Site icon Vistara News

Christmas Kids Fashion: ಈ ಬಾರಿಯ ಕ್ರಿಸ್ಮಸ್ ವೇಳೆ ಮಕ್ಕಳ ಡ್ರೆಸ್ ಟ್ರೆಂಡ್ ಹೀಗಿದೆ!

Christmas Kids Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ರಿಸ್ಮಸ್‌ ಫೆಸ್ಟೀವ್‌ ಸೀಸನ್‌ಗೆ ಆಕರ್ಷಕ ಕಿಡ್ಸ್‌ ಫ್ಯಾಷನ್‌ವೇರ್‌ ಆಕ್ಸೆಸರೀಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ರೆಡ್‌ ಶೇಡ್‌ನಲ್ಲೆ ನಾನಾ ಬಗೆಯ ಮಿಕ್ಸ್‌ ಮ್ಯಾಚ್‌ ಶೇಡ್‌ನ ಮಿನಿ ಡಿಸೈನರ್‌ವೇರ್‌ಗಳು, ಫ್ರಾಕ್‌ಗಳು, ಶಿಮ್ಮರ್‌ ಪಾರ್ಟಿವೇರ್ಸ್ ಈಗಾಗಲೇ ಟ್ರೆಂಡಿಯಾಗಿವೆ.

ವೈವಿಧ್ಯಮಯ ವಿನ್ಯಾಸ

“ಕ್ರಿಸ್ಮಸ್‌ ಸೀಸನ್‌ನಲ್ಲಿ ಬಹುತೇಕ ಉಡುಪುಗಳು ಫೆಸ್ಟೀವ್‌ ಥೀಮ್‌ ಹೊಂದಿರುತ್ತವೆ. ಅಲ್ಲದೇ, ವೆಸ್ಟರ್ನ್ ಕಾನ್ಸೆಪ್ಟ್‌ ಡಿಸೈನ್‌ಗಳನ್ನು ಹೊಂದಿರುತ್ತವೆ. ಟ್ರೆಡಿಷನಲ್‌ ಉಡುಪುಗಳು ಈ ಸೀಸನ್‌ನಲ್ಲಿ ಸೈಡಿಗೆ ಸರಿಯುತ್ತವೆ. ಅಷ್ಟು ಮಾತ್ರವಲ್ಲ, ಶಿಮ್ಮರಿಂಗ್‌ ಇರುವಂತಹ ಮಿನಿ ಪಾರ್ಟಿ ಡಿಸೈನರ್‌ವೇರ್‌ಗಳು ಅತಿ ಹೆಚ್ಚು ಡಿಸೈನ್‌ನಲ್ಲಿ ಬಂದಿದ್ದು, ಬೇಡಿಕೆ ಮೊದಲಿಗಿಂತ ಹೆಚ್ಚಿಸಿಕೊಂಡಿವೆ. ಈ ಇಯರ್‌ ಎಂಡ್‌ ಸೀಸನ್‌ನ ಎಲ್ಲಾ ಬಗೆಯ ಫೆಸ್ಟೀವ್‌ ದಿನಗಳಿಗೆ ಹೊಂದುವಂತೆ ಬಿಡುಗಡೆಗೊಂಡಿವೆ. ಮಕ್ಕಳಿಗೂ ಪ್ರಿಯವಾಗುವಂತಹ ಲೈವ್ಲಿ ವಿನ್ಯಾಸದಲ್ಲಿಸೆಳೆಯುತ್ತಿವೆ” ಎನ್ನುತ್ತಾರೆ ಕಿಡ್ಸ್‌ ಸ್ಟೈಲಿಸ್ಟ್‌ ನೋರಾ. ಅವರ ಪ್ರಕಾರ, ಈ ಸೀಸನ್‌ನಲ್ಲಿ ಅತ್ಯುತ್ತಮ ವೆಸ್ಟೆರ್ನ್ ಶೈಲಿಯ ಔಟ್‌ಫಿಟ್‌ಗಳು ದೊರೆಯುತ್ತವೆ. ಇದು ಉತ್ತಮ ಡಿಸೈನ್‌ಗಳನ್ನು ಕೊಳ್ಳಲು ಸಕಾಲ ಎನ್ನುತ್ತಾರೆ.

