Site icon Vistara News

Stars Festive Fashion | ಎಥ್ನಿಕ್‌ ಗ್ರ್ಯಾಂಡ್‌ ಡಿಸೈನರ್‌ವೇರ್‌ನಲ್ಲಿ ಕರ್ವಾಚೌತ್‌ ಆಚರಿಸಿದ ಬಾಲಿವುಡ್‌ ತಾರೆಯರು

Stars Festive Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಕರ್ಷಕ ಹಾಗೂ ಮನಮೋಹಕವಾಗಿ ಕಾಣುವ ಎಥ್ನಿಕ್‌ ಗ್ರ್ಯಾಂಡ್‌ ಟ್ರೆಂಡಿ ೯ ಆಕರ್ಷಕ ಹಾಗೂ ಟ್ರೆಂಡಿ ಎಥ್ನಿಕ್‌ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳಲ್ಲಿ (Stars Festive Fashion) ಕಾಣಿಸಿಕೊಂಡ ಬಾಲಿವುಡ್‌ ತಾರೆಯರು ಕರ್ವಾಚೌತ್‌ಅನ್ನು ಸಡಗರ-ಸಂಭ್ರಮದಿಂದ ಆಚರಿಸಿದ್ದಾರೆ. ಡಿಸೈನರ್‌ವೇರ್‌ಗಳಲ್ಲಿ ಬಾಲಿವುಡ್‌ ತಾರೆಯರು ಕರ್ವಾಚೌತನ್ನು ವಿಶೇಷವಾಗಿ ಆಚರಿಸಿದ್ದಾರೆ.

ತಾರೆಯರ ಕಲರ್‌ಫುಲ್‌ ಡಿಸೈನರ್‌ವೇರ್‌
ನಟಿ ಸೋನಂ ಕಪೂರ್‌, ರೂಪಾ ಗಂಗೂಲಿ, ರುಬಿನಾ ನಾಯಕ್‌, ಗಾಯಕಿ ನೇಹಾ ಕಕ್ಕರ್‌, ದಿವ್ಯಾಂಕಾ ತ್ರಿಪಾಠಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ವಿಭಿನ್ನ ಲೆಹೆಂಗಾ, ಗಾಗ್ರಾ ಹಾಗೂ ಶರಾರಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳು ಮುಂಬರುವ ಫೆಸ್ಟೀವ್‌ ಸೀಸನ್‌ನಲ್ಲಿ ಟ್ರೆಂಡ್‌ ಸೆಟ್‌ ಆಗುವುದು ಗ್ಯಾರಂಟಿ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್‌ ರಾಶಿ.

ಪ್ರೀತಿ ಝಿಂಟಾ, ನಟಿ

ಇದನ್ನೂ ಓದಿ | Stars Festive Fashion | ಟ್ರೆಡಿಷನಲ್‌ ಉಡುಗೆಯಲ್ಲಿ ಓಣಂ ಹಬ್ಬ ಆಚರಿಸಿದ ತಾರೆಯರು

ಡಿಸೈನರ್‌ ಸೀರೆಯಲ್ಲಿ ಮಿಂಚಿದ ತಾರೆಯರು
ನಟಿ ಶಿಲ್ಪಾ ಶೆಟ್ಟಿ, ಸೋನಂ ಕಪೂರ್‌, ರವೀನಾ ಟಂಡನ್‌, ಸುನೀತಾ ಕಪೂರ್‌, ಮೌನಿ ರಾಯ್‌, ಪಾರುಲ್‌ ಚೌಹಾಣ್, ಇಶಿತಾ ದತ್ತಾ, ಸ್ಮೃತಿ ಖನ್ನಾ, ಪಂಕುರಿ, ಅಂಕಿತಾ ಲೊಖಂಡೆ ಸೇರಿದಂತೆ ಸಾಕಷ್ಟು ನಟಿಯರು ಗ್ರ್ಯಾಂಡ್‌ ಡಿಸೈನರ್‌ ಸೀರೆಗಳಲ್ಲಿ, ಇದಕ್ಕೆ ಮ್ಯಾಚ್‌ ಆಗುವಂತಹ ಸ್ಟೇಟ್‌ಮೆಂಟ್‌ ಜುವೆಲರಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ರೆಡ್‌ ಹಾಗೂ ಆರೆಂಜ್‌ ಶೇಡ್‌ನ ಡಿಸೈನರ್‌ ಸೀರೆಗಳು ಟ್ರೆಂಡಿಯಾಗಿದ್ದವು. ಒಬ್ಬರಿಗಿಂತ ಒಬ್ಬರ ಸೀರೆಯ ಲುಕ್‌ ವಿಭಿನ್ನವಾಗಿತ್ತು ಎನ್ನುತ್ತಾರೆ ಡಿಸೈನರ್‌ ರಂಜಿತಾ.

ಗ್ರ್ಯಾಂಡ್‌ ಡಿಸೈನರ್‌ವೇರ್‌ನಲ್ಲಿ ಕರ್ವಾಚೌತ್‌ ಸೆಲೆಬ್ರೇಟ್‌ ಮಾಡಿದ ತಾರೆಯರು.

