ಫ್ಯಾಷನ್
Twinning Fashion: ಪರ್ಫೆಕ್ಟ್ ಕಪಲ್ ಟ್ವಿನ್ನಿಂಗ್ ಫ್ಯಾಷನ್‌ಗೆ ಪಾಲಿಸಬೇಕಾದ ಐದು ಪ್ರಮುಖ ಅಂಶಗಳು
Twinning Fashion: ಕಪಲ್ ಟ್ವಿನ್ನಿಂಗ್ ಫ್ಯಾಷನ್‌ಗೆ ಸೈ ಎನ್ನುವವರು ಟ್ರೆಂಡಿ ಔಟ್‌ಫಿಟ್‌ಗಳನ್ನು ಧರಿಸುವುದು ಮಾತ್ರವಲ್ಲ, ಉಡುಪಿನ ಪ್ಯಾಟರ್ನ್, ವಿನ್ಯಾಸ ಹಾಗೂ ಶೇಡ್‌ಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಅಮಿತ್. ಈ ಕುರಿತಂತೆ ಅವರು ಸಿಂಪಲ್ 5 ಫ್ಯಾಷನ್ ರೂಲ್ಸ್ ವಿವರಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಪಲ್ ಟ್ವಿನ್ನಿಂಗ್ ಫ್ಯಾಷನ್ ಇದೀಗ ಟ್ರೆಂಡಿಯಾಗಿರುವ ಡ್ರೆಸ್ಸಿಂಗ್ ಕಾನ್ಸೆಪ್ಟ್. ಮದುವೆಯಾಗಿರುವ ಪತಿ-ಪತ್ನಿ ಮಾತ್ರವಲ್ಲ, ಸ್ನೇಹಿತರು ಹಾಗೂ ಪ್ರೇಮಿಗಳು ಕೆಲವು ಸಂದರ್ಭಕ್ಕೆ ಅನುಗುಣವಾಗಿ ಜತೆಯಾಗಿ ಒಂದೇ ಶೈಲಿಯಲ್ಲಿ ಫ್ಯಾಷನೆಬಲ್ ಆಗಿ ಕಾಣಿಸಿಕೊಳ್ಳುವುದು ಕಾಮನ್ ಆಗಿದೆ. ಇನ್ನು, ಇದಕ್ಕೆ ಪೂರಕ ಎಂಬಂತೆ, ಫ್ಯಾಷನ್ ಲೋಕವು ಕೂಡ ಫಾರ್ಮಲ್ಸ್‌ನಿಂದ ಹಿಡಿದು ಕ್ಯಾಶುವಲ್ ಲುಕ್‌ವರೆಗೂ ನಾನಾ ಫ್ಯಾಷನ್‌ವೇರ್ ಥೀಮ್ ಬಿಡುಗಡೆ ಮಾಡಿದೆ.
ಕಪಲ್ ಟ್ವಿನ್ನಿಂಗ್ ಫ್ಯಾಷನ್ ಎಂದಾಕ್ಷಣ ನೋಡಲು ಡಿಟ್ಟೋ ಡಿಟ್ ಕಾಣಬೇಕೆಂಬುದಲ್ಲ. ಹುಬ್ಬೇರಿಸುವಂತಹ ಫ್ಯಾಷನ್ನೂ ಅಲ್ಲ! ನೋಡಿದಾಕ್ಷಣಾ ಖುಷಿಯೆನಿಸುವ ಡ್ರೆಸ್ಸಿಂಗ್ ಕಾನ್ಸೆಪ್ಟ್ ಆಗಿರಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಬಗ್ಗೆ ಅವರು ಒಂದೈದು ರೂಲ್ಸ್ ಹೇಳಿದ್ದಾರೆ.
ಕಪಲ್ ಟ್ವಿನ್ನಿಂಗ್ ರೂಲ್ಸ್ :
ಆಯಾ ವಯಸ್ಸಿಗೆ ಅನುಗುಣವಾಗಿ, ಪರ್ಸನಾಲಿಟಿಗೆ ಹೊಂದುವಂತಹ ಟ್ರೆಂಡಿ ಟ್ವಿನ್ನಿಂಗ್ ಫ್ಯಾಷನ್‌ವೇರ್ ಸೆಲೆಕ್ಷನ್ ನಿಮ್ಮದಾಗಬೇಕು ಎಂಬುದು ನೆನಪಿರಲಿ.
ಥೀಮ್ ಪ್ಲಾನ್ ಮಾಡಿ
ಮೊದಲಿಗೆ ಟ್ವಿನ್ನಿಂಗ್ ಮಾಡಬೇಕೆಂದುಕೊಂಡಾಗ ಒಂದು ಥೀಮ್ ಸೆಲೆಕ್ಟ್ ಮಾಡಿ. ನೀವು ಧರಿಸುವ ಔಟ್‌ಫಿಟ್ ಫಾರ್ಮಲ್ ಅಥವಾ ಕ್ಯಾಶುವಲ್? ಸಮಾರಂಭ ಅಥವಾ ಔಟಿಂಗ್‌ಗಾ ಹೀಗೆ ಮೊದಲೇ ಪ್ಲಾನ್‌ಮಾಡಿ. ಥೀಮ್ ಯೋಚಿಸಿ. ಅದಕ್ಕನುಗುಣವಾಗಿ ಔಟ್‌ಫಿಟ್ ಆಯ್ಕೆ ಮಾಡಿ.