ಟ್ರೆಂಡ್‌ನಲ್ಲಿರುವ ವೆಸ್ಟೆರ್ನ್ ಔಟ್‌ಫಿಟ್ಸ್

ಕ್ರಿಸ್ಮಸ್‌ ಹಬ್ಬವಾಗಿರುವುದರಿಂದ ಸಾಕಷ್ಟು ಉಡುಪುಗಳು ರೆಡ್‌ ಹಾಗೂ ಗ್ರೀನ್‌ ಕಾಂಟ್ರಸ್ಟ್ ಶೇಡ್‌ನಲ್ಲಿಯೇ ದೊರೆಯುತ್ತಿವೆ. ಇನ್ನು ಈ ಥೀಮ್‌ ಬೇಡ ಎನ್ನುವವರು ಬಗೆಬಗೆಯ ಶಿಮ್ಮರಿಂಗ್‌ ಔಟ್‌ಫಿಟ್ಸ್ ಕೊಳ್ಳಬಹುದು. ಅವುಗಳಲ್ಲಿ ದೊಡ್ಡವರ ಡಿಸೈನ್‌ನಲ್ಲಿ ದೊರೆಯುತ್ತಿದ್ದ ಲೆಗ್‌ ಪ್ಯಾಂಟ್‌ ರಾಂಪರ್‌, ಕ್ರ್ಯೂ ನೆಕ್‌ ಲ್ಯಾಂಟೆರ್ನ್ ಸ್ಲೀವ್‌ ಸ್ವೆಟರ್‌, ಲೇಸ್‌ ಕ್ರಾಪ್‌ ಡ್ರೆಸ್‌, ಬೆರ್ರಿ ಡ್ರೆಸ್‌, ಸಾಟೀನ್‌ ಔಟ್‌ಫಿಟ್‌ಗಳು ಮಿನಿ ವಿನ್ಯಾಸದಲ್ಲಿ ಬಂದಿವೆ. ಮಿನಿ ಸಿಕ್ವೀನ್ ಸ್ಕರ್ಟ್, ವ್ರಾಪ್‌ ಸ್ಕರ್ಟ್, ಬೆಲ್ಟ್ ಸ್ಕರ್ಟ್‌ಗಳನ್ನು ಟ್ರೆಂಡಿ ಕಟೌಟ್‌ ಕ್ರಾಪ್‌ ಟಾಪ್‌, ಕ್ಯಾಮಿ ಟಾಪ್‌, ಸ್ಟ್ರಾಪ್‌ ಫ್ರಾಕ್‌, ಬಾಡಿಕಾನ್‌, ಸ್ಲಿಪ್‌ ಫ್ರಾಕ್‌, ಸಿಂಗಲ್‌ ಶೋಲ್ಡರ್‌, ಶೋಲ್ಡರ್‌ಲೆಸ್‌ ಫ್ರಾಕ್‌ಗಳು ಚಿಣ್ಣರಿಗೆ ಮ್ಯಾಚ್‌ ಆಗುವಂತಹ ಡಿಸೈನ್‌ನಲ್ಲಿ ಬಂದಿವೆ.

ಆತ್ಯಾಕರ್ಷಕ ಆಕ್ಸೆಸರೀಸ್‌

ನಾನಾ ವಿನ್ಯಾಸದ ಸಾಂತಾ ಕ್ಲಾಸ್‌ ಚಿತ್ತಾರವಿರುವ ಸಾಕ್ಸ್‌, ಸ್ಟಾಕಿಂಗ್ಸ್, ಫುಟ್‌ವೇರ್ಸ್, ನೆಕ್‌ಫೀಸ್‌ಗಳು, ಬ್ರೇಸ್‌ಲೇಟ್‌ಗಳು, ಬ್ರೋಚರ್‌ಗಳು ವೆರೈಟಿ ಕಲರ್‌ಫುಲ್‌ ವಿನ್ಯಾಸದಲ್ಲಿ ಲಭ್ಯವಿದೆ ಎನ್ನುತ್ತಾರೆ ಶಾಪ್‌ನ ಮಾರಾಟಗಾರರು.

ಕಿಡ್ಸ್ ಫ್ಯಾಷನ್‌ವೇರ್‌ ಡ್ರೆಸ್ಸಿಂಗ್‌ ಟಿಪ್ಸ್

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Pet Winter Wear Fashion: ಕ್ರಿಸ್ಮಸ್‌ ಸೀಸನ್‌ನಲ್ಲಿ ಶ್ವಾನಕ್ಕೂ ಬಂತು ಚಳಿಗಾಲದ ಉಡುಗೆ!

Exit mobile version