Site icon Vistara News

Star Winter Fashion | ಪರಿಸರ ಸ್ನೇಹಿ ಕ್ಯಾಲೆಂಡರ್‌ ಡ್ರೆಸ್‌ನಲ್ಲಿ ನಟಿ ಸೋನಂ ಕಪೂರ್‌

Star Winter Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ಫ್ಯಾಷಷೆನಬಲ್‌ ಹಾಗೂ ಸ್ಟೈಲಿಶ್‌ ನಟಿ (Star Winter Fashion ) ಎಂದೇ ಖ್ಯಾತಿ ಗಳಿಸಿರುವ ನಟಿ ಸೋನಂ ಕಪೂರ್‌ ಕ್ಯಾಲೆಂಡರ್‌ ಡ್ರೆಸ್‌, ಈ ಬಾರಿಯ ವಿಂಟರ್‌ ಲೇಯರ್‌ ಲುಕ್‌ಗೆ ಸೇರಿದೆ. ಬಿಂದಾಸ್‌ ಏರ್‌ಪೋರ್ಟ್ ಲುಕ್‌ನಲ್ಲಿ ಕಾಣಿಸಿಕೊಳ್ಳದೆ, ಪರಿಸರ ಸ್ನೇಹಿ ದೋ ತಕ್‌ಹೇ ಬ್ರ್ಯಾಂಡ್‌ನ ಕ್ಯಾಲೆಂಡರ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡ ನಟಿ ಸೋನಂ ಕಪೂರ್‌, ಮಗುವಾದ ನಂತರ ಮೊತ್ತ ಮೊದಲ ಬಾರಿಗೆ ದಿಲ್ಲಿಯ ಕಾರ್ಯಕ್ರಮವೊಂದಕ್ಕೆ ಹೋಗುವಾಗ ಸಾರ್ವಜನಿಕವಾಗಿ ಹೀಗೆ ಕಾಣಿಸಿಕೊಂಡರು. ವಿಂಟರ್‌ ಸೀಸನ್‌ಗೆ ಪೂರಕ ಎಂಬಂತೆ, ಈ ಕ್ಯಾಲೆಂಡರ್‌ ಡ್ರೆಸ್‌ ಮೇಲೆ ಮತ್ತೊಂದು ಶಾಪ್‌ಸ್ಟಾಪಲ್‌ ಬ್ರ್ಯಾಂಡ್‌ನ ಓವರ್‌ಕೋಟ್‌ ಧರಿಸಿ ಮಲ್ಟಿ ಲೇಯರ್‌ಲುಕ್‌ಗೆ ನಾಂದಿ ಹಾಡಿದರು.

ಏನಿದು ಕ್ಯಾಲೆಂಡರ್‌ ಡ್ರೆಸ್‌ ?
ಆಯಾ ಫ್ಯಾಷನ್‌ ಪ್ರೇಮಿಗೆ ಪ್ರಿಯವಾಗುವಂತೆ ಕಸ್ಟಮೈಸ್ಡ್‌ ಮಾಡಿದ ಪ್ರಿಂಟ್ಸ್‌ ಇರುವಂತಹ ಉಡುಪುಗಳಿವು. ನಾನಾ ಭಾಷೆಯ ಅಕ್ಷರಗಳು, ಪದಗಳು ಇಲ್ಲವೇ ಗಣಿತದ ಅಂಕೆಗಳು ಇರುವಂತಹ ಪ್ರಿಂಟೆಡ್‌ ಡ್ರೆಸ್‌ಗಳಿವು. ಅಂದಹಾಗೆ, ಇಂತಹ ವೈಬ್ರೆಂಟ್‌ ಶೇಡ್‌ನ ಉಡುಪುಗಳು ಹೆಚ್ಚಾಗಿ ಸಮ್ಮರ್‌ ಹಾಗೂ ಸ್ಪ್ರಿಂಗ್‌ ಸೀಸನ್‌ನಲ್ಲಿ ಚಾಲ್ತಿಗೆ ಬರುತ್ತವೆ. ಆದರೆ, ನಟಿ ಸೋನಂ ಕಪೂರ್‌, ತಮ್ಮ ಪ್ರಯೋಗಾತ್ಮಕ ವಿಂಟರ್‌ ಫ್ಯಾಷನ್‌ಗೆ ಸೇರಿಸಿ, ಧರಿಸಿರುವುದು ಚಳಿಗಾಲದ ವಿಂಟರ್‌ ಲೇಯರ್‌ ಲುಕ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ | Weekend style | ಮಾಡೆಲಿಂಗ್‌ನಿಂದ ಡಿಸೈನಿಂಗ್‌ವರೆಗೆ ಹರ್ಷ್ ಬೇಡಿ ಫ್ಯಾಷನ್‌ ಜರ್ನಿ

