Site icon Vistara News

Summer Nail Art : ಸಮ್ಮರ್ ಸೀಸನ್​ನಲ್ಲಿ ಟ್ರೆಂಡಿಯಾದ ಕಲ್ಲಂಗಡಿ ಹಣ್ಣಿನ ನೇಲ್ಆರ್ಟ್

trendy-watermelon-nail-art-for-summer-season

#image_title

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ನೇಲ್ ಆರ್ಟ್ ಫ್ಯಾಷನ್​ನಲ್ಲಿ ಇದೀಗ ಕಲ್ಲಂಗಡಿ ಹಣ್ಣಿನದ್ದೇ ಕಾರುಬಾರು. ಹೌದು. ವಾಟರ್ಮೆಲನ್ನ ವಿವಿಧ ವಿನ್ಯಾಸಗಳು ಸಮ್ಮರ್ ನೇಲ್ ಆರ್ಟ್ಗೆ ಎಂಟ್ರಿ ನೀಡಿವೆ. ನೋಡಲು ಮನಮೋಹಕವಾಗಿ ಕಾಣುವ ಈ ವಾಟರ್ಮೆಲನ್ ಭಾಗವನ್ನು ಪ್ರತಿಬಿಂಬಿಸುವ ಈ ನೇಲ್ ಆರ್ಟ್ ಸದ್ಯಕ್ಕೆ ಬ್ಯೂಟಿ ಪ್ರಿಯರನ್ನು ಸೆಳೆದಿವೆ.

“ಬೇಸಿಗೆ ಸೀಸನ್​ನಲ್ಲಿ ಸಾಕಷ್ಟು ಬಗೆಯ ನೇಲ್ ಆರ್ಟ್​​ಗಳು ಎಂಟ್ರಿ ನೀಡುತ್ತವೆ. ಒಂದಕ್ಕಿಂತ ಒಂದು ನೋಡಲು ಬ್ಯೂಟಿಫುಲ್ ಆಗಿ ಕಾಣುತ್ತವೆ. ಅವುಗಳಲ್ಲಿ ಇದೀಗ ವಾಟರ್​ಮೆಲನ್​ ನೇಲ್ ಆರ್ಟ್ ಪಾಪ್ಯುಲರ್ ಆಗಿದೆ. ಇವು ಬೇಸಿಗೆಯ ಬಿಸಿಲಲ್ಲಿ ಈ ನೇಲ್ ಆರ್ಟ್ ತಂಪನ್ನೆರೆಯುವ ಫೀಲ್ ನೀಡುತ್ತದೆ. ಮಾತ್ರವಲ್ಲ, ಮನಮೋಹಕವಾಗಿ ಕಾಣಿಸುತ್ತದೆ. ಆಯಾ ಸೀಸನ್​​ಗೆ ತಕ್ಕಂತೆ ನೇಲ್ ಆರ್ಟ್ ಬದಲಿಸುವವರಿಗೆ ಇದು ಸೂಪರ್ ಐಡಿಯಾ ಎನ್ನಬಹುದು ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ಛಾಯಾ. ಅವರ ಪ್ರಕಾರ, ಸೀಸನ್​​ಗೆ ತಕ್ಕಂತೆ ನೇಲ್ ಆರ್ಟ್ ಆಗಾಗ್ಗೆ ಹೊಸ ಹೊಸ ಐಡಿಯಾ ಹಾಗೂ ಡಿಸೈನ್​​ಗಳನ್ನು ಬಿಡುಗಡೆಗೊಳಿಸುತ್ತದೆ. ನೇಲ್ ಆರ್ಟ್ ಪ್ರಿಯರು ತಮಗಿಷ್ಟವಾದ ಡಿಸೈನ್​​ಗೆ ಮತ್ತಷ್ಟು ಕ್ರಿಯಾತ್ಮಕವಾಗಿ ಚಿತ್ತಾರಗಳನ್ನು ಸೇರಿಸಿ ಕಸ್ಟಮೈಸ್ ಮಾಡಿ ಚಿತ್ರಿಸುತ್ತಾರೆ ಎನ್ನುತ್ತಾರೆ.

