Big B style: ಬಿಗ್‌ ಬಿ ಅಮಿತಾಭ್ ಬಚ್ಚನ್‌ರಿಂದ ಕಲಿಯಬಹುದಾದ ಸ್ಟೈಲಿಂಗ್‌ ಟ್ರಿಕ್ಸ್! - Vistara News

ಫ್ಯಾಷನ್

Big B style: ಬಿಗ್‌ ಬಿ ಅಮಿತಾಭ್ ಬಚ್ಚನ್‌ರಿಂದ ಕಲಿಯಬಹುದಾದ ಸ್ಟೈಲಿಂಗ್‌ ಟ್ರಿಕ್ಸ್!

Big B style: ಭಾರತೀಯ ಚಿತ್ರರಂಗದ ಲೆಜೆಂಡರಿ ನಟ ಬಿಗ್‌ ಬಿ ಅಮಿತಾಭ್ ಬಚ್ಚನ್‌ ಅವರ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಂದ ಫ್ಯಾಷನ್‌ ಪ್ರಿಯರು ಏನೆಲ್ಲಾ ಪಾಠ ಕಲಿಯಬಹುದು ಎಂಬುದರ ಬಗ್ಗೆ ಫ್ಯಾಷನ್‌ ವಿಮರ್ಶಕರು ಹಾಗೂ ಸೆಲೆಬ್ರೆಟಿ ಸ್ಟೈಲಿಸ್ಟ್ಗಳು ಒಂದಿಷ್ಟು ಸಲಹೆಗಳನ್ನು ಹಂಚಿ ಕೊಂಡಿದ್ದಾರೆ.‌

VISTARANEWS.COM


on

Big B Amitabh Bachchan!
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫ್ಯಾಷನ್‌ ಹಾಗೂ ಬೆಸ್ಟ್ ಸ್ಟೈಲಿಂಗ್‌ಗೆ ಯಾವತ್ತೂ ವಯಸ್ಸಿನ ಮಿತಿ ಇಲ್ಲ! ಇದನ್ನು ಖುದ್ದು ಬಾಲಿವುಡ್‌ನ ಸೂಪರ್‌ ಸ್ಟಾರ್‌ ಬಿಗ್‌ ಬಿ ಪ್ರೂವ್‌ ಮಾಡಿದ್ದಾರೆ. ಅವರ ಒಂದೊಂದು ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಂದ ಪ್ರತಿಯೊಬ್ಬರು ಕಲಿಯಬೇಕಾದ್ದು ಸಾಕಷ್ಟಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು ಹಾಗೂ ಸೆಲೆಬ್ರೆಟಿ ಸ್ಟೈಲಿಸ್ಟ್‌ಗಳು.

ಹೌದು, ಎಲ್ಲರಿಗೂ ತಿಳಿದಿರುವಂತೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಲೆಜೆಂಡರಿ ನಟ ಬಿಗ್‌ ಬಿ ಅಮಿತಾಭ್ ಬಚ್ಚನ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳು ಕೇವಲ ಅವರ ವಯಸ್ಸಿನ ಪುರುಷರಿಗೆ ಮಾತ್ರವಲ್ಲ, ಎಲ್ಲಾ ವಯಸ್ಸಿನ ವರ್ಗದ ಫ್ಯಾಷನ್‌ ಲವರ್ಸ್‌ಗೂ ಇಷ್ಟವಾಗುತ್ತದೆ. ಅವರ ನಾನಾ ಸ್ಟೈಲಿಂಗ್‌ ಸ್ಟೇಟ್‌ಮೆಂಟ್‌ಗಳಿಂದ ಬಗೆಬಗೆಯ ಫ್ಯಾಷನ್‌ ಪಾಠವನ್ನು ಕಲಿಯಬಹುದು ಎನ್ನುವ ಫ್ಯಾಷನ್‌ ವಿಮರ್ಶಕರಾದ ಅಮಿತ್‌ ಹಾಗೂ ಮನೋವಿರಾಜ್‌ ಒಂದಿಷ್ಟು ಉದಾಹರಣೆಗಳನ್ನು ನೀಡಿದ್ದು, ಈ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿ ಉಡುಪು ಧರಿಸಿದಾಗ ಇರುವ ಆತ್ಮವಿಶ್ವಾಸ

ಬಿಗ್‌ ಬಿ ಅಮಿತಾಭ್ ಅವರು ಲೆಕ್ಕವಿಲ್ಲದಷ್ಟು ಉಡುಪುಗಳನ್ನು ಇದುವರೆಗೂ ಧರಿಸಿದ್ದಾರೆ. ಅವರ ಎತ್ತರ ಹಾಗೂ ಪರ್ಸನಾಲಿಟಿಗೆ ಮ್ಯಾಚ್‌ ಆಗುವಂತೆ ಅವನ್ನು ಕ್ಯಾರಿ ಮಾಡಿದ್ದಾರೆ. ತಮಗೆ ಏನು ಹೊಂದುತ್ತದೆಯೋ ಅವನ್ನು ಜನರ ಮುಂದೆ ಕ್ಯಾರಿ ಮಾಡುವುದು ಅವರಿಗೆ ಕರಗತವಾಗಿದೆ. ಯಾವುದೇ ಉಡುಪನ್ನು ಧರಿಸಿದರೂ ಆತ್ಮವಿಶ್ವಾಸದಿಂದ ಕ್ಯಾರಿ ಮಾಡುವುದು ಮುಖ್ಯ ಎಂಬುದನ್ನು ನಾವು ಕಲಿಯಬಹುದು.