ಪರಿಸರಸ್ನೇಹಿ ಉಡುಪು ಧರಿಸಿದ ಸೋನಂ
ಸೋನಂ ಧರಿಸಿದ್ದ ಈ ಕ್ಯಾಲೆಂಡರ್‌ ಡ್ರೆಸ್‌, ಪರಿಸರ ಸ್ನೇಹಿ ಉಡುಪಾಗಿದ್ದು, ನಾನಾ ಭಾಷೆಯ ಅಕ್ಷರಗಳನ್ನು ಒಳಗೊಂಡಿದೆ. ಮುಂಬಯಿಯ ದೋ ತಕ್‌ಹೇ ಡಿಸೈನರ್‌ ಬ್ರ್ಯಾಂಡ್‌ನ ಈ ಉಡುಪುಗಳು ಕೇವಲ ಕ್ಯಾಲೆಂಡರ್‌ ಪ್ಯಾಟರ್‌ನಲ್ಲಿ ಮಾತ್ರವಲ್ಲ, ದೇಸಿ ಪ್ರಿಂಟ್ಸ್‌ ಹೊಂದಿದ ಕಾರ್ಟೂನ್‌, ವಚ್ರ್ಯೂವಲ್‌ ಡಿಸೈನ್ಸ್‌, ಕಣ್ಣಿಗೆ ಕಾಣುವ ಕಲರ್‌ ವೈಬ್ರೆಂಟ್‌ ಶೇಡ್‌ನಲ್ಲೂ ಆಗಾಗ ಬಿಡುಗಡೆಗೊಳ್ಳುತ್ತಿರುತ್ತವೆ. ಈ ಉಡುಪುಗಳು ಕಂಪ್ಲೀಟ್‌ ಎಕೋ ಫ್ರೆಂಡ್ಲಿಯಾಗಿದ್ದು, ನಟ ರಣವೀರ್‌ ಸಿಂಗ್‌, ಅನಿಲ್‌ ಕಪೂರ್‌, ಸಮಂತಾ, ಶಿರಿನ್‌ ಸೇರಿದಂತೆ ನಾನಾ ತಾರೆಯರು ಈಗಾಗಲೇ ಇವನ್ನು ಧರಿಸಿ ಹಾಡಿ ಹೊಗಳಿದ್ದಾರೆ. ಮುಂಬಯಿಯ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ನಮ್ಮ ಡಿಸೈನರ್‌ಗಳು ಉಡುಪಿಗಾಗಿ ದೇಸಿ ಪ್ರಿಂಟ್ಸ್‌ ಸಿದ್ಧಪಡಿಸುತ್ತಾರೆ. ಇದಕ್ಕಾಗಿ ಕೆಮಿಕಲ್‌ ಫ್ರೀ ಡೈಗಳನ್ನು ಬಳಸಲಾಗುತ್ತದೆ ಎಂದಿದ್ದಾರೆ ಬ್ರಾಂಡ್‌ನ ಸಹ-ಸಂಸ್ಥಾಪಕರಾದ ಜುಹಿ ಮೆಲ್ವಾನಿ ಹಾಗೂ ಮನಿಶಾ ಮೆಲ್ವಾನಿ.

ವಿಂಟರ್‌ ಸೀಸನ್‌ನಲ್ಲಿ ಮಲ್ಟಿಪಲ್‌ ಲೇಯರ್‌ ಲುಕ್‌ಗೆ ಹಲೋ ಹೇಳಿದ ಸೋನಂ, ಕ್ಯಾಲೆಂಡರ್‌ ಡ್ರೆಸ್‌ ಕಾನ್ಸೆಪ್ಟ್‌ಗೆ ರಿಯಾ ಹಾಗೂ ಸಾನ್ಯಾ ಸ್ಟೈಲಿಂಗ್‌ ಮಾಡಿರುವುದು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | k–pop Stars Fashion | ಕೆ-ಪಾಪ್‌ ಸ್ಟಾರ್ಸ್ ಕ್ರೇಝಿ ಫ್ಯಾಷನ್‌ಗೆ ಯಂಗ್‌ಸ್ಟರ್ಸ್ ಫಿದಾ

Exit mobile version