ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಮೇಘಾಶ್ರೀ ಧರಿಸಿರುವ ಈ ಸಮ್ಮರ್ ಸೀರೆ, ಇದೀಗ ಸೀರೆ ಪ್ರಿಯ (Star Summer Saree Fashion) ಮಾನಿನಿಯರನ್ನು ಸೆಳೆದಿದೆ. ಲೈಟ್ವೈಟ್ ಜೊತೆಗೆ ಸೀಸನ್‌ಗೆ ತಕ್ಕಂತಿರುವ ಈ ಪಾರದರ್ಶಕ ತಿಳಿ ನೀಲಿ ಜಾರ್ಜೆಟ್ ಸೀರೆ ಸದ್ಯ ಟ್ರೆಂಡಿಯಾಗಿದೆ. ನಟಿ ಮೇಘಾ ಶ್ರೀ ಸಮ್ಮರ್ ಸೀರೆ ಲವ್: ಮೊದಲಿನಿಂದಲೂ ಸೀರೆಯೆಂದರೇ ನನಗೆ ತುಸು ಪ್ರೇಮ ಹೆಚ್ಚಾಗಿಯೇ ಇದೆ. ಇನ್ನು, ನಾನು ಧರಿಸಿರುವ ತಿಳಿ ನೀಲಿ ಬಣ್ಣದ ಜಾರ್ಜೆಟ್ ಸೀರೆ ಈ ಸೀಸನ್‌ಗೆ ಬೆಸ್ಟ್ ಆಯ್ಕೆ ಎನ್ನಬಹುದು. ಈ ಸೀಸನ್‌ನಲ್ಲಿ ನಾವು ಲೆನಿನ್, ಕಾಟನ್, ಶಿಫಾನ್, ಜಾರ್ಜೆಟ್ ಸಿಂಪಲ್ ಸೀರೆಗಳನ್ನು ಆಯ್ಕೆ ಮಾಡಿಕೊಂಡಾಗ ಆಕರ್ಷಕವಾಗಿ ಕಾಣಲು ಸಾಧ್ಯ. ಮನಸ್ಸಿಗೆ ಉಲ್ಲಾಸ ನೀಡುವ ಶೇಡ್‌ಗಳು ಕೂಡ ನಮ್ಮನ್ನು ಮತ್ತಷ್ಟು ಅಂದವಾಗಿ ಬಿಂಬಿಸಬಲ್ಲವು” ಎನ್ನುತ್ತಾರೆ ನಟಿ ಮೇಘಾ ಶ್ರೀ. ಈ ಕುರಿತಂತೆ ಸೀರೆ ಎಕ್ಸ್‌ಫರ್ಟ್ಸ್ ಜೊತೆ ಸೇರಿ ಒಂದಿಷ್ಟು ಸಿಂಪಲ್ ಟಿಪ್ಸ್ ಕೂಡ ನೀಡಿದ್ದಾರೆ. ಸೋ, ನೀವೂ ಕೂಡ ನಟಿ ಮೇಘಾ ಶ್ರೀ ಯಂತೆ ಈ ಸೀಸನ್‌ನಲ್ಲೂ ಗ್ಲಾಮರಸ್ ಆಗಿ ಕಾಣಿಸಬೇಕೇ! ಹಾಗಾದಲ್ಲಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ನೋಡಿ.
ಟ್ರೆಂಡಿ ಸೀರೆ ಆಯ್ಕೆ ಮಾಡಿ
ಈ ಸಮ್ಮರ್ ಸೀಸನ್‌ನಲ್ಲಿ ಕಾಟನ್, ಲೆನಿನ್, ಶಿಫಾನ್, ಜಾರ್ಜೆಟ್ ಸೇರಿದಂತೆ ಆದಷ್ಟೂ ಟ್ರೆಂಡಿ ಸೀರೆ ಆಯ್ಕೆ ಮಾಡಿ. ಅದರಲ್ಲೂ ದಪ್ಪನೆಯ ಫ್ಯಾಬ್ರಿಕ್‌ನ ಸೀರೆ ಬೇಡವೇ ಬೇಡ! ಬದಲಿಗೆ ತೆಳುವಾದ ಅದರಲ್ಲೂ ಬ್ರಿಥಬಲ್ ಸೀರೆಯನ್ನು ಸೆಲೆಕ್ಟ್ ಮಾಡಿ ಉಡಿ. ಆಗ ಟ್ರೆಂಡ್‌ಗೆ ತಕ್ಕಂತೆ ಕಾಣಿಸಬಹುದು.
