ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುಗಾದಿ ಹಬ್ಬದ (Ugadi 2024) ಟ್ರೆಡಿಷನಲ್‌ವೇರ್ಸ್‌ನ ಅಂದವನ್ನು ಜಡೆಯ ಸಿಂಗಾರ ಸಾಮಗ್ರಿಗಳು ಇಮ್ಮಡಿಗೊಳಿಸುತ್ತಿವೆ. ಹಬ್ಬದ ದಿನದ ಟ್ರೆಡಿಷನಲ್ ಲುಕ್‌ಗೆ ನಾನಾ ಡಿಸೈನ್‌ನ ಜಡೆ ಸಿಂಗಾರ, ಜಡೆ ಬಂಗಾರ ಹಾಗೂ ಜಡೆ ಕುಚ್ಚುವಿನಂತಹ ಹೇರ್ ಸ್ಟೈಲಿಂಗ್, ಮಾನಿನಿಯರಿಗೆ ಸಾಥ್ ನೀಡುತ್ತಿವೆ. “ಹಿಂದೂಗಳಿಗೆ ಯುಗಾದಿ ಹಬ್ಬವೇ ಹೊಸ ವರ್ಷ. ಈ ಹಬ್ಬದಂದು ಸಂಪ್ರದಾಯ ಪದ್ಧತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇವುಗಳಲ್ಲಿ ಮನೆಯವರೆಲ್ಲರೂ ಹೊಸ ಬಟ್ಟೆ ಧರಿಸುವುದೂ ಸೇರಿದೆ. ಇನ್ನು, ಮಾನಿನಿಯರು ತಮ್ಮ ಟ್ರೆಡಿಷನಲ್ ಔಟ್‌ಫಿಟ್ ಹಾಗೂ ಸೀರೆ ಧರಿಸುತ್ತಾರೆ. ಇದರೊಂದಿಗೆ ಟ್ರೆಡಿಷನಲ್ ಹೇರ್‌ಸ್ಟೈಲ್ ಮ್ಯಾಚ್ ಮಾಡುತ್ತಾರೆ. ಇಂತಹ ಹೇರ್‌ಸ್ಟೈಲ್‌ಗಳಲ್ಲಿ ಇದೀಗ ಜಡೆ ಸಿಂಗರಿಸುವ ಕಾನ್ಸೆಪ್ಟ್ನ ಕೂದಲ ವಿನ್ಯಾಸ ಸೇರಿದೆ. ಚಿಕ್ಕ ಹುಡುಗಿಯರಿಂದಿಡಿದು ಕಾರ್ಪೋರೇಟ್ ಯುವತಿಯರು ಈ ಹೇರ್‌ಸ್ಟೈಲ್‌ಗೆ ಮೊರೆ ಹೋಗಿದ್ದಾರೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ಪ್ರಾಚಿ. ಅವರ ಪ್ರಕಾರ, ಟ್ರೆಡಿಷನಲ್ ಲುಕ್ ನೀಡುವ ಈ ಹೇರ್ ಆಕ್ಸೆಸರೀಸ್‌ಗಳು ಹುಡುಗಿಯರನ್ನು ಮತ್ತಷ್ಟು ಸುಂದರವಾಗಿಸುತ್ತವೆ.
ವೈವಿಧ್ಯಮಯ ಜಡೆ ಸಿಂಗಾರ
ನವಿಲು, ಗಂಡುಭೇರುಂಡ, ಬಗೆಬಗೆಯ ಹೂವುಗಳ ಶೈಲಿ ಸೇರಿದಂತೆ ನಾನಾ ಬಗೆಯ ಜಡೆ ಸಿಂಗಾರದ ಪ್ರಾಡಕ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಜಡೆ ಹೆಣೆದ ನಂತರ, ಇವನ್ನು ಅಲ್ಲಲ್ಲಿ ಕೊಟ್ಟಿರುವ ಥ್ರೆಡ್ನಿಂದ ಕಟ್ಟಿದರಾಯಿತು ಅಥವಾ ಪ್ರೆಸ್ ಮಾಡಿದರಾಯಿತು. ನೋಡಲು ಟ್ರೆಡಿಷನಲ್ ಆಗಿ ಕಾಣಿಸುತ್ತವೆ.
ಗೋಲ್ಡ್ ಲುಕ್ ಆಗಿ ಜಡೆ ಬಂಗಾರ
ಹಳೆಯ ಕಾಲದಲ್ಲಿ ರಾಣಿಯರು ಬಳಸುತ್ತಿದ್ದ ವಜ್ರ-ವೈಢೂರ್ಯ ಇರುವಂತಹ ಬಂಗಾರದ ಜಡೆ ಬಂಗಾರ, ಇದೀಗ ಹೊಸ ರೂಪ ಪಡೆದಿವೆ. ಸಿಲ್ವರ್, ವನ್ ಗ್ರಾಮ್ ಗೋಲ್ಡ್ ಸೇರಿದಂತೆ ನಾನಾ ಬಗೆಯ ಮೆಟಲ್‌ನಲ್ಲಿ ದೊರೆಯುವ ಇವು ಇಂದಿನ ಕಾಲದ ಜೆನ್ ಜಿ ಯುವತಿಯರ ಜಡೆಯನ್ನೂ ಸಿಂಗರಿಸಿವೆ.
ಜಡೆ ಕುಚ್ಚು
ಜಡೆಯ ಕೊನೆ ಭಾಗದಲ್ಲಿ ಧರಿಸಲಾಗುವ ನಾನಾ ಶೈಲಿಯ ಕುಚ್ಚು, ಟ್ರೆಡಿಷನಲ್ ಹೇರ್‌ಸ್ಟೈಲ್ ಇಷ್ಟಪಡುವವರನ್ನು ಸಿಂಗರಿಸುತ್ತಿವೆ. ಚಿಕ್ಕ, ಚಿಕ್ಕ ಹೆಣ್ಣುಮಕ್ಕಳು ಹಾಗೂ ಯುವತಿಯರಿಗೂ ಇಷ್ಟವಾಗುವಂತಹ ಡಿಸೈನ್‌ನವಲ್ಲಿ ಇವು ದೊರೆಯುತ್ತಿದ್ದು, ಈಗಾಗಲೇ ಹುಡುಗಿಯರನ್ನು ಅಲಂಕರಿಸಿವೆ.
ಟ್ರೆಡಿಷನಲ್ ಲುಕ್‌ಗಾಗಿ ಹೀಗೆ ಜಡೆಯನ್ನು ಅಲಂಕಾರಕ್ಕೆ ಟಿಪ್ಸ್
- ಫ್ರೆಂಚ್ ಫ್ಲಾಟ್ ಜಡೆಯನ್ನು ಹೆಣೆದು, ಇವುಗಳಿಂದ ಸಿಂಗರಿಸಬಹುದು.
- ಮೆಸ್ಸಿ ಲುಕ್ ನೀಡುವ ಜಡೆಗೆ ಇವು ಸೂಕ್ತವಲ್ಲ.
- ಜಡೆ ಗಿಡ್ಡವಾಗಿದ್ದಲ್ಲಿ ಹೇರ್ ಎಕ್ಸ್ಟೆನ್ಷನ್ ಬಳಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ugadi Makeover Tips: ಯುಗಾದಿ ಹಬ್ಬದ ಮೇಕ್ ಓವರ್‌ಗೆ ಯುವತಿಯರಿಗಾಗಿ 5 ಸಿಂಪಲ್ ಟಿಪ್ಸ್