ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುಗಾದಿ ಹಬ್ಬಕ್ಕೆ ಟ್ರಡಿಷನಲ್ ಆಗಿ ಕಾಣಿಸಬೇಕೇ! ಸರಳ ವಿಧಾನದಲ್ಲಿ ಎಥ್ನಿಕ್ ಲುಕ್ (Ugadi Makeover Tips) ನಿಮ್ಮದಾಗಿಸಿಕೊಳ್ಳಬೇಕೇ! ಹಾಗಾದಲ್ಲಿ ಒಂದಿಷ್ಟು ಸಿಂಪಲ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಮೇಕಪ್ ಎಕ್ಸ್‌ಫರ್ಟ್ಸ್ ಮಾಲಾ ವೆಂಕಟೇಶ್. ಈ ಕುರಿತಂತೆ ಯುವತಿಯರು ಪಾಲಿಸಬೇಕಾದ ಮೇಕೋವರ್ ಸಲಹೆಗಳನ್ನು ಅವರು ಇಲ್ಲಿ ತಿಳಿಸಿದ್ದಾರೆ.
ಟ್ರೆಡಿಷನಲ್‌ವೇರ್ಸ್ ಬಣ್ಣಕ್ಕೆ ತಕ್ಕಂತೆ ಮೇಕಪ್ ನಿರ್ಧರಿಸಿ
ಟ್ರೆಡಿಷನಲ್ ಲುಕ್‌ನ ಮೇಕಪ್ ನಿರ್ಧಾರ, ನೀವು ಧರಿಸುವ ಎಥ್ನಿಕ್‌ವೇರ್ ಬಣ್ಣದ ಮೇಲೆ ನಿರ್ಧರಿತವಾಗಿರುತ್ತದೆ. ಮುಖದ ಮೇಕಪ್, ನಿಮ್ಮ ಡಿಸೈನರ್‌ವೇರ್ ಕಲರ್‌ಗೆ ಹೊಂದಬೇಕು. ಉದಾಹರಣೆಗೆ., ಕ್ರೀಮ್ ಬಣ್ಣದಾದಲ್ಲಿ ಲೈಟ್ ಶೇಡ್ ಮೇಕಪ್, ಪಿಂಕ್ ಬಣ್ಣದಾದ್ದಲ್ಲಿ ಬಳಸುವ ಬ್ಲಷ್ ಹಾಗೂ ಮೇಕಪ್ ಶೇಡ್ ಹೈಲೈಟಾಗಬೇಕು. ಆಯಾ ಔಟ್‌ಫಿಟ್‌ಗೆ ತಕ್ಕಂತೆ ಮೇಕಪ್ ನಿರ್ಧಾರವಾಗಬೇಕು.
ಮುಖದ ಆಕಾರಕ್ಕೆ ಹೇರ್‌ಸ್ಟೈಲ್ ಮ್ಯಾಚಿಂಗ್
ಟ್ರೆಡಿಷನಲ್‌ವೇರ್ ಧರಿಸುವಾಗ ಹೇರ್‌ಸ್ಟೈಲ್ ಕೂಡ ಪ್ರಮುಖವಾಗುತ್ತದೆ. ಮೇಕಪ್‌ನೊಂದಿಗೆ ಹೇರ್‌ಸ್ಟೈಲ್ ಕೂಡ ಮ್ಯಾಚ್ ಆಗಬೇಕು. ಸದಾ ಫ್ರೀ ಹೇರ್‌ಸ್ಟೈಲ್ ಮಾಡುವವರಿಗೆ ಕಟ್ಟುವಂತಹ ಹೇರ್‌ಸ್ಟೈಲ್ ಮಾಡಿದಾಗ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುತ್ತದೆ. ಹಾಗಾಗಿ, ಅವರವರ ಮುಖದ ಆಕಾರಕ್ಕೆ ತಕ್ಕಂತೆ ಹೇರ್‌ಸ್ಟೈಲ್ ನಿರ್ಧರಿಸಬೇಕು.
ಐ ಮೇಕಪ್‌ನ ಪ್ರಮುಖ ಪಾತ್ರ
ಮುಖದ ಮೇಕಪ್‌ನಲ್ಲಿ ಕಂಗಳ ಮೇಕಪ್ ಪ್ರಮುಖ ಪಾತ್ರ ವಹಿಸುತ್ತದೆ. ಧರಿಸುವ ಎಥ್ನಿಕ್‌ವೇರ್‌ಗೆ ಮ್ಯಾಚ್ ಆಗುವಂತೆ ಮಾಡಬೇಕು. ಕಪ್ಪು ಕಾಡಿಗೆ ಟ್ರೆಡಿಷನಲ್‌ವೇರ್ ಸೌಂದರ್ಯ ಹೆಚ್ಚಿಸುತ್ತದೆ. ಇನ್ನು ವಿಂಗ್ ಐ ಲೈನರ್, ಶ್ಯಾಡೋ ಎಲ್ಲವನ್ನೂ ಆಯಾ ಮೇಕಪ್‌ಗೆ ಹೊಂದುವಂತೆ ಮಾಡುವುದು ಮುಖ್ಯ. ಹಾಗೆಂದು ಪಾರ್ಟಿ ಲುಕ್ ಐ ಮೇಕಪ್ ಹಬ್ಬದ ಸಂದರ್ಭದಲ್ಲಿ ಸಲ್ಲ, ಏನಿದ್ದರೂ ಸಾಂಪ್ರದಾಯಿಕವಾಗಿ ಕಾಣಬೇಕು.
ಡಿಸೈನರ್‌ವೇರ್‌ಗೆ ತಕ್ಕಂತೆ ಆಕ್ಸೆಸರೀಸ್
ಹಬ್ಬದ ದಿನದಂದು ಧರಿಸುವ ಡಿಸೈನರ್‌ವೇರ್‌ಗಳಿಗೆ ತಕ್ಕಂತೆ ಆಕ್ಸೆಸರೀಸ್ ಧರಿಸಿದಾಗ ಕಂಪ್ಲೀಟ್ ಟ್ರೆಡಿಷನಲ್ ಲುಕ್ ನಿಮ್ಮದಾಗುವುದು. ವೆಸ್ಟರ್ನ್‌ವೇರ್‌ಗೆ ಧರಿಸುವ ಜಂಕ್ ಹಾಗೂ ಫಂಕಿ ಜ್ಯುವೆಲರಿಗಳನ್ನು ಆವಾಯ್ಡ್ ಮಾಡಿ. ನೋಡಲು ಪಕ್ಕಾ ಟ್ರೆಡಿಷನಲ್ ಗೋಲ್ಡನ್ ಜ್ಯುವೆಲರಿಗಳನ್ನು ಅಥವಾ ಆಂಟಿಕ್ ಆಭರಣಗಳನ್ನು ಧರಿಸಿ.
ಉಡುಪಿಗೆ ಪಕ್ಕಾ ಟ್ರೆಡಿಷನಲ್ ಲುಕ್ ನೀಡಿ
ಯಾವುದೇ ಟ್ರೆಡಿಷನಲ್ ಉಡುಪನ್ನು ಸಾಂಪ್ರಾದಾಯಿಕವಾಗಿ ಧರಿಸಿ. ಇಂಡೋ-ವೆಸ್ಟರ್ನ್ ಅಥವಾ ಪ್ರಯೋಗಾತ್ಮಕ ಡ್ರೇಪಿಂಗ್ ಮಾಡಿದಾಗ ಅದು ಟ್ರೆಡಿಷನಲ್ ಎಂದೆನಿಸಿಕೊಳ್ಳುವುದಿಲ್ಲ. ಹಾಗಾಗಿ ಪಕ್ಕಾ ಟ್ರೆಡಿಷನಲ್ ಲುಕ್‌ಗೆ ಹಳೆಯ ಕಾಲದ ಶೈಲಿಯಲ್ಲೆ ಡ್ರೇಪಿಂಗ್ ಹಾಗೂ ಸ್ಟೈಲಿಂಗ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ugadi Ramzan Fashion: ರಂಜಾನ್-ಯುಗಾದಿ ಫೆಸ್ಟೀವ್ ಸೀಸನ್‌ನಲ್ಲಿ ಒಟ್ಟೊಟ್ಟಿಗೆ ಲಗ್ಗೆ ಇಟ್ಟ ಗ್ರ್ಯಾಂಡ್ ಎಥ್ನಿಕ್‌ವೇರ್ಸ್