ಫ್ಯಾಷನ್‌ಗಿಲ್ಲ ಜನರೇಷನ್‌ ಗ್ಯಾಪ್‌:

ಜನರೇಷನ್‌ ಬದಲಾದರೇನು? ಹಾಗೆಂದು ಹೊಸ ಶೈಲಿಯ ಉಡುಪು ಧರಿಸಬಾರದು ಎಂದೇನೂ ಇಲ್ಲವಲ್ಲ! ಧರಿಸಿದರೂ ಅದು ತಮ್ಮ ಬಾಡಿ ಟೈಪ್‌ಗೆ ಮ್ಯಾಚ್‌ ಮಾಡಿಕೊಳ್ಳಬೇಕು ಎಂಬುದನ್ನು ಪ್ರಬಲವಾಗಿ ನಂಬಿರುವ ಬಿಗ್‌ ಬಿಯವರು ಆಗಾಗ್ಗೆ ತಮ್ಮ ಮೊಮ್ಮಗಳು ನವ್ಯಾ ನವೇಲಿ ಬಳಿ ಟಿಪ್ಸ್ ತೆಗೆದುಕೊಳ್ಳುತ್ತಾರಂತೆ. ಈಗಿನ ಫಂಕಿ ಜಾಕೆಟ್‌ಗಳನ್ನು, ಕಾಲೇಜು ಹುಡುಗರಂತೆ ಧರಿಸಿ ಸಂತಸಪಟ್ಟಿದ್ದಾರಂತೆ. ಯಾವುದೇ ವ್ಯಕ್ತಿಯು ಫ್ಯಾಷನ್‌ ಅಪ್‌ಡೇಟ್‌ ಆಗುವುದು ಮುಖ್ಯ ಎಂಬುದನ್ನು ಇದು ತಿಳಿಸುತ್ತದೆ.

ಇದನ್ನೂ ಓದಿ: Bigg Boss Tamil 7: ಶುರುವಾಯ್ತು ತಮಿಳು ಬಿಗ್‌ ಬಾಸ್‌; ಸ್ಪರ್ಧಿಗಳ ಕಂಪ್ಲೀಟ್‌ ಲಿಸ್ಟ್‌ ಔಟ್‌!

ಪ್ರಾದೇಶಿಕ ಟ್ರೆಡಿಷನಲ್‌ ಅಟೈರ್‌ಗಳನ್ನು ಗೌರವಿಸುವುದು

ಇತ್ತೀಚೆಗೆ ಬಿಗ್‌ ಬಿ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಸೌತ್‌ ಇಂಡಿಯನ್‌ ಲುಕ್ ರೇಷ್ಮೆಯ ಶರ್ಟ್, ಪಂಚೆ ಹಾಗೂ ಶಲ್ಯದಲ್ಲಿ ಕಾಣಿಸಿಕೊಂಡಿದ್ದರು. ಇದು ಅವರಿಗಿರುವ ದಕ್ಷಿಣ ಭಾರತದ ಜನರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿತು. ಆಯಾ ಪ್ರಾಂತ್ಯದ ಅಟೈರ್‌ ಗೌರವಿಸುವುದನ್ನು ಇದು ಕಲಿಸುತ್ತದೆ ಎನ್ನಬಹುದು.

ಜೀವನೋತ್ಸಾಹ ತುಂಬುವ ಫ್ಯಾಷನ್‌

ಧರಿಸುವ ಉಡುಪುಗಳು ಜೀವನೋತ್ಸಾಹ ತುಂಬುತ್ತವೆ ಎಂಬುದನ್ನು ಬಿಗ್‌ ಬಿ ಡ್ರೆಸ್‌ಕೋಡ್‌ ಹಾಗೂ ಅವರು ಧರಿಸುವ ಆಕ್ಸೆಸರೀಸ್‌ಗಳಿಂದಲೇ ತಿಳಿಯಬಹುದು. ನಾವು ಕೂಡ ಅಷ್ಟೇ! ಧರಿಸುವ ಉಡುಪುಗಳ ಮೇಲೆ ಪ್ರೀತಿ ಇರಿಸಿಕೊಂಡಾಗ ಆಕರ್ಷಕವಾಗಿ ಕಾಣಿಸಲು ಸಾಧ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Saree Fashion: ಸೆಲೆಬ್ರೆಟಿ ಲುಕ್‌ಗಾಗಿ ಬಂತು ಬಂಗಾರ ವರ್ಣದ ಸೀರೆಗಳು!

ಈ ಸೀಸನ್‌ನಲ್ಲಿ ಬಂಗಾರ ವರ್ಣದ ಡಿಸೈನರ್‌ ಸೀರೆಗಳು (Saree Fashion) ಟ್ರೆಂಡಿಯಾಗಿವೆ. ನೋಡಲು ಸೆಲೆಬ್ರೆಟಿ ಲುಕ್‌ ನೀಡುವ ಈ ಶೇಡ್‌ನ ಸೀರೆಗಳು ನೀರೆಯರನ್ನು ಸೆಳೆದಿವೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಸೀರೆ ಪರಿಣತರು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Saree Fashion
ಚಿತ್ರಗಳು: ಉದಿತಿ ಸಿಂಗ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಂಗಾರ ವರ್ಣದ ಡಿಸೈನರ್‌ ಸೀರೆಗಳು (Saree Fashion) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಸೆಲೆಬ್ರೆಟಿ ಲುಕ್‌ ನೀಡುವ ಈ ಶೇಡ್‌ನ ಸೀರೆಗಳು, ನಾನಾ ಫ್ಯಾಬ್ರಿಕ್‌ ಹಾಗೂ ವಿನ್ಯಾಸದಲ್ಲಿ ಕಾಲಿಟ್ಟಿದ್ದು, ಪಾರ್ಟಿಪ್ರಿಯ ಮಹಿಳೆಯರನ್ನು ಆಕರ್ಷಿಸಿವೆ. “ಗೋಲ್ಡನ್‌ ಶೇಡ್‌ನ ಡಿಸೈನರ್‌ ಸೀರೆಗಳು ಎಂತಹ ಮಹಿಳೆಯರನ್ನು ಕೂಡ ಅಂದವಾಗಿ ಬಿಂಬಿಸುತ್ತವೆ. ಈ ವರ್ಣದ ಸೀರೆಗೆ ಹೆಚ್ಚು ಆಕ್ಸೆಸರೀಸ್‌ ಹಾಕುವ ಅಗತ್ಯವಿಲ್ಲ, ಸೀರೆಗಳೇ ಮಿನುಗುತ್ತವೆ. ಜಗಮಗಿಸುತ್ತವೆ. ಆ ಮಟ್ಟಿಗೆ ಈ ಗೋಲ್ಡನ್‌ ಶೇಡ್‌ನ ಮಿರಮಿರ ಮಿನುಗುವ ಸೀರೆಗಳು ಆಗಮಿಸಿವೆ. ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ನೋಡಲು ಒಂದೇ ಶೇಡ್‌ ಆದರೂ ಇದರಲ್ಲೆ ಕೊಂಚ ಡಾರ್ಕ್, ಲೈಟ್‌ ಹಾಗೂ ಬಗೆಬಗೆಯ ಫ್ಯಾಬ್ರಿಕ್‌ನಲ್ಲಿ ಬಿಡುಗಡೆಗೊಂಡಿವೆ” ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ಸ್‌. ಅವರ ಪ್ರಕಾರ, ಗೋಲ್ಡನ್‌ ವರ್ಣದ ಸೀರೆಗಳು ಈ ಸೀಸನ್‌ನಲ್ಲಿ ಸಖತ್‌ ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ.