ಇದನ್ನೂ ಓದಿ: Summer Fashion: ಸೀಸನ್ ಫ್ಯಾಷನ್‌ನಲ್ಲಿ ಮಾನಿನಿಯರ ಸೆಳೆದ ಫಿಟ್ & ಫ್ಲೇರ್ ಡ್ರೆಸ್
ಐಡೆಂಟಿಕಲ್ ಪ್ಯಾಟರ್ನ್ಸ್
ಕಪಲ್ ಟ್ವಿನ್ನಿಂಗ್‌ನಲ್ಲಿ ಐಡೆಂಟಿಕಲ್ ಪ್ಯಾಟರ್ನ್ನಲ್ಲಿ ಕಾಣಿಸಿಕೊಳ್ಳುವಾಗ ಪುರುಷರು ತಮ್ಮ ಔಟ್‌ಫಿಟ್‌ನಲ್ಲಿ ಆದಷ್ಟೂ ಫೆಮಿನೈನ್ ಲುಕ್ ಆವಾಯ್ಡ್ ಮಾಡಬೇಕು. ಇದಕ್ಕಾಗಿ ಮೆನ್ಸ್ ಲುಕ್‌ಗೆ ಸಾಥ್ ನೀಡುವಂತಹ ವಿನ್ಯಾಸ ಆಯ್ಕೆ ಮಾಡಬೇಕು. ಅದರಲ್ಲೂ ಎಥ್ನಿಕ್ ಡಿಸೈನರ್‌ವೇರ್‌ನಲ್ಲಿ ಪ್ರಮಾದವಾಗದಂತೆ ಎಚ್ಚರವಹಿಸಬೇಕು.
ಒಂದೇ ಶೇಡ್‌ನ ಆಯ್ಕೆ
ನಿಮ್ಮ ಔಟ್‌ಫಿಟ್ ಡಿಫರೆಂಟ್ ಫ್ಯಾಬ್ರಿಕ್‌ನದ್ದಾದಲ್ಲಿ ಯೋಚಿಸಬೇಡಿ. ಆದಷ್ಟೂ ನಿಮ್ಮ ಪಾರ್ಟನರ್ ಉಡುಪಿಗೆ ಹೊಂದುವಂತಹ ಸೇಮ್ ಶೇಡ್‌ನ ಡಿಸೈನರ್‌ವೇರ್ ಆಯ್ಕೆ ಮಾಡಿ ಧರಿಸಿ. ಇದು ಕೂಡ ಟ್ವಿನ್ನಿಂಗ್ ಎಂದೆನಿಸಿಕೊಳ್ಳುತ್ತದೆ.
ಕ್ಯಾಶುವಲ್ ಟ್ವಿನ್ನಿಂಗ್ ಔಟ್‌ಫಿಟ್ಸ್
ಎಥ್ನಿಕ್‌ಗಿಂತ ಕ್ಯಾಶುವಲ್ ಹಾಗೂ ವೆಸ್ಟರ್ನ್ ಔಟ್‌ಫಿಟ್ಸ್ ಟ್ವಿನ್ನಿಂಗ್ ತೀರಾ ಸುಲಭ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು. ಒಂದೇ ವರ್ಣದ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದರಾಯಿತು. ಹೆಚ್ಚು ತಲೆ ಬಿಸಿಯಿಲ್ಲ ಎನ್ನುತ್ತಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಫ್ಯಾಷನ್
Eco friendly Fashion: ಪರಿಸರ ಸ್ನೇಹಿ ಉಡುಪುಗಳಿಗೂ ಸಿಕ್ತು ಗ್ಲಾಮರ್ ಟಚ್
Eco friendly Fashion: ಪರಿಸರ ಸ್ನೇಹಿ ಉಡುಪುಗಳಿಗೂ ಇದೀಗ ಗ್ಲಾಮರ್ ಟಚ್ ಸಿಕ್ಕಿದೆ. ಸಾದಾ-ಸೀದಾ ಸಿಂಪಲ್ ಆಗಿದ್ದ, ಇಕೋ ಫ್ರೆಂಡ್ಲಿ ಔಟ್‌ಫಿಟ್‌ಗಳು ಇದೀಗ ವೈವಿಧ್ಯಮಯ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಸಸ್ಟೈನಬಲ್ ಫ್ಯಾಷನ್ ಪ್ರಿಯರಿಗೆ ಪ್ರಿಯವಾಗತೊಡಗಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾದಾ-ಸೀದಾ ಹಾಗೂ ಸಿಂಪಲ್ ವಿನ್ಯಾಸದಲ್ಲಿ ದೊರೆಯುತ್ತಿದ್ದ ಪರಿಸರ ಸ್ನೇಹಿ ಉಡುಪುಗಳು (Eco friendly Fashion) ಇದೀಗ ಗ್ಲಾಮರ್ ಟಚ್ ಪಡೆದುಕೊಂಡಿವೆ. ಹೌದು. ಆಯಾ ಸೀಸನ್‌ಗೆ ತಕ್ಕಂತೆ ವೈವಿಧ್ಯಮಯ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಕೇವಲ ಪ್ರಬುದ್ಧ ಫ್ಯಾಷನ್ ಪ್ರಿಯರನ್ನು ಮಾತ್ರವಲ್ಲ, ಟೀನೇಜು-ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ಸಿಂಪಲ್ ಔಟ್‌ಫಿಟ್ಸ್‌ಗೆ ಗ್ಲಾಮರ್ ಟಚ್