ನೇಲ್ಆರ್ಟ್ ಸಲೂನ್​​ನಲ್ಲಿ ಚಿತ್ತಾರ

ಅಂದಹಾಗೆ, ಯಾವುದೇ ನೇಲ್ ಆರ್ಟ್ ಸಲೂನ್​​ಗಳಲ್ಲಿ ಈ ಡಿಸೈನ್​​ದಗಳು ಲಭ್ಯ. ಕೆಲವಲ್ಲಿ ತಮ್ಮ್ದೇ ಆದ ಡಿಸೈನ್​ಗಳನ್ನು ಮಾತ್ರ ಚಿತ್ರಿಸುತ್ತಾರೆ. ಆಗ ನಮಗೆ ಇಷ್ಟವಾದ ವಾಟರ್​ಮೆಲನ್​ ಚಿತ್ತಾರಗಳನ್ನು ತೋರಿಸಿ ಅದೇ ಬೇಕೆಂದಲ್ಲಿ, ಅವರು ಕಸ್ಟಮೈಸ್ ಸರ್ವಿಸ್ ನೀಡುತ್ತಾರೆ ಎನ್ನುತ್ತಾರೆ ನೇಲ್ ಪಾರ್ಲರ್​​ನಾ ರೀಟಾ.

ಇದನ್ನೂ ಓದಿ : Summer fashion : ಯುವತಿಯರ ಸಮ್ಮರ್‌ ಫ್ಯಾಷನ್‌ಗೆ ಸೇರಿದ 5 ಶೈಲಿಯ ಫ್ಲೋರಲ್‌ ಫ್ರಾಕ್ಸ್‌

ನೀವೂ ಬಿಡಿಸಬಹುದು

ನಿಮ್ಮ ಬಳಿ ನೇಲ್ ಆರ್ಟ್ ಕಿಟ್ ಇದ್ದಲ್ಲಿ, ಕೊಂಚ ಕಲಾವಿದರ ಮನಸ್ಸಿದ್ದಲ್ಲಿ ಈ ಚಿತ್ತಾರಗಳನ್ನು ನೀವೂ ಚಿತ್ತಾರ ಮೂಡಿಸಬಹುದು. ನಿಮ್ಮ ಬಳಿ ಕಲ್ಲಂಗಡಿ ಹಣ್ಣಿನ ಚಿತ್ತಾರಕ್ಕೆ ಬೇಕಾಗುವ ನೇಲ್ ಕಲರ್​ಗಳಿರಬೇಕು. ಮೊದಲಿಗೆ ಹಸಿರು ಹಾಗೂ ರೆಡ್ ಶೇಡ್​​ಗಳನ್ನು ಹಚ್ಚಿ, ಕೊಂಚ ಒಣಗಿದ ನಂತರ ನೇಲ್ ಕಿಟ್​ನಲ್ಲಿರುವ ನೀಡಲ್​ನಿಂದ ಕಲ್ಲಂಗಡಿ ಹಣ್ಣಿನ ಸೀಡ್​ಗಳನ್ನು ಚುಕ್ಕಿಯಂತೆ ಇಡಬಹುದು. ಇದಕ್ಕಾಗಿ ಕೊಂಚ ಕ್ರಿಯಾತ್ಮಕ ಮನಸ್ಸಿರಬೇಕು ಎಂದು ಸಲಹೆ ನೀಡುತ್ತಾರೆ ನೇಲ್ ಡಿಸೈನರ್ ರೀಟಾ ಚರ್ಕವರ್ತಿ.

ವಾಟರ್ ಮೆಲನ್ ನೇಲ್ ಆರ್ಟ್ ಪ್ರಿಯರಿಗಾಗಿ ೩ ಸಲಹೆ

ಲೇಖಕಿ : ಫ್ಯಾಷನ್ ಪತ್ರಕರ್ತೆ

Exit mobile version