Saree Fashion

ಟ್ರೆಂಡ್‌ನಲ್ಲಿರುವ ಗೋಲ್ಡನ್‌ ವರ್ಣದ ಸೀರೆಗಳು

ಸಿಕ್ವೀನ್ಸ್ ಗೋಲ್ಡನ್‌ ಸೀರೆ, ಶಿಮ್ಮರ್‌ ಗೋಲ್ಡನ್‌ ಸೀರೆ, ಎಂಬಾಲಿಶ್ಡ್, ಎಂಬ್ರಾಯ್ಡರಿ ಇರುವಂತಹ ಗೋಲ್ಡನ್‌ ಸೀರೆ, ನೆಟ್ಟೆಡ್‌ ಗೋಲ್ಡನ್‌, ಜಾರ್ಜೆಟ್ ಗೋಲ್ಡನ್‌, ಸಾಟಿನ್‌ ಗೋಲ್ಡನ್‌ ಹೀಗೆ ನಾನಾ ಬಗೆಯ ಫ್ಯಾಬ್ರಿಕ್‌ನ ಗೋಲ್ಡನ್‌ ಸೀರೆಗಳು ಟ್ರೆಂಡಿಯಾಗಿವೆ. ಮಹಿಳೆಯರು ಕೂಡ ಅವರವರ ಅಭಿಲಾಷೆಗೆ ತಕ್ಕಂತೆ ಈ ಶೇಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ ಎನ್ನುತ್ತಾರೆ ಮಾರಾಟಗಾರರು.

Saree Fashion

ಪಾರ್ಟಿ ಪ್ರಿಯರ ಗೋಲ್ಟನ್‌ ಸೀರೆ

ಸೆಲೆಬ್ರೆಟಿಗಳು ಹಾಗೂ ಪಾರ್ಟಿ ಪ್ರಿಯರು ಅತಿ ಹೆಚ್ಚು ಗೋಲ್ಡನ್‌ ಸೀರೆಗಳನ್ನು ಇಷ್ಟಪಡುತ್ತಾರಂತೆ. ಹಾಗೆಂದು ಒಂದು ಬ್ಯೂಟಿ ಅಕಾಡೆಮಿಯ ಸಮೀಕ್ಷೆ ಕೂಡ ತಿಳಿಸಿದೆ.

Saree Fashion

ಸೆಲೆಬ್ರೆಟಿ ಲುಕ್‌ಗಾಗಿ ಗೋಲ್ಡನ್‌ ಸೀರೆ

ಇನ್ನು, ಸೆಲೆಬ್ರೆಟಿಯಂತೆ ತಾವು ಕೂಡ ಕಾಣಿಸಬೇಕು ಎಂದು ಬಯಸುವವರು ಕೂಡ ಗೋಲ್ಡನ್‌ ಸೀರೆಗಳನ್ನು ಇಷ್ಟಪಡುತ್ತಾರಂತೆ.

Saree Fashion

ಗೋಲ್ಡನ್‌ ಸೀರೆಗೆ ಕಾಂಟ್ರಾಸ್ಟ್ ಬ್ಲೌಸ್‌ ಮ್ಯಾಚ್‌

ಗೋಲ್ಡನ್‌ ಸೀರೆಗೆ ಅದೇ ರೀತಿಯ ಬ್ಲೌಸ್‌ ಹಾಕುವುದು ಇದೀಗ ತೀರಾ ಕಡಿಮೆಯಾಗಿದೆ. ಬ್ಲಾಕ್‌, ವೆಲ್ವೆಟ್‌, ಸ್ಲಿವ್‌ಲೆಸ್‌, ಹಾಲ್ಟರ್‌ ನೆಕ್‌, ಬಿಕಿನಿ ಬ್ಲೌಸ್‌, ಬ್ಯಾಕ್‌ಲೆಸ್‌ ಬ್ಲೌಸ್‌ಗಳನ್ನು ಧರಿಸುವುದು ಹೆಚ್ಚಾಗಿದೆ. ಇದು ಗ್ಲಾಮರಸ್‌ ಲುಕ್‌ ನೀಡುವುದು ಎನ್ನುತ್ತಾರೆ ಸ್ಟೈಲಿಸ್ಟ್ ಜೀತು.

ಇದನ್ನೂ ಓದಿ: Heera Mandi Fashion: ರೀಕ್ರಿಯೆಟ್‌ ಆಗುತ್ತಿದೆ ಹೀರಾಮಂಡಿ ಲುಕ್‌!

ಗೋಲ್ಡನ್‌ ಸೀರೆ ಆಯ್ಕೆ ಹೀಗಿರಲಿ

  • ನಿಮ್ಮ ಸ್ಕಿನ್‌ ಟೋನ್‌ಗೆ ಹೊಂದುವ ಗೋಲ್ಡನ್‌ ಶೇಡ್ಸ್ ಆಯ್ಕೆ ಮಾಡಿ.
  • ಆದಷ್ಟೂ ಬಾರ್ಡರ್‌ ಇಲ್ಲದ ಗೋಲ್ಡನ್‌ ಸೀರೆ ಪಾರ್ಟಿಲುಕ್‌ ನೀಡುವುದು.
  • ಫ್ಯಾಬ್ರಿಕ್‌ಗೆ ಆದ್ಯತೆ ನೀಡಿ.
  • ಸಾಫ್ಟ್ ಫ್ಯಾಬ್ರಿಕ್‌ನ ಗೋಲ್ಡನ್‌ ಸೀರೆಯಲ್ಲಿ ಬಳುಕುವ ಬಳ್ಳಿಯಂತೆ ಕಾಣಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Heera Mandi Fashion: ರೀಕ್ರಿಯೆಟ್‌ ಆಗುತ್ತಿದೆ ಹೀರಾಮಂಡಿ ಲುಕ್‌!

