ್‌ನಲ್ಲಿ, ಫ್ರಿಲ್ ಡಿಸೈನ್‌ನಲ್ಲಿ ನಟಿ ಶುಭಾ ಅವರನ್ನು ಕಂಪ್ಲೀಟ್ ಫ್ಯಾಷೆನಬಲ್ ಆಗಿಸಿದೆ.
ಏನಿದು ಜಾರ್ಜೆಟ್ ಫ್ರಿಲ್ ಸೀರೆ?
ಸಾಮಾನ್ಯವಾಗಿ ಎಲ್ಲಾ ಸೀರೆಗಳು ಸಾದಾ ಡಿಸೈನ್ ಹೊಂದಿರುತ್ತವೆ. ಅಂದರೆ, ಈ ಸಿರೆಯಲ್ಲಿ ಮಾತ್ರ, ಫಾಲ್ ಹಾಕುವ ಜಾಗದಲ್ಲಿ, ಇದೇ ವರ್ಣದ ಫ್ಯಾಬ್ರಿಕ್‌ನಲ್ಲಿ ಫ್ರಿಲ್ ಡಿಸೈನ್ ಮಾಡಲಾಗಿರುತ್ತದೆ. ಈ ಜಾರ್ಜೆಟ್ ಫ್ಯಾಬ್ರಿಕ್‌ನ ಫ್ರಿಲ್ ಸೀರೆಗಳು ಸಮ್ಮರ್‌ನಲ್ಲಿ ಸೆಕೆಯಾಗಿಸುವುದಿಲ್ಲ. ನೋಡಲು ತೆಳುವಾಗಿರುತ್ತವೆ. ಅಲ್ಲದೇ ಲೈಟ್‌ವೈಟ್ ಕೂಡ ಆಗಿವೆ. ಹಾಗಾಗಿ ಬಹಳಷ್ಟು ಮಾನಿನಿಯರು ಈ ಫ್ಯಾಬ್ರಿಕ್ ಚೂಸ್ ಮಾಡುತ್ತಿರುವುದು ಇದೀಗ ಸಾಮಾನ್ಯವಾಗಿದೆ. ಇನ್ನು ಫ್ರಿಲ್ ಸೀರೆ ರೆಡಿಮೇಡ್ ಡಿಸೈನ್‌ನಲ್ಲಿ ಇತ್ತೀಚೆಗೆ ದೊರೆಯುತ್ತಿದೆ. ಇದನ್ನು ಫ್ಯಾಬ್ರಿಕ್ ಆಯ್ಕೆ ಮಾಡಿ ಕೂಡ ಡಿಸೈನ್ ಮಾಡಿಸಬಹುದು.
ಡಿಸೈನರ್ ನೈನಾ ಸೀರೆ ಡಿಸೈನ್
ಸೆಲ್ಫ್ ಶೇಡ್ ಹಾಗೂ ಫ್ಲೋರಲ್ ಪ್ರಿಂಟೆಡ್‌ನವು ಈ ಸೀಸನ್‌ನಲ್ಲಿ ಹೆಚ್ಚು ಟ್ರೆಂಡಿಯಾಗಿವೆ ಎನ್ನುತ್ತಾರೆ ಡಿಸೈನರ್ ನೈನಾ. ಅವರ ಪ್ರಕಾರ, ಈ ಸೀರೆಗಳು ಫ್ಯಾಷೆನಬಲ್ ಆಗಿ ಕಾಣಿಸುವುದಲ್ಲದೇ ನೋಡಲು ಕೂಡ ಅಂದವಾಗಿ ಬಿಂಬಿಸುತ್ತವೆ.
ನಟಿ ಶುಭಾ ರಕ್ಷಾ ಸೀರೆ ಲವ್
ಇನ್ನು, ಬಹುಭಾಷಾ ತಾರೆ ಹಾಗೂ ಮಾಡೆಲ್ ಶುಭಾ ರಕ್ಷಾಗೆ ಈ ಸೀರೆ ಸಖತ್ ಇಷ್ಟವಾಗಿದೆಯಂತೆ. ಉಡುವುದು ಸುಲಭ. ಇನ್ನು ಕ್ಯಾರಿ ಮಾಡುವುದು ಕೂಡ ಸುಲಭ. ಎಲ್ಲದಕ್ಕಿಂತ ಹೆಚ್ಚಾಗಿ ಲೈಟ್‌ವೈಟ್. ಹಾಗಾಗಿ ಈ ಸೀರೆ ಈ ಸೀಸನ್‌ಗೆ ಸೂಕ್ತವಾಗಿದೆ. ನನಗಂತೂ ತೀರಾ ಇಷ್ಟವಾಗಿದೆ ಎನ್ನುತ್ತಾರೆ ಅವರು.
ಇನ್ನು ಕೆಲವು ಫ್ರಿಲ್ ಸೀರೆಗಳು ರೆಡಿಯಾಗಿಯೂ ದೊರಕುತ್ತವೆ. ಅದನ್ನು ಸುತ್ತಿಕೊಂಡರಾಯಿತಷ್ಟೇ, ಬ್ಯೂಟಿಫುಲ್ ಆಗಿ ನೀವು ಕಾಣಿಸುತ್ತಿರಾ! ಎನ್ನುತ್ತಾರೆ ಶುಭಾ.
ಫ್ರಿಲ್ ಸೀರೆಗೆ ಶುಭಾ ರಕ್ಷಾ ಟಿಪ್ಸ್
- ಫ್ರಿಲ್ ಸೀರೆಗೆ ಹೆಚ್ಚು ಆಕ್ಸೆಸರೀಸ್ ಧರಿಸುವ ಅಗತ್ಯವಿಲ್ಲ.
- ಫ್ಲೋರಲ್ ಪ್ರಿಂಟ್ಸ್ ಆಯ್ಕೆ ಮಾಡುವುದು ಉತ್ತಮ.
- ಈ ಸೀರೆ ಸೆಲೆಬ್ರೆಟಿ ಲುಕ್ ನೀಡುತ್ತದೆ.
- ಸೆಲ್ಫ್ ಫ್ರಿಲ್ ಹಾಗೂ ಮಾನೋಕ್ರೋಮ್ ಶೇಡ್ಗೆ ತಕ್ಕಂತೆ ಮೇಕಪ್ ಮಾಡಿ.
- ಹೇರ್ಸ್ಟೈಲ್ ಮ್ಯಾಚ್ ಆಗುವುದು ಅಗತ್ಯ.
- ಹೆವ್ವಿ ಮೇಕಪ್ ನಾಟ್ ಓಕೆ.
- ಲೈಟ್‌ವೈಟ್ ಸೀರೆ ಇದಾಗಿರುವುದರಿಂದ ಸುಲಭವಾಗಿ ಕ್ಯಾರಿ ಮಾಡಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)