Site icon Vistara News

Teddybear day: ಕ್ಯೂಟಾಗಿ ಲವ್‌ ಯೂ ಹೇಳಲು ಬಂತು ಮುದ್ದುಮುದ್ದಾದ ಕಲರ್‌ಫುಲ್‌ ಟೆಡ್ಡಿ ಬೇರ್ಸ್

Teddybear day

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನೀವು ಕ್ಯೂಟಾಗಿ ಲವ್‌ ಯೂ ಹೇಳಬೇಕೇ! ಹಾಗಾದಲ್ಲಿ ಮುದ್ದುಮುದ್ದಾದ ಟೆಡ್ಡಿ ಬೇರ್‌ ಗಿಫ್ಟ್‌ (Teddybear day) ನೀಡಿ ಎನ್ನುತ್ತಾರೆ ಲವ್‌ ಎಕ್ಸ್‌ಪಟ್ರ್ಸ್. ಹೌದು. ವ್ಯಾಲೆಂಟೈನ್ಸ್‌ ವೀಕ್‌ನ ಫೆಬ್ರವರಿ ೧೦ ಟೆಡ್ಡಿ ಬೇರ್‌ ದಿನ . ಇದಕ್ಕೆ ಪೂರಕ ಎಂಬಂತೆ ಈಗಾಗಲೇ ನಾನಾ ಬಗೆಯ ಕ್ಯೂಟಾಗಿರುವ ಕಲರ್‌ಫುಲ್‌ ಟೆಡ್ಡಿ ಬೇರ್‌ ಬೊಂಬೆಗಳು ಲಗ್ಗೆ ಇಟ್ಟಿವೆ.

ವೆರೈಟಿ ಟೆಡ್ಡಿ ಬೇರ್‌ ಪ್ರಪಂಚ

ಊಹೆಗೂ ಮೀರಿದ ನಾನಾ ಮಿಕ್ಸ್‌ ಮ್ಯಾಚ್‌ ಟೆಡ್ಡಿ ಬೇರ್‌ ಗಿಫ್ಟ್‌ ಐಡಿಯಾಗಳು ಕಸ್ಟಮೈಸ್ಡ್ ವಿನ್ಯಾಸ ಮಾಡಿದ ಟೆಡ್ಡಿ ಬೇರ್‌ಗಳು ಗಿಫ್ಟ್ ರೂಪದಲ್ಲಿ ಈಗಾಗಲೇ ನಾನಾ ಶಾಪ್‌ಗಳಲ್ಲಿ ರಾರಾಜಿಸುತ್ತಿವೆ. ಹಾರ್ಟ್ ಪಿಲ್ಲೊ, ಲವ್‌ ಸಿಂಬಲ್‌ಗಳನ್ನು ಹೊಂದಿದ ಅಂಗೈ ಅಗಲದ ಪುಟ್ಟ ಟೆಡ್ಡಿಯಿಂದಿಡಿದು ಆರಡಿವರೆಗಿನ ಪಾಸ್ಟೆಲ್‌ ಶೇಡ್‌ ಹಾಗೂ ಡಾರ್ಕ್ ಶೇಡ್‌ನ ಫರ್‌, ಸಾಫ್ಟ್‌ ಮೆಟೀರಿಯಲ್‌ನ ಟೆಡ್ಡಿಗಳು ಎಂಟ್ರಿ ನೀಡಿವೆ.