ಹೀರಾಮಂಡಿ ಲುಕ್‌ (Heera Mandi Fashion) ಇದೀಗ ಪ್ರಯೋಗಾತ್ಮಕವಾಗಿ ಫ್ಯಾಷನ್‌ ಹಾಗೂ ಬ್ಯೂಟಿ ಲೋಕದಲ್ಲಿ ರೀ ಕ್ರಿಯೇಟ್‌ ಆಗುತ್ತಿದೆ. ಈ ವೆಬ್‌ ಸೀರಿಸ್‌ನಲ್ಲಿ ನಟಿಯರು ಧರಿಸಿರುವ ಗ್ರ್ಯಾಂಡ್‌ ಡಿಸೈನರ್‌ವೇರ್ಸ್, ಹೆವ್ವಿ ಜ್ಯುವೆಲರಿಗಳು ಮಾನಿನಿಯರನ್ನು ಆಕರ್ಷಿಸಲಾರಂಭಿಸಿವೆ. ಇನ್ನು, ಇವೆಲ್ಲದಕ್ಕೂ ಸಾಥ್‌ ನೀಡುವ ಮೇಕಪ್‌ ಕೂಡ ಟ್ರೆಂಡಿಯಾಗಿದೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Heera Mandi Fashion
ಚಿತ್ರಕೃಪೆ: ರಾಶಿ ಸೃಜನ್‌ ಮೇಕಪ್‌ ಸ್ಟುಡಿಯೋ & ಅಕಾಡೆಮಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೀರಾಮಂಡಿ ಲುಕ್‌ (Heera Mandi Fashion) ಇದೀಗ ಎಲ್ಲೆಡೆ ರೀ ಕ್ರಿಯೇಟ್‌ ಆಗಲಾರಂಭಿಸಿದೆ. ಅದರಲ್ಲೂ, ಎಥ್ನಿಕ್‌ ಫ್ಯಾಷನ್‌ ಕೆಟಗರಿಯಲ್ಲಿ ಹೀರಾಮಂಡಿ ಲುಕ್‌ ಟಾಪ್‌ ಲಿಸ್ಟ್ ಸ್ಥಾನ ಗಳಿಸಿದೆ.

Heera Mandi Fashion

ವೆಬ್‌ ಸೀರಿಸ್‌ ಪ್ರಭಾವ

ಅಂದಹಾಗೆ, ಸಂಜಯ್‌ ಲೀಲಾ ಬನ್ಸಾಲಿ ನಿರ್ದೆಶನದಲ್ಲಿ ಓಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಹೀರಾಮಂಡಿ ವೆಬ್‌ ಸೀರಿಸ್‌ನಲ್ಲಿ ನಟಿಯರು ಧರಿಸಿದ, ಒಂದೊಂದು ಡಿಸೈನರ್‌ವೇರ್ಸ್, ಆಭರಣಗಳು ಈಗಾಗಲೇ ಮಾರುಕಟ್ಟೆಯಲ್ಲಿ ಟ್ರೆಂಡಿಯಾಗಿವೆ. ಇದರೊಂದಿಗೆ ಹೀರಾಮಂಡಿ ನಟಿಯರ ಲುಕ್‌ಗೆ ಸಾಥ್‌ ನೀಡಿದ್ದ ಮೇಕಪ್‌ ಹಾಗೂ ಸ್ಟೈಲಿಂಗ್‌ ಕೂಡ ಇದರೊಂದಿಗೆ ಹಿಟ್‌ ಆಗಿದೆ. ಈ ಲುಕ್‌ಗೆ ಮನಸೋತ ಫ್ಯಾಷನಿಸ್ಟಾಗಳು ಹಾಗೂ ಮೇಕಪ್‌ ಆರ್ಟಿಸ್ಟ್‌ಗಳು ಹೀರಾಮಂಡಿ ಲುಕ್ಕ್‌ ಅನ್ನು ರೀ ಕ್ರಿಯೇಟ್‌ ಮಾಡಲಾರಂಭಿಸಿದ್ದಾರೆ. ಪರಿಣಾಮ, ಈ ಲುಕ್‌ಗೆ ಸಾಥ್‌ ನೀಡಿದ ಎಥ್ನಿಕ್‌ವೇರ್ಸ್ ಹಾಗೂ ಜ್ಯುವೆಲರಿ ಡಿಸೈನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರೊಂದಿಗೆ ಕ್ಲಾಸಿ ಲುಕ್‌ ನೀಡುವ ಮೇಕಪ್‌ಗೂ ಪ್ರಾಮುಖ್ಯತೆ ನೀಡುವುದು ಹೆಚ್ಚಾಗಿದೆ ಎನ್ನುತ್ತಾರೆ ಮಾಡೆಲ್‌ ಕಮ್‌ ಸೆಲೆಬ್ರೆಟಿ ಮೇಕಪ್‌ ಆರ್ಟಿಸ್ಟ್ ರಾಶಿ ಮೇಘನಾ.

Heera Mandi Fashion

ಏನಿದು ಹೀರಾಮಂಡಿ ಲುಕ್‌

ಸ್ವಾತಂತ್ರ್ಯ ದೊರಕುವ ಮುನ್ನ, ಲಾಹೋರ್‌ನ ಹೀರಾ ಮಂಡಿಯಲ್ಲಿ ನಡೆಯುವ ಕಥಾ ಹಂದರವನ್ನು ಹೊಂದಿರುವ ಈ ವೆಬ್‌ಸೀರಿಸ್‌ನಲ್ಲಿ ನಟಿ ಮೊನಿಷಾ ಕೊಯಿರಾಲ, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಆದಿತಿ ರಾವ್‌ ಹೈದರಿ ಸೇರಿದಂತೆ ನಾನಾ ನಟಿಯರು ರೆಟ್ರೊ ಡಿಸೈನರ್‌ವೇರ್ಸ್‌ ಹಾಗೂ ಜ್ಯುವೆಲರಿಗಳಲ್ಲಿ ಶೃಂಗಾರಗೊಂಡು ಕಾಣಿಸಿಕೊಂಡಿದ್ದ ಗ್ರ್ಯಾಂಡ್‌ ಲುಕ್‌ ಇದು. ಇದೀಗ ಈ ಫ್ಯಾಷನ್‌ ಅನ್ನು ಹೀರಾಮಂಡಿ ಲುಕ್‌ ಎಂದು ಕರೆಯಲಾಗುತ್ತಿದೆ.

