ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಸೀಸನ್‌ಗೆ (Star winter Fashion) ತಕ್ಕಂತೆ ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾತ್ಸವ್ (Shanvi Srivastava) ಫ್ಯಾಷನ್ ಬದಲಾಗಿದೆ. ಮನಮೋಹಕವಾಗಿದೆ. ಹೌದು. ಈ ಸೀಸನ್‌ಗೆ ಹೊಂದುವಂತಹ ಗ್ಲಾಮರಸ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಇವರ ಈ ಫ್ಯಾಷನ್ ಸ್ಟೇಟ್‌ಮೆಂಟ್‌ಗೆ ಅವರ ಫ್ಯಾಷನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಅವರ ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು ಫಾಲೋ ಮಾಡತೊಡಗಿದ್ದಾರೆ.
ಫ್ಯಾಷನ್ ವಿಮರ್ಶಕರ ರಿವ್ಯೂ
ಫ್ಯಾಷನ್ ವಿಮರ್ಶಕರ ಪ್ರಕಾರ, ನಟಿ ಶಾನ್ವಿ ಅವರು ಫ್ಯಾಷನ್ ಟ್ರೆಂಡ್ ಸೆಟ್ ಮಾಡುವ ನಟಿ. ತಮ್ಮ ಪರ್ಸನಾಲಿಟಿಗೆ ತಕ್ಕಂತೆ ಔಟ್‌ಫಿಟ್ ಧರಿಸುವ ನಟಿ. ಮಾಡರ್ನ್ ಉಡುಪಾಗಲಿ ಅಥವಾ ಟ್ರೆಡಿಷನ್ ಆಗಲಿ ಎಲ್ಲದರಲ್ಲೂ ಆಕರ್ಷಕವಾಗಿ ಕಾಣಿಸಿಕೊಂಡು ಟ್ರೆಂಡ್ ಸೆಟ್ಟರ್ ಆಗುವ ನಟಿ ಎನ್ನಬಹುದು. ಇನ್ನು ಸೀಸನ್ ವಿಷಯಕ್ಕೆ ಬಂದಲ್ಲಿ, ಈ ಸೀಸನ್‌ನಲ್ಲಿ ಯಾವ ಔಟ್‌ಫಿಟ್‌ಗೆ ಪ್ರಾಮುಖ್ಯತೆ ನೀಡಬೇಕು. ಅದು ಗ್ಲಾಮರಸ್ ಆಗಿಯೂ ಕಾಣಬೇಕು. ಲೇಯರ್ ಲುಕ್ ಇಲ್ಲದೇ ವಾವ್! ಎನ್ನವಂತಿರಬೇಕು ಎಂಬುದನ್ನು ತಿಳಿದಾಕೆ. ಹಾಗಾಗಿ ಇವರ ಇತ್ತೀಚಿನ ಸ್ಟೈಲ್ ಸ್ಟೇಟ್‌ಮೆಂಟ್‌ಗಳು ಎಲ್ಲರನ್ನು ಸೆಳೆಯುತ್ತಿವೆ. ಜತೆಗೆ ಈ ಜನರೇಷನ್‌ನ ಫ್ಯಾಷನ್ ಪ್ರಿಯರ ಮನ ಗೆದ್ದಿವೆ ಎಂದು ರಿವ್ಯೂ ನೀಡುತ್ತಾರೆ.
ಇದನ್ನೂ ಓದಿ: Winter Hair styles : ಚಳಿಗಾಲದಲ್ಲಿ ಆಕರ್ಷಕವಾಗಿ ಕಾಣುವ 3 ಸಿಂಪಲ್ ಹೇರ್‌ಸ್ಟೈಲ್ಸ್
ಶಾನ್ವಿ ವಿಂಟರ್ ಫ್ಯಾಷನ್‌ನಲ್ಲಿ ಏನಿದೆ?
ಕ್ರಾಪ್ ಸ್ವೆಟರ್ಸ್, ಫುಲ್ ಸ್ಲೀವ್ ಬಾಡಿಕಾನ್ ಡ್ರೆಸ್, ಫ್ರಾಕ್, ಫುಲ್ ಸ್ಲೀವ್ ವಿ ನೆಕ್ ಟಾಪ್ಸ್, ಟ್ರೆಂಚ್ ಕೋಟ್‌ಗಳು ಸೇರಿವೆ. ಇನ್ನು ಅವರ ಅಮೆರಿಕಾ ಶೂಟಿಂಗ್ ಹಾಲಿಡೇಯಲ್ಲಿ ಈ ಸೀಸನ್ ಫ್ಯಾಷನ್ ಲುಕ್ ಕಾಣಬಹುದು.
ಶಾನ್ವಿ ಫ್ಯಾಷನ್ ಲುಕ್‌ಗೆ ಸ್ಟೈಲಿಸ್ಟ್‌ಗಳ ಟಿಪ್ಸ್
ನಟಿ ಶಾನ್ವಿಯಂತೆ ವಿಂಟರ್ ಫ್ಯಾಷನ್ ಲುಕ್ ಪಡೆಯುವುದು ತೀರಾ ಸುಲಭ. ಯಾಕೆಂದರೇ ಅವರು ಲೇಯರ್ ಲುಕ್‌ಗಿಂತ ಸಿಂಪಲ್ ಔಟ್‌ಫಿಟ್‌ಗಳಲ್ಲೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಟ್ರೆಂಡ್‌ನಲ್ಲಿರುವ ಕ್ರಾಪ್ ಸ್ವೆಟರ್ ಹಾಗೂ ನಿಟ್ಟೆಡ್ ಸ್ವೆಟರ್‌ಗಳನ್ನು ಜೀನ್ಸ್ ಮೇಲೆ ಧರಿಸಿದಾಯಿತು. ಇನ್ನು ಯಾವುದೇ ಔಟ್‌ಫಿಟ್ ಮೇಲೆ ಟ್ರೆಂಚ್ ಕೋಟ್ ಧರಿಸಬಹುದು. ಆದರೆ, ಅದು ಕಾಮನ್ ಕಲರ್ ಆಗಿರಬೇಕಷ್ಟೇ! ಇನ್ನು ಫುಲ್ ಸ್ಲೀವ್ ಟಾಪ್‌ಗಳು ವಿಂಟರ್‌ನ ಗಾಳಿಯಿಂದ ರಕ್ಷಿಸುತ್ತವೆ. ಟರ್ಟರ್ರ್ಳ ನೆಕ್ ಫುಲ್‌ಓವರ್ಸ್ ಯಾವುದೇ ಪ್ಯಾಂಟ್ ಜತೆ ಧರಿಸಬಹುದು. ಬೇಕಿದ್ದಲ್ಲಿ ಅವುಗಳ ಮೇಲೆ ಜಾಕೆಟ್ ಕೂಡ ಧರಿಸಬಹುದು ಎಂದು ಸ್ಟೈಲಿಸ್ಟ್‌ಗಳು ಸಿಂಪಲ್ ಟಿಪ್ಸ್ ನೀಡುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)