ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ ಸಹಯೋಗದಲ್ಲಿ ನಡೆದ ಈ ಸಾಲಿನ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ (Lakme Fashion Week 2024) ಮಾಡೆಲ್‌ಗಳು ಧರಿಸಿದ ವೈವಿಧ್ಯಮಯ ಡಿಸೈನರ್‌ವೇರ್‌ಗಳ ನಡುವೆ ಸಸ್ಟೈನಬಲ್ ಫ್ಯಾಷನ್‌ವೇರ್‌ಗಳು ಎಲ್ಲರನ್ನು ಆಕರ್ಷಿಸಿದವು. ದುಂದು ವೆಚ್ಚವಿಲ್ಲದೇ, ಮರುಸೃಷ್ಟಿಸಿ ಸಿದ್ಧಪಡಿಸಿದ ಈ ಡಿಸೈನರ್‌ವೇರ್‌ಗಳು ಈ ವರ್ಷದ ಫ್ಯಾಷನ್ ವೀಕ್‌ನಲ್ಲಿ ಹೊಸ ಸಂಚಲನ ಮೂಡಿಸಿದವು.
ಶೋ ಸ್ಟಾಪರ್‌ಗಳಾದ ಸೆಲೆಬ್ರೆಟಿಗಳು
ಅಂದಹಾಗೆ, ಈಗಾಗಲೇ ಆರಂಭವಾಗಿರುವ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ನೇಹಾ ದುಪಿಯಾ, ದಿಯಾ ಮಿರ್ಜಾ ಸೇರಿದಂತೆ ನಾನಾ ಬಾಲಿವುಡ್ ಸೆಲೆಬ್ರೆಟಿಗಳು ಶೋ ಸ್ಟಾಪರ್ ಆಗಿ ವಾಕ್ ಮಾಡಿದರು. ಡಿಸೈನರ್‌ಗಳು ತಮ್ಮ ಡಿಸೈನರ್‌ವೇರ್‌ಗಳನ್ನು ರನ್ ವೇ ಶೋನಲ್ಲಿ ಭಿನ್ನ-ವಿಭಿನ್ನವಾಗಿ ಅನಾವರಣ ಮಾಡಿದರು. ಅವುಗಳಲ್ಲಿ 2ನೇ ದಿನದ ಸಸ್ಟೈನಬಲ್ ಫ್ಯಾಷನ್ ಶೋ ಮಾತ್ರ ಫ್ಯಾಷನ್ ಪ್ರೇಮಿಗಳನ್ನು ಮಾತ್ರವಲ್ಲ, ಎಲ್ಲಾ ವರ್ಗದವರನ್ನು ಸೆಳೆಯಿತು.
ಬ್ಲ್ಯಾಕ್ ಕೋ ಆರ್ಡ್ ಲಾಂಗ್ ಸಸ್ಟೈನಬಲ್ ಔಟ್‌ಫಿಟ್‌ನಲ್ಲಿ ದಿಯಾ
ಬ್ಲ್ಯಾಕ್ ಶೇಡ್‌ನ ಮಾನೋಕ್ರೋಮ್ ಕಪ್ಪು ವರ್ಣದ ಇನ್ಕಾ ಕಲೆಕ್ಷನ್ ಧರಿಸಿ ಕೋ ಆರ್ಡ್ ಸ್ಕರ್ಟ್ ಸೆಟ್‌ನಲ್ಲಿ ವಾಕ್ ಮಾಡಿದ ಬಾಲಿವುಡ್ ನಟಿ ದಿಯಾ ಮಿರ್ಜಾ, ಮುಡಿಯಿಂದ ಪಾದದವರೆಗೂ ಗೌನ್ ಶೈಲಿಯ ಕಾಲರ್ ಇರುವ ಶರ್ಟ್ ಹಾಗೂ ಲಾಂಗ್ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡರು.
ಒಂದೇ ರ‍್ಯಾಂಪ್ ಮೇಲೆ ನಟಿ ಕೊಂಕಣ ಸೇನ್-ನೇಹಾ ದುಪಿಯಾ
ಡಿಸೈನರ್ ಲೆಬೆಲ್ ಚೋಲಾ ಡಿಸೈನರ್‌ವೇರ್‌ಗಳನ್ನು ಧರಿಸಿದ್ದ ಬಾಲಿವುಡ್ ನಟಿ ಕೊಂಕಣ ಸೇನ್ ಹಾಗೂ ನೇಹಾ ದುಪಿಯಾ ಬ್ಲ್ಯಾಕ್ ಹಾಗೂ ವೈಟ್ ಡಿಸೈನರ್‌ವೇರ್ ಧರಿಸಿ ಒಂದೇ ರ‍್ಯಾಂಪ್ ಮೇಲೆ ವಾಕ್ ಮಾಡಿದರು. ಕೊಂಕಣ ಸೇನ್ ಶೀರ್ ಕುರ್ತಾ –ಪಲ್ಹಾಜ್ಹೋ ಧರಿಸಿದರೇ, ನೇಹಾ ದುಪಿಯಾ ಬ್ಯಾಗಿ 3 ಪೀಸ್ ಕೋ ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡರು. ಮೊದಲ ದಿನದ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಡೆನೀಮ್ ಕಾನ್ಸೆಪ್ಟ್ ಇರಿಸಿಕೊಂಡ ಡಿಸೈನರ್‌ವೇರ್‌ಗಳು ಅನಾವರಣಗೊಂಡವು. ನಟಿ ಕರೀಷ್ಮಾ ತನ್ನಾ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು.
ವಯಸ್ಸಿನ ಭೇದವಿಲ್ಲದೇ ನಡೆದ ಮಾಡೆಲ್‌ಗಳು
ಈ ಸಾಲಿನ ಲ್ಯಾಕ್ಮೆ ಫ್ಯಾಷನ್ ಶೋನ ಆರಂಭದಲ್ಲಿ ವಯಸ್ಸಿನ ಭೇದ-ಬಾವವಿಲ್ಲದೇ ಫಿಟ್ ಆಗಿರುವ ಮಾಡೆಲ್‌ಗಳು ಹಾಗೂ ನಟಿಯರು ರ್ಯಾಂಪ್ ವಾಕ್ ಮಾಡಿದರು. ಜೆನ್ ನೆಕ್ಟ್ಸ್ ಗಮನದಲ್ಲಿರಿಕೊಂಡ ಹಲವಾರು ಡಿಸೈನರ್‌ಗಳು ಮುಂಬರುವ ಜನರೇಷನ್‌ಗೂ ಇಷ್ಟವಾಗುವಂತಹ ಕಾನ್ಸೆಪ್ಟ್‌ಗಳನ್ನು ಡಿಸೈನರ್‌ಗಳು ಅನಾವರಣ ಮಾಡಿದರು.
ಇದನ್ನೂ ಓದಿ: Wedding Fashion: ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ ಬಂಗಾರ ವರ್ಣದ ಪಾದರಕ್ಷೆಗಳು