ಲೈಟ್ ಶೇಡ್ಸ್/ಪಾಸ್ಟೆಲ್ ಶೇಡ್ಸ್ ಚೂಸ್ ಮಾಡಿ
ಈ ಬೇಸಿಗೆಯಲ್ಲಿ ಆದಷ್ಟೂ ಡಾರ್ಕ್ ಕಲರ್ ಸೀರೆಗಳಿಗಿಂತ ಲೈಟ್ ಶೇಡ್‌ನ ಸೀರೆಗಳನ್ನು ಚೂಸ್ ಮಾಡಿ. ಪಾಸ್ಟೆಲ್ ಶೇಡ್ ಈ ಸೀಸನ್‌ನ ಟ್ರೆಂಡ್‌ನಲ್ಲಿದೆ. ಇವು ನೋಡಲು ಫ್ರೆಶ್ ಲುಕ್ ನೀಡುತ್ತವೆ. ಹಾಗಾಗಿ ಇಂತಹ ಶೇಡ್‌ನ ಸೀರೆಗಳನ್ನೇ ಪ್ರಿಫರ್ ಮಾಡಿ.
ಲೈಟ್‌ವೈಟ್ ಸೀರೆ ಸೆಲೆಕ್ಷನ್
ಬೇಸಿಗೆಯ ಸುಡು ಬಿಸಿಲಿಗೆ ನೀವು ದಪ್ಪನೆಯ ಫ್ಯಾಬ್ರಿಕ್ ಅಥವಾ ಭಾರವಾದ ಸೀರೆ ಉಟ್ಟರೇ ಚೆನ್ನಾಗಿ ಕಾಣಿಸುವುದಿರಲಿ, ಅದನ್ನು ಕ್ಯಾರಿ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಆದಷ್ಟೂ ಲೈಟ್‌ವೈಟ್ ಸೀರೆ ಆರಿಸಿ, ಅದನ್ನೇ ಉಟ್ಟುಕೊಳ್ಳಿ. ಇವು ಉಟ್ಟಾಗ ಸುಲಭವಾಗಿ ನಡೆದಾಡಬಹುದು. ಸೆಕೆಯಾಗದು ಹಾಗೂ ಕ್ಯಾರಿ ಮಾಡಲು ಸುಲಭ. ಪರಿಣಾಮ, ನೋಡಲು ಚೆನ್ನಾಗಿ ಕಾಣಿಸುವಿರಿ.
ಬ್ಲೌಸ್ ಆಯ್ಕೆ ಸೀಸನ್‌ಗೆ ತಕ್ಕಂತಿರಲಿ
ಉಡುವ ಸೀರೆಯ ಬ್ಲೌಸ್ ಡಿಸೈನ್ ಆಯ್ಕೆ ಕೂಡ ಸೀಸನ್‌ಗೆ ತಕ್ಕಂತಿರಬೇಕು. ಯಾಕೆಂದರೇ, ಈ ಸೀಸನ್‌ನಲ್ಲಿ ಯಾವುದೇ ಕಾರಣಕ್ಕೂ ಫುಲ್ ಸ್ಲೀವ್, ತ್ರಿ ಫೋರ್ತ್ ಹಾಗೂ ಕೈಗಳು ಕವರ್ ಆಗುವಂತಹ ಬ್ಲೌಸ್ ಡಿಸೈನ್ ಬೇಡ. ಸ್ಲಿವ್‌ಲೆಸ್ ಅಥವಾ ಮೆಗಾ ಸ್ಲೀವ್ ಆದಲ್ಲಿ ಉತ್ತಮ. ನೋಡಲು ಟ್ರೆಂಡಿಯಾಗಿ ಹಾಗೂ ಗ್ಲಾಮರಸ್ ಆಗಿ ಕಾಣಿಸುತ್ತವೆ.
ಡ್ರೇಪಿಂಗ್/ಸ್ಟೈಲಿಂಗ್ ಸಿಂಪಲ್ಲಾಗಿರಲಿ
ಉಡುವ ಸೀರೆಯ ಡ್ರೇಪಿಂಗ್ ಸಿಂಪಲ್ಲಾಗಿರಲಿ. ಆದಷ್ಟೂ ನೀಟಾಗಿ ಉಡುವುದು ಉತ್ತಮ. ಹೆಚ್ಚು ಕಾಂಪ್ಲೀಕೇಟೆಡ್ ಡ್ರೇಪಿಂಗ್ ಹಾಗೂ ಸ್ಟೈಲಿಂಗ್ ಮಾಡುವುದು ಬೇಡ. ಇನ್ನು ಇದರೊಂದಿಗೆ ಮೇಕಪ್ ಕೂಡ ತಿಳಿಯಾಗಿರಲಿ. ಮ್ಯಾಚ್ ಆಗುವ ಆಕ್ಸೆಸರೀಸ್ ಇರಲಿ. ಹೇರ್‌ಸ್ಟೈಲ್ ಹೊಂದುವಂತಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Actress Saree Fashion: ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ಸೀರೆಯಲ್ಲಿ ಮಿಂಚಿದ ಕನ್ನಡದ ನಟಿ