Heera Mandi Fashion

ಹೀರಾಮಂಡಿ ಲುಕ್‌ ರೀ ಕ್ರಿಯೇಟ್‌ ಮಾಡಿದ ರಾಶಿ ಮೇಘನಾ

ಬಾಲಿವುಡ್‌ ಹಾಗೂ ಬ್ಯೂಟಿಲೋಕದಲ್ಲಿ ಮಾತ್ರವಲ್ಲ, ನಮ್ಮ ಕನ್ನಡಿಗರಾದ ಸೆಲೆಬ್ರೆಟಿ ಮೇಕಪ್‌ ಆರ್ಟಿಸ್ಟ್ ರಾಶಿ ಮೇಘನಾ ಕೂಡ ಈ ಲುಕ್ಕನ್ನು ರೀ ಕ್ರಿಯೇಟ್‌ ಮಾಡಿದ್ದಾರೆ. ಅವರು ಈ ಲುಕ್‌ ರೀ ಕ್ರಿಯೇಟ್‌ಗಾಗಿ ರಿಸರ್ಚ್ ಕೂಡ ಮಾಡಿದರಂತೆ. ಒಂದೊಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು ಮರುಸೃಷ್ಟಿ ಮಾಡಿದರಂತೆ.

Heera Mandi Fashion

ಟ್ರೆಂಡಿಯಾದ ಹೀರಾಮಂಡಿ ಡಿಸೈನರ್‌ವೇರ್ಸ್ & ಜ್ಯುವೆಲರಿಗಳು

  • ಅದಿತಿ ಹೈದರ್ ಧರಿಸಿದ್ದ ಗ್ರ್ಯಾಂಡ್‌ ಎಂಬ್ರಾಯ್ಡರಿ ಅನಾರ್ಕಲಿ ಡಿಸೈನರ್‌ವೇರ್ಸ್.
  • ನಟಿ ಮೊನಿಷಾ ಕೊಯಿರಾಲ ಧರಿಸಿದ್ದ ಐವರಿ ಪ್ರಿಂಟೆಡ್‌ ಲೆಹೆಂಗಾ ಜೊತೆಗಿನ ಡಿಸೈನರ್‌ ಕುರ್ತಾ.
  • ಬನಾರಸಿ ದುಪಟ್ಟ & ಫ್ಲೇರ್‌ ಇರುವ ಶರಾರ.
  • ಬನಾರಸ್ ಫ್ಯಾಬ್ರಿಕ್‌ನ ಫ್ಲೋರಲ್‌ ಲೆಹೆಂಗಾ-ಗೋಲ್ಡನ್‌ ದುಪಟ್ಟಾ.
  • ಪ್ರಿಶಿಯಸ್‌ ಸ್ಟೋನ್‌ನಿಂದ ಸಿದ್ಧಪಡಿಸಿದ ಬಾರಿ ಗಾತ್ರದ ಸ್ಟೇಟ್‌ಮೆಂಟ್‌ ನೆಕ್ಲೇಸ್, ಕಂಗನ್‌, ಕಡ, ಸೈಡ್‌ ಮಾಂಗ್‌ ಟೀಕಾ, ಲೇಯರ್‌ ಹಾರ, ಮಾಟಿ, ಬಾಂದ್‌ಬಾಲಿ, ಹಾತ್‌ ಚೈನ್‌ ಇದೀಗ ಜ್ಯುವೆಲರಿ ಲೋಕದಲ್ಲಿ ಟ್ರೆಂಡ್‌ ಸೃಷ್ಟಿಸಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Fancy Handbags Fashion: ಸ್ಟೈಲಿಶ್‌ ಲುಕ್‌ಗೆ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳ ಸಾಥ್‌!

ಇದೀಗ ಊಹೆಗೂ ಮೀರಿದ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳು (Fancy Handbags Fashion) ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ. ಮೊದಲಿನಂತೆ ಇದೀಗ ಬ್ಯಾಗ್‌ಗಳು ಅಗತ್ಯ ವಸ್ತುಗಳನ್ನು ಇಡುವ ಹಾಗೂ ಬಳಸುವ ಬ್ಯಾಗ್‌ ಆಗಿ ಉಳಿದಿಲ್ಲ! ಬದಲಿಗೆ ಸ್ಟೈಲಿಶ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿದೆ. ಈ ಕುರಿತಂತೆ ಬ್ಯಾಗ್‌ ಡಿಸೈನರ್ಸ್ ಒಂದಿಷ್ಟು ವಿವರ ನೀಡಿದ್ದಾರೆ.

VISTARANEWS.COM


on

Fancy Handbags Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ಡಿಸೈನ್‌ನ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳು (Fancy Handbags Fashion) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೌದು, ಊಹೆಗೂ ಮೀರಿದ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಭಿನ್ನ-ವಿಭಿನ್ನ ವಿನ್ಯಾಸದಲ್ಲಿ ಇವು ಬಿಡುಗಡೆಗೊಂಡಿವೆ. ಅಂದಹಾಗೆ, ಮೊದಲಿನಂತೆ ಈ ಹ್ಯಾಂಡ್‌ಬ್ಯಾಗ್‌ಗಳು ಅಗತ್ಯ ವಸ್ತುಗಳನ್ನು ಇಡುವ ಹಾಗೂ ಕ್ಯಾರಿ ಮಾಡುವ ಬ್ಯಾಗ್‌ ಆಗಿ ಉಳಿದಿಲ್ಲ! ಬದಲಿಗೆ ಉಡುಪಿನೊಂದಿಗೆ ಸಾಥ್‌ ನೀಡುವ ಸ್ಟೈಲಿಶ್‌ ಆಗಿ ಕಾಣಿಸುವ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿಕೊಂಡಿವೆ. ಅಲ್ಲದೇ, ಬಹುತೇಕ ಫ್ಯಾಷನ್‌ ಪ್ರಿಯರ ಸ್ಟೈಲ್‌ ಸ್ಟೇಟ್‌ಮೆಂಟ್‌ ಲಿಸ್ಟ್‌ಗೆ ಸೇರಿಕೊಂಡಿವೆ.

