-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿರುತೆರೆ ನಟಿಯರಾದ ನಮ್ರತಾ ಗೌಡ ಹಾಗೂ ಐಶ್ವರ್ಯಾ ಶಿಂಧೋಗಿ ಅವರ ಬಾಲಿಯಲ್ಲಿನ ಗ್ಲಾಮರಸ್ ಹಾಲಿ ಡೇ ಫ್ಯಾಷನ್, ಅಭಿಮಾನಿಗಳ ಹುಬ್ಬೇರಿಸಿದೆ. ಗೆಳತಿಯರಿಬ್ಬರ ಈ ಬಿಂದಾಸ್ ಫ್ಯಾಷನ್ ( ಐಶ್ವರ್ಯಾ ಶಿಂಧೋಗಿ), ಕೆಲವರಿಗೆ ಸಖತ್ ಇಷ್ಟವಾದರೇ, ಮತ್ತೆ ಕೆಲವರಿಗೆ ಅಚ್ಚರಿ ಮೂಡಿಸಿದೆ. ಈ ನಟಿಯರು ಜತೆಜತೆಯಾಗಿ ಧರಿಸಿರುವ ಗ್ಲಾಮರಸ್ ಉಡುಪುಗಳು ಮಾತ್ರ, ಬಾಲಿವುಡ್‌ನ ಸೆಲೆಬ್ರೆಟಿಗಳ ಹಾಲಿಡೇ ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು ನೆನಪಿಸುವಂತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ನಮ್ರತಾ-ಐಶ್ವರ್ಯಾ ಶಿಂಧೋಗಿ ಗ್ಲಾಮರಸ್ ಲುಕ್
ನಮ್ರತಾ ಹಾಗೂ ಐಶ್ವರ್ಯಾ ಶಿಂಧೋಗಿಯವರ ಬೆಂಗಳೂರಿನ ಏರ್‌ಪೋರ್ಟ್ ಲುಕ್‌ನಿಂದ ಆರಂಭವಾದ, ಟ್ರಾವೆಲ್ ಫ್ಯಾಷನ್ ಇಬ್ಬರ ಫ್ಯಾಷನ್ ಪ್ರೇಮಕ್ಕೆ ಕೈ ಹಿಡಿದ ಕನ್ನಡಿಯಂತಿದೆ ಎನ್ನಬಹುದು. ಇಬ್ಬರು ಯಂಗ್ ಸ್ನೇಹಿತೆಯರು ಕೂಡ ಬಿಂದಾಸ್ ಟ್ರಾವೆಲ್ ಎಂಜಾಯ್ ಮಾಡಬಹುದು ಎಂಬುದಕ್ಕೆ ಅವರು ಅಪ್‌ಲೋಡ್ ಮಾಡಿರುವ ಫ್ಯಾಷೆನಬಲ್ ಫೋಟೋಗಳೇ ಸಾಕ್ಷಿ. ಅಷ್ಟು ಮಾತ್ರವಲ್ಲ, ಪ್ರತಿ ಸಂದರ್ಭದಲ್ಲೂ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಇವರಿಬ್ಬರ ಬಾಲಿ ರೌಂಡ್ಸ್, ಪೂಲ್ ಟೈಮ್, ಪಾರ್ಟಿ ಟೈಮ್ ಹೀಗೆ ಎಲ್ಲಾ ಸಮಯದಲ್ಲೂ ನಾನಾ ಬಗೆಯ ಡ್ರೆಸ್‌ಕೋಡನ್ನು ಪಾಲಿಸಿದ್ದಾರೆ. ಬಾಲಿಯ ಫೋಟೋಶೂಟ್‌ಗಳಲ್ಲಂತೂ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಬಾಲಿಯ ಬ್ಯೂಟಿಫುಲ್ ಸ್ಪಾಟ್‌ಗಳಾದ ಗೇಟ್ಸ್ ಆಫ್ ಹೆವೆನ್, ವಾನಗಿರಿ ಹೀಲ್ಸ್, ತಬನಾನ್, ಲೆಮ್‌ಪುಯಾಂಗ್ ಟೆಂಪಲ್, ಬಾಲಿ ಬೀಚ್ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ವಾನಗಿರಿ ಹಿಲ್ಸ್‌ನಲ್ಲಿ ಬ್ಲಾಕ್ ಬ್ಯಾಕ್‌ಲೆಸ್ ಫ್ರಾಕ್‌ನಲ್ಲಿ, ಲೆಮ್‌ಪುಯಾಂಗ್ ಟೆಂಪಲ್ ಬಳಿ ಹಾಲ್ಟರ್ ಕ್ರಿಸ್ ಕ್ರಾಸ್ ಟೂ ಪೀಸ್ ಡ್ರೆಸ್‌ನಲ್ಲಿ ನಮ್ರತಾ ಕಾಣಿಸಿಕೊಂಡರೇ, ಪಿಸ್ತಾ ಮ್ಯಾಕ್ಸಿ ಫ್ರಾಕ್‌ನಲ್ಲಿ ಜೋಕಾಲಿ ಆಡುತ್ತಾ, ಗೇಟ್ಸ್ ಆಫ್ ಹೆವೆನ್‌ನಲ್ಲಿ ಅಲ್ಲಿನ ಟ್ರೆಡಿಷನಲ್ ಔಟ್‌ಫಿಟ್‌ನಲ್ಲಿ ಸಿಂಧೋಗಿ ಫೋಟೊಶೂಟ್ ಮಾಡಿಸಿದ್ದಾರೆ.
ಇದನ್ನೂ ಓದಿ: Namma Lachi Kannada Serial: ಸ್ವಿಮ್ ಸೂಟ್‌ನಲ್ಲಿ ಹಾಟ್ ಆಗಿ ಕಂಡ ʻನಮ್ಮ ಲಚ್ಚಿʼ ಧಾರಾವಾಹಿಯ ಖ್ಯಾತಿಯ ಐಶ್ವರ್ಯಾ ಶಿಂಧೋಗಿ
ಗೆಳತಿಯರ ಪೂಲ್ ಟೈಮ್
ಇನ್ನು ಪೂಲ್ ಟೈಮ್‌ನಲ್ಲಿ ನಮ್ರತಾ ಹಾಗೂ ಐಶ್ವರ್ಯಾ ಇಬ್ಬರೂ ಆಕರ್ಷಕ ಬಿಕಿನಿಯಲ್ಲಿ ಕಾಣಿಸಿಕೊಂಡು ರೀಲ್ಸ್ ಕೂಡ ಮಾಡಿದ್ದಾರೆ. ಬೀಚ್‌ನಲ್ಲಿ ರೆಸಾರ್ಟ್ವೇರ್ ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡು ನೆಟ್ಟಿಗರ ಹುಬ್ಬೇರಿಸಿದ್ದಾರೆ.
ಒಟ್ಟಾರೆ ಗೆಳತಿಯರಿಬ್ಬರ ಈ ಬಿಂದಾಸ್ ಹಾಲಿ ಡೇ ಫ್ಯಾಷನ್ ನೆಟ್ಟಿಗರ ಅಚ್ಚರಿಗೆ ಕಾರಣವಾದರೂ, ಆಯಾ ಸಂದರ್ಭಕ್ಕೆ ಧರಿಸಿರುವ ಇವರಿಬ್ಬರ ಔಟ್‌ಫಿಟ್‌ಗಳು ಸಮಯೋಚಿತವಾಗಿವೆ. ಫ್ಯಾಷನ್ ಟ್ರೆಂಡ್‌ಗೆ ತಕ್ಕನಾಗಿವೆ ಎಂದು ವಿಮರ್ಶಿಸುತ್ತಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)