Site icon Vistara News

Twinning Fashion: ಪರ್ಫೆಕ್ಟ್ ಕಪಲ್‌ ಟ್ವಿನ್ನಿಂಗ್‌ ಫ್ಯಾಷನ್‌ಗೆ ಪಾಲಿಸಬೇಕಾದ ಐದು ಪ್ರಮುಖ ಅಂಶಗಳು

Twinning Fashion five Rules

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಪಲ್‌ ಟ್ವಿನ್ನಿಂಗ್‌ ಫ್ಯಾಷನ್‌ ಇದೀಗ ಟ್ರೆಂಡಿಯಾಗಿರುವ ಡ್ರೆಸ್ಸಿಂಗ್‌ ಕಾನ್ಸೆಪ್ಟ್‌. ಮದುವೆಯಾಗಿರುವ ಪತಿ-ಪತ್ನಿ ಮಾತ್ರವಲ್ಲ, ಸ್ನೇಹಿತರು ಹಾಗೂ ಪ್ರೇಮಿಗಳು ಕೆಲವು ಸಂದರ್ಭಕ್ಕೆ ಅನುಗುಣವಾಗಿ ಜತೆಯಾಗಿ ಒಂದೇ ಶೈಲಿಯಲ್ಲಿ ಫ್ಯಾಷನೆಬಲ್‌ ಆಗಿ ಕಾಣಿಸಿಕೊಳ್ಳುವುದು ಕಾಮನ್‌ ಆಗಿದೆ. ಇನ್ನು, ಇದಕ್ಕೆ ಪೂರಕ ಎಂಬಂತೆ, ಫ್ಯಾಷನ್‌ ಲೋಕವು ಕೂಡ ಫಾರ್ಮಲ್ಸ್‌ನಿಂದ ಹಿಡಿದು ಕ್ಯಾಶುವಲ್‌ ಲುಕ್‌ವರೆಗೂ ನಾನಾ ಫ್ಯಾಷನ್‌ವೇರ್‌ ಥೀಮ್‌ ಬಿಡುಗಡೆ ಮಾಡಿದೆ.

ಕಪಲ್‌ ಟ್ವಿನ್ನಿಂಗ್‌ ಫ್ಯಾಷನ್‌ ಎಂದಾಕ್ಷಣ ನೋಡಲು ಡಿಟ್ಟೋ ಡಿಟ್‌ ಕಾಣಬೇಕೆಂಬುದಲ್ಲ. ಹುಬ್ಬೇರಿಸುವಂತಹ ಫ್ಯಾಷನ್ನೂ ಅಲ್ಲ! ನೋಡಿದಾಕ್ಷಣಾ ಖುಷಿಯೆನಿಸುವ ಡ್ರೆಸ್ಸಿಂಗ್‌ ಕಾನ್ಸೆಪ್ಟ್‌ ಆಗಿರಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಬಗ್ಗೆ ಅವರು ಒಂದೈದು ರೂಲ್ಸ್‌ ಹೇಳಿದ್ದಾರೆ.

ಕಪಲ್‌ ಟ್ವಿನ್ನಿಂಗ್‌ ರೂಲ್ಸ್ :

ಆಯಾ ವಯಸ್ಸಿಗೆ ಅನುಗುಣವಾಗಿ, ಪರ್ಸನಾಲಿಟಿಗೆ ಹೊಂದುವಂತಹ ಟ್ರೆಂಡಿ ಟ್ವಿನ್ನಿಂಗ್‌ ಫ್ಯಾಷನ್‌ವೇರ್‌ ಸೆಲೆಕ್ಷನ್‌ ನಿಮ್ಮದಾಗಬೇಕು ಎಂಬುದು ನೆನಪಿರಲಿ.