ಟ್ರೆಂಡ್‌ನಲ್ಲಿರುವ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್ಸ್

ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ಗಳಲ್ಲಿ ಇದೀಗ ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ನವು, ಜೆಮೆಟ್ರಿಕಲ್‌ ಆಕಾರದವು, ಚಿತ್ರ-ವಿಚಿತ್ರ ಪ್ರಿಂಟ್ಸ್‌ನವು, ಲೆದರ್‌ನ ಮಿನಿ ಬ್ಯಾಗ್‌ಗಳು ಸಿಲಿಕಾನ್‌ನ ಕ್ಲಚ್‌ ಶೈಲಿಯವು, ಜ್ಯೂಟ್‌ ಹಾಗೂ ಬಂಬು ಸೇರಿದಂತೆ ಪರಿಸರ ಸ್ನೇಹಿ ವಸ್ತುಗಳಿಂದ ಸಿದ್ಧಪಡಿಸಲಾದ ಹ್ಯಾಂಡ್‌ಬ್ಯಾಗ್‌ಗಳು, ಫೈಬರ್‌ ಮೇಟಿರಿಯಲ್‌ನ ಪಿರಮಿಡ್‌ ಸ್ಟ್ರಕ್ಚರ್ ಡಿಸೈನ್‌ ಬ್ಯಾಗ್‌ಗಳು, ಟ್ರಾನ್ಸಫರೆಂಟ್‌, ಕ್ವಿರ್ಕಿ, ಫಂಕಿ ಹ್ಯಾಂಡ್‌ ಬ್ಯಾಗ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದವು ಚಾಲ್ತಿಯಲ್ಲಿವೆ.

Fancy Handbags Fashion

ದುಬಾರಿ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳ ರಿಪ್ಲಿಕಾ ಲಭ್ಯ

ಬ್ರಾಂಡೆಡ್‌ ಹ್ಯಾಂಡ್‌ಬ್ಯಾಗ್‌ಗಳಲ್ಲೂ ಇದೀಗ ಇಂತಹ ಡಿಸೈನ್‌ಗಳು ಬಂದಿರುವುದು ಸೆಲೆಬ್ರೆಟಿಗಳು ಹಾಗೂ ಫ್ಯಾಷನ್‌ ಮಾಡೆಲ್‌ಗಳು ಬಳಸುವುದನ್ನು ಕಾಣಬಹುದು. ಇನ್ನು, ಸಾಮಾನ್ಯ ಹುಡುಗಿಯರು ಕೂಡ ಇಂತಹ ಬ್ಯಾಗ್‌ಗಳನ್ನು ಹಿಡಿದು ಓಡಾಡತೊಡಗಿದ್ದಾರೆ. ಹಾಗೆಂದು ಸಾವಿರಗಟ್ಟಲೇ ಬೆಲೆ ಬಾಳುವ ಈ ಫ್ಯಾನ್ಸಿ ಬ್ಯಾಗ್‌ಗಳನ್ನು ಕೊಳ್ಳುತ್ತಾರೆಂದಲ್ಲ! ಅದೇ ಶೈಲಿಯ ರಿಪ್ಲಿಕಾ ಹ್ಯಾಂಡ್‌ ಬ್ಯಾಗ್‌ಗಳು ಕೂಡ ಇದೀಗ ಕೈಗೆಟಕುವ ದರದಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಎಕ್ಸ್‌ಫರ್ಟ್ಸ್‌. ಅವರ ಪ್ರಕಾರ, ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ಗಳಲ್ಲಿ ಹೆಚ್ಚು ಜಾಗದ ಅವಕಾಶವಿರುವುದಿಲ್ಲ. ನೋಡಲು ಹಾಗೂ ಶೋ ಆಫ್‌ಗಾಗಿ ಇಂತಹ ಬ್ಯಾಗನ್ನು ಬಳಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ.

Fancy Handbags Fashion

ತಾರೆಯರ ಲಕ್ಷುರಿ ಫ್ಯಾನ್ಸಿ ಹ್ಯಾಂಡ್‌ಬ್ಯಾಗ್ಸ್

ಇನ್ನು, ತಾರೆಯರ ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ಗಳ ಬೆಲೆ ಕೇಳಿದರೇ ಬೆಚ್ಚಿ ಬೀಳುತ್ತೀರಾ! ಎಲ್ಲವೂ ಲಕ್ಷ ರೂಪಾಯಿಗಳ ಮೇಲಿರುತ್ತದೆ. ಉದಾಹರಣೆಗೆ ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ ಕೈಯಲ್ಲಿ ಹಿಡಿದಿದ್ದ ಒಂದು ಹ್ಯಾಂಡ್‌ ಬ್ಯಾಗ್‌ಗೆ ಎರಡು ಲಕ್ಷಕ್ಕೂ ಹೆಚ್ಚು ದರ ಇತ್ತು. ಇನ್ನು ದೀಪಿಕಾ ಪಡುಕೋಣೆ ಬಳಸುವುದು ಇಂಟರ್ನ್ಯಾಷನಲ್‌ ಬ್ರಾಂಡ್‌ನದ್ದೇ! ಇದೇ ರೀತಿ, ಅನನ್ಯಾ, ಜಾನ್ವಿ ಕಪೂರ್‌, ಸುಹಾನಾ ಎಲ್ಲರೂ ಲಕ್ಷುರಿ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ ಪ್ರಿಯರು ಎನ್ನಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Parachute Pants Fashion: ಪ್ಯಾರಾಶೂಟ್‌ ಪ್ಯಾಂಟ್ಸ್; ಟೀನೇಜ್‌ ಹುಡುಗಿಯರ ಹೊಸ ಟ್ರೆಂಡ್‌!

ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ ಬಗ್ಗೆ ತಿಳಿದಿರಬೇಕಾದ್ದು

  • ನಿಮ್ಮ ಬಳಕೆಗೆ ತಕ್ಕಂತೆ ಡಿಸೈನ್‌ ಆಯ್ಕೆ ಮಾಡುವುದು ಉತ್ತಮ.
  • ನೋಡಲು ಫ್ಯಾನ್ಸಿಯಾಗಿರುವ ಬ್ಯಾಗ್‌ಗಳು ಹೆಚ್ಚು ಬಾಳಿಕೆ ಬರದು.
  • ಆದಷ್ಟೂ ನ್ಯೂಟ್ರಲ್‌ ಶೇಡ್‌ ಆಯ್ಕೆ ಉತ್ತಮ. ಎಲ್ಲಾ ಡ್ರೆಸ್‌ಗಳಿಗೂ ಮ್ಯಾಚ್‌ ಆಗುವುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Parachute Pants Fashion: ಪ್ಯಾರಾಶೂಟ್‌ ಪ್ಯಾಂಟ್ಸ್; ಟೀನೇಜ್‌ ಹುಡುಗಿಯರ ಹೊಸ ಟ್ರೆಂಡ್‌!