ಮೊದಲೆಲ್ಲಾ ಕೇವಲ ದೇಸಿ ಬ್ರಾಂಡ್‌ಗಳು, ಲೋಕಲ್ ಬ್ರ್ಯಾಂಡ್‌ಗಳು ಹೆಚ್ಚಾಗಿ ಪರಿಸರ ಸ್ನೇಹಿ ಉಡುಪುಗಳನ್ನು ಸಿದ್ಧಪಡಿಸುತ್ತಿದ್ದವು. ಆದರೆ, ಇದೀಗ ಫ್ಯಾಷನ್ ಲೋಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂಟರ್‌ನ್ಯಾಷನಲ್ ಬ್ರ್ಯಾಂಡ್‌ಗಳು ಕೂಡ ಕಡಿಮೆ ದರದಲ್ಲಿ ಇಂತಹ ಉಡುಪುಗಳಿಗೆ ಕೊಂಚ ಗ್ಲಾಮರ್ ಟಚ್ ನೀಡಿ ಬಿಡುಗಡೆಗೊಳಿಸಿವೆ. ಹಾಗಾಗಿ ಟೀನೇಜ್-ಕಾಲೇಜ್ ಹುಡುಗಿಯರು ಕೂಡ ಇವುಗಳತ್ತ ವಾಲುತ್ತಿದ್ದಾರೆ. ಇಷ್ಟಪಟ್ಟು ಧರಿಸತೊಡಗಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಸಮೀಕ್ಷಾ ವರದಿ
ಅಂತಾರಾಷ್ಟ್ರೀಯ ಫ್ಯಾಷನ್ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ, ಇತ್ತೀಚೆಗೆ ಪರಿಸರ ಸ್ನೇಹಿ ಫ್ಯಾಬ್ರಿಕ್‌ಗಳಾದ ಬಗೆಬಗೆಯ ಕಾಟನ್, ಲಿನಿನ್, ಖಾದಿಯಲ್ಲಿ ಅತಿ ಹೆಚ್ಚು ಸಿದ್ಧ ಉಡುಪುಗಳು ತಯಾರಾಗುತ್ತಿವೆ. ಸಂತಸದ ವಿಚಾರವೆಂದರೇ, ಆಯಾ ಸೀಸನ್‌ಗೆ ತಕ್ಕಂತೆ ಆಗಾಗ್ಗೆ ಹೊಸ ವಿನ್ಯಾಸಗಳನ್ನು ಹೊರತರಲಾಗುತ್ತಿದೆ. ಕೇವಲ ಕ್ಯಾಶುವಲ್ ಉಡುಪುಗಳಲ್ಲಿ ಮಾತ್ರವಲ್ಲ, ಎಥ್ನಿಕ್, ಸೆಮಿ ಎಥ್ನಿಕ್ ಔಟ್‌ಫಿಟ್‌ಗಳಲ್ಲೂ ಗ್ಲಾಮರ್ ಟಚ್ ನೀಡಲಾಗುತ್ತಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀನತ್.
ಇದನ್ನೂ ಓದಿ: EV Battery Plant: ಗುಜರಾತಕ್ಕೆ ಜಾಕ್‌ಪಾಟ್, ಟಾಟಾದಿಂದ ಬೃಹತ್ ಇವಿ ಬ್ಯಾಟರಿ ಫ್ಯಾಕ್ಟರಿ, 13000 ಜನರಿಗೆ ಉದ್ಯೋಗ ಖಾತರಿ
ಪಾಪುಲರ್ ಡಿಸೈನ್ಸ್
ಈ ಸೀಸನ್‌ನಲ್ಲಿ ಕಾಟನ್, ಲಿನಿನ್‌ನ ಆಫ್ ಶೋಲ್ಡರ್, ಕೋಲ್ಡ್ ಶೋಲ್ಡರ್, ಬಾರ್ಡಟ್ ಟಾಪ್, ಕಟೌಟ್ ಟಾಪ್, ಡ್ರೆಸ್, ಸ್ಟ್ರಾಪ್ ಟಾಪ್, ಟ್ಯಾಂಕ್ ಟಾಪ್ ಹಾಗೂ ನೀ ಲೆಂತ್ ಫ್ರಾಕ್‌ಗಳು ಹೆಚ್ಚು ಪಾಪುಲರ್ ಆಗಿವೆ. ಇನ್ನು ಇವುಗಳಲ್ಲೂ ಕ್ರಾಪ್ ಟಾಪ್ ಹಾಗೂ ಬ್ಯಾಕ್‌ಲೆಸ್ ಮ್ಯಾಕ್ಸಿ ಸ್ಟೈಲ್ ಸ್ಕರ್ಟ್, ಕೀ ಹೋಲ್ ಲೇಸ್‌ನ ಸಿಂಗಲ್ ಶೋಲ್ಡರ್ ಡ್ರೆಸ್, ಹಾಲ್ಟರ್ ನೆಕ್ ಬ್ಲೌಸ್, ಮಿನಿ, ಮಿಡಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಮಾಲ್‌ನ ಶೋ ರೂಮ್‌ವೊಂದರ ಸೇಲ್ಸ್ ಮ್ಯಾನೇಜರ್.
ಗ್ಲಾಮರಸ್ ಪರಿಸರ ಸ್ಬೇಹಿ ಔಟ್‌ಫಿಟ್ ಆಯ್ಕೆ :
- ಸಾಫ್ಟ್ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಿ.
- ಟ್ರೆಂಡಿ ಪ್ರಿಂಟ್ಸ್ ಅಥವಾ ಮಾನೋಕ್ರೋಮ್‌ನದ್ದನ್ನು ಚೂಸ್ ಮಾಡಿ.