ಥೀಮ್‌ ಪ್ಲಾನ್‌ ಮಾಡಿ

ಮೊದಲಿಗೆ ಟ್ವಿನ್ನಿಂಗ್‌ ಮಾಡಬೇಕೆಂದುಕೊಂಡಾಗ ಒಂದು ಥೀಮ್‌ ಸೆಲೆಕ್ಟ್‌ ಮಾಡಿ. ನೀವು ಧರಿಸುವ ಔಟ್‌ಫಿಟ್‌ ಫಾರ್ಮಲ್‌ ಅಥವಾ ಕ್ಯಾಶುವಲ್‌? ಸಮಾರಂಭ ಅಥವಾ ಔಟಿಂಗ್‌ಗಾ ಹೀಗೆ ಮೊದಲೇ ಪ್ಲಾನ್‌ಮಾಡಿ. ಥೀಮ್‌ ಯೋಚಿಸಿ. ಅದಕ್ಕನುಗುಣವಾಗಿ ಔಟ್‌ಫಿಟ್‌ ಆಯ್ಕೆ ಮಾಡಿ.

ಇದನ್ನೂ ಓದಿ: Summer Fashion: ಸೀಸನ್‌ ಫ್ಯಾಷನ್‌ನಲ್ಲಿ ಮಾನಿನಿಯರ ಸೆಳೆದ ಫಿಟ್‌ & ಫ್ಲೇರ್‌ ಡ್ರೆಸ್‌

ಐಡೆಂಟಿಕಲ್‌ ಪ್ಯಾಟರ್ನ್ಸ್

ಕಪಲ್‌ ಟ್ವಿನ್ನಿಂಗ್‌ನಲ್ಲಿ ಐಡೆಂಟಿಕಲ್‌ ಪ್ಯಾಟರ್ನ್ನಲ್ಲಿ ಕಾಣಿಸಿಕೊಳ್ಳುವಾಗ ಪುರುಷರು ತಮ್ಮ ಔಟ್‌ಫಿಟ್‌ನಲ್ಲಿ ಆದಷ್ಟೂ ಫೆಮಿನೈನ್‌ ಲುಕ್‌ ಆವಾಯ್ಡ್‌ ಮಾಡಬೇಕು. ಇದಕ್ಕಾಗಿ ಮೆನ್ಸ್‌ ಲುಕ್‌ಗೆ ಸಾಥ್‌ ನೀಡುವಂತಹ ವಿನ್ಯಾಸ ಆಯ್ಕೆ ಮಾಡಬೇಕು. ಅದರಲ್ಲೂ ಎಥ್ನಿಕ್‌ ಡಿಸೈನರ್‌ವೇರ್‌ನಲ್ಲಿ ಪ್ರಮಾದವಾಗದಂತೆ ಎಚ್ಚರವಹಿಸಬೇಕು.

ಒಂದೇ ಶೇಡ್‌ನ ಆಯ್ಕೆ

ನಿಮ್ಮ ಔಟ್‌ಫಿಟ್‌ ಡಿಫರೆಂಟ್‌ ಫ್ಯಾಬ್ರಿಕ್‌ನದ್ದಾದಲ್ಲಿ ಯೋಚಿಸಬೇಡಿ. ಆದಷ್ಟೂ ನಿಮ್ಮ ಪಾರ್ಟನರ್‌ ಉಡುಪಿಗೆ ಹೊಂದುವಂತಹ ಸೇಮ್‌ ಶೇಡ್‌ನ ಡಿಸೈನರ್‌ವೇರ್‌ ಆಯ್ಕೆ ಮಾಡಿ ಧರಿಸಿ. ಇದು ಕೂಡ ಟ್ವಿನ್ನಿಂಗ್‌ ಎಂದೆನಿಸಿಕೊಳ್ಳುತ್ತದೆ.

ಕ್ಯಾಶುವಲ್‌ ಟ್ವಿನ್ನಿಂಗ್‌ ಔಟ್‌ಫಿಟ್ಸ್‌

ಎಥ್ನಿಕ್‌ಗಿಂತ ಕ್ಯಾಶುವಲ್‌ ಹಾಗೂ ವೆಸ್ಟರ್ನ್ ಔಟ್‌ಫಿಟ್ಸ್‌ ಟ್ವಿನ್ನಿಂಗ್‌ ತೀರಾ ಸುಲಭ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು. ಒಂದೇ ವರ್ಣದ ಟೀ ಶರ್ಟ್ ಹಾಗೂ ಜೀನ್ಸ್‌ ಪ್ಯಾಂಟ್‌ ಧರಿಸಿದರಾಯಿತು. ಹೆಚ್ಚು ತಲೆ ಬಿಸಿಯಿಲ್ಲ ಎನ್ನುತ್ತಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version