ತಾರೆಯರ ಗ್ರ್ಯಾಂಡ್‌ ಲುಕ್‌ ಟ್ರೆಂಡಿಯಾಗುವ ಬಗೆ
ಬಾಲಿವುಡ್‌ ತಾರೆಯರೆಂದರೇ ಹಾಗೆ! ಒಂದೊಂದು ಹಬ್ಬವನ್ನು ಗ್ರ್ಯಾಂಡಾಗಿ ಆಚರಿಸುತ್ತಾರೆ. ಎಲ್ಲದಕ್ಕಿಂತ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳನ್ನು ಧರಿಸುತ್ತಾರೆ. ಅದರಲ್ಲೂ ಎಕ್ಸ್‌ಕ್ಲೂಸಿವ್‌ ಡಿಸೈನ್‌ನ ಉಡುಪುಗಳು ಹಾಗೂ ಸೀರೆಗಳನ್ನು ಡಿಸೈನ್‌ ಮಾಡಿಸಿ ಧರಿಸಿ ಆಚರಿಸುತ್ತಾರೆ. ಯಾವುದೇ ಹಬ್ಬದಂದು ಒಮ್ಮೆ ಧರಿಸಿದ ಡಿಸೈನರ್‌ವೇರ್‌ ಹಾಗೂ ಸೀರೆಯನ್ನು ಮತ್ತೊಮ್ಮೆ ಜೀವನ ಪರ್ಯಂತ ಧರಿಸುವುದಿಲ್ಲ! ಹಬ್ಬದಲ್ಲಿ ತಾವು ಧರಿಸುವ ಡಿಸೈನರ್‌ವೇರ್‌ಗಳಿಗೆ ಲೆಕ್ಕವಿಲ್ಲದಷ್ಟು ಖರ್ಚು ಮಾಡಿರುತ್ತಾರೆ. ಯಾವುದೇ ತಾರೆಯು ಕೂಡ ಮತ್ತೊಬ್ಬರದ್ದನ್ನು ಕಾಪಿ ಮಾಡುವುದಿಲ್ಲ. ಬದಲಿಗೆ ಎಲ್ಲರಿಗಿಂತ ವಿಭಿನ್ನವಾಗಿ ಹಾಗೂ ಆಕರ್ಷಕವಾಗಿ ಇರಬೇಕೆಂದು ಬಯಸುತ್ತಾರೆ. ಹಾಗಾಗಿ ಹಬ್ಬಗಳಂದು ತಾರೆಯರು ಧರಿಸುವ ಡಿಸೈನರ್‌ವೇರ್‌ ಹಾಗೂ ಸೀರೆಗಳು ಟ್ರೆಂಡಿಯಾಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ ಜೀನತ್‌.

ಇಶಿತಾ ದತ್ತಾ, ನಟಿ

ಅವರ ಪ್ರಕಾರ, ತಾರೆಯರು ಧರಿಸಿದ ಸಾಕಷ್ಟು ಡಿಸೈನ್‌ನ ಕಾಪಿಕ್ಯಾಟ್‌ ಡಿಸೈನರ್‌ವೇರ್‌ಗಳು ನಾನಾ ಬ್ರಾಂಡ್‌ಗಳಲ್ಲಿ ಬಿಡುಗಡೆಗೊಳ್ಳುತ್ತವೆ. ಇವೇ ಮುಂದೆ ಟ್ರೆಂಡಿ ಸೀರೆ ಹಾಗೂ ಡಿಸೈನರ್‌ ಉಡುಪುಗಳಾಗಿ ಪರಿವರ್ತನೆಯಾಗುತ್ತವೆ. ಎಂದಿನಂತೆ, ಸಾಮಾನ್ಯ ಮಹಿಳೆಯರು ಸೆಲೆಬ್ರಿಟಿ ಲುಕ್‌ಗಾಗಿ ಇವನ್ನು ಧರಿಸಲಾರಂಭಿಸಲಾರಂಭಿಸುತ್ತಾರೆ. ಇದು ಫ್ಯಾಷನ್‌ ಇಂಡಸ್ಟ್ರಿಯ ಲಾಜಿಕ್‌ ಎನ್ನುತ್ತಾರೆ ಫ್ಯಾಷನ್‌ ಮಾರ್ಕೆಟ್‌ನಲ್ಲಿ ದಶಕಗಳಿಗೂ ಹೆಚ್ಚು ಕಾಲ ತೊಡಗಿಸಿಕೊಂಡಿರುವ ಡಿಸೈನರ್‌ ಲಕ್ಷ್ಮಿ.

ಸೋನಂ ಕಪೂರ್‌, ನಟಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Iti Acharya | ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ ಬಿಲ್‌ ಬೋರ್ಡ್‌ನಲ್ಲಿ ಮಿಂಚಿದ ಕನ್ನಡತಿ ಇತಿ ಆಚಾರ್ಯ

Exit mobile version