ನೋಡಲು ಕಾರ್ಗೋ ಪ್ಯಾಂಟ್‌ನಂತೆಯೇ ಕಾಣಿಸುವ ಪ್ಯಾರಾಶೂಟ್‌ ಪ್ಯಾಂಟ್‌ಗಳು (Parachute Pants Fashion) ಇದೀಗ ಡಾರ್ಕ್ ಶೇಡ್‌ನಲ್ಲಿ ಬಿಡುಗಡೆಗೊಂಡಿವೆ. ಟೀನೇಜ್‌ ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಈ ಪ್ಯಾಂಟ್‌ನೊಂದಿಗೆ ಯಾವ್ಯಾವ ಬಗೆಯ ಟಾಪ್‌ಗಳನ್ನು ಮಿಕ್ಸ್ ಮ್ಯಾಚ್‌ ಮಾಡಬಹುದು ಎಂಬುದರ ಕುರಿತಂತೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Parachute Pants Fashion
ಚಿತ್ರಗಳು: ಪಶ್ಮಿನಾ ರೋಷನ್‌, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಾಶೂಟ್‌ ಪ್ಯಾಂಟ್‌ಗಳು ಫ್ಯಾಷನ್‌ (Parachute Pants Fashion) ಲೋಕಕ್ಕೆ ರೀ ಎಂಟ್ರಿ ನೀಡಿವೆ. ಹೌದು, ನೋಡಲು ಕಾರ್ಗೋ ಪ್ಯಾಂಟ್‌ನಂತೆಯೇ ಕಾಣಿಸುವ ಈ ಪ್ಯಾರಾಶೂಟ್‌ ಪ್ಯಾಂಟ್‌ಗಳು ಇದೀಗ ನಾನಾ ಡಾರ್ಕ್ ಶೇಡ್‌ನಲ್ಲಿ ಬಿಡುಗಡೆಗೊಂಡಿವೆ. ಕಾಲೇಜು ಹುಡುಗಿಯರು ಹಾಗೂ ಟೀನೇಜ್‌ ಹುಡುಗಿಯರನ್ನು ಸವಾರಿ ಮಾಡುತ್ತಿವೆ.

Parachute Pants Fashion

ಕಾರ್ಗೋ ಪ್ಯಾಂಟ್‌ನಂತೆ ಕಾಣುವ ಪ್ಯಾಂಟ್‌ಗಳಿವು

“ಎಲ್ಲರ ಬಳಿಯಲ್ಲೂ ಒಂದಲ್ಲ ಒಂದು ಪ್ಯಾರಾಶೂಟ್‌ ಪ್ಯಾಂಟ್‌ಗಳು ಇದ್ದೇ ಇರುತ್ತವೆ. ಆದರೆ, ಬಹಳಷ್ಟು ಮಂದಿ ಇವನ್ನು ಕಾರ್ಗೋ ಪ್ಯಾಂಟ್‌ಗಳೆಂದುಕೊಂಡಿರುತ್ತಾರೆ. ಪ್ಯಾಂಟ್‌ನ ಹಿಂದೆ –ಮುಂದೆ ಪ್ಯಾಕೆಟ್‌ಗಳಿರುವುದರಿಂದ ಕೆಲವರು ಇವನ್ನು ಪೇಂಟರ್‌ ಪ್ಯಾಂಟ್‌ಗಳೆಂದು ಕೂಡ ಅಂದುಕೊಂಡಿರುತ್ತಾರೆ. ಇವೆಲ್ಲವೂ ಒಂದೇ ಡಿಸೈನ್‌ನ ನಾನಾ ರೂಪಗಳಾಗಿದ್ದು, ಹೆಸರು ಮಾತ್ರ ಬೇರೆಬೇರೆಯದ್ದಾಗಿರುತ್ತದೆ. ಡಿಸೈನರ್‌ಗಳು ಮಾತ್ರ ಇವನ್ನು ಬಲು ಸುಲಭವಾಗಿ ಕಂಡು ಹಿಡಿಯುತ್ತಾರೆ. ಈ ಲಿಸ್ಟ್‌ನಲ್ಲಿ ಇದೀಗ ಪ್ಯಾರಾಶೂಟ್‌ ಪ್ಯಾಂಟ್‌ಗಳು ಇವೆ. ಸದ್ಯ ಹುಡುಗಿಯರ ವಾರ್ಡ್ರೋಬ್‌ನಲ್ಲಿ ಸೇರಿವೆ. ಅಚ್ಚರಿ ಎಂಬಂತೆ ಇವುಗಳಲ್ಲಿ ಡಾರ್ಕ್ ಶೇಡ್‌ನವು ಅತಿ ಹೆಚ್ಚು ಚಾಲ್ತಿಯಲ್ಲಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜಿಖರ್‌.

Parachute Pants Fashion

ಟ್ರೆಂಡ್‌ನಲ್ಲಿರುವ ಪ್ಯಾರಾಶೂಟ್‌ ಪ್ಯಾಂಟ್‌ಗಳಿವು

ಅಂದಹಾಗೆ, ಪ್ಯಾರಾಶೂಟ್‌ ಪ್ಯಾಂಟ್‌ಗಳಲ್ಲಿ ಇದೀಗ ರಾಯಲ್‌ ಬ್ಲ್ಯೂ ಕರೆಂಟ್‌ ಬ್ಲ್ಯೂ, ಪೀಚ್‌, ಪಿಂಕ್‌, ಬಬ್ಬಲ್‌ಗಮ್‌ ಪಿಂಕ್‌, ಸನ್‌ ಕಲರ್‌ ಸೇರಿದಂತೆ ಎದ್ದು ಕಾಣುವಂತಹ ಶೇಡ್‌ಗಳು ಬಂದಿವೆ. ಕೆಲವಕ್ಕೆ ಹಿಂದೆ ಮುಂದೆ 4-6 ಪ್ಯಾಕೆಟ್‌ಗಳು ಇರುತ್ತವೆ. ಬೆಲ್ಟ್‌ ಇವಕ್ಕೆ ಧರಿಸಲಾಗುವುದಿಲ್ಲ. ಬದಲಿಗೆ ಈ ಪ್ಯಾಂಟ್‌ಗಳು ವೇಸ್ಟ್‌ಲೇನ್‌ನಲ್ಲಿ ಎಲಾಸ್ಟಿಕ್‌ ಹೊಂದಿರುತ್ತವೆ. ಟೈಯಿಂಗ್‌ ಆಪ್ಷನ್‌ ಕೂಡ ಇರುತ್ತದೆ. ಇನ್ನು ದೊಗಲೆಯಾಗಿರುವ ಈ ಪ್ಯಾಂಟ್‌ಗಳು ಕೆಲವೊಮ್ಮೆ ನೋಡಲು ಹಾರೆಮ್‌ ಪ್ಯಾಂಟ್‌ನಂತೆಯೂ ಕಾಣುತ್ತವೆ.

