Site icon Vistara News

Stars Winter Fashion | ತಾರೆಯರ ಟ್ರಾವೆಲ್ ಫ್ಯಾಷನ್‌ಗೆ ಸೇರಿದ ಬಣ್ಣಬಣ್ಣದ ಉಲ್ಲನ್‌ ಸ್ವೆಟರ್ಸ್

Stars Winter Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾಮಾನ್ಯ ಸ್ತ್ರೀಯರ ಪ್ರೀತಿಗೆ ಪಾತ್ರವಾಗಿದ್ದ ಕಲರ್‌ಫುಲ್‌ ಉಲ್ಲನ್‌ ಸ್ವೆಟರ್‌ಗಳು ಇದೀಗ ಬಾಲಿವುಡ್‌ ತಾರೆಯರ ಟ್ರಾವೆಲ್‌ ಫ್ಯಾಷನ್‌ (Stars Winter Fashion) ಲಿಸ್ಟ್‌ಗೆ ಸೇರಿವೆ. ಸದ್ಯಕ್ಕೆ ಹಳೇ ಕಾನ್ಸೆಪ್ಟ್‌ನ ವುಲ್ಲನ್‌ ಸ್ವೆಟರ್‌ಗಳು ಸೈಡಿಗೆ ಸರಿದಿದ್ದು, ಕಾಲಕ್ಕೆ ತಕ್ಕಂತೆ ಹೊಸ ವಿನ್ಯಾಸ ಹಾಗೂ ಶೇಡ್‌ಗಳನ್ನು ಬದಲಿಸಿಕೊಂಡು ಹೊಸ ರೂಪದಲ್ಲಿ ಬಿಡುಗಡೆಗೊಂಡಿವೆ. ಇದೇ ಕಾರಣದಿಂದಾಗಿ ತಾರೆಯರೂ ಕೂಡ ಇವುಗಳತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅಷ್ಟು ಮಾತ್ರವಲ್ಲ, ಪ್ರಯಾಣದ ಸಂದರ್ಭದಲ್ಲಿ ಉಲ್ಲನ್‌ ಸ್ವೆಟರ್‌ಗಳು ದೇಹವನ್ನು ಬೆಚ್ಚಗಿಡುತ್ತವೆ, ಆರೋಗ್ಯವನ್ನು ಕಾಪಾಡುತ್ತವೆ ಎಂಬುದು ಮತ್ತೊಂದು ಕಾರಣ ಎನ್ನುತ್ತಾರೆ.

ತಾರೆಯರ ವಾರ್ಡ್‌ರೋಬ್‌ ಸೇರಿದ ಸ್ವೆಟರ್ಸ್‌
ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್‌, ಸೋನಂ ಕಪೂರ್‌, ಕತ್ರೀನಾ ಕೈಫ್‌ , ಪರಿಣಿತಿ ಚೋಪ್ರಾ, ಪೂಜಾ ಹೆಗ್ಡೆ, ಶಿಫಾಲಿ, ರುಬಿನಾ, ಅಮೈರಾ, ಹೀನಾಖಾನ್‌, ಮಿಪಾಲ್ಕರ್‌, ಅನನ್ಯಾ, ಎರಿಕಾ ಫರ್ನಾಂಡೀಸ್‌ ಸೇರಿದಂತೆ ಬಾಲಿವುಡ್‌ ಹಾಗೂ ಟೆಲಿವುಡ್‌ ನಟಿಯರು ಈಗಾಗಲೇ ತಮ್ಮ ಟ್ರಾವೆಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಉಲ್ಲನ್‌ ಸ್ಟೆಟರ್ಸ್ ಸೇರಿಸಿಕೊಂಡಿದ್ದು, ಇವುಗಳಲ್ಲೆ ಕಾಣಿಸಿಕೊಂಡ ಫೋಟೊಗಳು ಎಲ್ಲೆಡೆ ಹರಿದಾಡುತ್ತಿವೆ.

ಸೆಲೆಬ್ರಿಟಿ ಸ್ಟೈಲಿಸ್ಟ್‌ ರಿಯಾ ಹೇಳುವಂತೆ, ʻʻತಾರೆಯರು ಪಾರ್ಟಿ, ಫೋಟೊಶೂಟ್‌ ಹಾಗೂ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಔಟಿಂಗ್‌ ಹಾಗೂ ಟ್ರಾವೆಲ್‌ ಮಾಡುವಾಗ ಚಳಿಯನ್ನು ತಡೆಯಲು ಉಲ್ಲನ್‌ ಸ್ವೆಟರ್ಸ್‌ಗಳ ಮೊರೆ ಹೋಗಿದ್ದಾರಂತೆ.