ಕಲರ್‌ಫುಲ್‌ ಸಾಫ್ಟ್‌ ಟೆಡ್ಡಿಗಳಿಗೆ ಬೇಡಿಕೆ

ಇನ್ನು, ಒಂದೊಂದು ಬಗೆಯ ವರ್ಣದ ಟೆಡ್ಡಿಗಳಿಗೂ ವಿಶೇಷ ಅರ್ಥವಿದೆಯಂತೆ. ಕೆಂಪು ವರ್ಣದ ಟೆಡ್ಡಿಬೇರ್‌ ಪ್ರೀತಿಯ ಆಳವನ್ನು ಬಿಂಬಿಸಿದರೆ, ಗುಲಾಬಿ ವರ್ಣದ್ದು ಫ್ರೆಂಡ್‌ಶಿಪ್‌ನಂತಿರುವ ಸ್ನೇಹವನ್ನು ಪ್ರೇಮವನ್ನಾಗಿ ಸ್ವೀಕರಿಸುವ ಅರ್ಥ ನೀಡುತ್ತದೆ ಎನ್ನಲಾಗುತ್ತದೆ. ಇನ್ನು ಆಕಾಶ ನೀಲಿ ಅಥವಾ ತಿಳಿ ನೀಲಿ ವರ್ಣದ್ದು ಪ್ರಾಮೀಸ್‌ ಹಾಗೂ ಕಮಿಟ್‌ಮೆಂಟ್‌ಗೆ ಸಿದ್ಧ ಎಂಬುದನ್ನು ಸೂಚಿಸುತ್ತದಂತೆ. ಹಸಿರು ಬಣ್ಣದ್ದು ಪ್ರೀತಿಗೆ ಸದಾ ತಾಳ್ಮೆಯಿಂದ ಕಾಯುವ ವ್ಯವಧಾನವನ್ನು ತೋರ್ಪಡಿಸುತ್ತದಂತೆ. ಕೇಸರಿ ಬಣ್ಣದ್ದು ಖುಷಿ ಹಾಗೂ ಭವಿಷ್ಯದ ಆಶಾಕಿರಣದ ದ್ಯೋತಕ ಎಂದು ಬಿಂಬಿಸುತ್ತದಂತೆ.

ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ ಖರೀದಿ ಹೆಚ್ಚಳ

ಸಮೀಕ್ಷೆಯೊಂದರ ಪ್ರಕಾರ, ಇಡೀ ವರ್ಷದಲ್ಲಿ ಕೇವಲ ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಸಾಫ್ಟ್ ಟೆಡ್ಡಿಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಂತೆ. ಬ್ರಾಂಡೆಡ್‌ ಟೆಡ್ಡಿ ಬೇರ್‌ಗಳಿಂದಿಡಿದು ಬೀದಿ ಬದಿಯಲ್ಲಿ ಮಾರಾಟವಾಗುವ ಸಾಮಾನ್ಯ ಫೇಕ್‌ ಫರ್‌ನ ಟೆಡ್ಡಿ ಬೇರ್‌ಗಳಿಗೂ ಬೇಡಿಕೆ ಹೆಚ್ಚುತ್ತದಂತೆ ಹಾಗೆನ್ನುತ್ತಾರೆ ಮಾರಾಟಗಾರರು.

ಆನ್‌ಲೈನ್‌ನಲ್ಲಿ ಟೆಡ್ಡಿ ಬೇರ್ಸ್‌ಗೆ ಡಿಸ್ಕೌಂಟ್ಸ್

ಆನ್‌ಲೈನ್‌ ಖರೀದಿದಾರರಿಗೆ ಸಂತಸದ ಸುದ್ದಿ. ನಾನಾ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ಗಳು ಈ ಸೀಸನ್‌ನಲ್ಲಿ ಶೇಕಡಾ ೫೦, ೬೦ ಹಾಗೂ ೭೫ ಪರ್ಸೆಂಟ್‌ ಗಳಷ್ಟು ಡಿಸ್ಕೌಂಟ್‌ ನೀಡುತ್ತಿವೆ. ಚೆಕ್‌ ಮಾಡಿ ನೋಡಿ ಕೊಳ್ಳಿ. ನ್ಯೂ ಅರೈವಲ್‌ಟೆಡ್ಡಿಗಳಿಗೆ ಮಾತ್ರ ನಿಗದಿತ ಬೆಲೆ ಎನ್ನುತ್ತಾರೆ ಆನ್‌ಲೈನ್‌ ಶಾಪಿಂಗ್‌ ಪ್ರಿಯೆ ಪ್ರಿಯಾ ರಾಜ್‌.

ಪ್ರೀತಿ ಪಾತ್ರರಿಗೆ ಕೊಡುವ ಟೆಡ್ಡಿ ಬೇರ್‌ ಆಯ್ಕೆ ಹೀಗಿರಲಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version