Site icon Vistara News

Pink dress trending: ಬಾರ್ಬಿ ಫ್ಯಾಷನ್‌ಗೆ ಸೇರಿದ ಪಿಂಕ್‌ ಔಟ್‌ಫಿಟ್ಸ್‌ಗೆ ಹೆಚ್ಚಾಯ್ತು ಬೇಡಿಕೆ

women in Barbie Outfit

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇದೀಗ ಎಲ್ಲಿ ನೋಡಿದರೂ ಪಿಂಕ್‌ಮಯ! ಬಾರ್ಬಿ ಫ್ಯಾಷನ್‌ (Pink dress trending) ಹವಾ ಹರಡುತ್ತಿದ್ದಂತೆ, ಎಲ್ಲೆಡೆ ಪಿಂಕ್‌ ಶೇಡ್‌ನ ಉಡುಪುಗಳು ಟ್ರೆಂಡಿಯಾಗಿವೆ. ವಯಸ್ಸಿನ ಭೇದ-ಭಾವವಿಲ್ಲದೇ, ಸ್ತ್ರೀಯರು ಹಾಗೂ ಮಕ್ಕಳು ಈ ಶೇಡ್‌ನ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಪರಿಣಾಮ, ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ.

ಸೆಲೆಬ್ರೆಟಿಗಳ ಪಿಂಕ್‌ ಲವ್‌

ಬಾರ್ಬಿ ಫ್ಯಾಷನ್‌ ಹವಾ ಎಲ್ಲೆಡೆ ಬೀಸುತ್ತಿದ್ದಂತೆ ಹಾಲಿವುಡ್‌ ತಾರೆಯರು ಮಾತ್ರವಲ್ಲ, ನಮ್ಮ ಬಾಲಿವುಡ್‌ ಹಾಗೂ ಸೋಷಿಯಲ್‌ ಮೀಡಿಯಾ ತಾರೆಯರು ಪಿಂಕ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಜಾಗತೀಕ ಮಟ್ಟದಲ್ಲಿ, ನಾನಾ ಪಿಂಕ್‌ ಶೇಡ್‌ ಔಟ್‌ಫಿಟ್ಸ್ ಫ್ಯಾಷನ್‌ ಪ್ರಿಯರನ್ನು ಸಮ್ಮೋಹನಗೊಳಿಸಿದೆ ಎಂದರೂ ತಪ್ಪಾಗಲಾರದು.

ಟ್ರೆಂಡಿಯಾಗಿರುವ ಪಿಂಕ್‌ ಔಟ್‌ಫಿಟ್ಸ್

ಬಬ್ಲಿ ಲುಕ್‌ ನೀಡುವ ಮಿನಿ ಫ್ರಾಕ್ಸ್, ಮಿಡಿ, ಶಾಟ್ರ್ಸ್, ಕೋಲ್ಡ್‌ ಶೋಲ್ಡರ್‌ ಕ್ರಾಪ್‌ ಟಾಪ್ಸ್, ಬಾರ್ಡಟ್‌ ಟಾಪ್‌, ಬಾಡಿಕಾನ್‌ ಡ್ರೆಸ್, ಪ್ಯಾಂಟ್‌ ಸೂಟ್‌, ರಾಂಪರ್‌, ಪ್ಲೇ ಸೂಟ್‌, ಹಿಪ್‌ ಹಾಪ್‌ ಜಂಪ್‌ಸೂಟ್ಸ್, ಕಟೌಟ್‌ ಡ್ರೆಸ್ ಸೇರಿದಂತೆ ನಾನಾ ವಿನ್ಯಾಸದ ಬಗೆಬಗೆಯ ಗುಲಾಬಿ ವರ್ಣದ ಔಟ್‌ಫಿಟ್ಸ್‌ ಬೇಡಿಕೆ ಹೆಚ್ಚಿಸಿಕೊಂಡಿವೆ. ಉದಾಹರಣೆಗೆ., ಜಾರಾನಂತಹ ದೊಡ್ಡ ಬ್ರಾಂಡ್‌ನಿಂದಿಡಿದು ಲೋಕಲ್‌ ಬ್ರಾಂಡ್‌ಗಳು ಕೂಡ ವೈವಿಧ್ಯಮಯ ಔಟ್‌ಫಿಟ್‌ಗಳನ್ನು ಬಿಡುಗಡೆಗೊಳಿಸಿವೆ.