- ಮಿಕ್ಸ್ ಮ್ಯಾಚ್ ಫ್ಯಾಷನ್‌ಗೆ ಹೊಂದುವಂತಿದ್ದರೇ ಮುಂದಿನ ಸೀಸನ್‌ಗೂ ಧರಿಸಬಹುದು.
- ಟ್ರಯಲ್ ನೋಡಿ, ಫಿಟ್ಟಿಂಗ್ ಇರುವಂತದ್ದನ್ನು ಕೊಳ್ಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಫ್ಯಾಷನ್
Summer Fashion: ಸೀಸನ್‌ನಲ್ಲಿ ಟ್ರೆಂಡಿಯಾದ ಬಣ್ಣಬಣ್ಣದ ಕಾಟನ್ ಸೀರೆಗಳು
Summer Fashion: ಈ ಬಾರಿಯ ಸಮ್ಮರ್ ಸೀಸನ್‌ನಲ್ಲಿ ಕಲರ್‌ಫುಲ್ ಕಾಟನ್ ಸೀರೆಗಳು ಟ್ರೆಂಡಿಯಾಗಿವೆ. ಸ್ತ್ರೀಯರ ಸಿಂಗಾರಕ್ಕೆ ಸಾಥ್ ನೀಡುತ್ತಿವೆ. ಈ ಸೀರೆಗಳ ಬಗ್ಗೆ ಫ್ಯಾಷನಿಸ್ಟಾಗಳು ಒಂದಿಷ್ಟು ವಿವರ ನೀಡಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನಲ್ಲಿ ಕಲರ್‌ಫುಲ್ ಕಾಟನ್ ಸೀರೆಗಳು ಟ್ರೆಂಡಿಯಾಗಿವೆ. ನಾನಾ ವರ್ಣಗಳ ಈ ಕಾಟನ್ ಸೀರೆಗಳು ಕೇವಲ ವಿವಾಹಿತರಿಗಷ್ಟೇ ಅಲ್ಲ, ಯುವತಿಯರನ್ನು ಆಕರ್ಷಿಸಿವೆ. ಸಿಂಪಲ್ ಲುಕ್ ಜೊತೆಗೆ ಪರಿಸರ ಸ್ನೇಹಿಯಾಗಿರುವ ಈ ಕಾಟನ್ ಸೀರೆಗಳು ಸಾಕಷ್ಟು ಬ್ರಾಂಡ್‌ಗಳಲ್ಲಿ ಲಭ್ಯವಿದೆ.
ವೈವಿಧ್ಯಮಯ ಕಲರ್‌ಫುಲ್ ಕಾಟನ್ ಸೀರೆಗಳ ಪ್ರಪಂಚ
ಇಳಕಲ್, ಉಡುಪಿ, ಗುಳೇದಗುಡ್ಡ ಖಾನಾ ಸೀರೆ, ಪಟ್ಟದ ಅಂಚು, ಇಕ್ಕಟ್, ಸಾಂಬಲ್‌ಪುರಿ, ವೆಂಕಟಗಿರಿ, ಚೆಟ್ಟಿನಾಡು, ಮಂಗಲಗಿರಿ, ಕಂಚಿ ಕಾಟನ್, ಜಮ್‌ದಾನಿಯ ಕಾಟನ್ ಸೀರೆಗಳು ಸೇರಿದಂತೆ ನಾನಾ ಬ್ರಾಂಡ್‌ಗಳವು ದೇಸಿ ಲುಕ್‌ನಲ್ಲಿ ಬಿಡುಗಡೆಗೊಂಡಿದ್ದು, ಬಗೆಬಗೆಯ ಬಣ್ಣಗಳಲ್ಲಿ ದೊರೆಯುತ್ತಿವೆ. ಈ ಮೊದಲು ಪಾಸ್ಟೆಲ್ ಶೇಡ್‌ನವು ಚಾಲ್ತಿಯಲ್ಲಿದ್ದವು. ಇದೀಗ ಪಿಂಕ್, ವೈನ್, ಮಜೆಂತಾ, ಗ್ರೀನ್, ಆರೆಂಜ್ ಹೀಗೆ ಎದ್ದು ಕಾಣುವಂತಹ ಬಣ್ಣಗಳ ಕಾಟನ್ ಸೀರೆಗಳು ಚಾಲ್ತಿಯಲ್ಲಿವೆ.
