-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್ ಸೀಸನ್‌ನಲ್ಲಿ ಮತ್ತೊಮ್ಮೆ ಸೆಲೆಬ್ರೆಟಿ ಲುಕ್ ನೀಡುವ ಬ್ಯಾಕ್‌ಲೆಸ್ ಉಡುಪುಗಳು ಲಗ್ಗೆ ಇಟ್ಟಿದ್ದು, ಅವುಗಳಲ್ಲಿ 3 ಶೈಲಿಯ ಬ್ಯಾಕ್‌ಲೆಸ್ ಔಟ್‌ಫಿಟ್‌ಗಳು ಸಖತ್ ಟ್ರೆಂಡಿಯಾಗಿವೆ (Summer Fashion).
ಜೆನ್ ಜಿ ಹುಡುಗಿಯರು ಮಾತ್ರವಲ್ಲ, ಕಾರ್ಪೋರೇಟ್ ಕ್ಷೇತ್ರದ ಯುವತಿಯರನ್ನು ಸೆಳೆದಿವೆ. ಧರಿಸಿದಾಗ ನೋಡಲು ಹಾಟ್ ಲುಕ್ ನೀಡುವ ಈ ಬ್ಯಾಕ್‌ಲೆಸ್ ಉಡುಪುಗಳಲ್ಲಿ ಈ ಬಾರಿಯೂ ಕೆಲವು ಹೆಚ್ಚು ಚಾಲ್ತಿಯಲ್ಲಿವೆ. ಪ್ರತಿ ಬೇಸಿಗೆಯಲ್ಲೂ ಹೊಸ ರೂಪದೊಂದಿಗೆ ಮರಳುವ ಈ ಬ್ಯಾಕ್‌ಲೆಸ್ ಡ್ರೆಸ್ ಹಾಗೂ ಟಾಪ್‌ಗಳು ಹೈ ಸ್ಟ್ರೀಟ್ ಫ್ಯಾಷನ್‌ನ ಭಾಗವಾಗಿವೆ.
“ಪ್ರತಿ ಬೇಸಿಗೆಯಲ್ಲೂ ಬಗೆಬಗೆಯ ಬ್ಯಾಕ್‌ಲೆಸ್ ಔಟ್‌ಫಿಟ್ಸ್ ಕಾಲಿಡುತ್ತವೆ. ನೋಡಲು ಇವು ಒಂದೇ ಬಗೆಯದ್ದಾಗಿ ಕಂಡರೂ, ವಿನ್ಯಾಸ ಬೇರೆ ಬೇರೆಯದ್ದಾಗಿರುತ್ತವೆ. ಡಿಸೈನ್ ಕೂಡ ಬದಲಾಗಿರುತ್ತವೆ. ಕಾನ್ಸೆಪ್ಟ್ ಮಾತ್ರ ಒಂದೇ” ಎನ್ನುವ ಸ್ಟೈಲಿಸ್ಟ್ ರಚನಾ ಹೇಳುವಂತೆ, ʼʼಬ್ಯಾಕ್‌ಲೆಸ್ ಉಡುಪುಗಳು ಎಕ್ಸ್ಪೋಸ್ ಮಾಡುವ ಉಡುಪುಗಳು ಎಂಬ ಯೋಚನೆ ಜನರಲ್ಲಿದೆ. ಇದು ನಿಜ ಕೂಡ. ಇವು ಅಲ್ಟ್ರಾ ಮಾಡರ್ನ್ ಹುಡುಗಿಯರ ಚಾಯ್ಸ್ ಔಟ್‌ಫಿಟ್‌ಗಳುʼʼ ಎನ್ನುತ್ತಾರೆ.
ಬ್ಯಾಕ್‌ಲೆಸ್ ಹಾಲ್ಟರ್ ನೆಕ್ ಡ್ರೆಸ್
ಇದು ತೀರಾ ಕಾಮನ್ ಡ್ರೆಸ್. ಈ ನೆಕ್‌ಲೈನ್ ಇರುವಂತಹ ಬ್ಯಾಕ್‌ಲೆಸ್ ಡ್ರೆಸ್‌ಗಳನ್ನು ಹಾಗೂ ಟಾಪ್‌ಗಳನ್ನು ಬಹುತೇಕ ಯುವತಿಯರು ಪ್ರಿಫರ್ ಮಾಡುತ್ತಾರೆ. ಈ ಉಡುಪಿನಲ್ಲಿ ಮುಂಭಾಗ ಕಂಪ್ಲೀಟ್ ಕ್ಲೋಸ್ ಆಗಿರುತ್ತದೆ. ಹಿಂಭಾಗ ಎಕ್ಸ್ಪೋಸ್ ಆಗಿರುತ್ತದೆ. ಕಾಲೇಜು ಹುಡುಗಿಯರ ಲಿಸ್ಟ್ನಲ್ಲಿವೆ. ಅತಿ ಹೆಚ್ಚು ಯುವತಿಯರು ಬಳಸುವ ಬ್ಯಾಕ್‌ಲೆಸ್ ಡ್ರೆಸ್ಗಳಿವು ಎಂದರೂ ಅತಿಶಯೋಕ್ತಿಯಾಗದು.
