-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಹಾಗೂ ಬೆಸ್ಟ್ ಸ್ಟೈಲಿಂಗ್‌ಗೆ ಯಾವತ್ತೂ ವಯಸ್ಸಿನ ಮಿತಿ ಇಲ್ಲ! ಇದನ್ನು ಖುದ್ದು ಬಾಲಿವುಡ್‌ನ ಸೂಪರ್ ಸ್ಟಾರ್ ಬಿಗ್ ಬಿ ಪ್ರೂವ್ ಮಾಡಿದ್ದಾರೆ. ಅವರ ಒಂದೊಂದು ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿಂದ ಪ್ರತಿಯೊಬ್ಬರು ಕಲಿಯಬೇಕಾದ್ದು ಸಾಕಷ್ಟಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು ಹಾಗೂ ಸೆಲೆಬ್ರೆಟಿ ಸ್ಟೈಲಿಸ್ಟ್‌ಗಳು.
ಹೌದು, ಎಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಸೂಪರ್ ಸ್ಟಾರ್ ಲೆಜೆಂಡರಿ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಸ್ಟೈಲ್ ಸ್ಟೇಟ್‌ಮೆಂಟ್‌ಗಳು ಕೇವಲ ಅವರ ವಯಸ್ಸಿನ ಪುರುಷರಿಗೆ ಮಾತ್ರವಲ್ಲ, ಎಲ್ಲಾ ವಯಸ್ಸಿನ ವರ್ಗದ ಫ್ಯಾಷನ್ ಲವರ್ಸ್‌ಗೂ ಇಷ್ಟವಾಗುತ್ತದೆ. ಅವರ ನಾನಾ ಸ್ಟೈಲಿಂಗ್ ಸ್ಟೇಟ್‌ಮೆಂಟ್‌ಗಳಿಂದ ಬಗೆಬಗೆಯ ಫ್ಯಾಷನ್ ಪಾಠವನ್ನು ಕಲಿಯಬಹುದು ಎನ್ನುವ ಫ್ಯಾಷನ್ ವಿಮರ್ಶಕರಾದ ಅಮಿತ್ ಹಾಗೂ ಮನೋವಿರಾಜ್ ಒಂದಿಷ್ಟು ಉದಾಹರಣೆಗಳನ್ನು ನೀಡಿದ್ದು, ಈ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ಉಡುಪು ಧರಿಸಿದಾಗ ಇರುವ ಆತ್ಮವಿಶ್ವಾಸ
ಬಿಗ್ ಬಿ ಅಮಿತಾಭ್ ಅವರು ಲೆಕ್ಕವಿಲ್ಲದಷ್ಟು ಉಡುಪುಗಳನ್ನು ಇದುವರೆಗೂ ಧರಿಸಿದ್ದಾರೆ. ಅವರ ಎತ್ತರ ಹಾಗೂ ಪರ್ಸನಾಲಿಟಿಗೆ ಮ್ಯಾಚ್ ಆಗುವಂತೆ ಅವನ್ನು ಕ್ಯಾರಿ ಮಾಡಿದ್ದಾರೆ. ತಮಗೆ ಏನು ಹೊಂದುತ್ತದೆಯೋ ಅವನ್ನು ಜನರ ಮುಂದೆ ಕ್ಯಾರಿ ಮಾಡುವುದು ಅವರಿಗೆ ಕರಗತವಾಗಿದೆ. ಯಾವುದೇ ಉಡುಪನ್ನು ಧರಿಸಿದರೂ ಆತ್ಮವಿಶ್ವಾಸದಿಂದ ಕ್ಯಾರಿ ಮಾಡುವುದು ಮುಖ್ಯ ಎಂಬುದನ್ನು ನಾವು ಕಲಿಯಬಹುದು.