ಇದನ್ನೂ ಓದಿ: Barbie Fashion: ಎಲ್ಲೆಲ್ಲೂ ಬಾರ್ಬಿ ಫ್ಯಾಷನ್‌ ಹವಾ!

Pink dress trending

ಅತ್ಯಾಕರ್ಷಕ ಪಿಂಕ್‌ ಆಕ್ಸೆಸರೀಸ್‌

ಫಂಕಿ ಹೆಡ್‌ ಬ್ಯಾಂಡ್‌, ಹೇರ್‌ ಬ್ಯಾಂಡ್‌, ಇಯರ್‌ ಹೆಡ್‌ ಬ್ಯಾಂಡ್‌, ಹೇರ್‌ ಕ್ಲಿಪ್ಸ್, ಕ್ಯೂಟ್‌ ಫಂಕಿ ನಾನ್‌ ಮೆಟಲ್‌ ಇಯರಿಂಗ್ಸ್, ಕಾರ್ಟೂನ್‌ ಲುಕ್‌ ನೀಡುವ ನೆಕ್ಲೇಸ್‌, ಗ್ಲೌಸ್‌, ಸಾಕ್ಸ್, ಬೆಲ್ಟ್‌ ಹೀಗೆ ಊಹೆಗೂ ಮೀರಿದ ಗುಲಾಬಿ ವರ್ಣದ ಪಿಂಕ್‌ ಆಕ್ಸೆಸರೀಸ್‌ಗಳು ಈಗಾಗಲೇ ಹುಡುಗಿಯರನ್ನು ಸವಾರಿ ಮಾಡುತ್ತಿವೆ.

ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್ಸ್ ಟಿಪ್ಸ್

ಅಷ್ಟೇಕೆ! ಸೋಷಿಯಲ್‌ ಮೀಡಿಯಾ ಇನ್ಫ್ಲೂಯೆನ್ಸರ್ಸ್ ಕೂಡ ತಮ್ಮ ರೀಲ್ಸ್‌ನಲ್ಲಿ ಪಿಂಕ್‌ ಔಟ್‌ಫಿಟ್‌ ಮಿಕ್ಸ್‌ ಮ್ಯಾಚ್‌ ಮಾಡುವುದು ಹೇಗೆ! ಬಾರ್ಬಿಯಂತೆ ಕಾಣಿಸಿಕೊಳ್ಳುವುದು ಹೇಗೆ? ಬಾರ್ಬಿಯ ಮೇಕಪ್‌ ಮಾಡುವುದು ಹೇಗೆ? ಎಂಬೆಲ್ಲಾ ವಿಷಯಗಳ ಟಿಪ್ಸ್‌ ನೀಡುವುದರೊಂದಿಗೆ ತಾವು ಕೂಡ ಹಾಗೆಯೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ಬಾರ್ಬಿ ಫ್ಯಾಷನ್‌ ಮಾಯೆ ಎಂದರೂ ಅತಿಶಯೋಕ್ತಿಯಾಗದು! ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.

ಇನ್ನು ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳಂತೂ ಕಂಪ್ಲೀಟ್‌ ಪಿಂಕ್‌ ಔಟ್‌ಫಿಟ್‌ಗಳಲ್ಲಿ ಬಾರ್ಬಿಯ ಸಾಂಗ್‌ಗಳಿಗೆ ಹೆಜ್ಜೆ ಹಾಕಿದ್ದಾರೆ. ಒಟ್ಟಿನಲ್ಲಿ ಬಾರ್ಬಿಯ ಫ್ಯಾಷನ್‌ ಟ್ರೆಂಡ್‌ನಿಂದ ಪಿಂಕ್‌ ಶೇಡ್‌ ಔಟ್‌ಫಿಟ್‌ಗಳು ಮತ್ತೊಮ್ಮೆ ಲಗ್ಗೆ ಇಟ್ಟಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version