ಮಲ್ಟಿ ಸ್ಟ್ರಾಪ್ ಬ್ಯಾಕ್‌ಲೆಸ್ ಔಟ್‌ಫಿಟ್ಸ್
ಕೆಲವು ಬ್ಯಾಕ್‌ಲೆಸ್ ಡ್ರೆಸ್‌ಗಳು ಸಾಕಷ್ಟು ಸ್ಟ್ರಾಪ್ ಹೊಂದಿರುತ್ತವೆ. ಇದು ತೀರಾ ಎಕ್ಸ್ಪೋಸ್ ಆಗುವುದನ್ನು ತಪ್ಪಿಸುತ್ತವೆ. ಜತೆಗೆ ಗ್ಲಾಮರಸ್ ಲುಕ್ ನೀಡುತ್ತವೆ. ಇನ್ನು ಈ ಶೈಲಿಯ ಗೌನ್, ಮಿಡಿ, ಮ್ಯಾಕ್ಸಿಗಳು ಹೆಚ್ಚು ಪ್ರಚಲಿತದಲ್ಲಿವೆ. ನಾನಾ ಡಿಸೈನ್‌ನಲ್ಲಿ ಇವು ದೊರೆಯುತ್ತಿವೆ. ಸ್ಪೆಗೆಟಿ ಬ್ಯಾಕ್‌ಲೆಸ್ ಫ್ರಾಕ್‌ಗಳೂ ಟ್ರೆಂಡ್‌ನಲ್ಲಿವೆ.
ಬ್ಯಾಕ್‌ಲೆಸ್ ಮಿನಿ ಪಾರ್ಟಿ ಡ್ರೆಸ್
ಪಾರ್ಟಿಗಳಿಗೆ ಧರಿಸಬಹುದಾದ ನಾನಾ ಶೈಲಿಯ ಮಿನಿ ಬ್ಯಾಕ್‌ಲೆಸ್ ಪಾರ್ಟಿ ಡ್ರೆಸ್ಗಳು ಕೂಡ ಹೆಚ್ಚು ಪ್ರಚಲಿತದಲ್ಲಿವೆ. ಇವು ಜೆನ್ ಜಿ ಹುಡುಗಿಯರ ಫೇವರೇಟ್ ಲಿಸ್ಟ್ನಲ್ಲಿವೆ. ಇನ್ನು, ಮಿನಿ ಫ್ರಾಕ್‌ನಲ್ಲಿ ಇವನ್ನು ಕಾಣಬಹುದು. ಕೆಲವು ಸ್ಯಾಟೀನ್ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ. ಇನ್ನು ಕೆಲವು ಸಿಕ್ವೀನ್ಸ್ನಲ್ಲೂ ಲಭ್ಯ. ಆನ್‌ಲೈನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯವು ದೊರೆಯುತ್ತಿವೆ. ಬೇಸಿಗೆಗೆ ಮ್ಯಾಚ್ ಆಗುವಂತಹ ಡಿಸೈನ್‌ನಲ್ಲಿ ಸಿಗುತ್ತಿವೆ.
ಬ್ಯಾಕ್ ಲೆಸ್ ಡ್ರೆಸ್ ಪ್ರಿಯರು ಪಾಲಿಸಬೇಕಾದ 5 ಟಿಪ್ಸ್:
- ಬ್ಯಾಕ್‌ಲೆಸ್ ಡ್ರೆಸ್ ನಿಮ್ಮ ಪರ್ಸನಾಲಿಟಿಗೆ ಮ್ಯಾಚ್ ಆಗುವಂತಿರಬೇಕು.
- ಫಿಟ್ಟಿಂಗ್ ಸರಿಯಾಗಿರದಿದ್ದಲ್ಲಿ ಎಕ್ಸ್ ಪೋಸ್ ಆಗುವ ಸಾಧ್ಯತೆಗಳಿರುತ್ತವೆ.
- ಈ ಉಡುಪುಗಳಿಗೆ ಸೂಕ್ತವಾದ ಇನ್ನರ್ವೇರ್ ಧರಿಸುವುದು ಅಗತ್ಯ.
- ಆದಷ್ಟೂ ಮಿನಿಮಲ್ ಆಕ್ಸೆಸರೀಸ್ ಧರಿಸಿ.
- ಪಾರ್ಟಿಗಳಿಗೆ ಹಾಗೂ ಔಟಿಂಗ್ಗೆ ಮಾತ್ರ ಸೂಕ್ತ ಎಂಬುದನ್ನು ಮರೆಯದಿರಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸಮ್ಮರ್ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್ ಇಯರಿಂಗ್ಸ್