ಫ್ಯಾಷನ್‌ಗಿಲ್ಲ ಜನರೇಷನ್ ಗ್ಯಾಪ್:
ಜನರೇಷನ್ ಬದಲಾದರೇನು? ಹಾಗೆಂದು ಹೊಸ ಶೈಲಿಯ ಉಡುಪು ಧರಿಸಬಾರದು ಎಂದೇನೂ ಇಲ್ಲವಲ್ಲ! ಧರಿಸಿದರೂ ಅದು ತಮ್ಮ ಬಾಡಿ ಟೈಪ್‌ಗೆ ಮ್ಯಾಚ್ ಮಾಡಿಕೊಳ್ಳಬೇಕು ಎಂಬುದನ್ನು ಪ್ರಬಲವಾಗಿ ನಂಬಿರುವ ಬಿಗ್ ಬಿಯವರು ಆಗಾಗ್ಗೆ ತಮ್ಮ ಮೊಮ್ಮಗಳು ನವ್ಯಾ ನವೇಲಿ ಬಳಿ ಟಿಪ್ಸ್ ತೆಗೆದುಕೊಳ್ಳುತ್ತಾರಂತೆ. ಈಗಿನ ಫಂಕಿ ಜಾಕೆಟ್‌ಗಳನ್ನು, ಕಾಲೇಜು ಹುಡುಗರಂತೆ ಧರಿಸಿ ಸಂತಸಪಟ್ಟಿದ್ದಾರಂತೆ. ಯಾವುದೇ ವ್ಯಕ್ತಿಯು ಫ್ಯಾಷನ್ ಅಪ್‌ಡೇಟ್ ಆಗುವುದು ಮುಖ್ಯ ಎಂಬುದನ್ನು ಇದು ತಿಳಿಸುತ್ತದೆ.
ಇದನ್ನೂ ಓದಿ: Bigg Boss Tamil 7: ಶುರುವಾಯ್ತು ತಮಿಳು ಬಿಗ್ ಬಾಸ್; ಸ್ಪರ್ಧಿಗಳ ಕಂಪ್ಲೀಟ್ ಲಿಸ್ಟ್ ಔಟ್!
ಪ್ರಾದೇಶಿಕ ಟ್ರೆಡಿಷನಲ್ ಅಟೈರ್‌ಗಳನ್ನು ಗೌರವಿಸುವುದು
ಇತ್ತೀಚೆಗೆ ಬಿಗ್ ಬಿ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಸೌತ್ ಇಂಡಿಯನ್ ಲುಕ್ ರೇಷ್ಮೆಯ ಶರ್ಟ್, ಪಂಚೆ ಹಾಗೂ ಶಲ್ಯದಲ್ಲಿ ಕಾಣಿಸಿಕೊಂಡಿದ್ದರು. ಇದು ಅವರಿಗಿರುವ ದಕ್ಷಿಣ ಭಾರತದ ಜನರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿತು. ಆಯಾ ಪ್ರಾಂತ್ಯದ ಅಟೈರ್ ಗೌರವಿಸುವುದನ್ನು ಇದು ಕಲಿಸುತ್ತದೆ ಎನ್ನಬಹುದು.
ಜೀವನೋತ್ಸಾಹ ತುಂಬುವ ಫ್ಯಾಷನ್
ಧರಿಸುವ ಉಡುಪುಗಳು ಜೀವನೋತ್ಸಾಹ ತುಂಬುತ್ತವೆ ಎಂಬುದನ್ನು ಬಿಗ್ ಬಿ ಡ್ರೆಸ್‌ಕೋಡ್ ಹಾಗೂ ಅವರು ಧರಿಸುವ ಆಕ್ಸೆಸರೀಸ್‌ಗಳಿಂದಲೇ ತಿಳಿಯಬಹುದು. ನಾವು ಕೂಡ ಅಷ್ಟೇ! ಧರಿಸುವ ಉಡುಪುಗಳ ಮೇಲೆ ಪ್ರೀತಿ ಇರಿಸಿಕೊಂಡಾಗ ಆಕರ್ಷಕವಾಗಿ ಕಾಣಿಸಲು ಸಾಧ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)