ಇದನ್ನೂ ಓದಿ | Stars Winter Fashion | ಲಂಡನ್‌ನಲ್ಲಿ ಕರೀನಾ-ಕರೀಷ್ಮಾ ಕಪೂರ್‌ ವಿಂಟರ್‌ ಫ್ಯಾಷನ್‌ ಮಂತ್ರ

ಹೀನಾ ಖಾನ್‌, ನಟಿ

ಬದಲಾದ ಡಿಸೈನರ್‌ ಉಲ್ಲನ್‌ ಸ್ವೆಟರ್ಸ್‌ ಕಾನ್ಸೆಪ್ಟ್‌
ಮೊದಲೆಲ್ಲಾ ತಾರೆಯರು ಡಿಸೈನರ್ಸ್ ಉಲ್ಲನ್‌ ಸ್ವೆಟರ್ಸ್‌ಗಳನ್ನು ಮಾತ್ರ ಇಷ್ಟಪಡುತ್ತಿದ್ದರು. ಇದೀಗ ಅವರ ಚಾಯ್ಸ್‌ ಕೂಡ ಬದಲಾಗಿದೆ. ಆನ್‌ಲೈನ್‌ನಿಂದಲೇ ಬ್ರಾಂಡೆಡ್‌ ಸ್ವೆಟರ್ಸ್‌ ಖರೀದಿಸುವುದು ಹೆಚ್ಚಾಗಿದೆ. ಈ ಸೀಸನ್‌ಗೆ ಹೊಂದುವಂತಹ ಕಲರ್‌ಫುಲ್‌ ಉಲ್ಲನ್‌ ಸ್ವೆಟರ್‌ಗಳಲ್ಲೆ ಕಾಣಿಸಿಕೊಳ್ಳತೊಡಗಿದ್ದಾರೆ. ಉದಾಹರಣೆಗೆ, ಸಾದಾ ಪುಲ್‌ಓವರ್‌ನಂತಿರುವಂತವು, ಟರ್ಟಲ್‌ ಸ್ವೆಟರ್‌ಗಳು, ಫ್ಲೋರಲ್‌ ಟೀ ಶರ್ಟ್ ಶೈಲಿಯವು, ಹಾಫ್‌ ಬಟನ್‌ ಸ್ವೆಟರ್‌ಗಳು, ಯೂನಿಸೆಕ್ಸ್‌ ಹಾಫ್‌ ಸ್ವೆಟರ್‌ಗಳು. ಆದರೆ, ಸ್ವೆಟರ್‌ ಧರಿಸಿದಾಗ ತಾವು ಸ್ಟೈಲಿಂಗ್‌ ಮಾಡುವ ವಿಧಾನ ಮಾತ್ರ ಬದಲಿಸಿಕೊಂಡಿದ್ದಾರೆ. ಸ್ವೆಟರ್‌ ಜತೆಗೆ ಮಿಕ್ಸ್ ಮ್ಯಾಚ್‌ ಮಾಡಿ ಧರಿಸುವ ಕಾನ್ಸೆಪ್ಟ್‌ಗೆ ಸೈ ಎಂದಿದ್ದಾರೆ. ಕ್ಯಾಪ್‌, ಓವರ್‌ಕೋಟ್‌, ಸ್ಟೋಲ್‌ ಹೀಗೆ ವಿಭಿನ್ನ ಸ್ಟೈಲಿಂಗ್‌ನಲ್ಲಿ ಹೊಸ ಲುಕ್‌ಗೆ ಓಕೆ ಎಂದಿದ್ದಾರೆ. ಹಾಗಾಗಿ ಇದು ಕಂಪ್ಲೀಟ್‌ ಡಿಫರೆಂಟ್‌ ಲುಕ್‌ ನೀಡುತ್ತಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಕತ್ರೀನಾ ಕೈಫ್‌, ನಟಿ

ಲೈಟ್‌ವೈಟ್‌ ನಿಟ್‌ವೇರ್ ಸ್ವೆಟರ್ಸ್‌
ಕ್ರೋಶಾದಿಂದ ಹೆಣೆಯಲಾದ ಸ್ವೆಟರ್ಸ್‌ಗಳು ಕೂಡ ಇಂದು ಪಾಪ್ಯುಲರ್‌ ಆಗಿವೆ. ಮೊದಲೆಲ್ಲಾ ಭಾರವಾಗಿರುತ್ತಿದ್ದ ಸ್ವೆಟರ್ಸ್‌ಗಳು ಇಂದು ಲೈಟ್‌ವೇಟ್‌ ಆಗಿರುವುದರಿಂದ ಇತ್ತೀಚೆಗೆ ಇವು ಸೆಲೆಬ್ರಿಟಿಗಳ ಪ್ರೀತಿಗೂ ಪಾತ್ರವಾಗಿವೆ ಎನ್ನುತ್ತಾರೆ ಸ್ವೆಟರ್ಸ್ ಡಿಸೈನರ್ಸ್‌.

ಪರಿಣಿತಿ ಚೋಪ್ರಾ, ನಟಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Star Winter Fashion | ಪರಿಸರ ಸ್ನೇಹಿ ಕ್ಯಾಲೆಂಡರ್‌ ಡ್ರೆಸ್‌ನಲ್ಲಿ ನಟಿ ಸೋನಂ ಕಪೂರ್‌

Exit mobile version