ಸಾಫ್ಟ್ ಕಲರ್ ಕಾಟನ್ ಸೀರೆಗಳಿಗೆ ಹೆಚ್ಚಾದ ಬೇಡಿಕೆ
ಮೊದಲಿನಂತೆ ಸ್ಟಾರ್ಚ್ ಹಾಕಿ ಧರಿಸಬಹುದಾದ ರಟ್ಟಿನಂತಹ ಟೆಕ್ಸ್ಚರ್ ಹೊಂದಿರುವಂತಹ ಕಾಟನ್ ಸೀರೆಗಳು ಇದೀಗ ಸೈಡಿಗೆ ಸರಿದಿವೆ. ಈಗೇನಿದ್ದರೂ ಸಾಫ್ಟ್ ಫ್ಯಾಬ್ರಿಕ್ ಹೊಂದಿರುವ ಕಾಟನ್ ಸೀರೆಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇದಕ್ಕೆ ಕಾರಣ ಸುಲಭ ನಿರ್ವಹಣೆ ಹಾಗೂ ಧರಿಸಿದಾಗ ನೋಡಲು ಚೆನ್ನಾಗಿ ಕಾಣುವುದು. ಇವುಗಳಲ್ಲಿ ಈ ಹಿಂದೆ ಕೇವಲ ಲೈಟ್ ಶೇಡ್‌ನವು ಲಭ್ಯವಿದ್ದವು. ಇದೀಗ ಇವುಗಳಲ್ಲಿ ನಾನಾ ಶೇಡ್‌ನವು ಅದರಲ್ಲೂ ಪ್ರಿಂಟ್‌ನ ವಿನ್ಯಾಸದವು ದೊರೆಯುತ್ತಿವೆ. ಕಾರ್ಪೋರೇಟ್ ಕ್ಷೇತ್ರ ಹಾಗೂ ಯುವತಿಯರನ್ನು ಇವು ಸೆಳೆದಿವೆ. ಇಂತಹ ಸೀರೆಗಳು ಕೊಂಚ ದುಬಾರಿಯಾದರೂ ಬೇಡಿಕೆ ಮಾತ್ರ ಕುಂದಿಲ್ಲ ಎನ್ನುತ್ತಾರೆ ಕಾಟನ್ ಸೀರೆಯ ಮಾರಾಟಗಾರರು. ಅವರ ಪ್ರಕಾರ, ಇಂದು ಬ್ರಾಂಡ್‌ಗಳಿಗಿಂತ ಹೆಚ್ಚಾಗಿ ಕಾಟನ್ ಸೀರೆಗಳ ಫ್ಯಾಬ್ರಿಕ್ ನೋಡಿ ಖರೀದಿಸುತ್ತಾರೆ. ಇನ್ನು ಕಲರ್‌ಗಳನ್ನು ಇಷ್ಟಪಡುತ್ತಾರೆ ಎನ್ನುತ್ತಾರೆ.
ಇದನ್ನೂ ಓದಿ: Summer Fashion: ವೀಕೆಂಡ್‌ನಲ್ಲಿ ಔಟಿಂಗ್ ಪ್ರಿಯರ ಉಲ್ಲಾಸ ಹೆಚ್ಚಿಸುತ್ತಿರುವ ವೈವಿಧ್ಯಮಯ ವೈಟ್ ಫ್ರಾಕ್ಸ್
ಕಲರ್ ಕಾಟನ್ ಸೀರೆ ಪ್ರಿಯರು ತಿಳಿದಿರಬೇಕಾದ್ದು
- ನಿರ್ವಹಣೆ ಮೊದಲೇ ತಿಳಿದುಕೊಳ್ಳಿ.
- ಕಲರ್ ಕಾಟನ್ ಸೀರೆ ನ್ಯಾಚುರಲ್ ಕಲರ್‌ನದ್ದೋ ಅಥವಾ ಯಾವುದು ಎಂಬುದು ತಿಳಿದಿರಲಿ.
- ಸಾಫ್ಟ್ ಕಾಟನ್ ಸೀರೆಗಳು ಅಗಲವಾಗಿ ಹರಡಿಕೊಳ್ಳುವುದಿಲ್ಲ.
- ಬಾರ್ಡರ್‌ಗಿಂತ ಬಾರ್ಡರ್‌ಲೆಸ್ ಇರುವಂಥವು ಟ್ರೆಂಡ್‌ನಲ್ಲಿವೆ.
- ಫ್ಲೋರಲ್‌ಗಿಂತ ಜೆಮೆಟ್ರಿಕಲ್ ಹಾಗೂ ಅಬ್‌ಸ್ಟ್ರಾಕ್ಟ್ ಡಿಸೈನ್‌ನವು ಚಾಲ್ತಿಯಲ್ಲಿವೆ.
ಫ್ಯಾಷನ್
Eco Friendly Fashion: ಪರಿಸರ ಸ್ನೇಹಿ ಫ್ಯಾಷನ್ ಅಳವಡಿಸಿಕೊಳ್ಳಲು ಸ್ಟೈಲಿಸ್ಟ್‌ಗಳ 5 ಐಡಿಯಾ
ಪರಿಸರ ಸ್ನೇಹಿ ಫ್ಯಾಷನ್ (Eco Friendly Fashion) ಅಳವಡಿಸಿಕೊಳ್ಳುವುದು ಸುಲಭವೇನಲ್ಲ! ಇದಕ್ಕಾಗಿ ನೀವು ನಿಮ್ಮ ವಾರ್ಡ್ರೋಬ್‌ನಲ್ಲಿ ಮಾತ್ರವಲ್ಲ, ಧರಿಸುವ ಫ್ಯಾಷನ್‌ವೇರ್‌ಗಳಲ್ಲೂ ಬದಲಾವಣೆ ತರಬೇಕಾಗುತ್ತದೆ. ಈ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ 5 ಐಡಿಯಾ ನೀಡಿದ್ದಾರೆ. ಟ್ರೈ ಮಾಡಿ, ನೋಡಿ. ಪರಿಸರ ಸ್ನೇಹಿಯಾಗಿ ಎನ್ನುತ್ತಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷೆನಬಲ್ ಆಗುವುದು ಸುಲಭ! ಆದರೆ, ಪರಿಸರ ಸ್ನೇಹಿ ಫ್ಯಾಷನ್ (Eco Friendly Fashion) ಅಳವಡಿಸಿಕೊಳ್ಳುವುದು ಸುಲಭವೇನಲ್ಲ! ಈ ಬಾರಿಯ ಪರಿಸರ ದಿನಾಚಾರಣೆಯಲ್ಲಿ ತಾವೂ ಕೂಡ ಪರಿಸರ ಸ್ನೇಹಿಯಾಗುವ ಬಗ್ಗೆ ಯೋಚಿಸಿ. ನಿಮ್ಮ ಫ್ಯಾಷನ್ ಲೈಫ್‌ನಲ್ಲೂ ಕೊಂಚ ಬದಲಾವಣೆ ತನ್ನಿ. ಇದಕ್ಕಾಗಿ ನೀವು ನಿಮ್ಮ ವಾರ್ಡ್ರೋಬ್‌ನಲ್ಲಿ ಮಾತ್ರವಲ್ಲ, ಧರಿಸುವ ಫ್ಯಾಷನ್‌ವೇರ್‌ಗಳಲ್ಲೂ ಬದಲಾವಣೆ ತರಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಬಗ್ಗೆ ಫ್ಯಾಷನ್ ಪ್ರೇಮಿಗಳಿಗೆ ಸಿಂಪಲ್ಲಾಗಿ 5 ಐಡಿಯಾ ನೀಡಿದ್ದಾರೆ. ವಿವರ ಕೆಳಕಂಡಂತಿದೆ.