Parachute Pants Fashion

ಪ್ಯಾರಾಶೂಟ್‌ ಪ್ಯಾಂಟ್‌ಗೆ ಮಿಕ್ಸ್ – ಮ್ಯಾಚ್‌ ಮ್ಯಾಜಿಕ್‌

ಪ್ಯಾರಾಶೂಟ್‌ ಪ್ಯಾಂಟ್‌ಗೆ ಮಿಕ್ಸ್ ಮ್ಯಾಚ್‌ ಮಾಡುವ ಮ್ಯಾಜಿಕ್‌ ಗೊತ್ತಿದ್ದಲ್ಲಿ ಅತ್ಯಾಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಡಿಸೈನರ್ಸ್. ಹೌದು. ಇಂದಿನ ಹುಡುಗಿಯರು ಯಾವುದೇ ಪ್ಯಾಂಟ್‌ಗೂ ಟಮ್ಮಿಯಿಂದ ಕೆಳಗೆ ಬರುವಂತಹ ಟಾಪ್‌ಗಳನ್ನು ಧರಿಸುವುದೇ ಇಲ್ಲ. ಹಾಗಾಗಿ ನೋಡಲು ಗ್ಲಾಮರ್ ಲುಕ್‌ ದೊರೆಯುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡಲ್ಲಿ, ಈ ಪ್ಯಾಂಟ್‌ಗೆ ಕಾರ್ಸೆಟ್‌ ಟಾಪ್‌, ಸ್ಲಿವ್‌ಲೆಸ್‌ ಕ್ರಾಪ್‌ ಟಾಪ್‌, ಬಾರ್ಡಟ್ ಟಾಪ್‌, ಆಫ್‌ ಶೋಲ್ಡರ್‌ ಟಾಪ್‌, ಹಾಲ್ಟರ್‌ ನೆಕ್‌ ಇರುವಂತಹ ಟಾಪ್‌ಗಳನ್ನು ಧರಿಸಬಹುದು. ಇವು ಮಾಡರ್ನ್ ಲುಕ್‌ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Star Street Fashion: ಬೆಂಗಳೂರಿನ ರಸ್ತೆಯಲ್ಲಿ ಕಾಂತಾರ ಬೆಡಗಿಯ ಹೈ ಸ್ಟ್ರೀಟ್‌ ಫ್ಯಾಷನ್‌!

ಪ್ಯಾರಾಶೂಟ್‌ ಪ್ಯಾಂಟ್‌ ಆಯ್ಕೆಗೆ 3 ಸಲಹೆ

  • ಕಾಲಿನ ಕೆಳಗೆ ಪ್ಯಾಂಟ್‌ ಕೆಳಗಿಳಿಯುವಂತಿರಬಾರದು.
  • ಟಾಪ್‌ಗಳು ಫಿಟ್ಟಿಂಗ್‌ ಇದ್ದಲ್ಲಿ ಚೆನ್ನಾಗಿ ಕಾಣಿಸುವುದು.
  • ಪ್ಯಾಂಟ್‌ ತೀರಾ ದೊಗಲೆಯಾಗಿಯೂ ಕಾಣಿಸಬಾರದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
IND vs PAK
ಕ್ರೀಡೆ30 mins ago

IND vs PAK: ಭಾರತ-ಪಾಕ್​ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!

Money Guide
ಮನಿ-ಗೈಡ್32 mins ago

Money Guide: ಈಗಿನ ಆರೋಗ್ಯ ವಿಮಾ ಪಾಲಿಸಿ ಬಗ್ಗೆ ಸಮಾಧಾನ ಇಲ್ಲವೆ? ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ ಬಳಸಿ

Niveditha Gowda chandan shetty age differance
ಸ್ಯಾಂಡಲ್ ವುಡ್36 mins ago

Niveditha Gowda: ಚಂದನ್‌ ಶೆಟ್ಟಿ-ನಿವೇದಿತಾ ನಡುವಿನ ವಯಸ್ಸಿನ ಅಂತರವೆಷ್ಟು?

Viral Video
ವೈರಲ್ ನ್ಯೂಸ್40 mins ago

Viral Video: ಹೊಟೇಲ್‌ ಮಾಲೀಕನನ್ನು ಮುಖಾಮೂತಿ ನೋಡದೆ ಚಚ್ಚಿದ ಶಾಸಕ; ವಿಡಿಯೋ ಫುಲ್‌ ವೈರಲ್‌

Congress Guarantee
ಕರ್ನಾಟಕ41 mins ago

Congress Guarantee: ʼಸ್ಯಾಡಿಸ್ಟ್‌ʼ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ, ನಿಲ್ಲಿಸೋದೇ ಒಳಿತು ಎಂದ ಲಕ್ಷ್ಮಣ್‌!

Food Tips Kannada
ಆರೋಗ್ಯ47 mins ago

Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

Murder case in Mysuru
ಮೈಸೂರು54 mins ago

Murder Case : ತಂಗಿಗೆ ವರದಕ್ಷಿಣೆ ಟಾರ್ಚರ್‌; ಬಾಮೈದನ ಕೊಲೆ ಮಾಡಿದ ಬಾವ

Rohit Sharma Injury
ಕ್ರೀಡೆ1 hour ago

Rohit Sharma Injury: ಪಾಕ್​ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆತಂಕ; ಅಭ್ಯಾಸದ ವೇಳೆ ರೋಹಿತ್​ಗೆ ಗಾಯ

Niveditha Gowda Demand For Divorce Alimony
ಸ್ಯಾಂಡಲ್ ವುಡ್1 hour ago

Niveditha Gowda: ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ರಾ ನಿವೇದಿತಾ ಗೌಡ?

Kangana Ranaut
ದೇಶ1 hour ago

Kangana Ranaut: ಕಾರಣ ಇದ್ದರೆ ಕೊಲೆ, ಅತ್ಯಾಚಾರ ಮಾಡಬಹುದೆ? ; ವಿರೋಧಿಗಳ ವಿರುದ್ಧ ಗುಡುಗಿದ ಕಂಗನಾ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ23 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ1 day ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