ಇಕೋ ಫ್ರೆಂಡ್ಲಿ ಔಟ್‌ಫಿಟ್‌ಗೆ ಆದ್ಯತೆ
ಇನ್ಮುಂದೆ ನೀವು ಡಿಸೈನರ್‌ವೇರ್‌ಗಳನ್ನು ಖರೀದಿಸಬೇಕಾದಲ್ಲಿ ಆದಷ್ಟೂ ಪರಿಸರ ಸ್ನೇಹಿಯಾಗಿರುವಂತಹ ಔಟ್‌ಫಿಟ್‌ಗಳಿಗೆ ಆದ್ಯತೆ ನೀಡಿ. ಮೊದಲೇ ಬ್ರಾಂಡ್ ಎಕೋ ಫ್ರೆಂಡ್ಲಿಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಪರಿಸರ ಸ್ನೇಹಿ ಬ್ರಾಂಡ್‌ಗಳನ್ನು ಚೂಸ್ ಮಾಡಿ.
ದೇಸಿ ಫ್ಯಾಬ್ರಿಕ್ ಆಯ್ಕೆ ಮಾಡಿ
ಆದಷ್ಟೂ ದೇಸಿ ಬ್ರಾಂಡ್ ಹಾಗೂ ಫ್ಯಾಷನ್ ಉತ್ಪನ್ನಗಳಿಗೆ ಮಾನ್ಯತೆ ನೀಡಿ. ಇದರಿಂದ ಲೋಕಲ್ ಬ್ರಾಂಡ್‌ಗಳನ್ನು ಪ್ರೋತ್ಸಾಹಿಸಿದಂತಾಗುವುದಲ್ಲದೇ, ಪರಿಸರಕ್ಕೆ ನಿಮ್ಮದೊಂದು ಚಿಕ್ಕ ಕೊಡುಗೆ ನೀಡಿದಂತಾಗುವುದು. ನಿಮಗೆ ಗೊತ್ತೇ! ಸಮೀಕ್ಷೆಯೊಂದರ ಪ್ರಕಾರ, ಸಾಕಷ್ಟು ದೇಸಿ ಬ್ರಾಂಡ್‌ಗಳು ಅತಿ ಹೆಚ್ಚು ಪರಿಸರ ಸ್ನೇಹಿ ಫ್ಯಾಷನ್‌ವೇರ್‌ಗಳನ್ನು ಉತ್ಪಾದಿಸುತ್ತವಂತೆ.
ಕಾಟನ್-ಖಾದಿ-ಲಿನಿನ್ ಡಿಸೈನರ್‌ವೇರ್‌ಗಳ ಚಾಯ್ಸ್
ನಿಮಗೆ ದೇಸಿ ಬ್ರಾಂಡ್ ದೊರೆಯದಿದ್ದಲ್ಲಿ ಚಿಂತೆ ಬೇಡ! ಯಾವುದೇ ಬ್ರಾಂಡ್‌ನದ್ದಾದರೂ ಸರಿಯೇ ಆದಷ್ಟೂ ಕಾಟನ್-ಖಾದಿ-ಲಿನಿನ್‌ನಂತಹ ಪರಿಸರ ಸ್ನೇಹಿ ಫ್ಯಾಬ್ರಿಕ್‌ನಿಂದ ಸಿದ್ಧಗೊಂಡ ಔಟ್‌ಫಿಟ್‌ಗಳನ್ನು ಖರೀದಿಸಲು ಪ್ರಾಮುಖ್ಯತೆ ನೀಡಿ.
ವೆಜಿಟೆಬಲ್ ಡೈಯಿಂಗ್ ಔಟ್‌ಫಿಟ್ಸ್
ಇನ್ನು, ನಾನಾ ವಿಧಾನಗಳಿಂದ ಸಿದ್ಧಪಡಿಸಲಾದ ವೆಜಿಟೆಬಲ್ ಡೈಯಿಂಗ್ ಔಟ್‌ಫಿಟ್ಸ್‌ಗಳು ಈ ಸೀಸನ್‌ಗೆ ತಕ್ಕಂತೆ ಟ್ರೆಂಡಿ ಡಿಸೈನ್ಸ್‌ಗಳಲ್ಲಿ ಲಭ್ಯ. ಅಂತಹವನ್ನು ಖರೀದಿ ಮಾಡಿ ನೋಡಿ. ದೇಸಿ ಫ್ಯಾಬ್ರಿಕ್‌ಗೆ ಆದ್ಯತೆ ನೀಡಿ.
ಪ್ಲಾಸ್ಟಿಕ್ ಆಕ್ಸೆಸರೀಸ್ ಆವಾಯ್ಡ್ ಮಾಡಿ
ಪ್ಲಾಸ್ಟಿಕ್ ಕಿವಿಯೊಲೆ, ಇಯರಿಂಗ್ಸ್ ಸೇರಿದಂತೆ ನಾನಾ ಬಗೆಯ ಫ್ಯಾಷನಬಲ್ ಪ್ಲಾಸ್ಟಿಕ್ ಆಕ್ಸೆಸರೀಸ್ ಖರೀದಿಸುವುದನ್ನು ನಿಲ್ಲಿಸಿ. ಪ್ಲಾಸ್ಟಿಕ್‌ನಲ್ಲಿ ಸಿದ್ಧಪಡಿಸಿದ ಫ್ಯಾಷನ್ ಉತ್ಪನ್ನಗಳನ್ನು ವಿರೋಧಿಸಿ. ನಿಮ್ಮ ಫ್ಯಾಷನ್ ಲೈಫ್‌ನಲ್ಲಿ ಬದಲಾವಣೆ ತನ್ನಿ. ಪರಿಸರ ರಕ್ಷಣೆಗೆ ನಿಮ್ಮದೊಂದು ಚಿಕ್ಕ ಕೊಡುಗೆ ನೀಡಿದಂತಾಗುವುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಕಾರ್ಪೊರೇಟ್ ಕ್ಷೇತ್ರದ ಯುವತಿಯರನ್ನು ಆಕರ್ಷಿಸಿದ ಲಿನಿನ್ ಪ್ಯಾಂಟ್ ಸೆಟ್
ಫ್ಯಾಷನ್
Star Fashion: ಕಾರ್ಪೆಂಟರ್ ಪ್ಯಾಂಟ್‌ನಲ್ಲಿ ನಟಿ ಶುಭಾರಕ್ಷಾ ಸಮ್ಮರ್ ಕೂಲ್ ಲುಕ್
ಈ ಸಮ್ಮರ್ ಸೀಸನ್‌ಗೆ (Star Fashion) ಸಾಥ್ ನೀಡುವ ಕಾರ್ಪೆಂಟರ್ ಪ್ಯಾಂಟ್‌ನಲ್ಲಿ ನಟಿ ಶುಭಾರಕ್ಷಾ ಕಾಣಿಸಿಕೊಂಡಿದ್ದು, ಸಿಂಗಲ್ ಶೋಲ್ಡರ್ ವೈಟ್ ಕ್ರಾಪ್ ಟಾಪ್ ಮ್ಯಾಚ್ ಮಾಡಿ ಸೀಸನ್‌ನ ಕೂಲ್ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಈ ಕಾಸ್ಟ್ಯೂಮ್ ಬಗ್ಗೆ ನಟಿ ಹಾಗೂ ಸ್ಟೈಲಿಸ್ಟ್‌ಗಳು ಹೇಳಿರುವುದೇನು ? ಇಲ್ಲಿದೆ ಡಿಟೇಲ್ಸ್.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ಗೆ (Star Fashion) ಸಾಥ್ ನೀಡುವ ಕಾರ್ಪೆಂಟರ್ ಪ್ಯಾಂಟ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ಶುಭಾರಕ್ಷಾ ಕಾಣಿಸಿಕೊಂಡಿದ್ದು, ಈ ಸೀಸನ್‌ನ ಕೂಲ್ ಫ್ಯಾಷನ್‌ಗೆ ಸೈ ಎಂದಿದ್ದಾರೆ.
ಶುಭಾ ರಕ್ಷಾ ಫ್ಯಾಷನ್ ಟಾಕ್
ಸಿಂಗಲ್ ಶೋಲ್ಡರ್ ಹೊಂದಿರುವ ಕ್ರಾಪ್ ಟಾಪ್‌ಗೆ ಲೈಟ್ ಅಥವಾ ಸ್ಕೈ ಬ್ಲ್ಯೂ ಕಾರ್ಪೆಂಟರ್ ಪ್ಯಾಂಟ್ ಮ್ಯಾಚ್ ಮಾಡಿರುವುದು, ಇದಕ್ಕೆ ಮಿಲ್ಕಿ ವೈಟ್ ಕ್ರಾಪ್ ಟಾಪ್ ಧರಿಸಿರುವುದು, ಈ ಸೀಸನ್‌ನ ಫ್ಯಾಷನ್‌ಗೆ ಪಕ್ಕಾ ಮ್ಯಾಚ್ ಆಗುವಂತಿದೆ. ನೋಡಲು ಕೂಲ್ ಲುಕ್ ನೀಡುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸ್ಟಾರ್ ಲುಕ್ ಅಥವಾ ಸೆಲೆಬ್ರೆಟಿ ಲುಕ್‌ಗೆ ಹೊಂದುತ್ತಿದೆ ಎನ್ನುತ್ತಾರೆ ನಟಿ ಶುಭಾರಕ್ಷಾ. ತಮ್ಮ ಈ ಸಮ್ಮರ್ ಕೂಲ್ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡ ಶುಭಾರಕ್ಷಾ, ಆಗಾಗ್ಗೆ ನಾನು ಫ್ಯಾಷನ್‌ವೇರ್‌ಗಳನ್ನು ಪ್ರಯೋಗ ಮಾಡುತ್ತಲೇ ಇರುತ್ತೇನೆ. ಒಂದಲ್ಲ ಒಂದು ಸ್ಟೈಲ್ ಸ್ಟೇಟ್‌ಮೆಂಟ್ ಬದಲಿಸುತ್ತಿರುತ್ತೇನೆ. ಆದರೆ, ಈ ಸೀಸನ್‌ನ ಈ ಫ್ಯಾಷನ್ ನನಗೆ ಮೆಚ್ಚುಗೆಯಾಯಿತು. ಫೋಟೋಶೂಟ್‌ಗಾಗಿ ಈ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಈ ಕೂಲ್ ಫ್ಯಾಷನ್ ಹಾಲಿವುಡ್ ಸೆಲೆಬ್ರೆಟಿ ಲುಕ್‌ನಂತೆ ಕಂಡಿತ್ತು ಎಂದು ಹೇಳಿಕೊಂಡಿದ್ದಾರೆ.
ಏನಿದು ಕಾರ್ಪೆಂಟರ್ ಪ್ಯಾಂಟ್ ಸ್ಟೈಲ್
ಸಮ್ಮರ್ ಸೀಸನ್‌ಗೆ ಸೂಟ್ ಆಗುವಂತಹ ಈ ಪ್ಯಾಂಟ್ ದೊಗಲೆಯಾಗಿರುತ್ತದೆ. ಫಿಟ್ಟಿಂಗ್ ಇರುವುದಿಲ್ಲ. ಬದಲಿಗೆ ಮೂರ್ನಾಲ್ಕು ಪಾಕೆಟ್‌ಗಳಿರುತ್ತವೆ. ಹೈ ವೇಸ್ಟ್‌ಲೈನ್ ಹೊಂದಿರುತ್ತದೆ. 80-90ರ ದಶಕದ ಮಧ್ಯದಲ್ಲಿ ಟ್ರೆಂಡ್‌ನಲ್ಲಿದ್ದ ಈ ಪ್ಯಾಂಟ್‌ಗಳು ವರ್ಕಿಂಗ್ ಮೆನ್‌ಗಳ ಫ್ಯಾಷನ್‌ನಲ್ಲಿತ್ತು. ಬರಬರುತ್ತಾ ಮಹಿಳೆಯರಿಗಾಗಿ ಹೊಸ ರೂಪದಲ್ಲಿ ಬಿಡುಗಡೆಗೊಂಡವು. ಇದೀಗ ಜೀನ್ಸ್ ಹಾಗೂ ಡೆನೀಮ್‌ನಲ್ಲೂ ಈ ಬಗೆಯ ಪ್ಯಾಂಟ್‌ಗಳು ಬಿಡುಗಡೆ ಹೊಂದಿವೆ. ಸ್ಟ್ರೇಟ್‌ಕಟ್ ಹೊಂದಿರುವುದರಿಂದ ಧರಿಸಿದಾಗ ಎತ್ತರವಾಗಿ ಕಾಣಬಹುದು. ಈ ಪ್ಯಾಂಟ್‌ಗೆ ತಕ್ಕಂತೆ ಮಾಡರ್ನ್ ಶೈಲಿಯ ಟಾಪ್‌ಗಳನ್ನು ಧರಿಸಿದಾಗ ಇದು ಟ್ರೆಂಡಿಯಾಗಿ ಕಾಣುತ್ತದೆ. ಟೀ ಶರ್ಟ್ ಧರಿಸಿದಲ್ಲಿ ಸಾಮಾನ್ಯ ಪ್ಯಾಂಟ್‌ನಂತೆಯೇ ಕಾಣಬಹುದು. ಹಾಗಾಗಿ, ಇಂತಹ ಪ್ಯಾಂಟ್‌ಗಳಿಗೆ ಕ್ರಾಪ್ ಟಾಪ್, ಸಿಂಗಲ್ ಶೋಲ್ಡರ್, ಕೋಲ್ಡ್ ಶೋಲ್ಡರ್, ಹಾಲ್ಟರ್ ನೆಕ್‌ನಂತಹ ಪ್ಯಾಂಟ್‌ಗಳನ್ನು ಧರಿಸಬಹುದು. ಇವು ಗ್ಲಾಮರಸ್ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕಾರ್ಪೆಂಟರ್ ಪ್ಯಾಂಟ್ ಆಯ್ಕೆಗೆ ಸ್ಟೈಲಿಸ್ಟ್‌ಗಳ 3 ಟಿಪ್ಸ್
- ಫ್ಯಾಬ್ರಿಕ್ ನೋಡಿ ಖರೀದಿಸಿ.
- ಪ್ಲಂಪಿಯಾಗಿರುವವರು ಸಾಫ್ಟ್ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಿ.
- ದೊಗಲೆಯಾಗಿರುವುದರಿಂದ ಆದಷ್ಟೂ ಸರಿಯಾದ ಸೈಝ್‌ನದ್ದನ್ನು ಕೊಳ್ಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಬೇಸಿಗೆಯಲ್ಲೂ ಸ್ಕರ್ಟ್‌ಗೆ ಬ್ಲ್ಯಾಕ್ ಟಾಪ್ ಧರಿಸಿ ಮಿಕ್ಸ್ ಮ್ಯಾಚ್ ಮಾಡಿದ ನಟಿ ರಾಧಿಕಾ ನಾರಾಯಣ್
-
ಕರ್ನಾಟಕ19 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ16 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ14 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ10 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ15 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ18 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ10 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ
-
ಕರ್ನಾಟಕ16 hours ago
ಕಲಬುರಗಿಯಲ್ಲಿ ಚಂಡಿಕಾ ಹೋಮದ ಬೆಂಕಿಯಲ್ಲಿ ಕಾಣಿಸಿಕೊಂಡ ದುರ್ಗಾ ದೇವಿ!; ಇಲ್ಲಿದೆ ನೋಡಿ ಫೋಟೊ